2022-23ನೇ ಸಾಲಿನ ಹಣಕಾಸು ವರ್ಷ ಮಕ್ತಾಯಕ್ಕೆ ಇನ್ನು 10 ದಿನಗಳಷ್ಟೇ ಬಾಕಿ ಇದೆ. ಈ ನಡುವೆ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದ್ದು, ಮಾರ್ಚ್ 31ರವರೆಗೆ ಎಲ್ಲಾ ಶಾಖೆಗಳನ್ನು ತೆರೆದಿಡುವಂತೆ ಸೂಚನೆ ನೀಡಿದೆ.
ನವದೆಹಲಿ (ಮಾ.22): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 31 ರ ಕೆಲಸದ ಅವಧಿ ಮುಕ್ತಾಯವಾಗುವವರೆಗೂ ಎಲ್ಲಾ ಬ್ಯಾಂಕ್‌ಗಳು ತನ್ನ ಶಾಖೆಗಳನ್ನು ತೆರೆದಿರಬೇಕು ಎಂದು ನಿರ್ದೇಶನ ನೀಡಿದೆ. 2023ರ ಮಾರ್ಚ್ 31 ರಂದು ಸಾಮಾನ್ಯ ಕೆಲಸದ ಸಮಯ ಮುಕ್ತಾಯವಾಗುವವರೆಗೂ ಸರ್ಕಾರಿ ವಹಿವಾಟುಗಳಿಗೆ ಸಂಬಂಧಿಸಿದ ವಹಿವಾಟುಗಳಿಗಾಗಿ ತಮ್ಮ ಗೊತ್ತುಪಡಿಸಿದ ಶಾಖೆಗಳನ್ನು ತೆರೆದಿರಬೇಕು ಎಂದು ಕೇಂದ್ರ ಬ್ಯಾಂಕ್ ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ಇದರೊಂದಿಗೆ, ನೀವು ಈಗ ಭಾನುವಾರದಂದು ಬ್ಯಾಂಕ್ ಸಂಬಂಧಿತ ಕೆಲಸವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಮಾರ್ಚ್ 31 ರ ನಂತರ ಸತತ ಎರಡು ದಿನ ಅಂದರೆ ಏಪ್ರಿಲ್ 1 ಮತ್ತು 2 ರಂದು ಬ್ಯಾಂಕ್‌ಗಳು ರಜೆಯಲ್ಲಿರುತ್ತದೆ. 2022-23ನೇ ಸಾಲಿನ ಹಣಕಾಸು ವರ್ಷ ಮಾರ್ಚ್ 31 ರಂದು ಕೊನೆಯಾಗಲಿದೆ. ಹಾಗಾಗಿ ಸರ್ಕಾರ ಸಂಬಂಧಿತ ಎಲ್ಲಾ ವಹಿವಾಟುಗಳು ಮಾರ್ಚಚ್ 31ರ ಒಳಗಾಗಿ ಕೊನೆಯಾಗಬೇಕು. ಈ ಕುರಿತಾಗಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಆರ್‌ಬಿಐ ದೇಶದ ಉಳಿದ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (ಆರ್‌ಟಿಜಿಎಸ್) ವ್ಯವಸ್ಥೆಗಳ ಮೂಲಕ ವಹಿವಾಟು ಮಾರ್ಚ್ 31 ರ ಮಧ್ಯರಾತ್ರಿ 12 ರವರೆಗೆ ಮುಂದುವರಿಯುತ್ತದೆ ಎಂದು ಆರ್‌ಬಿಐ ಹೇಳಿದೆ.
ಸರ್ಕಾರಿ ಚೆಕ್‌ಗಳ ವಿಶೇಷ ಕ್ಲಿಯರಿಂಗ್: ಸಂಗ್ರಹವಾಗಿರುವ ಸರ್ಕಾರಿ ಚೆಕ್‌ಗಳ ವಿಶೇಷ ಕ್ಲಿಯರಿಂಗ್ ಅನ್ನು ನಡೆಸಲಾಗುವುದು, ಇದಕ್ಕಾಗಿ ಪಾವತಿ ಮತ್ತು ಸೆಟ್ಲ್‌ಮೆಂಟ್ ಸಿಸ್ಟಮ್ಸ್ ಇಲಾಖೆ (ಡಿಪಿಎಸ್‌ಎಸ್) ಅಗತ್ಯ ಸೂಚನೆಗಳನ್ನು ನೀಡಲಿದೆ. ಡಿಪಿಎಸ್‌ಎಸ್ ಇಲಾಖೆ ಆರ್‌ಬಿಐ ಅಡಿಯಲ್ಲಿ ಬರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಹಿವಾಟುಗಳ ವರದಿಗಾಗಿ ವರದಿ ಮಾಡುವ ವಿಂಡೋ ಮಾರ್ಚ್ 31 ರಂದು ಏಪ್ರಿಲ್ 1 ರಂದು ಮಧ್ಯಾಹ್ನದವರೆಗೆ ತೆರೆದಿರುತ್ತದೆ.
ಪಾನ್-ಆಧಾರ್ ಲಿಂಕ್ ಮಾಡಿ: ನೀವು ಇನ್ನೂ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅದನ್ನು 2023ರ ಮಾರ್ಚ್ 31 ರ ಒಳಗಾಗಿ ಮಾಡಬೇಕಿರುತ್ತದೆ. ಹಾಗೆ ಮಾಡಲು ವಿಫಲವಾದರೆ ನಿಮ್ಮ ಪ್ಯಾನ್ ಅನ್ನು ನಿಷ್ಕ್ರೀಯಗೊಳಿಸಲಾಗುತ್ತದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) 2022ರ ಜೂನ್ 30 ರಿಂದ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು 1000 ರೂಪಾಯಿಗಳ ವಿಳಂಬ ಶುಲ್ಕವನ್ನು ವಿಧಿಸುತ್ತಿದೆ.
ಆರ್ ಬಿಐ ಹಳೆಯ 5ರೂ. ನಾಣ್ಯ ಸ್ಥಗಿತಗೊಳಿಸಿದ್ದು ಏಕೆ? ಇದರ ಹಿಂದಿದೆ ಬಾಂಗ್ಲಾದೇಶೀಯರ ಕೈವಾಡ!
ಪಿಪಿಎಫ್-ಸುಕನ್ಯಾ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ಜಮಾ ಮಾಡಿ: ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಖಾತೆಯನ್ನು ಹೊಂದಿದ್ದರೆ, ಆದರೆ ಈ ಹಣಕಾಸು ವರ್ಷದಲ್ಲಿ ಹಣವನ್ನು ಠೇವಣಿ ಮಾಡಲು ಸಾಧ್ಯವಾಗದಿದ್ದರೆ, ಮಾರ್ಚ್ 31 ರವರೆಗೆ ಖಾತೆಯನ್ನು ಸಕ್ರಿಯವಾಗಿಡಲು, ಸ್ವಲ್ಪ ಹಣವನ್ನು ಖಂಡಿತವಾಗಿಯೂ ಹಾಕಬೇಕಾಗುತ್ತದೆ. ಪಿಪಿಎಫ್ ಮತ್ತು ಎಸ್‌ಎಸ್‌ವೈನಲ್ಲಿ ಹಣವನ್ನು ಠೇವಣಿ ಮಾಡದಿದ್ದರೆ ಈ ಖಾತೆಗಳು ನಿಷ್ಕ್ರಿಯವಾಗಬಹುದು ಅಥವಾ ಸಂಪೂರ್ಣವಾಗಿ ರದ್ದು ಆಗಬಹುದು.
ದೇಶ ಐದು ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐ ನಿರ್ಬಂಧ, ರಾಜ್ಯದ ಈ ಬ್ಯಾಂಕ್‌ನಲ್ಲಿದ್ಯಾ ನಿಮ್ಮ ಅಕೌಂಟ್?
ಈ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರದೇ ಇದ್ದಲ್ಲಿ ಅವುಗಳನ್ನು ಮತ್ತೆ ಸಕ್ರಿಯಗೊಳಿಸಲು ದಂಡ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಖಾತೆಯು ಸಕ್ರಿಯವಾಗಿದೆ ಎಂದು ತಿಳಿಯಲು ನಿಮ್ಮ ಈ ಯೋಜನೆಗಳಲ್ಲಿ ಕನಿಷ್ಠ ಹೂಡಿಕೆಯನ್ನು ನೀವು ನಿರ್ವಹಿಸಬೇಕು. ಪಿಪಿಎಫ್ ಯೋಜನೆಯಲ್ಲಿ 500 ರೂಪಾಯಿ ಹಾಗೂ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ 250 ರೂಪಾಯಿ ಕನಿಷ್ಠ ಮೊತ್ತವನ್ನು ಇರಿಸಿರಬೇಕಾಗುತ್ತದೆ.