ಪೆಟ್ರೋಲ್‌ 35, ಡೀಸೆಲ್‌ 16 ಪೈಸೆ ಏರಿಕೆ: ಮತ್ತಷ್ಟು ಕಡೆ 100 ರು ದಾಟಿದ ದರ!

By Suvarna NewsFirst Published Jul 5, 2021, 1:18 PM IST
Highlights

* ಪೆಟ್ರೋಲ್, ಡೀಸೆಲ್ ಮತ್ತೆ ದುಬಾರಿ

* 2 ತಿಂಗಳಲ್ಲಿ ಪೆಟ್ರೋಲ್‌ ಬೆಲೆ 34 ಬಾರಿ ಮತ್ತು ಡೀಸೆಲ್‌ ಬೆಲೆ 33 ಬಾರಿ ಏರಿಕೆ 

* ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾದ ಕೆಲವು ಕಡೆಗಳಲ್ಲಿ, 100 ರೂ. ಗಡಿ ದಾಟಿದ ಪೆಟ್ರೋಲ್

ನವದೆಹಲಿ(ಜು.05): ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾನುವಾರ ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕ್ರಮವಾಗಿ 35 ಪೈಸೆ ಮತ್ತು 18 ಪೈಸೆ ಏರಿಕೆ ಮಾಡಿವೆ. ಈ ಮೂಲಕ 2 ತಿಂಗಳಲ್ಲಿ ಪೆಟ್ರೋಲ್‌ ಬೆಲೆ 34 ಬಾರಿ ಮತ್ತು ಡೀಸೆಲ್‌ ಬೆಲೆ 33 ಬಾರಿ ಏರಿಕೆ ಮಾಡಿದಂತಾಗಿದೆ.

ಇದರಿಂದಾಗಿ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾದ ಕೆಲವು ಕಡೆಗಳಲ್ಲಿ, ಡೀಸೆಲ್‌ ಬೆಲೆಯೂ 100 ರು. ಗಡಿ ದಾಟಿದೆ. ಹೊಸ ದರದೊಂದಿಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 99.51 ರು., ಮತ್ತು ಡೀಸೆಲ್‌ ದರ 89.36 ರು. ಗೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ 99.99 ರು. ಮತ್ತು 94.72 ರು. ಇದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮುಕಾಶ್ಮೀರ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್‌, ಲಡಾಖ್‌, ಈಗ ಸಿಕ್ಕಿಂನಲ್ಲೂ ಪೆಟ್ರೋಲ್‌ ಬೆಲೆ 100ರ ಗಡಿ ದಾಟಿದೆ.

ಇನ್ನು ದೇಶದಲ್ಲೇ ಅತಿ ಹೆಚ್ಚು ತೈಲ ದರ ಇರುವ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್‌ ದರ 114 ರು ಮತ್ತು ಡೀಸೆಲ್‌ ದರ 102.61 ರು.ಗೆ ತಲುಪಿದೆ.

click me!