
Business Desk: ಇತ್ತೀಚಿನ ದಿನಗಳಲ್ಲಿ ಜನರು,ಆನ್ಲೈನ್ (Online )ವೃತ್ತಿಗೆ ಮಹತ್ವ ನೀಡ್ತಿದ್ದಾರೆ. ಮನೆ(Home)ಯಲ್ಲಿ ಕುಳಿತು ಆನ್ಲೈನ್ ಮೂಲಕ ಆದಾಯ (Income )ಗಳಿಸುವ ಪ್ಲಾನ್(Plan )ಮಾಡ್ತಿದ್ದಾರೆ. ಆನ್ಲೈನ್‌ನಲ್ಲಿ ಹಣ ಸಂಪಾದಿಸಲು ಹಲವು ಮಾರ್ಗಗಳಿವೆ. ಅದರಲ್ಲಿ ಒಂದು ಗೂಗಲ್ ಪ್ಲೇ ಸ್ಟೋರ್ (Google Play Store). ಇಂದು ನಾನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಷನ್ ಹಾಕಿ,ಹೇಗೆ ಹಣ ಗಳಿಸಬಹುದು ಎಂಬುದನ್ನು ಹೇಳ್ತೆವೆ.
ಮೊಬೈಲ್ ಅಪ್ಲಿಕೇಶನ್ ಮೂಲಕ ಹಣ ಗಳಿಕೆ ಹೇಗೆ? : ಮೊಬೈಲ್ ಅಪ್ಲಿಕೇಶನ್‌ಗಳು ಪ್ರಸ್ತುತ ನಮ್ಮೆಲ್ಲರ ಮುಂದಿರುವ, ಹಣ ಗಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಎಲ್ಲ ರೀತಿಯ ಅಪ್ಲಿಕೇಶನ್‌ಗಳಿಂದ ಹಣ ಗಳಿಸಲು ಸಾಧ್ಯವಿಲ್ಲ. ಹೆಚ್ಚು ಹಣ ಗಳಿಸಲು ಯಾವ ಅಪ್ಲಿಕೇಷನ್ ಸೂಕ್ತ ಎಂಬುದನ್ನು ಅರಿತು ಕೆಲಸ ಮಾಡಬೇಕಾಗುತ್ತದೆ. ಈಗ ದಿನಕ್ಕೊಂದು ಹೊಸ ಮೊಬೈಲ್ ಆಪ್ ಗಳು ಮಾರುಕಟ್ಟೆಗೆ ಬರುತ್ತಿವೆ. ಈ ಅಪ್ಲಿಕೇಷನ್ ಮೂಲಕ ನೀವೂ ಹಣ ಗಳಿಸುವುದಾದ್ರೆ ಸಾಮಾನ್ಯ ಸಮೀಕ್ಷೆ ನಡೆಸಬೇಕು.
ಇದನ್ನೂ ಓದಿ: Earn Money: ಮನೆಯಲ್ಲೇ ಕುಳಿತು ಯುಟ್ಯೂಬ್ ಮೂಲಕ ಹಣ ಗಳಿಸಿ
ಅಪ್ಲಿಕೇಶನ್ ತಯಾರಿಸುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು : ಆ್ಯಪ್ ತಯಾರಿಸುವಾಗ ಮೊದಲು ನೀವು ಯಾವ ರೀತಿಯ ಆ್ಯಪ್ ತಯಾರಿಸುತ್ತೀರಿ ಎಂಬುದರ ಬಗ್ಗೆ ಗಮನ ಹರಿಸಬೇಕು. ಉದ್ದೇಶವು ಸ್ಪಷ್ಟವಾದಾಗ ಗ್ರಾಹಕರು ಮತ್ತು ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುತ್ತದೆ. ಉದಾಹರಣೆಗೆ, ನೀವು ಸುದ್ದಿ ಅಪ್ಲಿಕೇಶನ್ ರಚಿಸಬಹುದು. ಅಲ್ಲಿ ಜಾಹೀರಾತುಗಳನ್ನು ತೋರಿಸುವ ಮೂಲಕ ನೀವು ಹಣವನ್ನು ಗಳಿಸಬಹುದು.
ಕೆಲ ಅಪ್ಲಿಕೇಷನ್ ಉದಾಹರಣೆಗೆ ಮಕ್ಕಳ ಅಪ್ಲಿಕೇಷ ನ್ ನಲ್ಲಿ ಹಣ ಗಳಿಕೆ ಸಾಧ್ಯವಿಲ್ಲ. ಹಾಗಾಗಿ ಎಲ್ಲವನ್ನೂ ತಿಳಿದು ಅಪ್ಲಿಕೇಷನ್ ನಿರ್ಮಿಸಬೇಕಾಗುತ್ತದೆ. ನಿಮ್ಮ ಪ್ರೇಕ್ಷಕರು ಯಾರಾಗಬಹುದು? ಗೂಗಲ್ ಪ್ಲೇ ಸ್ಟೋರ್ ನಿಂದ ನೀವು ಎಷ್ಟು ಹಣವನ್ನು ಗಳಿಸಬಹುದು? ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸಕ್ಕೆ ಇಳಿಯಬೇಕು.
ಅಪ್ಲಿಕೇಶನ್ ಅನ್ನು ನಿರ್ಮಿಸುವಾಗ, ನೀವು ಸ್ಪರ್ಧಾತ್ಮಕ ಸಂಸ್ಥೆಗಳಿಂದ ಅಪ್ಲಿಕೇಶನ್‌ಗಳನ್ನು ಟ್ರ್ಯಾಕ್ ಮಾಡಬೇಕಾಗುತ್ತದೆ. ಅವರ ಆದಾಯದ ದಾರಿ ತಿಳಿಯಬೇಕಾಗುತ್ತದೆ.
ಅಪ್ಲಿಕೇಷನ್ ನಿಂದ ಹೀಗೆ ಹಣ ಗಳಿಸಿ :
1. ಜಾಹೀರಾತು :ವಿವಿಧ ರೀತಿಯ ಜಾಹೀರಾತು,ಪ್ರಚಾರಗಳನ್ನು ಅಪ್ಲಿಕೇಷನ್ ನಲ್ಲಿ ನೀಡುವ ಮೂಲಕ ನೀವು ಹಣಗಳಿಸಬಹುದು. ಪಾಪ್ ಅಪ್ ಜಾಹೀರಾತುಗಳು, ಬ್ಯಾನರ್ ಜಾಹೀರಾತುಗಳು, ವೀಡಿಯೊ ಜಾಹೀರಾತುಗಳು ಇತ್ಯಾದಿ ಇದರಲ್ಲಿ ಸೇರಿವೆ.
2. ಅಪ್ಲಿಕೇಶನ್ ಮಾರಾಟ ಮತ್ತು ಅಪ್ಲಿಕೇಶನ್‌ನಲ್ಲಿನ ಖರೀದಿ : ಗ್ರಾಹಕರು ಆ್ಯಪ್ ಇನ್ಸ್ಟಾಲ್ ಮಾಡಲು ಶುಲ್ಕ ಪಾವತಿ ಮಾಡಬೇಕಾಗುತ್ತದೆ ಇದು ಅಪ್ಲಿಕೇಶನ್‌ನ ಮಾರಾಟವಾಗಿದೆ. ಇನ್ನೊಂದು, ಇದನ್ನು ಕೆಲವು ದಿನಗಳವರೆಗೆ ಉಚಿತವಾಗಿ ಬಳಸಿ ನಂತರ ಪಾವತಿಸುವುದು ಅಥವಾ ಕೆಲವು ವೈಶಿಷ್ಟ್ಯಗಳನ್ನು ಬಳಸಲು ಶುಲ್ಕ ನೀಡುವುದು. ಈ ತಂತ್ರವನ್ನು ಅಪ್ಲಿಕೇಶನ್‌ನಲ್ಲಿ ಖರೀದಿ ಎಂದು ಕರೆಯಲಾಗುತ್ತದೆ. ಈ ಎರಡೂ ವಿಧಾನದ ಮೂಲಕ ನೀವು ಹಣ ಗಳಿಸಬಹುದು.ಆದ್ರೆ ಅಪ್ಲಿಕೇಶನ್ ಉಚಿತವಾಗಿದ್ದರೆ, ಅದರ ಡೌನ್‌ಲೋಡ್‌ಗಳ ಸಂಖ್ಯೆ ಮತ್ತು ಜಾಹೀರಾತುಗಳ ಸಂಖ್ಯೆ ಹೆಚ್ಚಿರುತ್ತದೆ.
3. ಚಂದಾದಾರಿಕೆ : ಅಪ್ಲಿಕೇಶನ್ ಬಳಕೆದಾರರಿಗೆ ಸಾಪ್ತಾಹಿಕ, ಮಾಸಿಕ ಮತ್ತು ವಾರ್ಷಿಕ ಶುಲ್ಕ ವಿಧಿಸಲಾಗುತ್ತದೆ. ಕ್ಲೌಡ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಈ ತಂತ್ರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಗೂಗಲ್ ಮ್ಯೂಸಿಕ್, ನೆಟ್ಫ್ಲಿಕ್ಸ್ ಇದೇ ಮಾರ್ಗ ಅನುಸರಿಸುತ್ತವೆ.
ಇದನ್ನೂ ಓದಿ: Work from Home Challenges: ಹೇಳಿದಷ್ಟು ಯಾವುದೂ ಸುಲಭವಲ್ಲ, ಇದ್ರಲ್ಲೂ ಇದೆ ಅನೇಕ ಸವಾಲು!
4. ಪ್ರಾಯೋಜಕತ್ವ: ಮೊಬೈಲ್ ಅಪ್ಲಿಕೇಶನ್ ಬಳಸುವ ಆದಾಯದ ಮೂಲಗಳಲ್ಲಿ ಒಂದು ಪ್ರಾಯೋಜಕತ್ವವಾಗಿದೆ. ನಿಮ್ಮ ಅಪ್ಲಿಕೇಶನ್‌ನ ಡೌನ್‌ಲೋಡ್ ಮತ್ತು ಸ್ಥಾಪನೆಯು ತುಂಬಾ ಹೆಚ್ಚಾದಾಗ, ಅನೇಕ ದೊಡ್ಡ ಕಂಪನಿಗಳು ತಮ್ಮ ಸೇವೆಯನ್ನು ಜಾಹೀರಾತು ಮಾಡಲು ಅಥವಾ ಪ್ರಾಯೋಜಿಸಲು ನಿಮ್ಮನ್ನು ಕೇಳುತ್ತವೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಹಣ ಗಳಿಸಲು ಇದು ತುಂಬಾ ಮುಖ್ಯವಾದ ಮಾರ್ಗವಾಗಿದೆ.
ಕೊನೆಯದಾಗಿ, ಸಂಗೀತ, ಗೇಮಿಂಗ್, ವೀಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಹಣ ಗಳಿಸುವ ವಿಷಯದಲ್ಲಿ ಹೆಚ್ಚು ಪ್ರಯೋಜನಕಾರಿ. ನಿಮ್ಮ ಆದಾಯದಲ್ಲಿ ಗೂಗಲ್ ಗೆ ಲಾಭಾಂಶ ನೀಡಬೇಕಾಗುತ್ತದೆ. ಅದನ್ನು ನೀವು ಅರಿತು ಕೆಲಸ ಮಾಡಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.