ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷೇರುಪೇಟೆಯ ಮಾಜಿ ಮುಖ್ಯಸ್ಥ, ಸಿಇಒ ರವಿ ನಾರಾಯಣ್‌ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷೇರುಪೇಟೆಯ ಮಾಜಿ ಮುಖ್ಯಸ್ಥ, ಸಿಇಒ ರವಿ ನಾರಾಯಣ್‌ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ಬಂಧಿಸಿದೆ.
ಕೋ ಲೊಕೇಶನ್ ಹಗರಣ ಮತ್ತು ಸಿಬ್ಬಂದಿಗಳ ಫೋನ್ ಕದ್ದಾಲಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) (Prevention of Money Laundering Act) ಅಡಿ ನಾರಾಯಣ್ ವಿರುದ್ಧ ಪ್ರಕರಣ ದಾಖಲಿಸಿದಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಮತ್ತೊಬ್ಬ ಮಾಜಿ ಮುಖ್ಯಸ್ಥೆಯಾದ ಚಿತ್ರಾ ರಾಮಕೃಷ್ಣನ್ (Chitra Ramakrishnan) ಅವರನ್ನೂ ಸಹ ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿತ್ತು. ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಕಮಿಷನರ್ (Former Mumbai Police Commissioner) ಸಂಜಯ್ ಪಾಂಡೆ (Sanjay Pandey) ಅವರನ್ನು ಸಹ ಬಂಧಿಸಲಾಗಿದೆ.
ರವಿ ನಾರಾಯಣ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಕಸ್ಟಡಿಗಾಗಿ ಇಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಎನ್‌ಎಸ್‌ಇ ಉದ್ಯೋಗಿಗಳು ಬಳಸುವ ಪ್ರಾಥಮಿಕ ದರ ಇಂಟರ್‌ಫೇಸ್ (ಪಿಆರ್‌ಐ) ಲೈನ್‌ಗಳ ಫೋನ್ ಟ್ಯಾಪಿಂಗ್‌ಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದೆ. ಕೆಲ ಮೂಲಗಳ ಪ್ರಕಾರ ಈ ಪಿಆರ್‌ಐ ಲೈನ್‌ಗಳನ್ನು ಅಕ್ರಮವಾಗಿ 2009 ಮತ್ತು 2017 ರ ನಡುವೆ ಅಕ್ರಮವಾಗಿ ತಡೆಹಿಡಿಯಲಾಗಿತ್ತು ಎಂದು ತಿಳಿದು ಬಂದಿದೆ.
ಜಗಮಲ್ಲ ಜುಂಜನ್ವಾಲಾ: ಅಸಾಮಾನ್ಯ ವ್ಯಕ್ತಿತ್ವದ ರಾಕೇಶ್ ಜೀವನಗಾಥೆ
ಮೂಲಗಳ ಪ್ರಕರಣ ನಾರಾಯಣ್ ಅವರು ತನಿಖಾಧಿಕಾರಿಗಳಿಗೆ ತನಿಖೆಗೆ ಸರಿಯಾಗಿ ಸಹಕರಿಸದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆ ಎಂದು ತಿಳಿದು ಬಂದಿದೆ. ನಾರಾಯಣ್ ಜೊತೆ ಮುಂಬೈನ ಮುಂಬೈನ ಮಾಜಿ ಪೊಲೀಸ್ ಕಮಿಷನರ್, ಸಂಜಯ್ ಪಾಂಡೆ ಅವರನ್ನು ಬಂಧಿಸಿದ್ದಾರೆ. ಸಂಜಯ್ ಪಾಂಡೆ ಅವರ ಕುಟುಂಬ ಸದಸ್ಯರ ಮಾಲೀಕತ್ವವಿರುವ ಐಸೆಕ್ ಸರ್ವಿಸಸ್ ಜೊತೆ ಎನ್‌ಎಸ್ಇ ಮಾಜಿ ಮುಖ್ಯಸ್ಥ ಚಿತ್ರಾ ರಾಮಕೃಷ್ಣ ಹಾಗೂ ರವಿ ನಾರಾಯಣ್ ಅವರ ನಡುವೆ ವ್ಯವಹಾರವಿರುವ ಹಿನ್ನೆಲೆಯಲ್ಲಿ ಸಂಜಯ್ ಬಂಧನವಾಗಿದೆ. ಚಿತ್ರಾ ನಾರಾಯಣ್ ಹಾಗೂ ರವಿ ನಾರಾಯಣ್ ಅವರ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಈ ಹಿಂದೆಯೇ ಪ್ರಕರಣ ದಾಖಲಿಸಿತ್ತು.
ರಾಕೇಶ್ ಜುಂಜುನ್‌ವಾಲಾ ನಂಬಿಕೆ ಇಟ್ಟಿದ್ದ ಹೂಡಿಕೆಯ 5 ಟಿಪ್ಸ್ ಹೀಗಿದೆ..
ಸಿಬಿಐ ಪ್ರಕಾರ ಎನ್‌ಎಸ್‌ಇಯೂ ಐಸೆಕ್ ಸರ್ವಿಸ್ ಪ್ರವೇಟ್ ಸಂಸ್ಥೆಯನ್ನು ಷೇರುಪೇಟೆಯಲ್ಲಿ ಸೈಬರ್ ದುರ್ಬಲತೆಗಳ ಆವರ್ತಕ ಅಧ್ಯಯನ (periodic study of cyber vulnerabilities) ನಡೆಸಲು ನೇಮಕ ಮಾಡಿತ್ತು. 4.45 ಕೋಟಿ ಮೊತ್ತದ ಒಪ್ಪಂದದ ಇದಾಗಿತ್ತು. ಆದರೆ ಇದನ್ನು ಷೇರು ಮಾರುಕಟ್ಟೆಯ ಉದ್ಯೋಗಿಗಳ ಮೇಲೆ ಕಣ್ಣಿಡುವ ಸಲುವಾಗಿ ಬಳಸಲಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ.