* ಕೊರೋನಾ ಅಬ್ಬರದ ಮಧ್ಯೆ ಏರಿದ ಭಾರತದ ವಿದೇಶೀ ನೇರ ಬಂಡವಾಳ ಹೂಡಿಕೆ
* ಎಫ್‌ಡಿಐ ಪ್ರಮಾಣ 2019–20ಕ್ಕೆ ಹೋಲಿಸಿದರೆ 2020–21ರಲ್ಲಿ ಶೇ 10ರಷ್ಟು ಏರಿಕೆ
* 2019–20ರಲ್ಲಿ ಹೂಡಿಕೆಯು 5.43 ಲಕ್ಷ ಕೋಟಿ ರೂ. ಆಗಿತ್ತು
ನವದೆಹಲಿ(ಮೇ.25): ದೇಶದಲ್ಲಿ ಸದ್ಯ ಎರಡನೇ ಅಲೆ ಅಬ್ಬರಿಸುತ್ತಿದೆ. ಈ ನಡುವೆಯೂ ಭಾರತದ ವಿದೇಶಿ ನೇರ ಬಂಡವಾಳ ಹೂಡಿಕೆಯು (FDI) 2020–21ರಲ್ಲಿ ಶೇ. 19ರಷ್ಟು ಏರಿಕೆಯಾಗಿ, 4.35 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ. ಇದು ಈವರೆಗಿನ ಅತೀ ಹೆಚ್ಚು ಹೂಡಿಕೆಯಾಗಿದೆ. 2019–20ರಲ್ಲಿ 3.64 ಲಕ್ಷ ಕೋಟಿ ರೂ. ಹೂಡಿಕೆ ಆಗಿದ್ದು, ಈ ಬಾರಿ ಶೇ. 10ರಷ್ಟು ಹೆಚ್ಚಳವಾಗಿದೆ.
ಒಂದೇ ದಿನದಲ್ಲಿ 1.87 ಲಕ್ಷ ಕೋಟಿ ಗಳಿಸಿದ ಟೆಸ್ಲಾ CEO ಎಲಾನ್ ಮಸ್ಕ್
undefined
ಈಕ್ವಿಟಿ ಹೂಡಿಕೆ, ಗಳಿಕೆಯ ಮರು ಹೂಡಿಕೆ ಮತ್ತು ಮೂಲ ಬಂಡವಾಳದ ಹೂಡಿಕೆಯನ್ನು ಒಟ್ಟಾಗಿ ಪರಿಗಣಿಸಿದರೆ ಎಫ್‌ಡಿಐ ಪ್ರಮಾಣ 2019–20ಕ್ಕೆ ಹೋಲಿಸಿದರೆ 2020–21ರಲ್ಲಿ ಶೇ 10ರಷ್ಟು ಏರಿಕೆಯಾಗಿದೆ. ಈ ಮೂಲಕ 5.96 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಈವರೆಗಿನ ಅತೀ ಗರಿಷ್ಠ ಹೂಡಿಕೆಯಾಗಿದೆ. 2019–20ರಲ್ಲಿ ಹೂಡಿಕೆಯು 5.43 ಲಕ್ಷ ಕೋಟಿ ರೂ. ಆಗಿತ್ತು.
ಇನ್ನು FDI ನೀತಿಯಲ್ಲಿ ತಂದಿರುವ ಸುಧಾರಣೆ, ಹೂಡಿಕೆಗೆ ಅನುಕೂಲ ಹಾಗೂ ಸುಲಲಿತ ವಹಿವಾಟಿಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಈ ಪ್ರಮಾಣದ ಎಫ್‌ಡಿಐ ಹರಿದುಬಂದಿದೆ ಎಂದು ಸಚಿವಾಲಯ ತಿಳಿಸಿದೆ.
ಅಮೆರಿಕದ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ!
ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿರುವ ದೇಶಗಳ ಪಟ್ಟಿಯಲ್ಲಿ ಸಿಂಗಾಪುರ ಮೊದಲ ಸ್ಥಾನದಲ್ಲಿದೆ. ಒಟ್ಟಾರೆ ಹೂಡಿಕೆಯಲ್ಲಿ ಇದರ ಪಾಲು ಶೇ 29ರಷ್ಟಿದೆ. ಶೇ 23ರಷ್ಟು ಪಾಲು ಹೊಂದುವ ಮೂಲಕ ಅಮೆರಿಕ ಎರಡನೇ ಸ್ಥಾನದಲ್ಲಿದ್ದರೆ, ಮಾರಿಷಸ್ ಶೇ 9ರೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.