
ಹೂಡಿಕೆಯಲ್ಲಿ ಹೆಚ್ಚಿನವರು ಆರಂಭದಲ್ಲಿ ಉತ್ಸಾಹ ತೋರಿಸಿದರೂ ಕ್ರಮೇಣ ಎಲ್ಲವೂ ಯಾಂತ್ರಿಕವಾಗಿ ಬಿಡುತ್ತದೆ. ಹೂಡಿಕೆಗೆ ಒಂದು ಭಾವನಾತ್ಮಕ ಸ್ಪರ್ಶವಿಲ್ಲದೇ ಅನಾಸಕ್ತಿ ಕಾಡೋದುಂಟು. ಇದರಿಂದ ಆರ್ಥಿಕ ಬೆಳವಣಿಗೆ ಇಳಿಯುತ್ತ ಬರುತ್ತದೆ. ಹೀಗಾದಿರಲು ಒಂದಿಷ್ಟು ಟಿಪ್ಸ್ ಇಲ್ಲಿವೆ.
ಹೂಡಿಕೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಉತ್ಸಾಹದಲ್ಲಿ ಆರಂಭವಾಗುವ ಹೂಡಿಕೆ ಕೆಲವೇ ಸಮಯದಲ್ಲಿ ಯಾಂತ್ರಿಕವಾಗಿ ಬಿಡುತ್ತದೆ. ತಜ್ಞರ ಪ್ರಕಾರ ಸದ್ಯ ಆಗಿರುವ ಬದಲಾವಣೆ ಅಂದರೆ ಬ್ಯಾಂಕ್‌ನಲ್ಲಿ ವರ್ಷ ವರ್ಷ ಫಿಕ್ಸ್ಡ್ ಡೆಪಾಸಿಟ್ ರಿನ್ಯೂ ಮಾಡುತ್ತಿದ್ದವರು ಈಗ ಎಸ್‌ಐಪಿಗೆ ತಿಂಗಳು ತಿಂಗಳು ಒಂದಿಷ್ಟು ಮೊತ್ತ ವರ್ಗಾಯಿಸುತ್ತಿದ್ದಾರಷ್ಟೇ. ಮಾರ್ಕೆಟ್ ದರ ಏರಿದಾಗ ಬ್ಯಾಲೆನ್ಸ್ ಮೊತ್ತದಲ್ಲಿ ಕೊಂಚ ಏರಿಕೆ ಆಗುತ್ತದೆ. ಅದು ಬಿಟ್ಟರೆ ಮತ್ಯಾವ ಭಾವನಾತ್ಮಕ ಕನೆಕ್ಷನ್ನೂ ಇಲ್ಲ. ಯಾರೋ ಹೇಳಿದರು ಅಂತ ಇನ್‌ವೆಸ್ಟ್ ಮಾಡ್ತಿದ್ದಾರೆಯೇ ಹೊರತು, ತೀವ್ರಗತಿಯಿಂದ ಮಾಡುತ್ತಿಲ್ಲ. ಇದರಿಂದ ಪ್ರಗತಿಗೆ ಹೊಡೆತ ಬೀಳುತ್ತದೆ.
ಹೆಚ್ಚಿನವರು ಹೂಡಿಕೆಯಲ್ಲಿ ತೊಡಗಿಸಿರುವುದು ನಿವೃತ್ತಿಯ ಬಳಿಕ ಕೈಯಲ್ಲಿ ದುಡ್ಡಿರಬೇಕು ಎಂಬ ಕಾರಣಕ್ಕೆ. ಆದರೆ ಈ ಬಗ್ಗೆಯೂ ಹೆಚ್ಚಿನವರಿಗೆ ಸ್ಪಷ್ಟತೆ ಇಲ್ಲ. ಗುರಿ ಇಲ್ಲ. ಗುರಿ ಇಟ್ಟು ಹೂಡಿಕೆ ಮಾಡಿದರೆ ತೀವ್ರತೆ ಇರುತ್ತದೆ. ಹಣಕಾಸಿನ ಏರಿಳಿತದ ಮೇಲೂ ಪರಿಣಾಮ ಬೀರುತ್ತದೆ.
1. ಮ್ಯಾಪ್ ರೆಡಿ ಮಾಡಿ
ಹೂಡಿಕೆಯನ್ನು ಇಂಟ್ರೆಸ್ಟಿಂಗ್ ಮಾಡಬೇಕು ಅಂದರೆ ಅದಕ್ಕೂ ನಿಮಗೂ ಕನೆಕ್ಷನ್ ಬೆಳೆಯಬೇಕು. ಇಷ್ಟು ಹಣವನ್ನು ಇಷ್ಟು ಸಮಯದಲ್ಲಿ ಗಳಿಸಿ ಈ ಆಸೆ ಪೂರೈಸುತ್ತೇನೆ ಅಂತ ನಿರ್ಧಾರ ಮಾಡಿ. ಆ ಕನಸು ಈಡೇರಲು ಹೂಡಿಕೆಯಲ್ಲಿ ಯಾವೆಲ್ಲ ಟ್ರಿಕ್ ಮಾಡಬಹುದು ಅಂತ ಯೋಚಿಸಿ, ರಿಸರ್ಚ್ ಮಾಡಿ, ಅದರಲ್ಲೇ ಮುಳುಗಿ.
ಆರು ತಿಂಗಳು ಕೆಲಸ ಬಿಟ್ಟು ದೇಶ ತಿರುಗುತ್ತೇನೆ ಅಂತ ನಿರ್ಧರಿಸಿ. ಅದಕ್ಕೆ ತಕ್ಕಂತೆ ಹಣವನ್ನು ಹೂಡಿಕೆಯಲ್ಲಿ ಪಡೆಯೋದು ಹೇಗೆ ಅಂತ ಯೋಚಿಸಿ. ಹಣ ಎಷ್ಟು ಬೇಗ ಕೈ ಸೇರುತ್ತದೋ, ಅಷ್ಟು ಬೇಗ ನೀವು ಟ್ರಿಪ್ ಹೊರಡಬಹುದು. ನಿವೃತ್ತಿ ನಂತರ ಹಾಯಾಗಿರಬೇಕು, ಸಡನ್ನಾಗಿ ಆರೋಗ್ಯ ಸಮಸ್ಯೆ ಬಂದರೆ ಅಲ್ಲಿ ಸಮಸ್ಯೆ ಬರಬಾರದು ಹೀಗೆ ಭಾವನಾತ್ಮಕವಾಗಿ ಹಣದೊಂದಿಗೆ ಸಂಪರ್ಕ ಸಾಧ್ಯವಾಗುವಂತೆ ಮಾಡಿ.
3. ಸನ್ನಿವೇಶವನ್ನೇ ಹಣದ ರೂಪಕ್ಕೆ ಮಾರ್ಪಡಿಸಿ
ಮುಂದಿನ ಐದು ವರ್ಷದಲ್ಲಿ ಏನೆಲ್ಲ ಸಾಧ್ಯವಾಗಬೇಕು ಅಂತ ಸ್ಪಷ್ಟತೆ ಸಿಕ್ಕರೆ ಅದನ್ನು ಹಣದ ರೂಪಕ್ಕೆ ಪರಿವರ್ತಿಸಿ. ಅಂದರೆ ಎಸ್‌ಐಪಿನಲ್ಲಿ ಇನ್‌ವೆಸ್ಟ್‌ಮೆಂಟ್ ಮಾಡಿದರೆ ಕರಿಯರ್ ಬದಲಾದರೂ ಸಮಸ್ಯೆ ಆಗಲ್ಲ, ಎಫ್‌ಡಿಯಲ್ಲಿ ವಿನಿಯೋಗಿಸಿದರೆ ಅದು ಮಗುವಿನ ವಿದ್ಯಾಭ್ಯಾಸಕ್ಕೆ ಸರಿಹೋಗುತ್ತದೆ. ಈ ರೀತಿಯ ಪ್ಲಾನ್ ಇದ್ದರೆ ಉತ್ಸಾಹ ಇರುತ್ತದೆ.
4. ಸ್ಪರ್ಧಾತ್ಮಕ ಸ್ಪರ್ಶ
ಆಫೀಸ್‌ನಲ್ಲಿ ಟಾರ್ಚರ್ ಹೆಚ್ಚಾಗುತ್ತಿದೆ ಅನ್ನುವುದನ್ನು ಒತ್ತಡವಾಗಿ ತೆಗೆದುಕೊಳ್ಳದೇ, ಈ ಕೆಲಸದಿಂದ ಹೊರಬಂದು ಸ್ವತಂತ್ರ್ಯವಾಗಿ ದುಡಿಯಲು ಶುರು ಮಾಡಿದರೆ ಅದಕ್ಕೆ ಎಷ್ಟು ಬಂಡವಾಳ ಬೇಕಾಗಬಹುದು, ಅದಕ್ಕೆ ನನ್ನ ಹೂಡಿಕೆ ಹೇಗೆ ನೆರವಾಗಬಹುದು ಅನ್ನುವುದನ್ನು ಅಪ್ಲೈ ಮಾಡಿ.
5. ನಿತ್ಯ ಫಾಲೋಅಪ್ ತಪ್ಪಿಸಬೇಡಿ
ಗುರಿಯನ್ನು ಆಗಾಗ ನೆನಪಿಸಿಕೊಂಡರೆ ಅದೇ ಸ್ಫೂರ್ತಿಯಾಗುತ್ತದೆ. ಹೀಗಾಗಿ ಆಗಾಗ ಗುರಿಯ ಬಗ್ಗೆ ಚಿಂತಿಸಿ. ಸಾಕಾರಗೊಳಿಸುವ ಕ್ರಿಯಾತ್ಮಕತೆ ಹೆಚ್ಚಿಸಿಕೊಳ್ಳಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.