ಏಪ್ರಿಲ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 1.87 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

By Kannadaprabha NewsFirst Published May 2, 2023, 11:03 AM IST
Highlights

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ದಾಖಲೆಯ 1.87 ಲಕ್ಷ ಕೋಟಿ ರು. ತಲುಪಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ 1.68 ಲಕ್ಷ ಕೋಟಿ ರು.ತೆರಿಗೆಗೆ ಹೋಲಿಸಿದರೆ ಇದು ಶೇ.12ರಷ್ಟು ಏರಿಕೆಯಾಗಿದೆ.

ನವದೆಹಲಿ: ಕಳೆದ ಏಪ್ರಿಲ್‌ ತಿಂಗಳಿನಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ದಾಖಲೆಯ 1.87 ಲಕ್ಷ ಕೋಟಿ ರು. ತಲುಪಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ 1.68 ಲಕ್ಷ ಕೋಟಿ ರು.ತೆರಿಗೆಗೆ ಹೋಲಿಸಿದರೆ ಇದು ಶೇ.12ರಷ್ಟು ಏರಿಕೆಯಾಗಿದೆ. 2017ರ ಜು.1ರಂದು ದೇಶದಲ್ಲಿ ಜಿಎಸ್ಟಿ ಜಾರಿಯಾದ ಬಳಿಕ ಯಾವುದೇ ತಿಂಗಳೊಂದರಲ್ಲಿ ಸಂಗ್ರಹವಾದ ಗರಿಷ್ಠ ಪ್ರಮಾಣದ ಜಿಎಸ್ಟಿಇದಾಗಿದೆ.

2023ರ ಏಪ್ರಿಲ್‌ನಲ್ಲಿ ಒಟ್ಟು 187305 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಈ ಪೈಕಿ ಕೇಂದ್ರ ಜಿಎಸ್ಟಿ 38440 ಕೋಟಿ ರು., ರಾಜ್ಯ ಜಿಎಸ್ಟಿ 47,412 ಕೋಟಿ ರು., ಸಂಯೋಜಿತ ಜಿಎಸ್ಟಿ 89,158 ಕೋಟಿ ಮತ್ತು 12025 ಕೋಟಿ ರು.ಸೆಸ್‌ ಎಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.

ತೆರಿಗೆದಾರರೇ ಗಮನಿಸಿ; ಟಿಡಿಎಸ್, ಜಿಎಸ್ ಟಿಆರ್ -4, ಫಾರ್ಮ್ 15G/H ಸಲ್ಲಿಕೆಗೆ ಇಂದು ಅಂತಿಮ ಗಡುವು!

ಇನ್ನು ಕಳೆದ ಏ.20ರಂದು ಒಂದೇ ದಿನ 68228 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದೆ. ಅಂದು ಒಂದೇ ದಿನ 9.8 ಲಕ್ಷ ವಹಿವಾಟಿನ ಮೂಲಕ ಇಷ್ಟು ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ದಿನ 9.6 ಲಕ್ಷ ವಹಿವಾಟಿನ ಮೂಲಕ 57846 ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಇನ್ನು 2022-23ರ ಹಣಕಾಸು ವರ್ಷದಲ್ಲಿ ಒಟ್ಟಾರೆ 18.10 ಲಕ್ಷ ಕೋಟಿ ರು.ಜಿಎಸ್ಟಿ (GST) ಸಂಗ್ರಹವಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.22ರಷ್ಟು ಹೆಚ್ಚು ಎಂದು ಸರ್ಕಾರ ಹೇಳಿದೆ.

ದೇಶದ ಆರ್ಥಿಕತೆಗೆ ಅದ್ಭುತ ಸುದ್ದಿ. ಕಡಿಮೆ ತೆರಿಗೆ ದರದ ಹೊರತಾಗಿಯೂ ತೆರಿಗೆ ಸಂಗ್ರಹ ಪ್ರಮಾಣದ ಹೆಚ್ಚಳವು, ಜಿಎಸ್ಟಿಯು ತೆರಿಗೆ ಸಂಯೋಜನೆ ಮತ್ತು ಪಾಲನೆಯನ್ನು ಹೇಗೆ ಹೆಚ್ಚಿಸಿದೆ ಎಂಬುದಕ್ಕೆ ಉದಾಹರಣೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. 

ಗಾಳಿಗೂ ಬಿಜೆಪಿ ಜಿಸ್‌ಟಿ ಹಾಕಬಹುದು: ಮಲ್ಲಿಕಾರ್ಜುನ ಖರ್ಗೆ

click me!