Asianet Suvarna News Asianet Suvarna News

ತಂದೆ ಉದ್ಯಮಕ್ಕೆ ಸೇರದೆ ತನ್ನದೇ ಸಂಸ್ಥೆ ಕಟ್ಟಿದ ಈಕೆ ಇಂದು 125 ಕೋಟಿ ರೂ. ಆದಾಯ ಗಳಿಸೋ ಕಂಪನಿ ಒಡತಿ!

ಛಲ,ಬುದ್ಧಿಶಕ್ತಿ ಹಾಗೂ ಕಠಿಣ ಪರಿಶ್ರಮ ಜೊತೆಯಾದ್ರೆ ಈ ಜಗತ್ತಿನಲ್ಲಿ ಸಾಧಿಸಲು ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದಕ್ಕೆ ಜಿಪ್ ಎಲೆಕ್ಟ್ರಿಕ್ ಸಂಸ್ಥೆ ಸಂಸ್ಥಾಪಕಿ ರಾಶಿ ಅಗರ್ವಾಲ್ ಉತ್ತಮ ನಿದರ್ಶನ. ಪತಿ ಆಕಾಶ್ ಗುಪ್ತ ಅವರೊಂದಿಗೆ ಸೇರಿ ಸ್ಥಾಪಿಸಿದ ಈ ಸಂಸ್ಥೆ ಇಂದು 125 ಕೋಟಿ ರೂ. ಆದಾಯ ಗಳಿಸುತ್ತಿದೆ.

Meet Rashi Agarwal who shut Rs 1 crore profitable biz then built Rs 125 crore revenue firm didnt join dads hotel biz anu
Author
First Published May 6, 2023, 5:56 PM IST

Business Desk:ವಿಭಿನ್ನ ಯೋಚನೆಗಳೊಂದಿಗೆ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡಂತಹ ಅನೇಕರ ಕಥೆಗಳು ನಮ್ಮ ಮುಂದಿವೆ. ಇಂಥದ್ದೇ ಒಂದು ಭಿನ್ನ ಯೋಚನೆಯೊಂದಿಗೆ  ಜಿಪ್ ಎಲೆಕ್ಟ್ರಿಕ್ ಎಂಬ ಎಲೆಕ್ಟ್ರಿಕ್ ವಾಹನಗಳನ್ನು ಬಾಡಿಗೆಗೆ ನೀಡುವ ಪ್ಲಾಟ್ ಫಾರ್ಮ್ ಸ್ಥಾಪಿಸಿ ಯಶಸ್ಸು ಕಂಡವರು ರಾಶಿ ಅಗರ್ವಾಲ್. ಈ ಸಂಸ್ಥೆಯ ಆದಾಯ ಕಳೆದ ವರ್ಷಕ್ಕಿಂತ 500 ಪಟ್ಟು ಹೆಚ್ಚಿದೆ. ಈ ಕಂಪನಿಯ ಒಟ್ಟು ಆದಾಯ 125 ಕೋಟಿ ರೂ. ಗುರ್ಗಾಂವ್ ಮೂಲದ ಈ ಕಂಪನಿಯನ್ನು ಆಕಾಶ್ ಗುಪ್ತ ಹಾಗೂ ಅವರ ಪತ್ನಿ ರಾಶಿ ಅಗರ್ವಾಲ್ ಸ್ಥಾಪನೆ ಮಾಡಿದ್ದರು. ತುಷಾರ್ ಮೆಹ್ತಾ ಎಂಬುವರು ಕೂಡ ಈ ಸಂಸ್ಥೆಯ ಮೂರನೇ ಸಹ ಸಂಸ್ಥಾಪಕರಾಗಿದ್ದಾರೆ. ಈ ಕಂಪನಿಯನ್ನು 2017ರಲ್ಲಿ ಸೈಕಲ್ ಬಾಡಿಗೆ ನೀಡಲು ಸ್ಥಾಪಿಸಲಾಗಿದೆ. ಇನ್ನು ಇ-ಸ್ಕೂಟರ್ ಬಾಡಿಗೆ ಸೇವೆಗಳನ್ನುಇದರ ಮರು ವರ್ಷ ಪ್ರಾರಂಭಿಸಲಾಗಿದೆ. ಇನ್ನು 12000ಕ್ಕೂ ಅಧಿಕ ಇ-ಬೈಕ್ ಗಳನ್ನು ಕಂಪನಿ ಹೊಂದಿದೆ. ಬೆಂಗಳೂರಿನಲ್ಲಿ ಅಂದಾಜು 25 ಕೋಟಿ ರೂ. ಹೂಡಿಕೆ ಮಾಡಿದ್ದರು.

ಜಿಪ್ ಎಲೆಕ್ಟ್ರಿಕ್ ಕಂಪನಿ ಒಟ್ಟು 37.5 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದರು. ಅದರ ಒಟ್ಟು ಮೌಲ್ಯ ಇಲ್ಲಿಯ ತನಕ ಗೊತ್ತಿಲ್ಲ. ರಾಶಿ ಅಗರ್ವಾಲ್ ಈಗ ಕಂಪನಿಯ ಸಿಬಿಒ ಆಗಿದ್ದರು. ಆಕೆ ಏಂಜೆಲ್ ಹೂಡಿಕೆದಾರರಾಗಿದ್ದಾರೆ. ಕೋಝಿಕೋಡ್ ಐಐಎಂನಿಂದ ಎಂಬಿಎ ಪದವೀಧರೆಯಾಗಿರುವ ಈಕೆ, ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದರು. 

7.50 ಕೋಟಿ ರೂ ಫೆರಾರಿ SF90 ಕಾರಿನಲ್ಲಿ ಅಕಾಶ್ ಅಂಬಾನಿ ಜಾಲಿ ಡ್ರೈವ್!

ಅಲ್ಮೋರದಲ್ಲಿ ಜನಿಸಿದ ರಾಶಿ, ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಚಾಂಪಿಯನ್ ಆಗಿದ್ದಾರೆ. ರಾಶಿಗೆ ಉದ್ಯಮಿಯಾಗಿ ಬೆಳೆಯಬೇಕೆಂಬ ಬಯಕೆ ಇತ್ತು. ಅವರ ತಂದೆ ಹೋಟೆಲ್ ಹಾಗೂ ಬಟ್ಟೆ ಅಂಗಡಿ ಉದ್ಯಮ ಹೊಂದಿದ್ದರು. ಆದರೆ, ಆಕೆಗೆ ತಂದೆ ಕಟ್ಟಿ ಬೆಳೆಸಿದ ಉದ್ಯಮಕ್ಕೆ ಸೇರುವ ಇಚ್ಛೆ ಇರಲಿಲ್ಲ.

ಕಾಮರ್ಸ್ ಪದವೀಧರೆಯಾಗಿರುವ ಆಕೆ 22ನೇ ವಯಸ್ಸಿನಲ್ಲಿ ಎಸ್ ಆಂಡ್ ಪಿ ಕ್ಯಾಪಿಟಲ್ ಐಕ್ಯು ಕಾರ್ಪೋರೇಟ್ ಬುಲ್ ಪೆನ್ ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಏಳು ವರ್ಷಗಳ ಬಳಿಕ ಅವರು 'ಲೆಟ್ಸ್ ಫ್ಲೌಂಟ್ ' ಎಂಬ ಫ್ಯಾಷನ್ ಉದ್ಯಮ ಸ್ಥಾಪಿಸಿದರು. ಅವರ ಉದ್ಯಮ ಉತ್ತಮ ಲಾಭದಲ್ಲೇ ನಡೆಯುತ್ತಿತ್ತು. ಆದರೆ, ರಾಶಿಗೆ ಇದರಿಂದ ತೃಪ್ತಿ ಸಿಗಲಿಲ್ಲ. ಇನ್ನೂ ಏನಾದರೂ ಸಾಧಿಸಬೇಕೆಂಬ ಬಯಕೆ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಈ ಉದ್ಯಮವನ್ನು ರಾಶಿ ತೊರೆದರು. ಆಗ ಅವರ ಉದ್ಯಮದ ವಹಿವಾಟು 1 ಕೋಟಿ ರೂ. ಆಗಿತ್ತು.

ಆಕಾಶ್ ಗುಪ್ತ ಅವರನ್ನು ವಿವಾಹವಾದ ಬಳಿಕ ರಾಶಿ, 2017ರಲ್ಲಿ ಜಿಪ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ಈಗ ಝಿಪ್ಟೋ, ಓಲಾ, ಡ್ಯಾಶ್, ಗ್ರ್ಯಾಬ್, ಊಬರ್, ಅಮೆಜಾನ್, ಫ್ಲಿಪ್ ಕಾರ್ಟ್, ಮೈಂತ್ರ ಡೆಲ್ಲಿವೆರಿ ಇತ್ಯಾದಿ ಗ್ರಾಹಕರನ್ನು ಹೊಂದಿದೆ.  ಇನ್ನು ಈ ಕಂಪನಿ 700 ಜನರ ತಂಡವನ್ನು ಹೊಂದಿದೆ.

ಇನ್ನು 2021ರಲ್ಲಿ ಜಿಪ್  ಸಂಸ್ಥೆ ಕಾರ್ಗೋ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಜಿಪ್ ಕಾರ್ಗೋ ಎರಡು ಬ್ಯಾಟರಿ ವೆರಿಯೆಂಟ್‌ಗಳಲ್ಲಿ ದೊರೆಯುತ್ತದೆ. ವಸ್ತುಗಳ ಹಂಚಿಕೆಯ ಕೊನೆಯ ಹಂತದಲ್ಲಿ(ಲಾಸ್ಟ್ ಮೈಲ್ ಲಾಜಿಸ್ಟಿಕ್ಸ್) ನೆರವಾಗುವ ದೃಷ್ಟಿಯಿಂದಲೇ ಈ ಸ್ಕೂಟರ್‌ಗಳನ್ನು ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ. 40ಎಎಚ್ ಬ್ಯಾಟರಿ ಹೊಂದಿರುವ ಸ್ಕೂಟರ್ 250 ಕೆ.ಜಿ ಭಾರವನ್ನು ಹೊತ್ತೊಯ್ಯಬಲ್ಲದು. ಹಾಗೆಯೇ, ಒಮ್ಮೆ ಚಾರ್ಜಿಂಗ್ ಮಾಡಿದರೆ ಈ ಸ್ಕೂಟರ್ 120 ಕಿ.ಮೀ.ವರೆಗೂ ಓಡುತ್ತದೆ.

3 ದಶಕದಲ್ಲಿ ಭಾರತದಲ್ಲಿ 27 ಏರ್‌ಲೈನ್ಸ್‌ಗಳು ಬಂದ್‌: ಪ್ರತಿ ವರ್ಷ ಒಂದಲ್ಲಾ ಒಂದು ಕಂಪನಿ ಸೇವೆ ಸ್ಥಗಿತ

ಜಿಪ್ ಕಾರ್ಗೋ ಹಲವು ವಿಶಿಷ್ಟವಾದ ಫೀಚರ್‌ಗಳನ್ನು ಒಳಗೊಂಡಿದೆ. ವರ್ಣಾಲಂಕೃತ ಡಿಸ್‌ಪ್ಲೇ ಪ್ಯಾನೆಲ್ಸ್, ಮೆಟಲ್ ಬಾಡಿ ವಿನ್ಯಾಸ, ಸಾಕಷ್ಟು ವಿಶಾಲವಾದ ಸ್ಟೋರೇಜ್, ಎರಡು ಸೀಟುಗಳು, ಕೃತಕ ಬುದ್ಧಿಮತ್ತೆ(ಎಐ) ಸಕ್ರಿಯ ಹಾಗೂ ಬ್ಯಾಟರಿ, ವೆಹಿಕಲ್ ಮತ್ತು ಡ್ರೈವರ್ ಟ್ರ್ಯಾಕ್ ಮಾಡಲು ಅನುಕೂಲವಾಗು ಐಒಟಿ ಫೀಚರ್‌ಗಳನ್ನು ಈ ಸ್ಕೂಟರ್ ಹೊಂದಿದೆ.

Follow Us:
Download App:
  • android
  • ios