Rupee Value: ಮಾರ್ಚ್‌ ವೇಳೆ ರೂಪಾಯಿ ಬೆಲೆ ಡಾಲರ್‌ ಮುಂದೆ 84-85 ಆಗುವ ಆತಂಕ; ವರದಿ

By Sharath Sharma Kalagaru  |  First Published Oct 10, 2022, 12:08 PM IST

Indian Rupee Value today: ಭಾರತದ ರೂಪಾಯಿ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಡಾಲರ್‌ ಎದುರು ಮಾರ್ಚ್‌ ವೇಳೆಗೆ 84-85 ಆಗುವ ಸಾಧ್ಯತೆಯಿಂದ ಎಂಬ ಆತಂಕಕಾರಿ ವಿಚಾರವನ್ನು ಆರ್ಥಿಕ ತಜ್ಞೆ ಗರೀಮಾ ಕಪೂರ್‌ ವ್ಯಕ್ತಪಡಿಸಿದ್ದಾರೆ. 


ಮುಂಬೈ: ದಿನದಿಂದ ದಿನ ಡಾಲರ್ ಎದುರು ರೂಪಾಯಿ ಮೌಲ್ಯ (Indian Rupee Value) ಕುಸಿಯುತ್ತಲೇ ಇದೆ. ಇಂದೂ ಕುಸಿತ ಕಂಡಿರುವ ರೂಪಾಯಿ ಬೆಲೆ ಡಾಲರ್‌ ಎದುರು ರೂ. 82.6825 ಆಗಿದೆ. ಪ್ರತಿ ದಿನ ಸಾರ್ವಕಾಲಿಕ ಕುಸಿತವನ್ನು ರೂಪಾಯಿ ದಾಖಲಿಸುತ್ತಿದೆ. ವರದಿಗಳ ಪ್ರಕಾರ ಸದ್ಯ ಡಾಲರ್‌ ಎದುರು ರೂಪಾಯಿ ಬೆಲೆ ಏರಿಕೆ ಅಸಾಧ್ಯ. ಇದು ಹೀಗೇ ಮುಂದುವರೆಯಲಿದ್ದು ಮಾರ್ಚ್‌ ಹೊತ್ತಿಗೆ 84-85ಕ್ಕೆ ಇಳಿಯುವ ಸಾಧ್ಯತೆಯಿದೆ. ಈಗಾಗಲೇ ಹಣದುಬ್ಬರ ದೇಶದಲ್ಲಿ ತಾಂಡವವಾಡುತ್ತಿದ್ದು, ಈ ಮಟ್ಟಕ್ಕೆ ರೂಪಾಯಿ ಬೆಲೆ ಕುಸಿದರೆ ದೇಶ ತತ್ತರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ (International Crude oil price), ಹೆಚ್ಚಿನ ವ್ಯಾಪಾರ ಕೊರತೆ ಮತ್ತು ಖಾಲಿಯಾಗುತ್ತಿರುವ ವಿದೇಶಿ ವಿನಿಮಯ ಮೀಸಲಿನಿಂದ (Foreign Reserves) ರೂಪಾಯಿ ಬೆಲೆ ರೂ 84-85 ಮುಟ್ಟುವ ಸಾಧ್ಯತೆಯಿದೆ ಎಂದು ಎಲಾರಾ ಗ್ಲೋಬಲ್‌ ರಿಸರ್ಚ್‌ ಸಂಸ್ಥೆ ವರದಿ ಮಾಡಿದೆ. 

"ರೂಪಾಯಿ ಅಮೆರಿಕಾದ ಹದ್ದಿನ ಮನಸ್ಥಿತಿಯ ಒಕ್ಕೂಟ ಮೀಸಲು ನೀತಿ ಮತ್ತು ಬಡ್ಡಿ ದರದ ಬದಲಾವಣೆಯಿಂದ ಪೆಟ್ಟು ತಿಂದಿದೆ," ಎಂದು ಎಲಾರಾದ ಆರ್ಥಿಕ ತಜ್ಞೆ ಗರೀಮಾ ಕಪೂರ್‌ ಅಭಿಪ್ರಾಯ ಪಡುತ್ತಾರೆ. "ಅಂತಾರಾಷ್ಟ್ರೀಯ ಕಚ್ಚಾ ತೈಲಬೆಲೆ ಏರಿಕೆ ಮತ್ತು ವಿದೇಶಿ ವಿನಿಮಯ ಮೀಸಲಿನ ಕೊರತೆ ರೂಪಾಯಿ ಕುಸಿತಕ್ಕೆ ಮೂಲ ಕಾರಣ," ಎಂದವರು ಅಭಿಪ್ರಾಯ ಪಟ್ಟಿದ್ದಾರೆ. 

Tap to resize

Latest Videos

ಇದನ್ನೂ ಓದಿ: ಡಾಲರ್‌ ಮುಂದೆ ಸಾರ್ವತ್ರಿಕ ಕುಸಿತ ಕಂಡ ರೂಪಾಯಿ: ಡಾಲ್‌ಗೆ ರೂ 82.33

ಕಪೂರ್‌ ಅವರ ಅವಲೋಕನದ ಪ್ರಕಾರ ಡಿಸೆಂಬರ್‌ ಅಂತ್ಯಕ್ಕೆ ರೂಪಾಯಿ ಬೆಲೆ ಡಾಲರ್‌ ಎದುರು 83.50 ಆಗಲಿದೆ. ಮುಂದಿನ ವರ್ಷದ ಮಾರ್ಚ್‌ಗಿಂತ ಮುನ್ನವೇ 84-85 ಆಗಲಿದೆ. ತೈಲ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಯಿಂದ ರೂಪಾಯಿ ಕುಸಿತವಾಗುತ್ತಿದೆ. ಒಪೆಕ್‌ ರಾಷ್ಟ್ರಗಳು ಕಳೆದ ವಾರ ತೈಲ ಪೂರೈಕೆ ಕಡಿತಗೊಳಿಸಿದ್ದು ರೂಪಾಯಿ ಇನ್ನಷ್ಟು ದುರ್ಬಲವಾಗುವಂತೆ ಮಾಡಿದೆ. ಬ್ರೆಂಟ್‌ ಕಚ್ಚಾ ತೈಲ 11% ಹೆಚ್ಚಳವಾಗಿದ್ದು ಜಾಗತಿಕ ಹಣದುಬ್ಬರಕ್ಕೆ (Global Recession) ನಾಂದಿ ಹಾಡಬಹುದು. ಇದನ್ನು ಅರಿತೂ ಒಪೆಕ್‌ ರಾಷ್ಟ್ರಗಳು ತೈಲ ಪೂರೈಕೆಗೆ ಕಡಿವಾಣ ಹಾಕಿದ್ದು ದುರಂತ. 

ಬ್ರೆಂಟ್‌ ಕಚ್ಚಾ ತೈಲ ಬ್ಯಾರೆಲ್‌ಗೆ 97.04 ಡಾಲರ್‌ ಆಗಿದ್ದು, ಒಪೆಕ್‌ ರಾಷ್ಟ್ರಗಳ (Organization of the Petroleum Exporting Countries) ನಿರ್ಧಾರದಿಂದ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 90-100 ಡಾಲರ್‌ ಮುಂದುವರೆಯಲಿದೆ ಎಂದು ಕಪೂರ್‌ ಅಭಿಪ್ರಾಯಪಟ್ಟಿದ್ದಾರೆ. ಇದರ ನಡುವೆ ಭಾರತ ವಿದೇಶಿ ವಿನಿಮಯ ಮೀಸಲು 532.66 ಮಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದ್ದೆ, 2020ರ ನಂತರರ ಕಂಡುಬಂದ ದೊಡ್ಡ ಕುಸಿತವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಇಷ್ಟೊಂದು ವಿದೇಶಿ ವಿನಿಮಯ ಕುಸಿತವಾಗಿರುವುದು ಭಾರತದಲ್ಲಿ ಮಾತ್ರ ಎಂದು ಕಪೂರ್‌ ಹೇಳಿದ್ದಾರೆ. 

ಇದನ್ನೂ ಓದಿ: ಡಾಲರ್ ಎದುರು ಮುಂದುವರಿದ ರೂಪಾಯಿ ಮೌಲ್ಯ ಕುಸಿತ, ಕಾರಣವೇನು?

ವಿದೇಶಿ ವಿನಿಮಯವನ್ನು ಏರಿಕೆ ಮಾಡಲು ಆರ್‌ಬಿಐ (Reserve Bank of India) ಅನಿವಾಸಿ ಭಾರತೀಯರ ಬಾಂಡ್‌ಗಳನ್ನು (Non Resident Indians) ಬಳಸಿಕೊಳ್ಳುವ ನಿರ್ಧಾರ ಮಾಡಬಹುದು, ಆದರೆ ಇದು ಸುರಕ್ಷಿತ ನಿರ್ಧಾರವಲ್ಲ ಎಂದು ಕಪೂರ್‌ ಹೇಳಿದ್ದಾರೆ. 

click me!