ಚೆಕ್ ವ್ಯವಹಾರ ಸುರಕ್ಷಿತ ವ್ಯವಹಾರವಾಗಿದೆ. ಹಣವನ್ನು ಚೆಕ್ ಮೂಲಕ ಪಾವತಿ ಮಾಡುವ ಸಂದರ್ಭದಲ್ಲಿ ಅನೇಕ ವಿಷ್ಯಗಳನ್ನು ತಿಳಿದಿರಬೇಕು. ಚೆಕ್ ಪಾವತಿ ಬಗ್ಗೆ ಸರಿಯಾದ ಮಾಹಿತಿ ಇಲ್ಲವೆಂದ್ರೆ ಮೋಸಕ್ಕೆ ಬಲಿಯಾಗಿ, ಹಣ ಕಳೆದುಕೊಳ್ಳುವ ಅಪಾಯವಿರುತ್ತದೆ.
ಡಿಜಿಟಲ್ ಯುಗದಲ್ಲಿ ಆನ್ಲೈನ್ ಪೇಮೆಂಟ್ ಹೆಚ್ಚಾಗಿದೆ. ಜನರು ದೊಡ್ಡ ಮೊತ್ತದ ವಹಿವಾಟಿನಿಂದ ಹಿಡಿದು ಹಾಲು – ತರಕಾರಿ ಖರೀದಿ ನಂತ್ರವೂ ಆನ್ಲೈನ್ ಪೇಮೆಂಟ್ ಮಾಡ್ತಾರೆ. ಆನ್ಲೈನ್ ಪೇಮೆಂಟ್ ನಿಂದ ಸಾಕಷ್ಟು ಅನುಕೂಲವಿದ್ದರೂ ಅಪಾಯ ಕೂಡ ಇದೆ. ಡಿಜಿಟಲ್ ಸಮಯದಲ್ಲೂ ಅನೇಕ ಕಂಪನಿಗಳು ಹಾಗೂ ವ್ಯಾಪಾರಸ್ಥರು ಚೆಕ್ ನಲ್ಲಿ ಪೇಮೆಂಟ್ ಮಾಡ್ತಾರೆ. ಚೆಕ್ ಪೇಮೆಂಟ್, ಆನ್ಲೈನ್ ಪೇಮೆಂಟ್ ಗಿಂತ ಹೆಚ್ಚು ಸುರಕ್ಷಿತ. ಅನೇಕಾನೇಕ ವರ್ಷಗಳಿಂದ ಜಾರಿಯಲ್ಲಿರುವ ಈ ಚೆಕ್ ಪೇಮೆಂಟ್ ಬಗ್ಗೆ ನೀವು ತಿಳಿದಿರೋದು ಒಳ್ಳೆಯದು. ಚೆಕ್ ನಲ್ಲಿ ನೀವು ವಹಿವಾಟು ನಡೆಸುತ್ತೀರಿ ಎಂದಾದ್ರೆ ಅದ್ರ ಬಗ್ಗೆ ಕೆಲ ಮಾಹಿತಿ ನಿಮಗೆ ಗೊತ್ತಿರಬೇಕು.
ಖಾಲಿ ಚೆಕ್ (Cheque) ಮೇಲೆ ಸಹಿ : ನಿಮಗೆ ಯಾವುದೇ ವ್ಯಕ್ತಿ ಮೇಲೆ ನಂಬಿಕೆಯಿರಲಿ, ಅವರು ನಿಮಗೆ ಎಷ್ಟೇ ಆಪ್ತರಾಗಿರಲಿ ಯಾವುದೇ ಕಾರಣಕ್ಕೂ ನೀವು ಖಾಲಿ ಚೆಕ್ ಗೆ ಸಹಿ ಹಾಕಿ ನೀಡಬೇಡಿ. ಚೆಕ್ ನೀಡುವ ಮೊದಲು ಎಷ್ಟು ಮೊತ್ತ ಸೇರಿದಂತೆ ಎಲ್ಲ ಮಾಹಿತಿಯನ್ನು ನಿಮ್ಮ ಕೈಯಾರೆ ಬರೆಯಬೇಕು. ಹೀಗೆ ಮಾಡಿದ್ರೆ ಚೆಕ್ ನಲ್ಲಿ ನಡೆಯುವ ವಂಚನೆ (Fraud) ಯಿಂದ ನೀವು ತಪ್ಪಿಸಿಕೊಳ್ಳಬಹುದು.
ಸಾಲ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸುವಂತಿಲ್ಲ: ಐಆರ್ ಡಿಎಐ
ಮೌಲ್ಯ (Value) ವನ್ನು ಶಬ್ಧದಲ್ಲೂ ಬರೆಯಿರಿ : ಕೆಲವರು ಚೆಕ್‌ಗೆ ಸಹಿ ಮಾಡುತ್ತಾರೆ ಮತ್ತು ಅದರ ಮೇಲೆ ಮೊತ್ತವನ್ನು ಸಹ ಬರೆಯುತ್ತಾರೆ. ಆದರೆ ಅದನ್ನು ಪದಗಳಲ್ಲಿ ಬರೆಯುವ ಬದಲು ಅಂಕೆಗಳಲ್ಲಿ ಮಾತ್ರ ಬರೆದು ಸಹಿ ಮಾಡುತ್ತಾರೆ. ಹೀಗೆ ಮಾಡಿದ್ರೆ ವಂಚನೆ ನಡೆಯುವ ಸಾಧ್ಯತೆಯಿದೆ. ಚೆಕ್ ಪಡೆದ ವ್ಯಕ್ತಿ ಮೊತ್ತದಲ್ಲಿ ತಪ್ಪು ಮಾಡಬಹುದು. ಹಾಗಾಗಿ ನೀವೇ ಚೆಕ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ಪಾವತಿ ಮಾಡುತ್ತಿರುವ ಸಂಸ್ಥೆಯ ಹೆಸರು ಅಥವಾ ನಿಮ್ಮ ಹೆಸರನ್ನು ಬರೆಯಿರಿ. ಪದಗಳು ಮತ್ತು ಅಂಕಿಗಳೆರಡರಲ್ಲೂ ಮೊತ್ತವನ್ನು ಬರೆಯಿರಿ.
ಚೆಕ್ ಮೇಲೆ ತಿದ್ದುಪಡಿ ಬೇಡ : ಚೆಕ್ ಬರೆಯುವ ವೇಳೆ ಕೆಲವೊಂದು ತಪ್ಪುಗಳಾಗುತ್ತವೆ. ಈ ತಪ್ಪುಗಳನ್ನು ಸರಿಪಡಿಸಲು ನಾವು ಗೀಟ್ ಹಾಗಿ ಅಥವಾ ಓವರ್ ರೈಟಿಂಗ್ ಮಾಡ್ತೇವೆ. ಚೆಕ್ ನಲ್ಲಿ ಇಂಥ ತಪ್ಪನ್ನು ಮಾಡಬಾರದು. ಈ ಚೆಕ್ ಮಾನ್ಯತೆ ಪಡೆಯುವುದಿಲ್ಲ. ನಿಮ್ಮ ಮೇಲೆ ಅನುಮಾನ ಬರುವ ಸಾಧ್ಯತೆಯೂ ಇರುತ್ತದೆ. ಚೆಕ್ ತಪ್ಪಾದ್ರೆ ಅದನ್ನು ಹರಿದು ಇನ್ನೊಂದು ಚೆಕ್ ಭರ್ತಿ ಮಾಡಿ.
ಮಹಿಳೆಯರಿಗೆ ಬ್ಯಾಂಕ್, ಎನ್ ಬಿಎಫ್ ಸಿ ಯಾವೆಲ್ಲ ವಿಶೇಷ ಯೋಜನೆಗಳನ್ನು ಹೊಂದಿವೆ? ಇಲ್ಲಿದೆ ಮಾಹಿತಿ
ಚೆಕ್ ದಿನಾಂಕಕ್ಕೂ ಮಹತ್ವ ಕೊಡಿ : ಚೆಕ್ ಬರೆದ ತಕ್ಷಣ ಅಂದಿನ ದಿನಾಂಕವನ್ನೇ ನಾವು ನಮೂದಿಸುತ್ತೇವೆ. ಆದ್ರೆ ಅವರು ಅದೇ ದಿನ ಚೆಕ್ ಜಮಾ ಮಾಡಿದ್ದು, ನಮ್ಮ ಖಾತೆಯಲ್ಲಿ ಹಣವಿಲ್ಲ ಎಂದಾದ್ರೆ ಚೆಕ್ ಬೌನ್ಸ್ ಆಗುತ್ತದೆ. ಇದ್ರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನು ಕೆಲವರು ಚೆಕ್ ಮೇಲೆ ಇಂದಿನ ದಿನಾಂಕವನ್ನು ಹಾಕಿ, ಇನ್ನೆರಡು ದಿನ ಬಿಟ್ಟು ಚೆಕ್ ಬ್ಯಾಂಕಿಗೆ ಜಮಾ ಮಾಡುವಂತೆ ಹೇಳ್ತಾರೆ. ಆದ್ರೆ ಮುಂದಿನ ವ್ಯಕ್ತಿ ಹಾಗೆ ಮಾಡದೆ, ಅಂದೇ ಚೆಕ್ ಹಾಕಿದ್ರೆ ತೊಂದರೆಯಾಗುತ್ತದೆ. ಕಾನೂನು ತೊಂದರೆ ಎದುರಿಸಬೇಕಾಗುತ್ತದೆ. ಚೆಕ್ ಮೂಲಕ ಪಾವತಿಸುವಾಗ ಹೆಸರು, ಮೊತ್ತವನ್ನು ಬರೆಯುವ ವೇಳೆ ಮಧ್ಯ ಜಾಗವನ್ನು ಬಿಡಬೇಡಿ.
ಚೆಕ್ ನ ಫೋಟೋ ಇಟ್ಟುಕೊಳ್ಳಿ : ನೀವು ದೊಡ್ಡ ಮೊತ್ತದ ಚೆಕ್ ನೀಡ್ತಿದ್ದರೆ ಅದ್ರಲ್ಲಿ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ನಂತ್ರ ಫೋಟೋ ಕ್ಲಿಕ್ ಮಾಡಿಟ್ಟುಕೊಳ್ಳಿ. ಚೆಕ್ ಜಮಾ ಆಗದಂತೆ ತಡೆಯಬೇಕು ಎಂದಾಗ ನಿಮಗೆ ಈ ಫೋಟೋ ಸಹಾಯಕ್ಕೆ ಬರುತ್ತದೆ. ಚೆಕ್ ಸಂಖೆಯನ್ನು ನೀವು ಇದ್ರಿಂದ ಸುಲಭವಾಗಿ ಪತ್ತೆ ಮಾಡಿ, ಬ್ಯಾಂಕ್ ಗೆ ತಿಳಿಸಬಹುದು.