* ಕೊರೋನಾ ಕಾರಣದಿಂದಾಗಿ ಪ್ರಯಾಣಿಕರ ಪ್ರಯಾಣಕ್ಕೆ ನಿರ್ಬಂಧ
* ಗುಜರಿ ಮಾರಿದ್ದರಿಂದಲೇ ರೈಲ್ವೆಗೆ ಭರ್ಜರಿ 4,575 ಕೋಟಿ ಆದಾಯ
* ನಿರುಯಪಯಕ್ತ ವಸ್ತುಗಳ ಮಾರಾಟದಿಂದ ಭಾರೀ ಲಾಭ
ನವದೆಹಲಿ(ಜು.05): ಕೊರೋನಾ ಕಾರಣದಿಂದಾಗಿ ಪ್ರಯಾಣಿಕರ ಪ್ರಯಾಣಕ್ಕೆ ನಿರ್ಬಂಧದ ಹಿನ್ನೆಲೆಯಲ್ಲಿ ಆದಾಯ ಕೊರತೆ ಎದುರಿಸುತ್ತಿದ್ದ ರೈಲ್ವೆ ಇಲಾಖೆಗೆ, ನಿರುಪಯುಕ್ತ ವಸ್ತುಗಳ ಮಾರಾಟದಿಂದಾಗಿ 2020-21ನೇ ಸಾಲಿನಲ್ಲಿ ಭರ್ಜರಿ 4575 ಕೋಟಿ ರು. ಆದಾಯ ಬಂದಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯಿಂದ ಬಯಲಾಗಿದೆ.
2010-2011ರ ಅವಧಿಯಲ್ಲಿ ಗುಜರಿ ವಸ್ತುಗಳ ಮಾರಾಟದಿಂದ ರೈಲ್ವೆಗೆ 4409 ಕೋಟಿ ರು. ಆದಾಯ ಹರಿದುಬಂದಿತ್ತು.
ರೈಲ್ವೆ ಹಳಿಗಳ ನವೀಕರಣ, ಹೊಸ ರೈಲ್ವೆ ಮಾರ್ಗಗಳ ನಿರ್ಮಾಣ, ಹಳೇ ಲೋಕೋಮೊಟಿವ್, ಕೋಚ್‌ಗಳು, ವ್ಯಾಗಾನ್‌ಗಳು, ರೈಲ್ವೆ ಮಾರ್ಗಗಳನ್ನು ವಿದ್ಯುತ್ತೀಕರಣಗೊಳಿಸುತ್ತಿರುವುದರಿಂದ ರೈಲಿನ ಡೀಸೆಲ್ ಇಂಜಿನ್‌ಗಳು ಸೇರಿದಂತೆ ಇನ್ನಿತರ ಅನುಪಯುಕ್ತ ವಸ್ತುಗಳ ಮಾರಾಟದಿಂದ ರೈಲ್ವೆಗೆ ಭರ್ಜರಿ 4575 ಕೋಟಿ ರು. ಆದಾಯ ಬಂದಿದೆ.