SBI ಬ್ಯಾಂಕ್‌ನಲ್ಲಿ ಖಾತೆ ಇದೆಯಾ? ನಿಮಗೆ ಈ ಸಂದೇಶ ಬಂದರೆ ಅಪ್ಪಿ ತಪ್ಪಿ ಓಪನ್ ಮಾಡಬೇಡಿ!

By Chethan Kumar  |  First Published Nov 7, 2024, 1:04 PM IST

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಇದೆಯಾ? ವ್ಯಾಟ್ಸ್ಆ್ಯಪ್ ಮೂಲಕ, ಮೆಸೇಜ್ ಮೂಲಕ ಈ ಸಂದೇಶ ಬಂದರೆ ಅಪ್ಪಿ ತಪ್ಪಿ ಓಪನ್ ಮಾಡಬೇಡಿ, ಕ್ಲಿಕ್ ಮಾಡುವ ಸಾಹಸ ಮಾಡಬೇಡಿ. 


ನವದೆಹಲಿ(ನ.07) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತವಾಗಿ ಮಹತ್ವದ ಎಚ್ಚರಿಕೆ ನೀಡಿದೆ. ಎಸ್‌ಬಿಐ ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬರು ಎಚ್ಚರವಹಿಸುವಂತೆ ಸೂಚಿಸಿದೆ. ನವೆಂಬರ್ 1 ರಿಂದ ಯುಪಿಐ ಪಾವತಿ ಸೇರಿದಂತೆ ಬ್ಯಾಂಕಿಂಗ್‌ನ ಕೆಲ ನಿಯಮಗಳು ಬದಲಾಗಿದೆ, ಇನ್ನು ಡಿಸೆಂಬರ್ 1 ರಿಂದ ಕ್ರಿಡಿಟ್ ಕಾರ್ಡ್ ನಿಯಮದಲ್ಲೂ ಬದಲಾವಣೆಯಾಗುತ್ತಿದೆ. ಇದರ ಬೆನ್ನಲ್ಲೇ ಎಸ್‌ಬಿಐ ಖಾತೆದಾರರಿಗೆ ವ್ಯಾಟ್ಸ್ಆ್ಯಪ್, ಮೇಸೇಜ್ ಮೂಲಕ ಕೆಲ ರಿವಾರ್ಡ್ ಪಾಯಿಂಟ್ಸ್ ಕುರಿತು ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಅಪ್ಪಿ ತಪ್ಪಿಯೂ  ಈ ಸಂದೇಶದಲ್ಲಿರುವ ಲಿಂಕ್ ಓಪನ್ ಮಾಡುವ ಸಾಹಸ ಮಾಡಬೇಡಿ ಎಂದು ಎಸ್‌ಬಿಐ ಬ್ಯಾಂಕ್ ಅಧಿಕೃತಾಗಿ ಸೂಚಿಸಿದೆ.

ವಂಚಕರು ಇದೀಗ ಮೋಸ ಮಾಡಲು ಹೊಸ ಸೈಬರ್ ಕ್ರೈಂ ಮಾರ್ಗ ಹುಡುಕಿದ್ದಾರೆ. ಇತ್ತೀಚೆಗೆ ಹಲವು ಎಸ್‌ಬಿಐ ಬ್ಯಾಂಕ್ ಖಾತೆದಾರರಿಗೆ ಸಂದೇಶ ಒಂದು ಬಂದಿದೆ. ನಿಮ್ಮ ರಿವಾರ್ಡ್ಸ್ ಪಾಯಿಂಟ್ಸ್ ಅವಧಿ ಅಂತ್ಯಗೊಳ್ಳುತ್ತಿದೆ. ಅವಧಿ ಅಂತ್ಯಗೊಳ್ಳುವ ಮೊದಲು ಪಾಯಿಂಟ್ಸ್ ರಿಡೀಮ್ ಮಾಡಿಕೊಳ್ಳಿ ಎಂದು ಲಿಂಕ್ ಕಳುಹಿಸಲಾಗುತ್ತಿದೆ. ಪ್ರಮುಖವಾಗಿ ಕೆಲ ನಿಯಮದಲ್ಲಿ ಬದಲಾವಣೆಯಾಗಿರುವ ಕಾರಣ ಗ್ರಾಹಕರಿಗೆ ಈ ರೀತಿ ಸ್ಕ್ರಾಮ್ ಮೆಸೇಜ್ ಕಳುಹಿಸಲಾಗುತ್ತಿದೆ.

Latest Videos

undefined

SBI ಎಟಿಎಂ ಕಾರ್ಡ್ ಇದ್ದರೆ ಸಾಕು ಸಿಗಲಿದೆ 20 ಲಕ್ಷ ರೂಪಾಯಿ ಉಚಿತ ವಿಮೆ!

ಈ ಸಂದೇಶದಲ್ಲಿ ನಿಮ್ಮ ರಿವಾರ್ಡ್ಸ್ ಪಾಯಿಂಟ್ಸ್ ಶೀಘ್ರದಲ್ಲೇ ಅಂತ್ಯಗೊಳ್ಳುತ್ತಿದೆ. ಹೀಗಾಗಿ ತ್ವರಿತವಾಗಿ ಪಾಯಿಂಟ್ಸ್ ರಿಡೀಮ್ ಮಾಡಿಕೊಳ್ಳಿ ಅನ್ನೋ ಸಂದೇಶ ಓದಿ, ಲಿಂಕ್ ಓಪನ್ ಮಾಡಿದರೆ ಖಾತೆಯಲ್ಲಿರುವ ಹಣ ಮಾಯವಾಗಲಿದೆ. ವಂಚರು ಲಿಂಕ್ ಮೂಲಕ ನಿಮ್ಮ ಖಾತೆಗೆ ದಾಳಿ ಮಾಡಲಿದ್ದಾರೆ. ಕ್ಷಣಮಾತ್ರದಲ್ಲಿ ಖಾತೆಯಲ್ಲಿರುವ ಎಲ್ಲಾ ಹಣ ಖಾಲಿಯಾಗಿದೆ. ಇನ್ನು ಕೆಲವರು ಎಸ್‌ಬಿಐ ಖಾತೆಯಲ್ಲಿ ಹಣವಿಲ್ಲ ಎಂದು ಲಿಂಕ್ ಓಪನ್ ಮಾಡುವ ಸಾಹಸ ಮಾಡಬೇಡಿ ಎಂದು ಬ್ಯಾಂಕ್ ಸೂಚಿಸಿದೆ. ನಿಮ್ಮ ಖಾತೆಯಲ್ಲಿ ಹಣವಿಲ್ಲದಿದ್ದರೂ ಬ್ಯಾಂಕ್ ವಿವರ, ಪಾನ್ ಕಾರ್ಡ್ ವಿವರ ಸೇರಿದಂತೆ ಇತರ ವೈಯುಕ್ತಿ ಮಾಹಿತಿ ಕದ್ದು ಭಾರಿ ಮೋಸ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಎಸ್‌ಬಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿದೆ. ಎಸ್‌ಬಿಐ ವ್ಯಾಟ್ಸ್ಆ್ಯಪ್ ಮೂಲಕ, ಮೆಸೇಜ್ ಮೂಲಕ ಗ್ರಾಹಕರಿಗೆ ನಿಮ್ಮ ರಿವಾರ್ಡ್ಸ್ ಪಾಯಿಂಟ್ಸ್ ಅವಧಿ, ರಿವಾರ್ಡ್ಸ್ ಪಾಯಿಂಟ್ಸ್ ಮೊತ್ತ ಸೇರಿದಂತೆ ಯಾವುದೇ ರೀತಿಯ ಸಂದೇಶ ಕಳುಹಿಸುವುದಿಲ್ಲ. ಇವೆಲ್ಲವೂ ಎಸ್‌ಬಿಐ ನೆಟ್‌ಬ್ಯಾಂಕಿಂಗ್, ಆ್ಯಪ್ ಅಥವಾ ಹತ್ತಿರದ ಶಾಖೆಗೆ ತೆರಳಿ ಪರಿಶೀಲಿಕೊಳ್ಳಿ  ಎಂದು ಸೂಚಿಸಿದೆ.

ಮೆಸೇಜ್ ಮೂಲಕ ನೀಡುವ ಫೋನ್ ನಂಬರ್, ಲಿಂಕ್ ನಂಬಬೇಡಿ. ನೇರವಾಗಿ ಬ್ಯಾಂಕ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಅಥವಾ ಅದಿಕೃತ ಆ್ಯಪ್, ವೆಬ್‌ಸೈಟ್ ಮೂಲಕ ಪರಿಶೀಲಿಸಿ.  ಬ್ಯಾಂಕ್ ಖಾತೆಗೆ ಟು ಫ್ಯಾಕ್ಟರ್ ಅಥೆಂಟಿಕೇಶನ್ ಭದ್ರತೆ ನೀಡಿ. ಇದರಿಂದ ವಹಿವಾಟು ನಡೆಸುವಾಗ ಪಿನ್ ಮಾತ್ರವಲ್ಲೂ, ಒಟಿಪಿ ಕೋಡ್ ಕೂಡ ಅವಶ್ಯಕವಾಗಲಿದೆ. ಇದು ಎರಡು ಹಂತದ ಭದ್ರತೆಯನ್ನು ಖಾತೆಗೆ ನೀಡಲಿದೆ. 

ಡಾಕ್ಟರ್ ಕನಸು ನನಸು ಮಾಡಲು ನೀಟ್ ಪಾಸ್ ಮಾಡಿದ 64 ವರ್ಷದ ನಿವೃತ್ತ SBI ಉದ್ಯೋಗಿ!

ಸೋಶಿಯಲ್ ಮೀಡಿಯಾ, ವ್ಯಾಟ್ಸ್ಆ್ಯಪ್, ಮಸೇಜ್ ಮೂಲಕ ಬರುವ ಸಂದೇಶಗಳನ್ನು ಓದಿ ಪ್ರವರ್ತಿಸಬೇಡಿ.  ನಿಮ್ಮ ನೆಟ್ ಬ್ಯಾಂಕಿಂಗ್, ಬ್ಯಾಂಕ್ ಆ್ಯಪ್ ಮೂಲಕ ಯಾವುದೇ ಮಾಹಿತಿ ಪರಿಶೀಲಿಸಿ. ಬ್ಯಾಲೆನ್ಸ್ ಪರಿಶೀಲನೆ, ರಿವಾರ್ಡ್ಸ್ ಪಾಯಿಂಟ್ಸ್ ಸೇರಿದಂತೆ ಎಲ್ಲಾ ಮಾಹಿತಿಗಳು ಅಧಿಕೃತವಾಗಿ ಲಭ್ಯವಿದೆ. ಹೀಗಾಗಿ ಹೊರಗಿನ ಲಿಂಕ್, ಮೆಸೇಜ್‌ಗೆ ಮರುಳಾಗಬೇಡಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೂಚಿಸಿದೆ. ಹೀಗಾಗಿ ಅನಾಮಿಕರು, ಅಥವಾ ಫಾರ್ವರ್ಡ್ ಮೆಸೇಜ್‌ಗಳ ಲಿಂಕ್ ಕ್ಲಿಕ್ ಮಾಡಬೇಡಿ, ಹಲವು ಆಫರ್ ಸೇರಿದಂತೆ ಇನ್ಯಾವುದೇ ಮಾತುಗಳಿಗೆ ಮರುಳಾಗಬೇಡಿ. 
 

click me!