ಆನ್ ಲೈನ್ ನಲ್ಲಿ ಡಿಮ್ಯಾಟ್ ಖಾತೆ ತೆರೆಯೋದು ಹೇಗೆ? ಇಲ್ಲಿದೆ ಸುಲಭ ಮಾರ್ಗ

By Suvarna News  |  First Published Nov 27, 2023, 6:55 PM IST

ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಡಿಮ್ಯಾಟ್ ಖಾತೆ ಅಗತ್ಯ. ಡಿಮ್ಯಾಟ್ ಖಾತೆಯನ್ನು ಆನ್ ಲೈನ್ ನಲ್ಲಿ ಸುಲಭವಾಗಿ ತೆರೆಯಬಹುದು. ಅದು ಹೇಗೆ? ಇಲ್ಲಿದೆ ಮಾಹಿತಿ. 


Business Desk: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಅಗತ್ಯ. ಟ್ರೇಡಿಂಗ್ ಹಾಗೂ ಹೂಡಿಕೆ ಮಾಡೋರು ಡಿಮ್ಯಾಟ್ ಖಾತೆ ಹೊಂದಿರೋದು ಅಗತ್ಯ. ಡಿಮ್ಯಾಟ್ ಖಾತೆ ಷೇರುಗಳು ಹಾಗೂ ಸೆಕ್ಯುರಿಟಿಗಳನ್ನು ಎಲೆಕ್ಟ್ರಾನಿಕ್ ಸ್ವರೂಪದಲ್ಲಿಟ್ಟುಕೊಂಡಿರುತ್ತದೆ. ಇದರಿಂದ ಹೂಡಿಕೆದಾರರಿಗೆ ಸಾಕಷ್ಟು ಪ್ರಯೋಜನ ಕೂಡ ಇದೆ. ಡಿಮ್ಯಾಟ್ ಖಾತೆಯ ಪ್ರಮುಖ ಉದ್ದೇಶ ಷೇರು ಪ್ರಮಾಣಪತ್ರಗಳನ್ನು ಭೌತಿಕ ರೂಪದಿಂದ ಎಲೆಕ್ಟ್ರಾನಿಕ್ ರೂಪಕ್ಕೆ ಪರಿವರ್ತಿಸೋದು ಡಿಮ್ಯಾಟ್ ಖಾತೆಯ ಪ್ರಾಥಮಿಕ ಉದ್ದೇಶವಾಗಿದೆ. 1996ರಲ್ಲಿ ಡಿಮ್ಯಾಟ್ ಖಾತೆ ಪ್ರಾರಂಭವಾಗುವುದಕ್ಕೂ ಮುನ್ನ ಭೌತಿಕ ಟ್ರೇಡಿಂಗ್ ನಡೆಸಲಾಗುತ್ತಿತ್ತು. ಡಿಮ್ಯಾಟ್ ಖಾತೆಗಳನ್ನು ಪರಿಚಯಿಸುವ ಮೂಲಕ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಹೂಡಿಕೆ ವಲಯದಲ್ಲಿ ಕ್ರಾಂತಿ ಸೃಷ್ಟಿಸಿತು. ಈ ಖಾತೆಗಳು ವೈಯಕ್ತಿಕ ಹೂಡಿಕೆದಾರರಿಗೆ ಆನ್ ಲೈನ್ ಷೇರು ಮಾರುಕಟ್ಟೆ ಹೂಡಿಕೆಗಳಲ್ಲಿ ಪಾಲ್ಗೊಳ್ಳಲು ನೆರವು ನೀಡುತ್ತಿವೆ. 

ಡಿಮ್ಯಾಟ್ ಖಾತೆ ತೆರೆಯೋದು ಹೇಗೆ?
ಡಿಮ್ಯಾಟ್ ಖಾತೆಗಳನ್ನು ಆನ್ ಲೈನ್ ಅಥವಾ ಆಪ್ ಲೈನ್ ವಿಧಾನದ ಮೂಲಕ ತೆರೆಯಬಹುದು. ಹಾಗಾದ್ರೆ ಆನ್ ಲೈನ್ ನಲ್ಲಿ ಡಿಮ್ಯಾಟ್ ಖಾತೆ ತೆರೆಯೋದು ಹೇಗೆ? ಇಲ್ಲಿದೆ ಮಾಹಿತಿ.
ಹಂತ 1: ನಂಬಿಕಾರ್ಹ ಡೆಪೋಸಿಟರಿ ಪಾರ್ಟಿಸಿಪೆಂಟ್ (ಡಿಪಿ) ವೆಬ್ಸೈಟ್ ಆಯ್ಕೆ ಮಾಡಿ ಹಾಗೂ ತೆರೆಯಿರಿ. ಇದನ್ನು ಬ್ಯಾಂಕ್, ಹಣಕಾಸು ಸಂಸ್ಥೆ ಅಥವಾ ಬ್ರೋಕರೇಜ್ ಸಂಸ್ಥೆಯಲ್ಲಿ ತೆರೆಯಬಹುದು. ಇದು ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಹೂಡಿಕೆದಾರರಿಗೆ ಏಜೆಂಟ್ ಮಾದರಿಯಲ್ಲಿ ಕಾರ್ಯಿರ್ವಹಿಸುತ್ತದೆ. ಗಾಢವಾಗಿ ಸಂಶೋಧನೆ ನಡೆಸಿದ ಬಳಿಕ ಸುರಕ್ಷಿತವಾದ ಡಿಪಿ ಸೈಟ್ ಪತ್ತೆ ಹಚ್ಚಿ.
ಹಂತ 2: ಈಗ 'Open Demat Account'ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ನಂತರ ಖಾತೆ ತೆರೆಯುವ ಪ್ರಕ್ರಿಯೆ ಪ್ರಾರಂಭಿಸಲು ನೀಡಿರುವ ಸೂಚನೆಗಳನ್ನು ಪಾಲಿಸಿ.
ಹಂತ 3: ಆ ನಂತರ ಆನ್ ಲೈನ್ ಒಪನಿಂಗ್ ಅರ್ಜಿಯಲ್ಲಿ ನಿಮ್ಮ ಮಾಹಿತಿಗಳನ್ನು ಭರ್ತಿ ಮಾಡಿ ಹಾಗೂ Submit ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4: ನಿಮ್ಮ ಮಾಹಿತಿಗಳನ್ನು ಸಲ್ಲಿಕೆ ಮಾಡಿದ ಬಳಿಕ ನಿಮಗೆ ಒನ್ ಟೈಮ್ ಪಾಸ್ ವರ್ಡ್  (OTP) ಸಿಗುತ್ತದೆ. ಅದನ್ನು ಬಳಸಿಕೊಂಡು ಖಾತೆ ತೆರೆಯುವ ಪ್ರಕ್ರಿಯೆ ಮುಂದುವರಿಸಿ.
ಹಂತ 5: 'Demat Account'ತೆರೆಯಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಕೆ ಮಾಡಿ.
ಹಂತ 6: ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ, ಆ ಬಳಿಕ ಕೆವೈಸಿ ಮಾಹಿತಿಗಳನ್ನು ಪರಿಶೀಲಿಸಿ ಹಾಗೂ 'ಡಿಮ್ಯಾಟ್ ಖಾತೆ' ಸಂಖ್ಯೆ ಪಡೆಯಿರಿ.

Tap to resize

Latest Videos

ಡಿಮ್ಯಾಟ್ ಖಾತೆದಾರರಿಗೆ ಗುಡ್ ನ್ಯೂಸ್; ನಾಮಿನಿ ಸೇರ್ಪಡೆ ಗಡುವು ಡಿ.31ಕ್ಕೆ ವಿಸ್ತರಣೆ

ನೀವು ಆನ್ ಲೈನ್ ಮೂಲಕ ಸಲ್ಲಿಕೆ ಮಾಡಿದ ಕೆವೈಸಿ ಮಾಹಿತಿಗಳನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆ ಆನ್ ಲೈನ್ ಕೆವೈಸಿ ಮೂಲಕ ನೀವು ನೀಡಿದ ಮಾಹಿತಿಗಳನ್ನು ಪರಿಶೀಲಿಸುತ್ತದೆ. ಯಶಸ್ವಿಯಾದ ಪರಿಶೀಲನೆ ಬಳಿಕ ನಿಮಗೆ 'Demat Account' ಸಂಖ್ಯೆಯನ್ನು ನೀಡಲಾಗುತ್ತದೆ. 

ನಾಮಿನಿ ಸೇರ್ಪಡೆಗೆ ಡಿ.31 ಅಂತಿಮ ಗಡುವು 
ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆಗೆ ಡಿ.31 ಅಂತಿಮ ಗಡುವಾಗಿದೆ.  ಈ ಹಿಂದೆ ನಾಮಿನಿ ಸೇರ್ಪಡೆಗೆ ಸೆ.30 ಅಂತಿಮ ಗಡುವಾಗಿತ್ತು. ಅಂತಿಮ ಗಡುವಿನೊಳಗೆ ನಾಮಿನಿ ಸೇರ್ಪಡೆ ಮಾಡದಿದ್ರೆ ಡಿಮ್ಯಾಟ್ ಖ್ಯಾತೆಯನ್ನು ನಿಷ್ಕ್ರಿಯಗೊಳಿಸೋದಾಗಿ ಸೆಬಿ ತಿಳಿಸಿತ್ತು. ಹೂಡಿಕೆದಾರರಿಗೆ ತಮ್ಮ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಲು ನೆರವು ನೀಡಲು ಹಾಗೂ ಅದನ್ನು ಕಾನೂನುಬದ್ಧ ವಾರಸುದಾರರಿಗೆ ವರ್ಗಾಯಿಸಲು ನೆರವು ನೀಡುವ ಉದ್ದೇಶದಿಂದ ಡಿಮ್ಯಾಟ್ ಖಾತೆಗಳಿಗೆ ನಾಮಿನಿ ಸೇರ್ಪಡೆಗೊಳಿಸುವಂತೆ ಸೂಚಿಸಲಾಗಿದೆ. 

ಪಿಂಚಣಿದಾರರೆ ನ.30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಿ, ತಡೆಯಿಲ್ಲದೆ ಪಿಂಚಣಿ ಪಡೆಯಿರಿ

ಈಗಾಗಲೇ ಇರುವ ಹೂಡಿಕೆದಾರರು ಈ ಹಿಂದೆ ನಾಮಿನಿ ಮಾಹಿತಿ ನೀಡಿದ್ದರೆ ಮತ್ತೆ ಸಲ್ಲಿಕೆ ಮಾಡುವ ಅಗತ್ಯವಿಲ್ಲ.ನಾಮಿನಿ ಸೇರಿಸದ ಹೂಡಿಕೆದಾರರು ತನ್ನ ನಾಮಿನಿ ಸಲ್ಲಿಕೆ ಮಾಡಬಹುದು ಅಥವಾ ಸ್ಟಾಕ್ ಬ್ರೋಕರ್ಸ್ ಟ್ರೇಡಿಂಗ್ ಪ್ಲ್ಯಾಟ್ ಫಾರ್ಮ್ ನಲ್ಲಿ  2-ಫ್ಯಾಕ್ಟರ್ ದೃಢೀಕರಣ ಮೂಲಕ ನಾಮಿನಿ ಸಲ್ಲಿಕೆ ಮಾಡಬಹುದು. ಇಲ್ಲವೆ ಇಂಥ ಸೇವೆ ಒದಗಿಸುವ ಠೇವಣಿ ಪಾಲುದಾರರಡಿ ಕೂಡ ನಾಮಿನಿ ಸಲ್ಲಿಕೆ ಮಾಡಲು ಅವಕಾಶವಿದೆ. 

 

click me!