BUSINESS

ವಾರೀ ಎನರ್ಜೀಸ್ ಐಪಿಒ: ಲಾಭವೋ ನಷ್ಟವೋ?

ವಾರೀ ಎನರ್ಜೀಸ್ ಐಪಿಒ

ಸೋಲಾರ್ ಪ್ಯಾನಲ್ ತಯಾರಿಸುವ ಕಂಪನಿ ವಾರೀ ಎನರ್ಜೀಸ್ (Waaree Energies) ನ ಐಪಿಒ ಇಂದು ಅಂದರೆ ಅಕ್ಟೋಬರ್ 21 ರಿಂದ ತೆರೆದಿದೆ. ಇದರ ಗಾತ್ರ 4321.44 ಕೋಟಿ ರೂಪಾಯಿ.

ವಾರೀ ಐಪಿಒದಲ್ಲಿ ಹೂಡಿಕೆ ಮಾಡಬೇಕೆ?

ಹಲವು ತಜ್ಞರು ಈ ಐಪಿಒದಲ್ಲಿ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ. ಲಿಸ್ಟಿಂಗ್ ಸಮಯದಲ್ಲಿ ಲಾಭ ಗಳಿಸಲು ಮತ್ತು ದೀರ್ಘಾವಧಿ ಹೂಡಿಕೆ ಇಷ್ಟಪಡುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾರೀ ಐಪಿಒ: ಗ್ರೇ ಮಾರುಕಟ್ಟೆಯ ಪ್ರತಿಕ್ರಿಯೆ

ವಾರೀ ಎನರ್ಜೀಸ್ ಐಪಿಒ ಗ್ರೇ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಕ್ಟೋಬರ್ 21 ರಂದು ಕಂಪನಿಯ ಐಪಿಒ 1,510 ರೂ. ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದೆ.

ವಾರೀ ಎನರ್ಜೀಸ್ ಐಪಿಒ ಬೆಲೆ ಶ್ರೇಣಿ

ವಾರೀ ಎನರ್ಜೀಸ್ ಐಪಿಒದ ಬೆಲೆ ಶ್ರೇಣಿ 1,427 ರೂ. ನಿಂದ 1,503 ರೂ. ವರೆಗೆ ನಿಗದಿಯಾಗಿದೆ. ಒಂದು ಲಾಟ್‌ನಲ್ಲಿ 9 ಷೇರುಗಳಿವೆ. ಚಿಲ್ಲರ ಹೂಡಿಕೆದಾರರು ಕನಿಷ್ಠ 13,527 ರೂ. ಹೂಡಿಕೆ ಮಾಡಬೇಕಾಗುತ್ತದೆ.

ವಾರೀ ಎನರ್ಜೀಸ್ ಐಪಿಒ ಲಿಸ್ಟಿಂಗ್‌ ಡೇ

ವಾರೀ ಕಂಪನಿಯ ಷೇರುಗಳು ಅಕ್ಟೋಬರ್ 28 ರಂದು ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಆಗಲಿದೆ. ಐಪಿಒ ಆ್ಯಂಕರ್ ಹೂಡಿಕೆದಾರರಿಗೆ ಶುಕ್ರವಾರ ತೆರೆದಿತ್ತು. ಅವರಿಂದ ಕಂಪನಿ 1,277 ಕೋಟಿ ರೂ. ಸಂಗ್ರಹಿಸಿದೆ.

ಆ್ಯಂಕರ್ ಹೂಡಿಕೆದಾರರಿಗೆ ಲಾಕ್-ಇನ್ ಅವಧಿ

ಆ್ಯಂಕರ್ ಹೂಡಿಕೆದಾರರಿಗೆ ನೀಡಲಾದ ವಾರೀ ಎನರ್ಜೀಸ್‌ನ ಷೇರುಗಳಲ್ಲಿ 50% ಷೇರುಗಳ ಲಾಕ್-ಇನ್ ಅವಧಿಯನ್ನು ನವೆಂಬರ್ 23 ಕ್ಕೆ ನಿಗದಿಪಡಿಸಲಾಗಿದೆ.

ಗಮನಿಸಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆ ಪಡೆಯಿರಿ.

ಈ ಗುಣಗಳಿಂದಾನೇ ಇಶಾ ಅಂಬಾನಿ ಎಲ್ಲರಿಗೂ ಸ್ಫೂರ್ತಿ!

9.25 ಲಕ್ಷಕ್ಕೆ ಸೇಲ್ ಆದ ಈ ಥಾರ್ಪಾಕರ್ ತಳಿಯ ಹಸು: ವಿಶೇಷತೆ ಏನು ಗೊತ್ತಾ?

ಒಂದು ಲೀಟರ್ ಪೆಟ್ರೋಲಲ್ಲಿ ಬಂಕ್ ಮಾಲೀಕರಿಗೆ ಬರೋ ಲಾಭ ಎಷ್ಟು ಗೊತ್ತಾ?

ಭಾರತ ಮತ್ತು ನೆರೆಯ ದೇಶಗಳ ತಲಾ ಆದಾಯ ಎಷ್ಟಿದೆ?