ಬ್ಯುಸಿನೆಸ್ ಆರಂಭಿಸುವ ಮುನ್ನ ಅನೇಕ ಪ್ರಶ್ನೆಗಳಿಗೆ ನೀವು ಉತ್ತರ ಕಂಡುಕೊಳ್ಳಬೇಕು. ಯಾವ ಬ್ಯುಸಿನೆಸ್ ಸುಲಭ ಹಾಗೂ ಕಡಿಮೆ ಬಂಡವಾಳದಲ್ಲಿ ಮಾಡ್ಬಹುದು ಎಂಬ ಬಗ್ಗೆ ಮಾಹಿತಿ ಪಡೆಯೋದು ಮುಖ್ಯ. ನಾವಿಂದು ಸದಾ ಬೇಡಿಕೆಯಲ್ಲಿರುವ ಬ್ಯುಸಿನೆಸ್ ಒಂದರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಬ್ಯುಸಿನೆಸ್ ಮಾಡುವ ಆಸಕ್ತಿ ಈಗಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಅನೇಕರು ಒಳ್ಳೊಳ್ಳೆ ಕೆಲಸ ಬಿಟ್ಟು ಬ್ಯುಸಿನೆಸ್ ಕ್ಷೇತ್ರಕ್ಕೆ ಇಳಿತಿದ್ದಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಗಳಿಸುವ ಸಣ್ಣ ವ್ಯಾಪಾರವನ್ನು ನೀವೂ ಹುಡುಕುತ್ತಿದ್ದರೆ ಈ ಸುದ್ದಿ ಓದಿ. ನಾವಿಂದು ಹೆಚ್ಚು ಬೇಡಿಕೆಯಲ್ಲಿರುವ, ಸದಾ ಅಗತ್ಯವಿರುವ ಹಾಗೂ ಕಡಿಮೆ ಬಂಡವಾಳದಲ್ಲೂ ಹೆಚ್ಚು ಗಳಿಸಬಹುದಾಗ ಬ್ಯುಸಿನೆಸ್ ಒಂದರ ಬಗ್ಗೆ ಹೇಳ್ತೆವೆ.
ಹೆಚ್ಚು ಬೇಡಿಕೆ (Demand) ಇರೋ ಈ ಬ್ಯುಸಿನೆಸ್ (Business) ಶುರು ಮಾಡಿ : ಇಂದು ನಾವು ನಿಮಗೆ ಮಕ್ಕಳ ಬಟ್ಟೆ ತಯಾರಿ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡ್ತೇವೆ. ನೀವು ಮಕ್ಕಳ ಬಟ್ಟೆ ತಯಾರಿ ಶುರು ಮಾಡ್ಬಹುದು. ಮಕ್ಕಳ ಬಟ್ಟೆಗೆ ಬಹಳ ಬೇಡಿಕೆ ಇದೆ. ಹಾಗೆ ಅದನ್ನು ತಯಾರಿಸೋದು ಸುಲಭ. ಮಕ್ಕಳಿಗೆ ಬಟ್ಟೆ ಅತ್ಯಗತ್ಯ. ಬೆಲೆ ಎಷ್ಟಿದ್ದರೂ ಪಾಲಕರು ಒಳ್ಳೆ ಬಟ್ಟೆ (Clothes) ಖರೀದಿಗೆ ಸಿದ್ಧರಾಗ್ತಾರೆ. ಬಣ್ಣ ಬಣ್ಣದ, ಆಕರ್ಷಕ ಮಕ್ಕಳ ಬಟ್ಟೆ ನೋಡ ನೋಡ್ತಿದ್ದಂತೆ ಖರೀದಿಯಾಗುತ್ತೆ. ಮಕ್ಕಳ ಬಟ್ಟೆ ತಯಾರಿ ಬಹಳ ಸುಲಭ ಹಾಗೂ ಸರಳ.
ಅಬ್ಬಬ್ಬಾ..ಅಂಬಾನಿ ಕುಟುಂಬದ ಜೊತೆ ಬೆಂಗಾವಲು ಬರೋ ಕಾರಿನ ಬೆಲೆ ಕೋಟಿ ಕೋಟಿ ಮೀರುತ್ತೆ!
ಮಕ್ಕಳ ಬಟ್ಟೆ ಗಾರ್ಮೆಂಟ್ ಗೆ ಎಷ್ಟು ಹೂಡಿಕೆ (Investment) ಮಾಡ್ಬೇಕು? : ನೀವು ಮಕ್ಕಳ ಉಡುಪು ತಯಾರಿಕಾ ಘಟಕವನ್ನು ಸ್ಥಾಪಿಸಲು ಬಯಸಿದರೆ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ವರದಿಯನ್ನು ಓದಿ ತಿಳಿದುಕೊಳ್ಳಿ. ನೀವು ಬಟ್ಟೆ ವ್ಯವಹಾರವನ್ನು ಕನಿಷ್ಠ 9 ಲಕ್ಷ ರೂಪಾಯಿಯಲ್ಲಿ ಶುರು ಮಾಡಬಹುದು. ಇನ್ನೂ ಕಡಿಮೆ ಹಣದಲ್ಲೂ ನೀವು ವ್ಯವಹಾರ ಪ್ರಾರಂಭಿಸಬಹುದು. ಮಕ್ಕಳ ಬಟ್ಟೆ ತಯಾರಿಕಾ ಘಟಕಕ್ಕೆ 9,85,000 ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ 6,75,000 ರೂಪಾಯಿಗಳನ್ನು ಉಪಕರಣಗಳಿಗೆ ಮತ್ತು 3,10,000 ರೂಪಾಯಿಯನ್ನು ಇದರ ಕೆಲಸಕ್ಕೆ ವಿನಿಯೋಗಿಸಬೇಕು. ಈ ವ್ಯಾಪಾರಕ್ಕಾಗಿ ನಿಮಗೆ ಪರವಾನಗಿ ಮತ್ತು ಜಿಎಸ್ಟಿ ನೋಂದಣಿ ಅಗತ್ಯವಿರುತ್ತದೆ.
ಮಕ್ಕಳ ಬಟ್ಟೆ ಗಾರ್ಮೆಂಟ್ ನಿಂದ ನಿಮಗಾಗುವ ಲಾಭ : ಕೆವಿಐಸಿ ವರದಿಯ ಪ್ರಕಾರ, ಒಂದು ವರ್ಷದಲ್ಲಿ ಮಕ್ಕಳ 90,000 ಉಡುಪುಗಳನ್ನು ತಯಾರಿಸಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಒಂದು ಬಟ್ಟೆಯನ್ನು 76 ರೂಪಾಯಿ ದರದಲ್ಲಿ ಮಾರಾಟ ಮಾಡಿದರೆ ನಿಮ್ಮ ಗಳಿಕೆಯು 37,62,000 ರೂಪಾಯಿ ಆಗುತ್ತದೆ. ಇದರಲ್ಲಿ ಯೋಜಿತ ಮಾರಾಟ 42,00,000 ರೂಪಾಯಿ. ಒಟ್ಟು ಹೆಚ್ಚುವರಿ 4,37,500 ರೂಪಾಯಿ. ಈ ವ್ಯವಹಾರದಲ್ಲಿ ಆರಂಭಿಕ ದಿನಗಳಲ್ಲಿ ಒಂದು ವರ್ಷದಲ್ಲಿ 4 ಲಕ್ಷ ರೂಪಾಯಿಗಳ ನಿವ್ವಳ ಆದಾಯವನ್ನು ಗಳಿಸಬಹುದು. ನಿಮ್ಮ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದಂತೆ, ನಿಮ್ಮ ಆದಾಯವು ಹೆಚ್ಚಾಗುತ್ತದೆ.
ಮಕ್ಕಳ ಬಟ್ಟೆ ವ್ಯಾಪಾರದ ಬಗ್ಗೆ ಹೇಳುವುದಾದರೆ, ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಫಾರ್ಚೂನ್ ಬ್ಯುಸಿನೆಸ್ ಇನ್‌ಸೈಟ್ಸ್ ವರದಿಯ ಪ್ರಕಾರ, ಜಾಗತಿಕ ಮಕ್ಕಳ ಉಡುಪು ಮಾರುಕಟ್ಟೆ ಗಾತ್ರವು 2023 ರ ವೇಳೆಗೆ 318.34 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ. 2022 ರಲ್ಲಿ ಇದು 187.29 ಬಿಲಿಯನ್ ಯುಎಸ್ ಡಾಲರ್ ಆಗಿತ್ತು.
ಪಿಪಿಎಫ್, ಎಸ್ ಸಿಎಸ್ಎಸ್, ಅಂಚೆ ಕಚೇರಿ ಉಳಿತಾಯ ಖಾತೆ ನಿಯಮ ಸಡಿಲಿಸಿದ ಸರ್ಕಾರ; ಏನೆಲ್ಲ ಬದಲಾಗಿದೆ?
ಬಟ್ಟೆ ವ್ಯಾಪಾರ ಅಂಗಡಿ : ಒಂದ್ವೇಳೆ ನೀವು ಬಟ್ಟೆ ಗಾರ್ಮೆಂಟ್ ವ್ಯಾಪಾರದಲ್ಲಿ ಆಸಕ್ತಿ ಹೊಂದಿಲ್ಲದೆ ಹೋದ್ರೆ ನೀವು ಮಕ್ಕಳ ಬಟ್ಟೆ ವ್ಯಾಪಾರ ಮಳಿಗೆ ಶುರು ಮಾಡಬಹುದು. ನೀವು ಇದನ್ನು ಮನೆಯಲ್ಲೇ ಶುರು ಮಾಡಬಹುದು. ಇಲ್ಲವೆ ಜನನಿಬಿಡ ಪ್ರದೇಶದಲ್ಲಿ ಅಂಗಡಿ ತೆರೆಯಬಹುದು. ಆರಂಭದಲ್ಲಿ ಮಾರಾಟ ಕಡಿಮೆ ಇದ್ರೂ ದಿನ ಕಳೆದಂತೆ ವ್ಯಾಪಾರ ಹೆಚ್ಚಾಗುತ್ತದೆ ಎಂಬ ಆತ್ಮವಿಶ್ವಾಸ ಹಾಗೂ ಬಟ್ಟೆ ಕ್ವಾಲಿಟಿ ಬಗ್ಗೆ ನೀವು ಹೆಚ್ಚು ಗಮನ ಹರಿಸಿದ್ರೆ ವ್ಯಾಪಾರ ಸುಲಭ.