ಸುಪ್ರೀಂ ಸಮಿತಿಯಿಂದ ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್‌: ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭರ್ಜರಿ ಜಿಗಿತ

By BK AshwinFirst Published May 22, 2023, 2:55 PM IST
Highlights

ಶುಕ್ರವಾರ ₹ 9.34 ಲಕ್ಷ ಕೋಟಿಯಿದ್ದ ಸಮೂಹ ಮಾರುಕಟ್ಟೆ ಬಂಡವಾಳದ ಮೌಲ್ಯ 10 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅದಾನಿ ಗ್ರೂಪ್‌ನ ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಸೋಮವಾರದ ವಹಿವಾಟಿನಲ್ಲಿ ಶೇಕಡಾ 18 ರಷ್ಟು ಏರಿಕೆಯಾಗಿದೆ.

ನವದೆಹಲಿ (ಮೇ 22, 2023): ಅಮೆರಿಕ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ಆರೋಪಗಳಿಗೆ ಸಂಬಂಧಿಸಿದ ತನಿಖೆಯಲ್ಲಿ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಅದಾನಿ ಸಂಸ್ಥೆಗೆ ಕ್ಲೀನ್ ಚಿಟ್ ನೀಡಿದ ನಂತರ ಅದಾನಿ ಗ್ರೂಪ್ ಷೇರುಗಳು ಸೋಮವಾರ ವಹಿವಾಟಿನ ಮೊದಲ ದಿನದಲ್ಲಿ ಏರಿಕೆ ಕಂಡಿವೆ. ಅದಾನಿ ಸಮೂಹದ ಷೇರುಗಳು ಶೇ 15ರಷ್ಟು ಜಿಗಿದಿದ್ದು, ಸಮೂಹ ಮಾರುಕಟ್ಟೆ ಬಂಡವಾಳವು ₹ 10 ಲಕ್ಷ ಕೋಟಿ ಗಡಿ ದಾಟಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ₹ 9.34 ಲಕ್ಷ ಕೋಟಿಯಿದ್ದ ಸಮೂಹ ಮಾರುಕಟ್ಟೆ ಬಂಡವಾಳದ ಮೌಲ್ಯ 10 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅದಾನಿ ಗ್ರೂಪ್‌ನ ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಸೋಮವಾರದ ವಹಿವಾಟಿನಲ್ಲಿ ಶೇಕಡಾ 18 ರಷ್ಟು ಏರಿಕೆಯಾಗಿದ್ದು, ಸಮೂಹ ಸಂಸ್ಥೆಗಳ ಪೈಕಿ ಇದು ಮುನ್ನಡೆಯಲ್ಲಿದೆ.  ಅದರ ನಂತರ ಅದಾನಿ ವಿಲ್ಮಾರ್ (10%), ಅದಾನಿ ಪೋರ್ಟ್ಸ್ (8.15%) ಮತ್ತು ಅಂಬುಜಾ ಸಿಮೆಂಟ್ಸ್ (ಶೇ. 6) ಷೇರು ಮೌಲ್ಯಗಳು ಸಹ ಹೆಚ್ಚಾಗಿದೆ. 

ಇದನ್ನು ಓದಿ: ಅದಾನಿ ಹಗರಣ ತನಿಖೆ: ಸೆಬಿಗೆ ಮತ್ತೆ 3 ತಿಂಗಳು ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್‌

ಅಲ್ಲದೆ, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ಎನ್‌ಡಿಟಿವಿ ಶೇಕಡ 5ರಷ್ಟು ಅಪ್ಪರ್ ಸರ್ಕ್ಯೂಟ್ ಮಿತಿಯನ್ನು ಮುಟ್ಟಿವೆ ಎಂದೂ ವರದಿಯಾಗಿದೆ. ಶುಕ್ರವಾರ ಬಹಿರಂಗವಾದ ವರದಿಯಲ್ಲಿ, ದೇಶದ ಅತ್ಯುನ್ನತ ನ್ಯಾಯಾಲಯವು ನೇಮಿಸಿದ ಡೊಮೇನ್ ತಜ್ಞರ ಸಮಿತಿಯು ಷೇರುಗಳಲ್ಲಿನ ವ್ಯವಸ್ಥಿತ ಅಪಾಯಗಳನ್ನು ಸಹ ತಳ್ಳಿಹಾಕಿತ್ತು. 

ಮಾರುಕಟ್ಟೆ ನಿಯಂತ್ರಕ ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ವತಿಯಿಂದ ಪ್ರಾಥಮಿಕವಾಗಿ ಯಾವುದೇ ನಿಯಂತ್ರಕ ವೈಫಲ್ಯವಿಲ್ಲ ಮತ್ತು ಅದಾನಿ ಗ್ರೂಪ್‌ನ ಕಡೆಯಿಂದ ಯಾವುದೇ ಬೆಲೆ ಕುಶಲತೆಯಿಲ್ಲ ಎಂದು ವರದಿ ಹೇಳಿದೆ. ಚಿಲ್ಲರೆ ಹೂಡಿಕೆದಾರರನ್ನು ಸಾಂತ್ವನಗೊಳಿಸಲು ಸಂಘಟಿತ ಸಂಸ್ಥೆಯು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ತಗ್ಗಿಸುವ ಕ್ರಮಗಳು ಷೇರುಗಳಲ್ಲಿ ವಿಶ್ವಾಸವನ್ನು ಬೆಳೆಸುವಲ್ಲಿ ಸಹಾಯ ಮಾಡಿದೆ ಎಂದೂ ಸಮಿತಿ ಹೇಳಿದೆ.

ಇದನ್ನೂ ಓದಿ: ಅದಾನಿಗೆ ಚೀನಾ ನಂಟು; ಆದರೂ ಬಂದರು ನಿರ್ವಹಣೆಗೆ ಅವಕಾಶ: ಕಾಂಗ್ರೆಸ್‌ ಆಕ್ರೋಶ

ಮಾರ್ಚ್ 2 ರಂದು ರಚಿಸಲಾದ ಸಮಿತಿಯು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಎ. ಎಮ್. ಸಪ್ರೆ ಅವರ ನೇತೃತ್ವವನ್ನು ಹೊಂದಿದ್ದು, ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆಪಿ ದೇವಧರ್, ಮಾಜಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಓ.ಪಿ.  ಭಟ್, ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥ ಕೆ. ವಿ ಕಾಮತ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಸೆಕ್ಯುರಿಟೀಸ್ ಹಾಗೂ ನಿಯಂತ್ರಕ ತಜ್ಞ ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡಿತ್ತು.  

ಇದನ್ನೂ ಓದಿ: ಅದಾನಿ ಬೆಂಬಲಕ್ಕೆ ಪವಾರ್‌: ಹಿಂಡನ್‌ಬರ್ಗ್‌ ವರದಿಗೆ ಎನ್‌ಸಿಪಿ ನಾಯಕ ಕಿಡಿ

click me!