IAS Officer Salary: ಐಎಎಸ್, ಐಎಫ್‌ಎಸ್‌, ಐಪಿಎಸ್ ಇವ್ರಲ್ಲಿ ಯಾರಿಗೆ ಸಿಗುತ್ತದೆ ಹೆಚ್ಚು ಸಂಬಳ?

By Suvarna News  |  First Published Mar 18, 2023, 12:19 PM IST

ಐಎಎಸ್ ಅಧಿಕಾರಿ, ಐಪಿಎಸ್ ಅಧಿಕಾರಿ ಎಂದಾಗ ಸಾಮಾನ್ಯ ಜನರು ಅವರಿಗೆ ವಿಶೇಷ ಗೌರವ ನೀಡ್ತಾರೆ. ಉನ್ನತ ಹುದ್ದೆಯಲ್ಲಿರುವ ಇವರ ಮೇಲೆ ಜವಾಬ್ದಾರಿ ಕೂಡ ಹೆಚ್ಚಿರುತ್ತದೆ. ಅವರು ಮಾಡುವ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ಸಿಗುತ್ತದೆ. ಯಾವ ಅಧಿಕಾರಿಗೆ ಎಷ್ಟು ಸಂಬಳ ಎನ್ನುವ ಮಾಹಿತಿ ಇಲ್ಲಿದೆ.
 


ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಆಗುವ ಕನಸನ್ನು ಅನೇಕರು ಕಾಣ್ತಾರೆ. ಅದ್ರಲ್ಲಿ ಕೆಲವರು ತಮ್ಮ ಪರಿಶ್ರಮದಿಂದ ಪಾಸ್ ಆಗ್ತಾರೆ. ಯುಪಿಎಸ್ ಸಿ ಪರೀಕ್ಷೆಯನ್ನು ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಸದಾ ಪರಿಶ್ರಮದ ನಂತ್ರ ಜನರು ಐಎಸ್, ಐಪಿಎಸ್ ಅಥವಾ ಐಎಫ್ ಸಿ ಶ್ರೇಣಿಯನ್ನು ತಲುಪುತ್ತಾರೆ. ಆದರೆ ಈ ಮೂರು  ರ್ಯಾಂಕ್ ಗಳಲ್ಲಿ ಯಾರು ಹೆಚ್ಚು ಸಂಬಳ ಪಡೆಯುತ್ತಾರೆ ಗೊತ್ತಾ?  

ಭಾರತೀಯ ಪೊಲೀಸ್ ಸೇವೆಗಳು (ಐಪಿಎಸ್), ಭಾರತೀಯ ವಿದೇಶಾಂಗ ಸೇವೆಗಳು (ಐಎಫ್‌ಎಸ್) ಮತ್ತು ಭಾರತೀಯ ಆಡಳಿತ ಸೇವೆಗಳಲ್ಲಿ (ಐಎಎಸ್) ಯಾವುದು ಹೆಚ್ಚು ಶಕ್ತಿಶಾಲಿ ಎಂಬ ಬಗ್ಗೆ ಜನರಲ್ಲಿ ಗೊಂದಲವಿದೆ. ಗೂಗಲ್ (Google) ನಲ್ಲಿ ಯುಪಿಎಸ್‌ಸಿ  ಕುರಿತು ಹೆಚ್ಚು ಕೇಳಲಾದ ಪ್ರಶ್ನೆಗಳಲ್ಲಿ ಇದು ಒಂದಾಗಿದೆ. ನಾವಿಂದು ಇವರಲ್ಲಿ ಯಾರು ಹೆಚ್ಚು ಸಂಬಳ (Salary) ಪಡೆಯುತ್ತಾರೆ ಎಂಬುದನ್ನು ನಿಮಗೆ ಹೇಳ್ತೇವೆ.

Tap to resize

Latest Videos

Investment Tips : ಪ್ರತಿ ದಿನ ಕುಡಿಯೋ ಟೀಗೆ ಹೇಳಿ ಬೈ ಕೋಟ್ಯಾಧಿಪತಿಯಾಗ್ಬಹುದು!

ಐಪಿಎಸ್ (IPS) ಪರೀಕ್ಷೆ ಪಾಸಾದ್ರೆ ಏನೇನು ಜವಾಬ್ದಾರಿ ಹೊರಬೇಕು?  : ಹೆಸರೇ ಸೂಚಿಸುವಂತೆ, ಪೊಲೀಸ್ ಅಧಿಕಾರಿಯಾಗಲು ಐಪಿಎಸ್ ಪರೀಕ್ಷೆ ಪಾಸಾಗ್ಬೇಕು. ರಾಜ್ಯ ಪೊಲೀಸ್ ಇಲಾಖೆ ನಾಯಕತ್ವವನ್ನು ಪಡೆಯಲು ಇದು ನೆರವಾಗುತ್ತದೆ ಎಂದು ಅನೇಕರು ಭಾವಿಸ್ತಾರೆ.  ಆದ್ರೆ ಐಪಿಎಸ್ ಅಧಿಕಾರಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (BSF, SSB, CRPF, CISF, ಮತ್ತು ITBP), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಗುಪ್ತಚರ ಬ್ಯೂರೋ (IB), ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (R&AW), ವಿಶೇಷ ರಕ್ಷಣಾ ಗುಂಪು (SPG), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI) ಗೂ ಈ ಪರೀಕ್ಷೆ ಮೂಲಕವೇ ಆಯ್ಕೆ ನಡೆಯುತ್ತದೆ. 

ಐಪಿಎಸ್ ಅಧಿಕಾರಿಗೆ ಸಿಗುವ ಸಂಬಳವೆಷ್ಟು? : ಇದ್ರಲ್ಲೂ ಹುದ್ದೆಗೆ ತಕ್ಕಂತೆ ವೇತನ ನೀಡಲಾಗುತ್ತದೆ. ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಹೆಚ್ಚಿನ ವೇತನವಿದೆ. ಇಂಟೆಲಿಜೆನ್ಸ್ ಬ್ಯೂರೋ, ಸಿಬಿಐ, ಎನ್‌ಐಎ, ದೆಹಲಿಯ ಪೊಲೀಸ್ ಆಯುಕ್ತರು, ಕೇಂದ್ರ ಸಶಸ್ತ್ರ ಪಡೆಗಳ ನಿರ್ದೇಶಕರಿಗೆ 2 ಲಕ್ಷ 25 ಸಾವಿರದಿಂದ 2 ಲಕ್ಷ 50 ಸಾವಿರದವರೆಗೆ ಮಾಸಿಕ ಸಂಬಳ ಸಿಗುತ್ತದೆ. ಇದಲ್ಲದೇ ಟಿಎ, ಡಿಎ, ಎಚ್‌ಆರ್‌ಎ ಮುಂತಾದವು ಲಭ್ಯವಿದೆ. ಇವನ್ನೆಲ್ಲ ಸೇರಿಸಿದ್ರೆ ಅವರ ಒಟ್ಟು ವೇತನ ತಿಂಗಳಿಗೆ ಸುಮಾರು 3 ಲಕ್ಷ 50 ಸಾವಿರ ರೂಪಾಯಿ ಎನ್ನಬಹುದು. ಇವರನ್ನು ಹೊರತುಪಡಿಸಿ ಉಳಿದ ಐಪಿಎಸ್ ಅಧಿಕಾರಿಗಳು ಇದಕ್ಕಿಂತ ಕಡಿಮೆ ಸಂಬಳ ಪಡೆಯುತ್ತಾರೆ.

ಉದ್ಯೋಗ ತೊರೆದು ಬರ್ಗರ್ ಕಂಪನಿ ಪ್ರಾರಂಭಿಸಿದ ಎಂಬಿಎ ಪದವೀಧರೆ;ಐದೇ ವರ್ಷದಲ್ಲಿ 40 ಕೋಟಿ ರೂ. ವಹಿವಾಟು

ಐಎಎಸ್ ಅಧಿಕಾರಿಗಳ ಜವಾಬ್ದಾರಿ ಏನು? : ಭಾರತೀಯ ಆಡಳಿತ ಸೇವೆಗಳಲ್ಲಿ, ಎಲ್ಲಾ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದನ್ನು ದೊಡ್ಡ ಹುದ್ದೆ ಎಂದು ಪರಿಗಣಿಸಲಾಗುತ್ತದೆ. ಸರ್ಕಾರಿ ಸಚಿವಾಲಯದಿಂದ ಹಿಡಿದು ದೊಡ್ಡ ಸರ್ಕಾರಿ ಬ್ಯಾಂಕ್‌ಗಳ ದೊಡ್ಡ ಹುದ್ದೆಯನ್ನು ಇವರು ಅಲಂಕರಿಸಿರುತ್ತಾರೆ. ಭಾರತೀಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಐಎಎಸ್ ಅಧಿಕಾರಿಗಳು ಎಲ್ಲಾ ಚುನಾವಣೆಗಳಲ್ಲಿ ಕೆಲಸ ಮಾಡುತ್ತಾರೆ.

ಐಎಎಸ್ ಅಧಿಕಾರಿಗಳ ಸಂಬಳ : ಐಎಎಸ್ ಅಧಿಕಾರಿಗಳ ವೇತನ ಶ್ರೇಣಿ ಐಪಿಎಸ್ ಅಧಿಕಾರಿಗಳಿಗಿಂತ ಹೆಚ್ಚಾಗಿದೆ. ಅವರಿಗೆ ಆರಂಭಿಕ  56,100 ರೂಪಾಯಿ ತಿಂಗಳ ವೇತನ ಸಿಗುತ್ತದೆ. ಐಎಎಸ್ ಅಧಿಕಾರಿಗಳು ಕ್ಯಾಬಿನೆಟ್ ಕಾರ್ಯದರ್ಶಿಯ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ. ಗ್ರೇಡ್ ಕಡಿಮೆಯಾದಂತೆ ಸಂಬಳ ಕಡಿಮೆಯಾಗುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ದರ್ಜೆಯ ಐಎಎಸ್ ಅಧಿಕಾರಿಯ ಮೂಲ ವೇತನ 2 ಲಕ್ಷ 50 ಸಾವಿರದಿಂದ 3 ಲಕ್ಷದವರೆಗೆ ಇರುತ್ತದೆ. ಅವರ ಒಟ್ಟು ವೇತನ 4 ಲಕ್ಷದಿಂದ 4 ಲಕ್ಷ 50 ಸಾವಿರ ರೂಪಾಯಿಯಾಗಿದೆ. 

ಐಎಫ್ ಎಸ್ ಅಧಿಕಾರಿಗಳ ಜವಾಬ್ದಾರಿ ಏನು? : ಐಎಫ್ ಎಸ್ ಸೇವೆಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಈ ಸೇವೆಗಳ ಮುಖ್ಯಸ್ಥರು ವಿದೇಶಾಂಗ ಕಾರ್ಯದರ್ಶಿಯಾಗಿರುತ್ತಾರೆ. ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯ ಪೋಸ್ಟಿಂಗ್ ದೇಶ ಮತ್ತು ವಿದೇಶದಲ್ಲಿ ಎಲ್ಲಿಯಾದರೂ ಇರಬಹುದು. ನಿವೃತ್ತಿಯ ನಂತರ ಐಎಫ್ ಸಿ ಅಧಿಕಾರಿಗಳು ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲ, ಲೋಕಸಭೆಯ ಸ್ಪೀಕರ್, ಕ್ಯಾಬಿನೆಟ್ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮುಂತಾದ ಉನ್ನತ ಹುದ್ದೆಯನ್ನು ಪಡೆಯುತ್ತಾರೆ.

ಐಎಫ್ ಸಿ ಅಧಿಕಾರಿಗಳ ಸಂಬಳವೆಷ್ಟು? : ಐಎಫ್ ಸಿ ಅಧಿಕಾರಿಯ ವೇತನವು ತಿಂಗಳಿಗೆ 2.4 ಲಕ್ಷ ರೂಪಾಯಿ. ಇದು ಮೂಲ ವೇತನವಾಗಿರುತ್ತದೆ. ಶ್ರೇಣಿಯನ್ನು ಅವಲಂಬಿಸಿ ಅವರು ಹೆಚ್ಚಿನ ಸಂಬಳವನ್ನು ಪಡೆಯುತ್ತಾರೆ. ಅವರ ಒಟ್ಟು ವೇತನ 3 ಲಕ್ಷ 50 ಸಾವಿರದಿಂದ 4 ಲಕ್ಷದವರೆಗೆ ಇರುತ್ತದೆ. 
 

click me!