*ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಹೊಸ ದರ ಜು.6ರಿಂದಲೇ ಜಾರಿಗೆ
*ಮೇನಲ್ಲಿ ಎರಡು ಬಾರಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ದ ಸರ್ಕಾರ
*19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ8.50ರೂ. ಇಳಿಕೆ
ನವದೆಹಲಿ (ಜು.6): ಹಣದುಬ್ಬರ (Inflation) ಹೆಚ್ಚಳದಿಂದ ಕಂಗೆಟ್ಟಿರುವ ಜನಸಾಮಾನ್ಯರ ಜೇಬಿಗೆ ಈಗ ಮತ್ತೊಂದು ಹೊರೆ ಬಿದ್ದಿದೆ. 14.2 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ((domestic LPG cylinder) ಬೆಲೆಯಲ್ಲಿ 50ರೂ. ಹೆಚ್ಚಳ ಮಾಡಲಾಗಿದೆ. ಈ ಹೊಸ ದೆರವು ದೇಶಾದ್ಯಂತ ಇಂದಿನಿಂದಲೇ (ಜು.6) ಜಾರಿಗೆ ಬರಲಿದೆ. ಮೇನಲ್ಲಿ ಕೊನೆಯದಾಗಿ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು.
ಮೇನಲ್ಲಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು. ಮೇ 7ರಂದು 50 ರೂ. ಹೆಚ್ಚಳ ಮಾಡಿದ್ದರೆ, ಮೇ 19 ರಂದು 3.50 ರೂ. ಏರಿಕೆ ಮಾಡಲಾಗಿತ್ತು. ಬುಧವಾರ ಹೊಸ ದರ ಜಾರಿಯಾದ ಹಿನ್ನೆಲೆಯಲ್ಲಿ ದೇಶದ ರಾಜಧಾನಿ ನವದೆಹಲಿಯಲ್ಲಿ (New Delhi) 14 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 1,053ರೂ.ಗೆ ಏರಿಕೆಯಾಗಿದೆ. ಇನ್ನು ಮುಂಬೈನಲ್ಲಿ (Mumbai) ಪ್ರತಿ ಸಿಲಿಂಡರ್ ದರ 1,052.50ರೂ. ತಲುಪಿದೆ. ಕೋಲ್ಕತ್ತದಲ್ಲಿ (Kolkata) 1,079ರೂ. ಹಾಗೂ ಚೆನ್ನೈನಲ್ಲಿ (Chennai) 1068.50 ರೂಪಾಯಿಗೆ ಏರಿಕೆಯಾಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ (commercial cylinder) ಬೆಲೆಯಲ್ಲಿ (Pice) ಇಂದಿನಿಂದ ಜಾರಿಗೆ ಬರುವಂತೆ 8.50ರೂ. ಇಳಿಕೆ ಮಾಡಲಾಗಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುತ್ತಿರೋದು ಈ ತಿಂಗಳಲ್ಲಿ ಇದು ಎರಡನೇ ಬಾರಿ.ಜುಲೈ 1ರಂದು 19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ (commercial cylinder) ಬೆಲೆಯಲ್ಲಿ (Pice) 198ರೂ. ಇಳಿಕೆ ಮಾಡಲಾಗಿತ್ತು. ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ 198ರೂ. ಇಳಿಕೆಯಾಗಿದೆ. ಕೋಲ್ಕತ್ತದಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 182ರೂ. ಇಳಿಕೆಯಾಗಿದೆ. ಇನ್ನು ಮುಂಬೈನಲ್ಲಿ 190.50ರೂ. ಕಡಿಮೆಯಾಗಿದ್ರೆ, ಚೆನ್ನೈನಲ್ಲಿ 187 ರೂ. ತಗ್ಗಿದೆ. ಜೂನ್ 1ರಂದು ಕೂಡ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಆಗ 19 ಕೆಜಿ ಎಲ್ ಪಿಜಿ (LPG) ಕಮರ್ಷಿಯಲ್ ಸಿಲಿಂಡರ್ (commercial cylinder) ಬೆಲೆಯಲ್ಲಿ 135ರೂ. ಇಳಿಕೆ ಮಾಡಲಾಗಿತ್ತು.
2022ನೇ ಸಾಲಿನಲ್ಲಿ153ರೂ. ಏರಿಕೆ
ಕೇಂದ್ರ ಸರ್ಕಾರ ಕೆಲವು ಸಮಯದಿಂದ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡುತ್ತಿದೆ. ಸಬ್ಸಿಡಿ ರಹಿತ ಎಲ್ ಪಿಜಿ ಇಲಿಂಡರ್ ಬೆಲೆಯಲ್ಲಿ 2022ನೇ ಸಾಲಿನಲ್ಲಿ ಈ ತನಕ ಒಟ್ಟು 153ರೂ. ಏರಿಕೆಯಾಗಿದೆ.
ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ
ಎಲ್ ಪಿಜಿ ಸಿಲಿಂಡರ್ ಬೆಲೆ ವ್ಯಾಟ್ ( VAT) ಹಾಗೂ ಸಾಗಣೆ ವೆಚ್ಚ ಗಳನ್ನು (transportation costs) ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಕಚ್ಚಾ ತೈಲ ಬೆಲೆಯ ಆಧಾರದಲ್ಲಿ ಕೂಡ ಇದನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಸಬ್ಸಿಡಿ ಹೆಚ್ಚಳ
ಬಡ ವರ್ಗದ ಜನರಿಗೆ ಪ್ರತಿ ಎಲ್ ಪಿಜಿ ಸಿಲಿಂಡರ್ (ವಾರ್ಷಿಕ 12 ಸಿಲಿಂಡರ್ ತನಕ) ಮೇಲೆ 200ರೂ. ಸಬ್ಸಿಡಿಯನ್ನು (Subsidy) ಕೇಂದ್ರ ಸರ್ಕಾರ ಮೇನಲ್ಲಿ ಘೋಷಿಸಿದೆ. ಉಜ್ವಲ(Ujwala) ಯೋಜನೆಯಡಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುವವರಿಗೆ ಈ ಸಬ್ಸಿಡಿ ಯೋಜನೆಯಿಂದ ಗರಿಷ್ಠ ಲಾಭ ಸಿಗಲಿದೆ.
ಚೀನಾದಲ್ಲಿ ಮನೆ ಖರೀದಿ ಡೌನ್ ಪೇಮೆಂಟ್ ಗೆ ಹಣ ಬೇಕಿಲ್ಲ, ಬೆಳ್ಳುಳ್ಳಿ, ಕಲ್ಲಂಗಡಿ, ಪೀಚ್ ಹಣ್ಣುಗಳಿದ್ರೆ ಸಾಕು!
LPG ಬೆಲೆಯನ್ನು ಈ ರೀತಿ ಪರಿಶೀಲಿಸಿ
ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಲಿಂಕ್‌ನಲ್ಲಿ ನಿಮ್ಮ ನಗರದ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ನೀವು ಪರಿಶೀಲಿಸಬಹುದು.