*ತಾಳೆ ಎಣ್ಣೆ ಸೇರಿದಂತೆ ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆ
*ಲೈಫ್ ಬಾಯ್ ಹಾಗೂ ಲಕ್ಸ್ ಸೋಪಿನ ಬೆಲೆಯಲ್ಲಿ ಶೇ.5-ಶೇ.11ರಷ್ಟು ಇಳಿಕೆ
* ಗೋದ್ರೇಜ್ ನಂ.1 ಸೋಪಿನ ಬೆಲೆ ಶೇ.13-ಶೇ.15ರಷ್ಟುಇಳಿಕೆ
ನವದೆಹಲಿ (ಅ.10): ತಾಳೆ ಎಣ್ಣೆ ಹಾಗೂ ಇತರ ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ಸೋಪುಗಳ ಬೆಲೆ ಇಳಿಕೆ ಮಾಡಿವೆ. ಹಿಂದೂಸ್ತಾನ ಯುನಿಲಿವರ್ ಲಿಮಿಟೆಡ್, ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ ಲಿ.(ಜಿಸಿಪಿಎಲ್) ಕೆಲವು ಬ್ರ್ಯಾಂಡ್ ಸೋಪುಗಳ ಬೆಲೆಯಲ್ಲಿ ಶೇ.15ರಷ್ಟು ಇಳಿಕೆ ಮಾಡಿವೆ. ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಲೈಫ್ ಬಾಯ್ ಹಾಗೂ ಲಕ್ಸ್ ಸೋಪಿನ ಬೆಲೆಯಲ್ಲಿ ಶೇ.5-ಶೇ.11ರಷ್ಟು ಇಳಿಕೆ ಮಾಡಿವೆ. ಗೋದ್ರೇಜ್ ಗ್ರೂಪ್ ಉಪಸಂಸ್ಥೆ ಜಿಸಿಪಿಎಲ್ ಗೋದ್ರೇಜ್ ನಂ.1 ಸೋಪಿನ ಬೆಲೆಗಳಲ್ಲಿ ಶೇ.13-ಶೇ.15ರಷ್ಟುಇಳಿಕೆ ಮಾಡಿವೆ. ಹಣದುಬ್ಬರ ಹೆಚ್ಚಳದ ಕಾರಣ ಸೋಪ್ ಬೇಡಿಕೆ ಕೂಡ ತಗ್ಗಿದೆ ಎಂದು ಹೇಳಲಾಗಿದೆ. ತೈಲದ ಅತಿದೊಡ್ಡ ರಫ್ತುದಾರರಾದ ಇಂಡೋನೇಷ್ಯಾ ಏಪ್ರಿಲ್ 28 ರಂದು ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧವನ್ನು ವಿಧಿಸಿದಾಗ ತಾಳೆ ಎಣ್ಣೆ ಬೆಲೆ ಜಾಗತಿಕವಾಗಿ ತೀವ್ರ ಏರಿಕೆ ಕಂಡಿತ್ತು. ಆದರೆ, ಮೂರು ವಾರಗಳ ನಂತರ ಇಂಡೋನೇಷ್ಯಾ ಈ ನಿಷೇಧವನ್ನುರದ್ದುಗೊಳಿಸಿತ್ತು.ಇತ್ತೀಚೆಗೆ ಬೆಲೆಯೇರಿಕೆ ತಡೆಗೆ ಕೇಂದ್ರ ಸರ್ಕಾರ, ಖಾದ್ಯ ತೈಲ ಆಮದುಗಳ ಮೇಲಿನ ರಿಯಾಯಿತಿ ಸುಂಕಗಳನ್ನು ಆರು ತಿಂಗಳವರೆಗೆ ಅಂದರೆ, 2023ರ ಮಾರ್ಚ್ 31ರವರೆಗೆ ವಿಸ್ತರಿಸಿದೆ. ಹೀಗಾಗಿ ತಾಳೆ ಎಣ್ಣೆ ಬೆಲೆ ಸದ್ಯಕ್ಕೆ ಏರಿಕೆಯಾಗೋದಿಲ್ಲ ಎಂಬ ನಿರೀಕ್ಷೆಯಿದೆ.
ಸೋಪ್ (Soap) ಬೆಲೆ ಇಳಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ (Palm oil) ಹಾಗೂ ಇತರ ಅಗತ್ಯ ಕಚ್ಚಾ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರೋದೇ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಸಿಪಿಎಲ್ ಸಿಇಒ ಸಮೀರ್ ಶಾ 'ಕಚ್ಚಾ ಸಾಮಗ್ರಿಗಳ ಬೆಲೆ ಇಳಿಕೆಯಾಗುತ್ತಿದ್ದು, ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರುವ ಮೊದಲ ಕಂಪನಿ ಜಿಸಿಪಿಎಲ್ ಆಗಿದೆ' ಎಂದು ಹೇಳಿದ್ದಾರೆ. ಗೋದ್ರೇಜ್ ನಂ.1 ಸೋಪಿನ ಬೆಲೆಯಲ್ಲಿ ಶೇ.13ರಿಂದ ಶೇ.15ರಷ್ಟು ಇಳಿಕೆ ಮಾಡಲಾಗಿದೆ. ಗೋದ್ರೇಜ್ ನಂ.1 ಸೋಪಿನ 5 ಸೋಪುಗಳನ್ನು ಒಳಗೊಂಡ 100ಗ್ರಾಂ ಪ್ಯಾಕ್ ಬೆಲೆಯನ್ನು 140ರೂ.ನಿಂದ 120ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಶಾ ತಿಳಿಸಿದ್ದಾರೆ.
ದೇಶದಲ್ಲಿ 6 ತಿಂಗಳಲ್ಲಿ 9 ಲಕ್ಷ ಕೋಟಿ ರೂ. Direct Taxes ಸಂಗ್ರಹ: ಶೇ. 24 ರಷ್ಟು ಏರಿಕೆ
ಎಚ್ ಯುಎಲ್ ಕಂಪನಿಯ ಲೈಫ್ ಬಾಯ್ ಹಾಗೂ ಲಕ್ಸ್ ಬ್ರ್ಯಾಂಡ್ ಸೋಪಿನ ಬೆಲೆಯನ್ನು ದೇಶದ ಪಶ್ಚಿಮ ಭಾಗದಲ್ಲಿ ಶೇ.5ರಿಂದ ಶೇ.10ರಷ್ಟು ಇಳಿಕೆ ಮಾಡಲಾಗಿದೆ. ಹಣದುಬ್ಬರ ಹೆಚ್ಚಳದ ಕಾರಣ ಸೋಪುಗಳ ಬೆಲೆಯಲ್ಲಿ ಇಳಿಕೆಯಾಗಿತ್ತು. 2022ನೇ ಹಣಕಾಸು ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಪುಗಳ ಮಾರಾಟ ತಗ್ಗಿರೋದು ಹಾಗೂ ಅಧಿಕ ಚಿಲ್ಲರೆ ಹಣದುಬ್ಬರ ಎಫ್ ಎಂಸಿಜಿ ಕಂಪನಿಗಳಿಗೆ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿದೆ.ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಬೆಲೆ ಇಳಿಕೆಯ ಕಾರಣದಿಂದ ಮಾರಾಟದ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸೋಪು ತಯಾರಿಕೆಯಲ್ಲಿ ತಾಳೆ ಎಣ್ಣೆ (Palm Oil) ಹಾಗೂ ಅದರ ಉಪ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ, ತಾಳೆ ಎಣ್ಣೆ ಬೆಲೆ ಹೆಚ್ಚಳದ ಪರಿಣಾಮ ಸೋಪು ತಯಾರಿಕ ಸಂಸ್ಥೆಗಳು ತೀವ್ರ ಇಕ್ಕಟ್ಟಿಗೆ ಸಿಲುಕಿದ್ದವು. ಆದರೆ, ಈಗ ತಾಳೆ ಎಣ್ಣೆ ಬೆಲೆ ಇಳಿಕೆಯಾಗಿದ್ದು, ಹಣದುಬ್ಬರಿಂದ ತಗ್ಗಿರುವ ಬೇಡಿಕೆ ಹೆಚ್ಚಿಸಿಕೊಳ್ಳಲು ಸೋಪ್ ಕಂಪನಿಗಳು ಸೋಪುಗಳ ಬೆಲೆ ಇಳಿಕೆಗೆ ಮುಂದಾಗಿವೆ.
Rupee Value: ಮಾರ್ಚ್ ವೇಳೆ ರೂಪಾಯಿ ಬೆಲೆ ಡಾಲರ್ ಮುಂದೆ 84-85 ಆಗುವ ಆತಂಕ; ವರದಿ
ತಾಳೆ ಎಣ್ಣೆ ಸೇರಿದಂತೆ ಖಾಸ್ಯ ತೈಲಗಳ ಆಮದಿನ ಮೇಲೆ ಸರ್ಕಾರ ವಿಧಿಸುವ ಒಟ್ಟು ತೆರಿಗೆ ಪ್ರಮಾಣವು 5.5% ಆಗಿದೆ. ಫೆಬ್ರವರಿ 2022 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಮೂಲ ಕಸ್ಟಮ್ಸ್ ಸುಂಕ ಮನ್ನಾ ಸೆಪ್ಟೆಂಬರ್ 30 ರವರೆಗೆ ಅನ್ವಯಿಸುತ್ತದೆ.