ಕ್ರೆಡಿಟ್ ಕಾರ್ಡ್ ಇಲ್ಲ ಅಂದ್ರೆ ಒಂದು ಕೈ ಮುರಿದಂತೆ. ಯಾವುದೇ ವಸ್ತು ಖರೀದಿ ಮಾಡಿದ್ರೂ ಕ್ರೆಡಿಟ್ ಕಾರ್ಡ್ ಉಜ್ಜುವ ಜನರು ಅದರ ಬಗ್ಗೆ ತಿಳಿಯೋದು ಸಾಕಷ್ಟಿದೆ. ಬರೀ ಸಂಬಳ ಬರೋರಿಗೆ ಮಾತ್ರವಲ್ಲ ಆದಾಯವಿಲ್ಲದೆ ಇಡೀ ದಿನ ಕೆಲಸ ಮಾಡುವವರಿಗೆ ಕೂಡ ಇದನ್ನು ಪಡೆಯುವ ಅರ್ಹತೆಯಿದೆ.
ಕ್ರೆಡಿಟ್ ಕಾರ್ಡ್ ಇರೋರು ಅದನ್ನು ಹೇಗೆ ಮಿತಿಯಲ್ಲಿ ಬಳಕೆ ಮಾಡ್ಬೇಕು ಎನ್ನುವ ಬಗ್ಗೆ ಈಗಾಗಲೇ ಹೇಳಿದ್ದೇವೆ. ಕ್ರೆಡಿಟ್ ಕಾರ್ಡ್ ಉಪಯೋಗಗಳು ಕೂಡ ಬಹುತೇಕರಿಗೆ ತಿಳಿದಿದೆ. ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರುವ ಕ್ರೆಡಿಟ್ ಕಾರ್ಡನ್ನು ನೌಕರಿಯಲ್ಲಿರುವ ಜನರು ಸುಲಭವಾಗಿ ಪಡೆಯುತ್ತಾರೆ. ನೌಕರಿಯಲ್ಲಿರುವವರಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ಕ್ರೆಡಿಟ್ ಕಾರ್ಡ್ ಅವಶ್ಯವಿರುತ್ತದೆ. ಅಧಿಕೃತವಾಗಿ ಸಂಬಳ ಖಾತೆಯನ್ನು ಹೊಂದಿರುವ ಜನರು ಮಾತ್ರವಲ್ಲ ಬ್ಯಾಂಕ್ ಖಾತೆ ಹೊಂದಿರದ ಜನರು ಕ್ರೆಡಿಟ್ ಕಾರ್ಡ್ ಪಡೆಯಬಹುದು. ಮನೆಯಲ್ಲಿಯೇ ಕೆಲಸ ಮಾಡುವ, ವ್ಯಾಪಾರ ಮಾಡು, ಸ್ಯಾಲರಿ ಖಾತೆ ಹೊಂದಿರದ ಹಾಗೂ ಮನೆ ಮಕ್ಕಳನ್ನು ನೋಡ್ತಾ ಇಡೀ ದಿನ ಬ್ಯುಸಿಯಾಗಿರುವ ಗೃಹಿಣಿ ಕೂಡ ಕ್ರೆಡಿಟ್ ಕಾರ್ಡ್ ಪಡೆಯಬಹುದು. ನಾವಿಂದು ಅಂಥವರು ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡ್ತೇವೆ.
ಕ್ರೆಡಿಟ್ ಕಾರ್ಡ್ (Credit Card ) ಅಂದ್ರೇನು? : ನಿಮ್ಮ ಕೈನಲ್ಲಿ ಹಣ (Money) ವಿಲ್ಲದೆ ಹೋದ್ರೂ ಅಂಗಡಿಯ ಬಿಲ್ ಪಾವತಿಗೆ ಹಾಗೂ ಆನ್ಲೈನ್ (Online) ಶಾಪಿಂಗ್ ಗೆ ಸಹಾಯ ಮಾಡುವ ಕಾರ್ಡ್ ಇದು. ನಿಮ್ಮ ಕೈನಿಂದ ನಗದನ್ನು ನೀಡ್ಬೇಕಾಗಿಲ್ಲ. ನಿಮ್ಮ ಖಾತೆಯಿಂದಲೂ ಹಣ ಕಡಿತವಾಗೋದಿಲ್ಲ. ಬ್ಯಾಂಕ್ ನಿಮ್ಮ ಖರ್ಚನ್ನು ಭರಿಸಿರುತ್ತದೆ. ನೀವು ನಿಗದಿತ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ನೀವು ಎಟಿಎಂನಿಂದ ಹಣ ವರ್ಗಾವಣೆ ಸೇರಿದಂತೆ ಹಣವನ್ನು ವಿತ್ ಡ್ರಾ ಮಾಡಲು ಇದನ್ನು ಬಳಸಬಹುದು. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ನೀವು ಇದನ್ನು ಬಳಕೆ ಮಾಡ್ಬಹುದು. ಕ್ರೆಡಿಟ್ ಕಾರ್ಡ್ ಕೈನಲ್ಲಿದ್ರೆ ಯಾವುದೇ ಹಣಕಾಸಿನ ಚಿಂತೆ ನಿಮ್ಮನ್ನು ಕಾಡೋದಿಲ್ಲ.
Personal Finance : ಸಾಲ ಪಡೆದವನು ಸತ್ರೆ ಯಾರು ತೀರಿಸ್ಬೇಕು?
ಕ್ರೆಡಿಟ್ ಕಾರ್ಡ್ ಗೆ ಹೀಗೆ ಅರ್ಜಿ ಸಲ್ಲಿಸಿ : ಉತ್ತಮ ಉದ್ಯೋಗವಿದ್ದರೆ ಅಥವಾ ಒಳ್ಳೆ ವ್ಯಾಪಾರ ಮಾಡ್ತಿದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಪಾವತಿ ಮಾಡ್ಬುಹುದು ಎಂದು ಅನೇಕರು ಭಾವಿಸಿದ್ದಾರೆ. ಆದ್ರೆ ಅದು ತಪ್ಪು. ಸ್ಯಾಲರಿ ಬ್ಯಾಂಕ್ ಖಾತೆಯಿಲ್ಲದ ಜನರು ಕೂಡ, ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗದಲ್ಲಿರುವ ವ್ಯಕ್ತಿಗೆ ಖುದ್ದು ಬ್ಯಾಂಕ್, ಕ್ರೆಡಿಟ್ ಕಾರ್ಡ್ ಸಿದ್ಧಪಡಿಸಿಕೊಡುತ್ತದೆ. ಆದ್ರೆ ಸೆಲ್ಫ್ ಎಂಪ್ಲಾಯ್ ಗಳು ಬ್ಯಾಂಕ್ ಗೆ ತೆರಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಗೆ ಹೋಗಿ ತಮ್ಮ ವ್ಯವಹಾರದ ಬಗ್ಗೆ ವಿವರ ನೀಡಬೇಕು. ಹಾಗೆಯೇ ತಿಂಗಳಿಗೆ ಎಷ್ಟು ಗಳಿಸುತ್ತೀರಿ ಎನ್ನುವ ಬಗ್ಗೆಯೂ ಮಾಹಿತಿ ನೀಡಬೇಕು. ತೆರಿಗೆ ಪಾವತಿ ಮಾಡೋರು ನೀವಾಗಿದ್ದರೆ ಅದ್ರ ಪ್ರತಿಯನ್ನು ನೀವು ತೋರಿಸಬೇಕು. ನೀವು ನೀಡಿದ ಎಲ್ಲ ಮಾಹಿತಿ ಪರಿಶೀಲಿಸಿದ ನಂತ್ರ ಬ್ಯಾಂಕ್ , ಕ್ರೆಡಿಟ್ ಕಾರ್ಡ್ ಅಪ್ಲಿಕೇಷನನ್ನು ಸ್ವೀಕರಿಸುತ್ತದೆ. ಒಮ್ಮೆ ನಿಮ್ಮ ಕ್ರೆಡಿಟ್ ಕಾರ್ಡ್ ಅಪ್ಲಿಕೇಷನ್ ಸ್ವಿಕೃತಗೊಂಡರೆ 10ರಿಂದ 15 ದಿನಗಳ ಒಳಗೆ ನಿಮಗೆ ಕ್ರೆಡಿಟ್ ಕಾರ್ಡ್ ಸಿಗುತ್ತದೆ.
Personal Finance : ಹೆಚ್ಚು ಖರ್ಚು ಮಾಡೋ ಅಭ್ಯಾಸವಿದ್ರೆ ಈ ಟಿಪ್ಸ್ ಫಾಲೋ ಮಾಡಿ
ಉದ್ಯೋಗ ಅಥವಾ ವ್ಯವಹಾರ ನಡೆಸದ ಮಹಿಳೆಯರು ಹೇಗೆ ಕ್ರೆಡಿಟ್ ಕಾರ್ಡ್ ಪಡೆಯಬೇಕು? : ಇನ್ನು ಉದ್ಯೋಗವನ್ನೂ ಮಾಡದ, ಯಾವುದೇ ವ್ಯವಹಾರದ ಮೂಲಕವೂ ಹಣ ಗಳಿಸದ ಮಹಿಳೆಯರು ಕೂಡ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಮೊದಲು ಮಹಿಳೆಯರು ಬ್ಯಾಂಕ್ ನಲ್ಲಿ ಅಕೌಂಟ್ ತೆರೆಯಬೇಕಾಗುತ್ತದೆ. ಇದ್ರ ನಂತರ ಒಂದು ನಿರ್ದಿಷ್ಟ ಮೊತ್ತವನ್ನು ಎಫ್ ಡಿ ಮಾಡಬೇಕು. ನೀವಿಟ್ಟ ಈ ಹಣ ಬ್ಯಾಂಕ್ ನಲ್ಲಿ ಗ್ಯಾರಂಟಿ ರೂಪದಲ್ಲಿ ಕೆಲಸ ಮಾಡಲಿದೆ. ನಿಮ್ಮ ಎಫ್ ಡಿ ಮಾಹಿತಿಯನ್ನು ಪರಿಶೀಲಿಸಿದ ನಂತ್ರ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.