ಮೊಬೈಲ್ ಕಳೆದು ಹೋಯ್ತಾ? Google Pay, Paytm and PhonePe ಬ್ಲಾಕ್ ಮಾಡೋದು ಹೇಗೆ?

By Suvarna NewsFirst Published Oct 27, 2021, 3:38 PM IST
Highlights

ಇಂದು ಮೊಬೈಲ್ ಬರೀ ಸಂಪರ್ಕ ಸಾಧನ ಮಾತ್ರವಲ್ಲ,ಪಾವತಿ ಸಾಧನವೂ  ಹೌದು. ಇದೇ ಕಾರಣಕ್ಕೆ ಜೇಬಿನಲ್ಲಿ ಹಣವಿಲ್ಲದಿದ್ರೂ ಕೈಯಲ್ಲಿ ಮೊಬೈಲ್ ಹಿಡಿದು ಆರಾಮವಾಗಿ ಶಾಪಿಂಗ್ ಮಾಡುತ್ತೇವೆ.ಆದ್ರೆ ಮೊಬೈಲ್ ಕಳೆದು ಹೋದ್ರೆ ನಿಮ್ಮ ಆನ್ಲೈನ್ ವ್ಯಾಲೆಟ್ ಖಾತೆಗಳನ್ನು ರಕ್ಷಿಸಿಕೊಳ್ಳೋದು ಹೇಗೆ?

ಈಗಂತೂ ಶಾಪಿಂಗ್ (Shopping) ಮಾಡಲು ಜೇಬಿನಲ್ಲಿ ಪರ್ಸ್ ಇರಲೇಬೇಕಾದ ಅಗತ್ಯವಿಲ್ಲ, ಕೈಯಲ್ಲಿ ಮೊಬೈಲ್ (Mobile) ಇದ್ರೆ ಸಾಕು. ಹೌದು, ತರಕಾರಿಯಿಂದ ಹಿಡಿದು ಬಟ್ಟೆ ತನಕ ಎಲ್ಲ ವಸ್ತುಗಳ ಖರೀದಿಗೆ ಮೊದಲಿನಂತೆ ಕ್ಯಾಷ್ ಅಥವಾ ಕಾರ್ಡ್ (Cash and Card) ಇರಬೇಕಾದ ಅಗತ್ಯವಿಲ್ಲ. ಬದಲಿಗೆ ಮೊಬೈಲ್‌ನಲ್ಲಿ ಫೋನ್ ಪೇ (PhonePe), ಗೂಗಲ್ ಪೇ (Googl Pay), ಪೇಟಿಎಂ (Paytm) ಮುಂತಾದ ಆನ್ಲೈನ್ ವ್ಯಾಲೆಟ್ (Online Wallet) ಮುಖಾಂತರ ಯುಪಿಐ (UPI) ಪಾವತಿ ಮಾಡಬಹುದು. ಭಾರತದಲ್ಲಿ ಯುಪಿಐ ಪಾವತಿ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಬಹುತೇಕರ ಮೊಬೈಲಿನಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಆ್ಯಪ್‌ಗಳಂತೂ ಇದ್ದೇ ಇರುತ್ತವೆ. ಹಣ ವರ್ಗಾವಣೆಗೆ (Money Transfer) ಯುಪಿಐ ಪಾವತಿ ಸುರಕ್ಷಿತ ಹಾಗೂ ಸರಳ ಮಾರ್ಗವೇನೋ ಹೌದು. ಆದ್ರೆ ನಿಮ್ಮ ಮೊಬೈಲ್ ಬಳಸಿ ಯಾರು ಬೇಕಾದ್ರೂ ಯುಪಿಐ ಪಾವತಿ ಆಪ್ ಮೂಲಕ ಹಣ ವರ್ಗಾವಣೆ ಮಾಡಬಹುದು. ಮೊಬೈಲ್ ಕಳೆದು ಹೋಗಿ ಅದ್ರಲ್ಲಿ ಯುಪಿಐ ಪಾವತಿ ಅಪ್ಲಿಕೇಷನ್‌ಗಳಿದ್ದರೆ ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ. ಹಾಗಂತ ಮೊಬೈಲ್ ಕಳೆದುಹೋದ ತಕ್ಷಣ ಗಾಬರಿ ಬಿದ್ದು ಟೆನ್ಷನ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ನಿಮ್ಮ ಮೊಬೈಲಿನಲ್ಲಿರೋ ಆನ್ಲೈನ್ ವ್ಯಾಲೆಟ್‌ಗಳಿಂದ ಯಾವುದೇ ಪಾವತಿಯಾಗದಂತೆ ಅವುಗಳನ್ನು ನಿಷ್ಕ್ರಿಯಗೊಳಿಸಿ ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಸಾಧ್ಯವಿದೆ. ಅದು ಹೇಗೆ? ಅಂತೀರಾ, ಇಲ್ಲಿದೆ ನೋಡಿ ಪೂರ್ಣ ಮಾಹಿತಿ. 

Air India ಮಾರಾಟ: ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ!

ಗೂಗಲ್ ಪೇ (Google pay) ಖಾತೆ ನಿಷ್ಕ್ರಿಯಗೊಳಿಸೋದು ಹೇಗೆ?
ಮೊದಲು ನೀವು ಗೂಗಲ್ ಪೇ ಗ್ರಾಹಕರ ಸಹಾಯವಾಣಿ ಸಂಖ್ಯೆ 18004190157 ಗೆ ಕರೆ ಮಾಡಬೇಕು. ಆ ಬಳಿಕ ಭಾಷೆ ಆಯ್ಕೆ ಮಾಡ್ಬೇಕು. ಆಗ ನಿಮಗೆ ಅನೇಕ ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ʼOther issues’ ಆಯ್ಕೆ ಮಾಡಬೇಕು.ಆ ಬಳಿಕ ತಜ್ಞರ ಜೊತೆ ಮಾತನಾಡೋ ಆಯ್ಕೆಯನ್ನುಆರಿಸಿಕೊಂಡು ಅವರ ಬಳಿ ನಿಮ್ಮ ಸಮಸ್ಯೆ ಹೇಳಿದ್ರೆ ಅವರು ನಿಮ್ಮ ಗೂಗಲ್ ಪೇ ಖಾತೆಯನ್ನು ಬ್ಲಾಕ್ ಮಾಡಲು ಮಾರ್ಗದರ್ಶನ ನೀಡುತ್ತಾರೆ.

ಹಬ್ಬದ ಖರ್ಚಿಗೆ ಕಡಿವಾಣ ಹಾಕೋದು ಹೇಗೆ? ಇಲ್ಲಿದೆ ಟಿಪ್ಸ್

ಫೋನ್ ಪೇ (PhonePe)
ನಿಮ್ಮ ಮೊಬೈಲಿನಲ್ಲಿ ಫೋನ್ ಪೇ ಅಪ್ಲಿಕೇಷನ್ (Application) ಇದ್ರೆ ನೀವು 08068727374 ಅಥವಾ ೦2268727374 ಸಂಖ್ಯೆಗೆ ಕರೆ ಮಾಡಿ. ಭಾಷೆ ಆಯ್ಕೆ ಮಾಡಿದ ಬಳಿಕ ಫೋನ್ ಪೇ ಖಾತೆಗೆ ಸಂಬಂಧಿಸಿ ಯಾವುದಾದ್ರೂ ಸಮಸ್ಯೆಯಿದ್ರೆ ಅದನ್ನು ದಾಖಲಿಸಲು ಬಯಸುತ್ತೀರಾ ಎಂದು ಕೇಳಲಾಗುತ್ತದೆ. ಆಗ Yes ಎಂಬ ಆಯ್ಕೆಯನ್ನು ಒತ್ತಿ. ಆ ಬಳಿಕ OTP ಪಡೆಯಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ. ಆ ಬಳಿಕ OTP ಲಭಿಸಲಿಲ್ಲ ಎಂಬ ಆಯ್ಕೆಯನ್ನು ಆರಿಸಿ. ಈಗ ನಿಮಗೆ ಸಿಮ್ ಕಳೆದು ಹೋಗಿರೋ ಬಗ್ಗೆ ದೂರು ನೀಡಲು ಅವಕಾಶ ಸಿಗುತ್ತದೆ. ಮೊಬೈಲ್ ಕಳೆದು ಹೋಗಿರೋ ಆಯ್ಕೆಯನ್ನು ಕ್ಲಿಕ್ ಮಾಡಿ. ಇದಾದ ಬಳಿಕ ನಿಮ್ಮ ಕರೆಯನ್ನು ಟೆಕ್ನಿಷಿಯನ್‌ಗೆ ಸಂಪರ್ಕಿಸಲಾಗುತ್ತದೆ. ಅವರು ನಿಮಗೆ ನಿಮ್ಮ ಫೋನ್ ಪೇ ಖಾತೆಯನ್ನು ಬ್ಲಾಕ್ ಮಾಡಲು ನೆರವು ನೀಡುತ್ತಾರೆ. ಆದ್ರೆ ಇದಕ್ಕೆ ನೀವು ನಿಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಇತ್ತೀಚಿನ ಪಾವತಿ, ವ್ಯವಹಾರದ ಮೊತ್ತ ಇತ್ಯಾದಿ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ. 

ಭಾರತದಲ್ಲಿ ಜೀವನ ದುಬಾರಿ, ಯಾರಿಗೆ ಹೇಳೋಣ ಪ್ಲಾಬ್ಲೆಮ್?

ಪೇಟಿಎಂ (Paytm)
ಪೇಟಿಎಂ ಸಹಾಯವಾಣಿ ಸಂಖ್ಯೆ 01204456456. ಈ ಸಂಖ್ಯೆಗೆ ಕರೆ ಮಾಡಿ. Lost Phone ಆಯ್ಕೆ ಆರಿಸಿ. ಆ ಬಳಿಕ ಬೇರೆ ಮೊಬೈಲ್ ಸಂಖ್ಯೆ ನಮೂದಿಸೋ ಆಯ್ಕೆಯನ್ನು ಆರಿಸಿ. ಕಳೆದು ಹೋಗಿರೋ ಮೊಬೈಲ್ ಸಂಖ್ಯೆ ನಮೂದಿಸೋ ಆಯ್ಕೆ ಆರಿಸಿ. ಎಲ್ಲ ಸಾಧನಗಳಿಂದ ಲಾಗ್ ಔಟ್ (Log Out) ಆಗೋ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ಪೇಟಿಎಂ ವೆಬ್‌ಸೈಟಿಗೆ ಭೇಟಿ ನೀಡಿ 24*7 ನೆರವು ನೀಡೋ ಆಯ್ಕೆ ಮೇಲೆ ಕ್ಲಿಕ್ ಮಾಡಿ.Report a fraud ಆಯ್ಕೆ ಆರಿಸಿ. ಆ ಬಳಿಕ any of the categories ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ any issues ಆಯ್ಕೆ ಮಾಡಿ. ಪೇಜಿನ ಕೆಳ ಭಾಗದಲ್ಲಿರೋ Messages Us link  ಮೇಲೆ ಕ್ಲಿಕ್ ಮಾಡಿ. ಪೇಟಿಎಂನಲ್ಲಿ ನಡೆದ ಹಣ ವರ್ಗಾವಣೆ, ಈ ಸಂಬಂಧ ನಿಮಗೆ ಬಂದ ಇ-ಮೇಲ್, ಮೆಸೇಜ್‌ಗಳ ಮಾಹಿತಿಯನ್ನು ನೀವು ಈ ಸಂದರ್ಭದಲ್ಲಿ ನೀಡಬೇಕಾಗುತ್ತದೆ. ಪೇಟಿಎಂ ನಿಮ್ಮ ಮನವಿಯನ್ನು ಪರಿಶೀಲಿಸಿ ಖಾತೆಯನ್ನು ಬ್ಲಾಕ್ ಮಾಡುತ್ತದೆ. ಈ ಬಗ್ಗೆ ನಿಮಗೆ ಪೇಟಿಎಂನಿಂದ ದೃಢೀಕರಣ ಮೆಸೇಜ್ (Confirmation Message) ಕೂಡ ಬರುತ್ತದೆ. 

click me!