ಅಮೆಜಾನ್ ಯಾರಿಗೆ ಗೊತ್ತಿಲ್ಲ ಹೇಳಿ? ಆನ್ಲೈನ್ ನಲ್ಲಿ ಖರೀದಿ ಎಂಬ ಮಾತು ಬಂದಾಗ ಮೊದಲು ಹೇಳೋದು ಅಮೆಜಾನ್ ಹೆಸರು. ಮಾರಾಟಕ್ಕೆ ಮಾತ್ರವಲ್ಲ ಈ ಅಮೆಜಾನ್ ನಲ್ಲಿ ನೀವು ಹಣ ಗಳಿಸಲು ಸಾಕಷ್ಟು ವಿಧಾನವಿದೆ. ಅದ್ಯಾವುದು ಅಂತಾ ನಾವು ಹೇಳ್ತೇವೆ.
ಇ ಕಾಮರ್ಸ್ ಕಂಪನಿ ಅಮೆಜಾನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡ್ಬಹುದು ಎಂಬುದು ಮಾತ್ರ ಬಹುತೇಕ ಎಲ್ಲರಿಗೂ ತಿಳಿದಿದೆ. ಆದ್ರೆ ಅಮೆಜಾನ್ ಮೂಲಕ ನೀವು ಹಣವನ್ನು ಕೂಡ ಗಳಿಸಬಹುದು. ಮನೆಯಲ್ಲೇ ಕುಳಿತು, ಅಮೆಜಾನ್ ಮೂಲಕ ಹಣ ಗಳಿಸಲು ನಾನಾ ವಿಧಾನಗಳಿವೆ. ನಾವಿಂದು ಪ್ರಸಿದ್ಧ ಇ ಕಾಮರ್ಸ್ ಕಂಪನಿ ನಿಮ್ಮ ಜೇಬು ತುಂಬಲು ಹೇಗೆ ನೆರವಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡ್ತೇವೆ.
ಅಮೆಜಾನ್ (Amazon) ಜೊತೆ ಕೈಜೋಡಿಸಿ ಹಣ ಗಳಿಸೋದು ಹೇಗೆ ? :
ಉತ್ಪನ್ನ –ಸೇವೆ ಮಾರಾಟ ಮಾಡಿ ಹಣ ಸಂಪಾದಿಸಿ : ಅಮೆಜಾನ್ ಎಫ್ ಬಿಎ (FBA) ಯೊಂದಿಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಎಫ್‌ಬಿಎ ಎಂದರೆ ಫುಲ್ಫಿಲ್ಮೆಂಟ್ ಬೈ ಅಮೆಜಾನ್ ಎಂದರ್ಥ. ಎಫ್‌ಬಿಎ ಮಾರಾಟಗಾರರಿಗೆ ಪ್ರಯೋಜನಕಾರಿಯಾಗಿದೆ. ನೀವು ಉತ್ಪನ್ನವನ್ನುಅಮೆಜಾನ್ ಎಫ್ ಬಿಎಗೆ ಕಳುಹಿಸಬೇಕು. ಅಮೆಜಾನ್ ಇದನ್ನು ವೆಬ್ ಸೈಟ್ ನಲ್ಲಿ ಲೀಸ್ಟ್ ಮಾಡುತ್ತದೆ. ಅಮೆಜಾನ್ ಮೂಲಕ ಗ್ರಾಹಕರು ನಿಮ್ಮ ಉತ್ಪನ್ನವನ್ನು ಖರೀದಿ ಮಾಡಿದಾಗ, ಆರ್ಡರ್ ಡಿಲೆವರಿ ಮಾಡುತ್ತದೆ. ಆದ್ರೆ ಇದು ಬೇಗ ಆಗುವುದಿಲ್ಲ. ನೀವು ಹಣಗಳಿಸಲು ಸ್ವಲ್ಪ ಸಮಯ ನೀಡುವ ಅಗತ್ಯವಿರುತ್ತದೆ.
2027ಕ್ಕೆ ದೇಶದಲ್ಲಿ ಡೀಸೆಲ್ ಕಾರು, ಜೀಪು ಬ್ಯಾನ್? ಎಲೆಕ್ಟ್ರಿಕ್, ಅನಿಲ ಆಧರಿತ ವಾಹನ ಬಳಕೆಗೆ ಶಿಫಾರಸು
ರಿಟೇಲ್ ಆರ್ಬಿಟ್ರೇಜ್ : ಮಾರಾಟಗಾರನು ಚಿಲ್ಲರೆ ಮಾರಾಟ ಮಳಿಗೆಯಿಂದ ಉತ್ಪನ್ನಗಳನ್ನು ರಿಯಾಯಿತಿಯಲ್ಲಿ ಖರೀದಿಸುತ್ತಾನೆ ಮತ್ತು ಈ ರಿಯಾಯಿತಿ ಉತ್ಪನ್ನಗಳನ್ನು ಲಾಭಕ್ಕಾಗಿ ಮಾರಾಟ ಮಾಡುತ್ತಾನೆ. ಅದನ್ನು ರಿಟೇಲ್ ಆರ್ಬಿಟ್ರೇಜ್ ಎನ್ನಲಾಗುತ್ತದೆ. ಡಿಮಾರ್ಟ್ ನಂತಹ ಸ್ಟೋರ್ ಗೆ ಹೋಗಿ 100 ರೂಪಾಯಿ ಪೆನ್ನನ್ನು 60 ರೂಪಾಯಿಗೆ ಖರೀದಿ ಮಾಡಿ, ಅದನ್ನು ಅಮೆಜಾನ್ ನಲ್ಲಿ ನೀವು 90 ರೂಪಾಯಿಗೆ ಮಾರಾಟ ಮಾಡಬಹುದು. ಆನ್ಲೈನ್ ರಿಟೇಲ್ ಆರ್ಬಿಟ್ರೇಜ್ ನಲ್ಲಿ ಚಿಲ್ಲರೆ ವ್ಯಾಪಾರಕ್ಕಿಂತ ಲಾಭ ಕಡಿಮೆ ಇದ್ರೂ ಲಾಭ (profit) ಕ್ಕೆ ಮೋಸವಿಲ್ಲ.
ನಿಮ್ಮ ಸ್ವಂತ ಪುಸ್ತಕವನ್ನು ಪ್ರಕಟಿಸಿ : ಡಿಜಿಟಲ್ ಪುಸ್ತಕಗಳನ್ನು Amazon Kindle Direct Publishing (KDP) ಮೂಲಕ ಪ್ರಕಟಿಸಬಹುದು. ಇದು ಪ್ರಕಟಿಸಲು ಐದು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಪುಸ್ತಕ 24-48 ಗಂಟೆಗಳಲ್ಲಿ ಪ್ರಪಂಚದಾದ್ಯಂತದ ಕಿಂಡಲ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಸ್ವಯಂ ಪ್ರಕಟಿತ ಪುಸ್ತಕಗಳಿಗೆ ನೀವೇ ಬೆಲೆ ನಿಗದಿಪಡಿಸಬಹುದು. ಕಿಂಡಲ್ ಮಾರಾಟದಲ್ಲಿ ನೀವು ಶೇಕಡಾ 70ವರೆಗೆ ರಾಯಲ್ಟಿ ಪಡೆಯಬಹುದು. ಪುಸ್ತಕ ಮಾತ್ರವಲ್ಲ ಆಡಿಯೋ ಬುಕ್ ಕೂಡ ಮಾರಾಟ ಮಾಡಬಹುದು. ಈಗಾಗಲೇ ಪುಸ್ತಕಗಳನ್ನು ಬರೆದಿದ್ದರೆ ಹೆಚ್ಚುವರಿ ಹಣವನ್ನು ಗಳಿಸಲು ಇದು ಉತ್ತಮ ಮಾರ್ಗವಾಗಿದೆ. ನೀವು ಉಚಿತವಾಗಿ ಪುಸ್ತಕ ಪ್ರಕಟಿಸಬಹುದು. ಅಮೆಜಾನ್ ಮೂಲಕ ನೀವು ಪುಸ್ತಕ ಮಾರಾಟ ಮಾಡ್ಬೇಕು ಎಂದಾದ್ರೆ ನೀವು ಜನಪ್ರಿಯ ಲೇಖಕರಾಗಿರಬೇಕು. ಆರಂಭದ ಲೇಖಕರ ಲೇಖನ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ.
ತಂದೆ ಉದ್ಯಮಕ್ಕೆ ಸೇರದೆ ತನ್ನದೇ ಸಂಸ್ಥೆ ಕಟ್ಟಿದ ಈಕೆ ಇಂದು 125 ಕೋಟಿ ರೂ. ಆದಾಯ ಗಳಿಸೋ ಕಂಪನಿ ಒಡತಿ!
ಕೈನಿಂದ ತಯಾರಿಸಿದ ವಸ್ತು ಮಾರಾಟ ಮಾಡಿ : ನೀವು ಮನೆಯಲ್ಲಿಯೇ ವಸ್ತುಗಳನ್ನು ತಯಾರಿಸುವ ಕೌಶಲ್ಯ ಹೊಂದಿದ್ದರೆ ಇದಕ್ಕಾಗಿ ನೀವು ಅಮೆಜಾನ್ ಹ್ಯಾಂಡ್ ಮೇಡ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. https://sell.amazon.in/seller-blog/sell-handmade-products-online-on-amazon.html ಗೆ ಲಾಗಿನ್ ಆಗ್ಬೇಕು. 80 ಕ್ಕೂ ಹೆಚ್ಚು ವಿವಿಧ ದೇಶಗಳ ಮಾರಾಟಗಾರರು ಅಮೆಜಾನ್ ಮೂಲಕ ಕೈಯಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಹೀಗೂ ಅಮೆಜಾನ್ ನಲ್ಲಿ ಹಣ ಗಳಿಸಬಹುದು : ಬರೀ ಉತ್ಪನ್ನಗಳನ್ನು ಮಾರಾಟ ಮಾಡಿ ಮಾತ್ರವಲ್ಲ ಯಾವುದೇ ಉತ್ಪನ್ನ ಮಾರಾಟ ಮಾಡದೆ ನೀವು ಅಮೆಜಾನ್ ನಲ್ಲಿ ಹಣ ಗಳಿಸಬಹುದು. ಅಮೆಜಾನ್ ನ ಗ್ರಾಹಕ ಸೇವಾ ತಂಡದ ಸಮಸ್ಯರಾಗಿ ನೀವು ಕೆಲಸ ಮಾಡಬೇಕಾಗುತ್ತದೆ. ಅಮೆಜಾನ್ ಗ್ರಾಹಕರಿಗೆ ಸಹಾಯ ಮಾಡುವ ಕೆಲಸ ನಿಮ್ಮದಾಗಿರುತ್ತದೆ. ಅಮೆಜಾನ್ ನಿಂದ ಹಣಗಳಿಸಲು ಇನ್ನೂ ಅನೇಕ ವಿಧಾನಗಳಿದ್ದು, ಅದನ್ನು ಸರಿಯಾಗಿ ತಿಳಿದು ಕೆಲಸ ಶುರು ಮಾಡಿದ್ರೆ ಲಾಭ ಹೆಚ್ಚು.