
ನವದೆಹಲಿ: ತಾಂತ್ರಿಕ ಕಂಪನಿಗಳಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಯಿಂದ ಮುಂಬರುವ 5 ವರ್ಷಗಳಲ್ಲಿ 1.40 ಕೋಟಿ ಜನರ ಅಥವಾ ಪ್ರಸ್ತುತ ಉದ್ಯೋಗದ ಶೇ.2ರಷ್ಟುಉದ್ಯೋಗವನ್ನು ಎಐ ಕಸಿದುಕೊಳ್ಳಲಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂನ (ಡಬ್ಲ್ಯೂಇಎಫ್) ವರದಿ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಬಹುತೇಕ ತಾಂತ್ರಿಕ ಕಂಪನಿಗಳು, ವೇಗದ ಮತ್ತು ಕಡಿಮೆ ವೆಚ್ಚದಲ್ಲಿ ಕೆಲಸ ನಿರ್ವಹಿಸಬಲ್ಲ ಎಐಗಳ ಮೊರೆ ಹೋಗಲಿದ್ದು, ಇವು ಮಾನವ ಉದ್ಯೋಗವನ್ನು ಆಕ್ರಮಿಸಿಕೊಳ್ಳಲಿವೆ. ಇದರಿಂದ 1.40 ಕೋಟಿ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಈಗಾಗಲೇ ಶೇ.34ರಷ್ಟು ಪ್ರಮಾಣದ ಕೆಲಸವನ್ನು ಯಾಂತ್ರೀಕರಣಗೊಳಿಸಿರುವ 800ಕ್ಕೂ ಅಧಿಕ ಜಾಗತಿಕ ಕಂಪನಿಗಳ ಸಮೀಕ್ಷೆ ಆಧಾರದ ಮೇಲೆ ಈ ವರದಿ ಬಿಡುಗಡೆ ಮಾಡಲಾಗಿದೆ.
'ಇವಳು ಭಯಂಕರಿ ಸುಂದ್ರಿ' ಅಂದ್ರು ಆನಂದ್ ಮಹೀಂದ್ರಾ: ಅದ್ಯಾವ ಹೆಣ್ಣಿಗೆ ಈ ಹೊಗಳಿಕೆ?
ಪ್ರತಿ ವರ್ಷ ಡಬ್ಲ್ಯೂಇಎಫ್ ಆಯೋಜಿಸುವ ಜಾಗತಿಕ ನಾಯಕರ ಸಭೆಯಲ್ಲಿ ಉದ್ಯೋಗದಾತರು, 2027ರ ವೇಳೆಗೆ 8.3 ಕೋಟಿ ಉದ್ಯೋಗಿಗಳನ್ನು ತೆಗೆದು ಹಾಕಲಿದ್ದು 6.9 ಕೋಟಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ನಡುವೆ ಡೇಟಾ ಎಂಟ್ರಿ ಕ್ಲರ್ಕ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗಳಲ್ಲಿರುವ ಉದ್ಯೋಗಿಗಳ ಹೆಚ್ಚಿನ ನಷ್ಟವಾಗಲಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಉದ್ಯೋಗ ಕುಸಿತ ಭಾರತಕ್ಕೆ ಕಡಿಮೆ
ತಾಂತ್ರಿಕ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆ ಮತ್ತು ಸಂಸ್ಥೆಯ ಅಭಿವೃದ್ಧಿ ಕಾರಣಗಳಿಂದ ವಿಶ್ವಾದ್ಯಂತ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ ಭಾರತದಲ್ಲಿನ ಉದ್ಯೋಗಿಗಳು ಸುರಕ್ಷಿತವಾಗಿರಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹಳೆಯ ಉದ್ಯೋಗಿಗಳನ್ನು ತೆಗೆದು ಹಾಕಿ ನೂತನ ಉದ್ಯೋಗಿಗಳ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಮಟ್ಟವು ಜಾಗತಿಕವಾಗಿ ಶೇ.23 ರಷ್ಟುದಾಖಲಾಗಲಿದ್ದರೆ ಭಾರತದಲ್ಲಿ ಈ ಪ್ರಮಾಣವು ಶೇ.22 ರಷ್ಟು ದಾಖಲಾಗಲಿದೆ ಎಂದು ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್) ವರದಿ ಹೇಳಿದೆ.
5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ವಿದೇಶಗಳಿಗೆ ಹೋಲಿಸಿದರೆ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಕಡಿತ ಕ್ರಮಗಳು ಭಾರತದಲ್ಲಿ ಕಡಿಮೆ ಪ್ರಮಾಣದಲ್ಲಿ ದಾಖಲಾಗಲಿವೆ. ವಿದೇಶಗಳಿಗೆ ಹೋಲಿಸಿದರೆ ಭಾರತ ಮತ್ತು ಚೀನಾದಂತಹ ಅಧಿಕ ಜನಸಂಖ್ಯೆವುಳ್ಳ ರಾಷ್ಟ್ರಗಳಲ್ಲಿ ಹೆಚ್ಚು ಪ್ರತಿಭಾನ್ವಿತ ಕಾರ್ಮಿಕ ಗುಣಮಟ್ಟವಿರುವುದು ಇದಕ್ಕೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.