ಈ ಹೂಡಿಕೆಯಿಂದ ಆದಾಯ ತೆರಿಗೆದಾರರು 3.5ಲಕ್ಷ ರೂ. ಲಾಭ ಗಳಿಸಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ

Published : Jul 08, 2022, 09:47 PM IST
ಈ ಹೂಡಿಕೆಯಿಂದ ಆದಾಯ ತೆರಿಗೆದಾರರು 3.5ಲಕ್ಷ ರೂ. ಲಾಭ ಗಳಿಸಬಹುದು,  ಅದು ಹೇಗೆ? ಇಲ್ಲಿದೆ ಮಾಹಿತಿ

ಸಾರಾಂಶ

ತೆರಿಗೆ ಉಳಿಸೋ ಹೂಡಿಕೆಯ ಬಗ್ಗೆ ನೀವು ಯೋಚಿಸುತ್ತಿದ್ದರೆ, ಸ್ಥಿರ ಠೇವಣಿಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ತೆರಿಗೆ ಉಳಿಸೋ ಎಫ್ ಡಿಗಳಲ್ಲಿ ಹೂಡಿಕೆ ಮಾಡಿದ್ರೆ ಎಷ್ಟೆಲ್ಲ ಪ್ರಯೋಜನವಿದೆ? ಎಷ್ಟು ತೆರಿಗೆ ಉಳಿಸಬಹುದು? ಬಡ್ಡಿದರ ಎಷ್ಟಿದೆ? ಇಲ್ಲಿದೆ ಮಾಹಿತಿ. 

Business Desk:ನೀವು  ಆದಾಯ (Income) ತೆರಿಗೆ ಪಾವತಿದಾರರಾಗಿದ್ರೆ (Tax Payers) ಈ ಸುದ್ದಿ ನಿಮ್ಮ ಉಪಯೋಗಕ್ಕೆ ಬರಬಹುದು. ನೀವು 3.5ಲಕ್ಷ ರೂ. ಪ್ರಯೋಜನ ಪಡೆಯಬಹುದು. ಬ್ಯಾಂಕ್ ಸ್ಥಿರ ಠೇವಣಿಗಳು (Fixed Deposits) ಸುರಕ್ಷಿತ ಹೂಡಿಕೆಯ  (Investment) ಜೊತೆಗೆ ನಿಗದಿತ ಆದಾಯ ಪಡೆಯಲು ಇರುವ ಉತ್ತಮ ಮಾರ್ಗವೂ ಹೌದು. ಹಾಗಾದ್ರೆ ಆದಾಯ ತೆರಿಗೆ ಉಳಿತಾಯಕ್ಕೆ ಈ ಯೋಜನೆಗಳು ಹೇಗೆ ಸಹಕಾರಿ? ಇಲ್ಲಿದೆ ಮಾಹಿತಿ.

ದೇಶದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  (SBI) 5 ವರ್ಷ ಅವಧಿಯ ತೆರಿಗೆ ಉಳಿತಾಯ ಸ್ಥಿರ ಠೇವಣಿ (Fixed Deposit) ಮೇಲೆ ಸಾಮಾನ್ಯ ಗ್ರಾಹಕರಿಗೆ (Common customers) ವಾರ್ಷಿಕ ಶೇ.5.50 ಬಡ್ಡಿದರ (Interest rate) ಪಾವತಿಸಿದ್ರೆ, ಹಿರಿಯ ನಾಗರಿಕರಿಗೆ (Senior Citizen) ಶೇ.6.30ರಷ್ಟು ಬಡ್ಡಿ ನೀಡುತ್ತಿದೆ. ತೆರಿಗೆ ಉಳಿತಾಯ ಎಫ್ ಡಿ ಮೇಲೆ ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್ 80ಸಿ (Section 80C) ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. 

Harshad Mehta: 20 ವರ್ಷಗಳ ಬಳಿಕ ಮೌನ ಮುರಿದ ಬಿಗ್ ಬುಲ್ ಪತ್ನಿ;ಹರ್ಷದ್ ಮೆಹ್ತಾ ಪರ ಬ್ಯಾಟಿಂಗ್ ಗೆ ವೆಬ್ ಸೈಟ್ ಪ್ರಾರಂಭ

5ಲಕ್ಷ ರೂ. ಠೇವಣಿ ಮೇಲೆ 1.83ಲಕ್ಷ ರೂ. ಬಡ್ಡಿ
ಎಫ್ ಡಿ ಕ್ಯಾಲ್ಕುಲೇಟರ್ ಪ್ರಕಾರ ಎಸ್ ಬಿಐಯಲ್ಲಿ ನೀವು 5 ವರ್ಷಗಳ ಅವಧಿಗೆ  5 ಲಕ್ಷ ರೂ. ಠೇವಣಿ (Deposit) ಇರಿಸಿದ್ರೆ, ಮೆಚ್ಯುರಿಟಿ (Maturity) ಬಳಿಕ ನಿಮಗೆ 6,57,033ರೂ. ಸಿಗುತ್ತದೆ. ಇದರಲ್ಲಿ  1,57,033ರೂ. ಬಡ್ಡಿ ಗಳಿಕೆಯಾಗಿರುತ್ತದೆ. ಇನ್ನೊಂದೆಡೆ ನೀವು ಹಿರಿಯ ನಾಗರಿಕರಾಗಿದ್ರೆ (Senior Citizen) 1,83,450ರೂ. ಬಡ್ಡಿ ಗಳಿಸುತ್ತೀರಿ. 

ಹಿರಿಯ ನಾಗರಿಕರಿಗಾಗಿ ಎಸ್ ಬಿಐ ವಿಕೇರ್ ಠೇವಣಿ 
ಹಿರಿಯ ನಾಗರಿಕರಿಗಾಗಿ ರಿಟೇಲ್ ಟರ್ಮ್ ಡೆಪಾಸಿಟ್ / ಸ್ಥಿರ ಠೇವಣಿಯಲ್ಲಿ ಎಸ್ ಬಿಐ ವಿ ಕೇರ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿಯಲ್ಲಿ 5 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಎಫ್ ಡಿಗಳ ಮೇಲೆ ಎಲ್ಲ ಹಿರಿಯ ನಾಗರಿಕರಿಗೆ ಶೇ.0.80ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಾವತಿಸುತ್ತಿದೆ. ಈ ಯೋಜನೆಯನ್ನು ಕೊರೋನಾ ಅವಧಿಯಲ್ಲಿ ಪ್ರಾರಂಭಿಸಲಾಗಿದ್ದು, 2022ರ ಸೆಪ್ಟೆಂಬರ್ 30ರತನಕ ವಿಸ್ತರಿಸಲಾಗಿದೆ.

ಇತರ ಬ್ಯಾಂಕುಗಳ ಬಡ್ಡಿದರ
ಎಸ್ ಬಿಐ ಹೊರತಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 5 ವರ್ಷಗಳ ಅವಧಿಯ ತೆರಿಗೆ ಉಳಿತಾಯ ಎಫ್ ಡಿಗಳ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ.5.25ರಷ್ಟು ವಾರ್ಷಿಕ ಬಡ್ಡಿ ಪಾವತಿಸುತ್ತದೆ. ಇನ್ನು ಹಿರಿಯ ನಾಗರಿಕರಿಗೆ ವಾರ್ಷಿಕ  ಶೇ.5.75 ಬಡ್ಡಿ ನೀಡುತ್ತಿದೆ.  5 ವರ್ಷಗಳು ಮೇಲ್ಪಟ್ಟ ಎಫ್ ಡಿಗಳ ಮೇಲೆ ಎಚ್ ಡಿಎಫ್ ಸಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.5.45 ಹಾಗೂ ಹಿರಿಯ ನಾಗರಿಕರಿಗೆ ಶೇ.5.95 ಬಡ್ಡಿ ನೀಡುತ್ತಿದೆ. ಇದರ ಹೊರತಾಗಿ ಐಸಿಐಸಿಐ ಬ್ಯಾಂಕ್ ತೆರಿಗೆ ಉಳಿತಾಯ ಎಫ್ ಡಿ ಮೇಲೆ ಸಾಮಾನ್ಯ ಗ್ರಾಹಕರಿಗೆ ಶೇ.5.45ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತಿದೆ. ಹಾಗೆಯೇ ಹಿರಿಯ ನಾಗರಿಕರಿಗೆ ಶೇ.5.95 ಬಡ್ಡಿ ಪಾವತಿಸಲಾಗುತ್ತಿದೆ

Price Fall:ಎಸಿ, ಫ್ರಿಜ್, ವಾಷಿಂಗ್ ಮಷಿನ್ ಬೆಲೆ ಶೀಘ್ರದಲ್ಲೇ ಇಳಿಕೆ! ಅಗ್ಗವಾಗಲಿವೆಯಾ ಎಲೆಕ್ಟ್ರಾನಿಕ್ ಸಾಮಗ್ರಿಗಳು?

1.5ಲಕ್ಷ ರೂ. ತನಕ ತೆರಿಗೆ ಉಳಿತಾಯ
ಬ್ಯಾಂಕುಗಳ ಸ್ಥಿರ ಠೇವಣಿ/ ಟರ್ಮ್ ಡೆಪಾಸಿಟ್ ಅತ್ಯಂತ ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಅಪಾಯವಿಲ್ಲದ ಹೂಡಿಕೆ ನೆಚ್ಚಿಕೊಳ್ಳುವ ಹೂಡಿಕೆದಾರರಿಗೆ ಇದು ಉತ್ತಮ ಆಯ್ಕೆ ಕೂಡ. 5 ವರ್ಷಗಳ ಅವಧಿಯ ತೆರಿಗೆ ಉಳಿತಾಯ ಎಫ್ ಡಿಗಳ ಮೇಲೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿಯೂ ಸಿಗುತ್ತದೆ. ಬ್ಯಾಂಕುಗಳಲ್ಲಿನ ಈ ಎಫ್ ಡಿ ಮೇಲೆ ನೀವು  1.5ಲಕ್ಷ ರೂ. ತೆರಿಗೆ ಉಳಿಸಬಹುದು. ಆದ್ರೆ ನೆನಪಿಡಿ, ತೆರಿಗೆ ಉಳಿತಾಯ ಎಫ್ ಡಿ ಮೆಚ್ಯುರಿಟಿ ಬಳಿಕ ರಿಟರ್ನ್ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.  
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!