'ನಾನು ಹುಟ್ಟಿದ್ದು ಯಮೆನ್‌ಲ್ಲಿ, ನನ್ನದು ಅರೇಬಿಕ್ ರಕ್ತ ಎಂದು ತಂದೆ ಯಾವತ್ತೂ ಹೇಳ್ತಿದ್ರು'

Published : Jul 05, 2021, 05:40 PM ISTUpdated : Jul 05, 2021, 05:47 PM IST
'ನಾನು ಹುಟ್ಟಿದ್ದು ಯಮೆನ್‌ಲ್ಲಿ, ನನ್ನದು ಅರೇಬಿಕ್ ರಕ್ತ ಎಂದು ತಂದೆ ಯಾವತ್ತೂ ಹೇಳ್ತಿದ್ರು'

ಸಾರಾಂಶ

* ಸಂದರ್ಶನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಅಂಬಾನಿ * ನಾನು ಹುಟ್ಟಿದ್ದು ಯಮೆನ್‌ಲ್ಲಿ, ನನ್ನದು ಅರೇಬಿಕ್ ರಕ್ತ ಎಂದು ತಂದೆ ಯಾವತ್ತೂ ಹೇಳ್ತಿದ್ರು * ಎಲ್ಲ ಅರೇಬಿಯನ್ ರಾಷ್ಟ್ರ ಮತ್ತು ಭಾರತದ ನಡುವಿನ ಸಂಬಂಧಕ್ಕೆ ನಾವು ಬೆಲೆ ಕೊಡುತ್ತೇನೆ

ಮುಂಬೈ(ಜು.05): ರಿಲಯನ್ಸ್ ಒಡೆಯ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಅಂದ್ರೆ ಯಾರಿಗೆ ತಿಳಿದಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಮುಕೆಶ್ ಅಂಬಾನಿ ಹೆಸರು ತಿಳಿಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಆದರೀಗ ಮುಕೇಶ್ ಅಂಬಾನಿಜೀವನದ ಇಂಟರೆಸ್ಟಿಂಗ್ ವಿಚಾರವೊಂದು ಬಹಿರಂಗಗೊಂಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು ಖುದ್ದು ಅಂಬಾನಿಯೇ ತಮ್ಮ ಸಂದರ್ಶನವೊಂದರಲ್ಲಿ ಅಪರೂಪದ ಮಾಹಿತಿ ಹಂಚಿಕೊಂಡಿದ್ದು, ನಾನು ಹುಟ್ಟಿದ್ದು ಯಮೆನ್‌ಲ್ಲಿ, ನನ್ನದು ಅರೇಬಿಕ್ ರಕ್ತ ಎಂದು ತಂದೆ ಯಾವತ್ತೂ ಹೇಳ್ತಿದ್ರು ಎಂದು ಹೇಳಿದ್ದಾರೆ. 

ಮೊದಲ ಬಾರಿ ಮುಕೇಶ್ ಅಂಬಾನಿ ಕಂಡು ಶಾಕ್‌ ಆಗಿದ್ದ ನೀತಾ!

ಅರಬ್ ರಾಷ್ಟ್ರದ ಜೊತೆ ಮುಕೇಶ್ ಅಂಬಾನಿಗಿರುವ ಸಂಬಂಧದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆದರೀಗ ಭಾನುವಾರ ಕತಾರ್ ಎಕನಾಮಿಕ್ ಫೋರಂನಲ್ಲಿ ಭಾಗವಹಿಸಿದ ಏಷ್ಯಾದ ನಂಬರ್ ವನ್ ಶ್ರೀಮಂತ ವ್ಯಕ್ತಿ ಅರಬ್ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟಿದ್ದಾರೆ. 'ನಾನು ಹುಟ್ಟಿದ್ದು ಯೆಮನ್‌ನಲ್ಲಿ; ಏಕೆಂದರೆ ನನ್ನ ತಂದೆ ಯುವ ಭಾರತೀಯರಾಗಿ ಯೆಮನ್‌ಗೆ ತೆರಳಿದ್ದರು. ಭಾರತಕ್ಕೆ ಬರುವ ಮೊದಲೇ ನಾನಲ್ಲಿ ಜನಿಸಿದ್ದೆ. ಹೀಗಾಗಿ ನನ್ನದು ಅರೇಬಿಕ್ ರಕ್ತ ಎಂದು ಅವರು ಯಾವತ್ತೂ ಹೇಳುತ್ತಿದ್ದರು' ರಿಲಯನ್ಸ್ ಒಡೆಯ ತನ್ನ ತಂದೆಯ ಮಾತುಗಳನ್ನು ಮೆಲುಕು ಹಾಕಿದ್ದಾರೆ.

'ಎಲ್ಲ ಅರೇಬಿಯನ್ ರಾಷ್ಟ್ರ ಮತ್ತು ಭಾರತದ ನಡುವಿನ ಸಂಬಂಧಕ್ಕೆ ನಾವು ಬೆಲೆ ಕೊಡುತ್ತೇನೆ. ಅರಬ್ ಹಾಗೂ ಭಾರತದ ಸಂಬಂಧ ಬಹಳ ಪುರಾತನ. ಕತಾರ್‌ನಲ್ಲಿ ಸುಮಾರು ಏಳು ಲಕ್ಷ ಭಾರತೀಯರಿದ್ದಾರೆ. ಇವರಲ್ಲಿ ಪ್ರತಿಯೊಬ್ಬರೂ ಭಾರತದಲ್ಲಿ ಕತಾರ್‌ನ ವಕ್ತಾರರಂತೆ ಎಂದೂ ಅಂಬಾನಿ ಹೇಳಿದ್ದಾರೆ.

ವಿಶ್ವದ ಅತ್ಯಂತ ದುಬಾರಿ ಕಾರಿನ ಓನರ್‌ ನೀತಾ ಅಂಬಾನಿ ಡ್ರೈವರ್‌ ಸ್ಯಾಲರಿ ಎಷ್ಟು?

ಇದೇ ವೇಳೆ ತಮ್ಮ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು 'ಅಲ್ಲದೇ ನಮ್ಮ ಕುಟುಂಬವನ್ನೇ ತೆಗೆದುಕೊಂಡರೂ ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುಂಪಿನಲ್ಲಿ ಶೇಖಾ ಮೋಝಾ ಜತೆ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ಆದರೆ ನನ್ನ ಪತ್ನಿ, ಅವರ ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧನೆಯ ದೊಡ್ಡ ಅಭಿಮಾನಿ. ಅವರ ಪ್ರತಿಷ್ಠಾನ ಕಲಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ನನ್ನ ಪುತ್ರಿಗೆ ಅಪಾರ ಅಭಿಮಾನವಿದೆ. ಇಡೀ ಕುಟುಂಬದಲ್ಲೇ ಕತಾರ್ ಫೌಂಡೇಷನ್ ಸಾಧನೆ ಬಗ್ಗೆ ವ್ಯಾಪಕ ಮೆಚ್ಚುಗೆ ಇದೆ. ಕತಾರ್ ರಾಜಕುಟುಂಬ ನಿಜವಾಗಿಯೂ ಇಲ್ಲಿನ ಜನತೆಗಾಗಿ ಬಹಳಷ್ಟು ಕೆಲಸ ಮಾಡಿದೆ. ನಾವು ಅವರಿಂದ ಕಲಿಯುವ ಮೂಲಕ, ಪ್ರೇರಣೆ ಪಡೆಯುವ ಮೂಲಕ ಭಾರತ ಹಾಗೂ ಕತಾರ್ ನಡುವಿನ ನಂಟ ಮತ್ತಷ್ಟು ಬಲಶಾಲಿಯಾಗಬೇಕು ಎಂದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?