
ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು (Income Tax Department) ಬೆಂಗಳೂರಿನ ಹಲವೆಡೆ ದಾಳಿ ಮಾಡಿದ್ದು, ಮೈಕ್ರೋ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ (Micro Labs Private Limited) ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಸುರಾನ (Micro Labs CMD Dilip Surana) ಮತ್ತು ನಿರ್ದೇಶಕ ಆನಂದ್ ಸುರಾನ (Director Anand Surana) ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಡೋಲೋ 650 ಮಾತ್ರೆ (Dolo 650) ತಯಾರಿಕಾ ಸಂಸ್ಥೆಯಾಗಿರುವ ಮೈಕ್ರೋ ಲ್ಯಾಬ್ಸ್ ಫಾರ್ಮಾಸಿಟಿಕಲ್ ಕೊರೋನಾ ಮೊದಲ ಮತ್ತು ಎರಡನೇ ಅಲೆಯ ವೇಳೆ ಅತಿಹೆಚ್ಚು ಮಾರಾಟವಾದ ಮಾತ್ರೆಯಾಗಿತ್ತು. ದಶಕದಿಂದ ಜ್ವರ, ಕೆಮ್ಮು, ನೆಗಡಿ ಮುಂತಾದ ಸಾಮಾನ್ಯ ಜ್ವರಕ್ಕೆ ಡೋಲೊ ದಿವ್ಯೌಷಧಿಯಾಗಿತ್ತು. ಕೊರೋನಾ ಸಂದರ್ಭದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಫಾರ್ಮಾ ಸಂಸ್ಥೆಯಲ್ಲಿ ಮೈಕ್ರೋ ಲ್ಯಾಬ್ಸ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಆದರೆ ಆದಾಯಕ್ಕೆ ತಕ್ಕಂತೆ ತೆರಿಗೆ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಈ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಕೇಂದ್ರ ಕಚೇರಿ ಸೇರಿ ತಮಿಳುನಾಡು,ಗೋವಾ, ಪಂಜಾಬ್, ಮುಂಬೈ, ದೆಹಲಿ, ಸಿಕ್ಕಿಂ ಸೇರಿ ದೇಶದ 40ಕಡೆಗಳಲ್ಲಿ ದಾಳಿ ಮಾಡಲಾಗುತ್ತಿದೆ. 200ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ 40ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಏಕಕಾಲಕ್ಕೆ ಮಾಡಲಾಗಿದೆ. ಆದಾಯ ತೆರಿಗೆ ವಂಚನೆ ಆರೋಪದ ಹಿನ್ನಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಮಾರುಕಟ್ಟೆಯಲ್ಲಿ ಬಹು ಸಂಚಲನ ಮೂಡಿಸಿದ ಬಹು ಬೇಡಿಕೆಯ ಮಾತ್ರೆಗಳನ್ನು ಮೈಕ್ರೋ ಲ್ಯಾಬ್ಸ್ ತಯಾರಿಸಿವೆ. ಕೊರೋನಾ ಸಂದರ್ಭದಲ್ಲಿ 350 ಕೋಟಿ ರೂಪಾಯಿ ಮೌಲ್ಯದ ಡೋಲೋ ಮಾತ್ರೆ ಮಾರಾಟವಾಗಿತ್ತು ಎನ್ನಲಾಗಿದೆ. ಮೈಕ್ರೋ ಲ್ಯಾಬ್ಸ್ ಕಂಪನಿ ಇದರಿಂದ 570 ಕೋಟಿ ರೂ ಆದಾಯಗಳಿಸಿತ್ತು.
ಇದನ್ನೂ ಓದಿ: Hero MotoCorp: ಹೀರೋ ಕಂಪನಿ ₹1000 ಕೋಟಿ ಬೋಗಸ್ ಲೆಕ್ಕ: ಐಟಿ
ಆದರೆ ಈ ದೊಡ್ಡಮಟ್ಟದ ಆದಾಯಕ್ಕೆ ತೆರಿಗೆ ಪಾವತಿ ಮಾಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಮುಖ್ಯ ಕಚೇರಿ ಸೇರಿದಂತೆ ಮಾತ್ರೆಗಳ ತಯಾರಿಕಾ ಘಟಕ, ಮಾರಾಟ ಘಟಕಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.