
ಮುಂಬೈ (ಮಾ.22): ಹರೂನ್ ಗ್ಲೋಬಲ್ ರಿಚ್ ಲಿಸ್ಟ್ 2023 ಪ್ರಕಾರ ವಿಶ್ವದ ಅಗ್ರ 10 ಶ್ರೀಮಂತರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಮಾತ್ರ ಏಕೈಕ ಭಾರತೀಯರಾಗಿದ್ದಾರೆ. ಅವರ ಒಟ್ಟು ಆದಾಯ 82 ಬಿಲಿಯನ್ ಯುಎಸ್ ಡಾಲರ್. ಇನ್ನು ಗೌತಮ್ ಅದಾನಿ ಈ ಪಟ್ಟಿಯಲ್ಲಿ ದೊಡ್ಡ ಮಟ್ಟದ ಕುಸಿದ ಕಂಡಿದ್ದು 23ನೇ ಸ್ಥಾನಕ್ಕೆ ತಲುಪಿಸಿದ್ದಾರೆ. ಇದನ್ನು ಸೈರಸ್ ಪೋನಾವಾಲಾ ಮತ್ತು ಶಿವ ನಾಡರ್ ಕುಟುಂಬ ಕ್ರಮವಾಗಿ ಈ ಪಟ್ಟಿಯಲ್ಲಿ 46 ಹಾಗೂ 50ನೇ ಸ್ಥಾನದಲ್ಲಿದೆ. ಇನ್ನು ಉದಯ್ ಕೋಟಕ್ ಈ ಪಟ್ಟಿಯಲ್ಲಿ 135ನೇ ಸ್ಥಾನದಲ್ಲಿದ್ದಾರೆ, ಈ ವರ್ಷದ ಭಾರತದ ಶತಕೋಟ್ಯಧಿಪತಿಗಳ ಪಟ್ಟಿಗೆ 15 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆದರೆ, 2023ರ ಹರೂನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿರುವ ಇರುವ ಶತಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಭಾರತ ಇಳಿಕೆ ಇಳಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 28 ಮಂದಿ ಶತಕೋಟ್ಯಧಿಪತಿಗಳ ಪಟ್ಟಿಯಿಂದ ಹೊರಬಿದ್ದಿದ್ದಾರೆ. 187 ಬಿಲಿಯನೇರ್‌ಗಳೊಂದಿಗೆ ಭಾರತವು, ಚೀನಾ ಹಾಗೂ ಅಮೆರಿಕದ ನಂತರದ ಸ್ಥಾನದಲ್ಲಿದೆ.
ಹರೂನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ, ;ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಈ ಬಾರಿ ತನ್ನ ಆದಾಯದಲ್ಲಿ ಶೇ. 20ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಅಂಬಾನಿ ಅವರ ಆದಾಯ 82 ಬಿಲಿಯನ್ ಡಾಲರ್ ಆಗಿದೆ. ಹಾಗಿದ್ದರೂ, ಸತತ ಮೂರನೇ ವರ್ಷ ಏಷ್ಯಾದ ಶ್ರೀಮಂತ ವ್ಯಕ್ತಿ ಎನ್ನುವ ಗೌರವವನ್ನು ಅವರು ಉಳಿಸಿಕೊಂಡಿದ್ದಾರೆ' ಎಂದು ತಿಳಿಸಿದೆ. ಇನ್ನು ಗೌತಮ್ ಅದಾನಿ ಅವರ ಕುಟುಂಬದ ಆದಾಯದಲ್ಲಿ ಶೇ. 35ರಷ್ಟು ಇಳಿಕೆಯಾಗಿದೆ. 'ಏಷ್ಯಾದ 2ನೇ ಶ್ರೀಮಂತ ವ್ಯಕ್ತಿ ಎನ್ನುವ ಗೌರವವನ್ನು ಅದಾನಿ ಗ್ರೂಪ್‌ನ ಗೌತಮ್ ಅದಾನಿ, ವೈಎಸ್‌ಟಿಯ ಝೋಂಗ್ ಶಾನ್ಸನ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಜನವರಿಯಲ್ಲಿ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್‌ನ ವರದಿಯ ನಂತರ ಅದಾನಿ ತನ್ನ ಸಂಪತ್ತು ದೊಡ್ಡ ಮಟ್ಟದಲ್ಲಿ ಕುಸಿದ ಕಂಡಿದ್ದು, ಅವರ ಆದಾಯ ಗರಿಷ್ಠ ಮಟ್ಟದಿಂದ ಶೇ. 60ರಷ್ಟು ಕುಸಿತವಾಗಿದೆ. ಇದಕ್ಕೂ ಮುನ್ನ ಸಂಕ್ಷಿಪ್ತ ಅವಧಿಗೆ ಅದಾನಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಎನಿಸಿದ್ದರು ಎಂದು ವರದಿ ಹೇಳಿದೆ.
ಗೌತಮ್ ಅದಾನಿ ಕಳೆದ ವರ್ಷದಿಂದ ಪ್ರತಿ ವಾರ 3,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಂತ ಕುಸಿತ ಕಂಡವರ ಲಿಸ್ಟ್‌ನಲ್ಲಿ ಅದಾನಿ ಅಗ್ರಸ್ಥಾನದಲ್ಲಿಲ್ಲ. ಇದರಲ್ಲಿ ಜೆಫ್ ಬೆಜೋಸ್ ಅಗ್ರಸ್ಥಾನದಲ್ಲಿದ್ದರೆ, ಎಲಾನ್ ಮಸ್ಕ್, ಸರ್ಗೆ ಬಿರ್ನ್, ಲ್ಯಾರಿ ಪೇಜ್ ಮತ್ತು ಮೆಕೆಂಜಿ ಸ್ಕಾಟ್‌ನ ನಂತರದ ಸ್ಥಾನದಲ್ಲಿ ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿ ಇದ್ದಾರೆ. ಅಮೇರಿಕಾದಲ್ಲಿ 691 ಮತ್ತು ಭಾರತದಲ್ಲಿ 187 ಬಿಲಿಯನೇರ್‌ಗಳಿದ್ದಾರೆ. ಟಾಪ್ 100 ರಲ್ಲಿ ಕೇವಲ 5 ಭಾರತೀಯ ಬಿಲಿಯನೇರ್‌ಗಳಿದ್ದಾರೆ. ಭಾರತವು ವಿಶ್ವದ ಅತ್ಯಂತ ಶ್ರೀಮಂತ ವಾಯುಯಾನ ಬಿಲಿಯನೇರ್‌ಗಳಿಗೆ ನೆಲೆಯಾಗಿದೆ. ಕ್ರಮವಾಗಿ $3.6 ಬಿಲಿಯನ್ ಮತ್ತು $3.3 ಬಿಲಿಯನ್ ಸಂಪತ್ತನ್ನು ಹೊಂದಿರುವ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ಮತ್ತು "ಇಂಡಿಗೋ" ಏರ್‌ಲೈನ್ಸ್‌ನ ಕುಟುಂಬವು ಅತ್ಯಂತ ಶ್ರೀಮಂತ ವಾಯುಯಾನ ಬಿಲಿಯನೇರ್‌ಗಳಾಗಿದ್ದಾರೆ.
ಎಂಎನ್‌ಸಿ ಕಂಪನಿಯಲ್ಲೂ ಇಷ್ಟು ಸ್ಯಾಲರಿ ಸಿಗಲ್ಲ.. ಮುಕೇಶ್ ಅಂಬಾನಿ ಡ್ರೈವರ್ ಸ್ಯಾಲರಿ ಡಿಟೇಲ್ಸ್!
ಕಳೆದ ಐದು ವರ್ಷಗಳಲ್ಲಿ ಜಾಗತಿಕ ಬಿಲಿಯನೇರ್ ಜನಸಂಖ್ಯೆಗೆ ಭಾರತದ ಕೊಡುಗೆಯು ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಪ್ರಸ್ತುತ, ಐದು ವರ್ಷಗಳ ಹಿಂದೆ 4.9% ಗೆ ಹೋಲಿಸಿದರೆ ಒಟ್ಟು ಜಾಗತಿಕ ಬಿಲಿಯನೇರ್ ಜನಸಂಖ್ಯೆಯ 8% ದೇಶವು ಕೊಡುಗೆ ನೀಡುತ್ತದೆ. ಕಳೆದ ವರ್ಷದಲ್ಲಿ 1 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿದ ಬಿಲಿಯನೇರ್‌ಗಳ ಸಂಖ್ಯೆಗೆ ಸಂಬಂಧಿಸಿದಂತೆ, ಭಾರತವು 2023 M3M ಹುರೂನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿತ್ತು.
ಎದುರಾಳಿಗಳನ್ನ ಮಣಿಸಲು ಅಂಬಾನಿ ತಂತ್ರ, ಜಿಯೋ ಸಿನಿಮಾದಲ್ಲಿ ಐಪಿಎಲ್ ಉಚಿತವಾಗಿ ಪ್ರಸಾರ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.