Union Budget 2022: ಆದಾಯ ತೆರಿಗೆ ಮಿತಿ ಹೆಚ್ಚಳ, ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ಸಾಧ್ಯತೆ

By Kannadaprabha News  |  First Published Jan 31, 2022, 10:43 AM IST

ಕೋವಿಡ್‌ ಸಾಂಕ್ರಾಮಿಕದ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಫೆ.1ರಂದು ಬಜೆಟ್‌ (Union Budget 2022)ಮಂಡನೆಗೆ ಸಜ್ಜಾಗಿದ್ದಾರೆ. ಸಾಂಕ್ರಾಮಿಕದಿಂದ ನಲುಗಿದ್ದ ದೇಶದ ಆರ್ಥಿಕತೆ, ಕೃಷಿ ವಲಯ, ಉದ್ಯೋಗ ವಲಯಕ್ಕೆ ಮತ್ತೆ ಚೇತರಿಕೆ ನೀಡುವ ಮಹತ್ವದ ಹೊಣೆಗಾರಿಕೆ ವಿತ್ತ ಸಚಿವರ ಮೇಲಿದೆ. 


ಕೋವಿಡ್‌ ಸಾಂಕ್ರಾಮಿಕದ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಫೆ.1ರಂದು ಬಜೆಟ್‌ ಮಂಡನೆಗೆ ಸಜ್ಜಾಗಿದ್ದಾರೆ. ಸಾಂಕ್ರಾಮಿಕದಿಂದ ನಲುಗಿದ್ದ ದೇಶದ ಆರ್ಥಿಕತೆ, ಕೃಷಿ ವಲಯ, ಉದ್ಯೋಗ ವಲಯಕ್ಕೆ ಮತ್ತೆ ಚೇತರಿಕೆ ನೀಡುವ ಮಹತ್ವದ ಹೊಣೆಗಾರಿಕೆ ವಿತ್ತ ಸಚಿವರ ಮೇಲಿದೆ. ಈ ಹಿನ್ನೆಲೆಯಲ್ಲಿ ಜನರ ನಿರೀಕ್ಷೆ ಏನೇನಿದೆ ಎಂಬುದರ ಕುರಿತ ನೋಟ ಇಲ್ಲಿದೆ.

* ತೆರಿಗೆ

Tap to resize

Latest Videos

undefined

ತೆರಿಗೆ ವಲಯ 80ಸಿ ವಿನಾಯಿತಿ ಇನ್ನಷ್ಟು ಹೆಚ್ಚಳ

ತೆರಿಗೆದಾರರು ತಮ್ಮ ಉಳಿತಾಯ, ವೆಚ್ಚದ ಮೊತ್ತವನ್ನು ಆದಾಯದಲ್ಲಿ ಕಳೆಯಲು ಅವಕಾಶ ಕಲ್ಪಿಸುವ ಆದಾಯ ತೆರಿಗೆ ಕಾಯ್ದೆ 80ಸಿ ಅನ್ವಯ ಹಾಲಿ 1.50 ಲಕ್ಷ ರು.ವರೆಗೆ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದು. ಈ ಮೊತ್ತವನ್ನು ಇನ್ನಷ್ಟುಹೆಚ್ಚಿಸುವ ನಿರೀಕ್ಷೆ ಇದೆ.

ಕ್ರಿಪ್ಟೋಕರೆನ್ಸಿಗಳಿಗೆ ತೆರಿಗೆ

ಹಾಲಿ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಮಾನ್ಯತೆಯೂ ಇಲ್ಲ, ನಿಷೇಧವೂ ಇಲ್ಲ. ಹೀಗಾಗಿ ಇವುಗಳ ಬಳಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೀಗಾಗಿ ಕ್ರಿಪ್ಟೋಕರೆನ್ಸಿ ನೀಡುವ ಸಂಸ್ಥೆಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಾಧ್ಯತೆ ಇದೆ. ಇದು ಸರ್ಕಾರದ ಬೊಕ್ಕಸವನ್ನು ಸ್ವಲ್ಪ ಪ್ರಮಾಣದಲ್ಲಿ ತುಂಬಲು ನೆರವಾಗುವ ನಿರೀಕ್ಷೆ ಇದೆ.

ಕ್ಯಾಪಿಟಲ್‌ ಗೇನ್‌ ತೆರಿಗೆ ರದ್ದು

2018ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿ ಲಾಂಗ್‌ ಟರ್ಮ್ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌, ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆ ಮೂಡಿಸಿದೆ. ವಿಶ್ವದ ಬಹುತೇಕ ದೊಡ್ಡ ಆರ್ಥಿಕತೆಗಳಲ್ಲಿ ಈ ತೆರಿಗೆ ಇಲ್ಲ. ಹೀಗಾಗಿ ದೊಡ್ಡ ಹೂಡಿಕೆದಾರರನ್ನು ಮರಳಿ ಷೇರುಪೇಟೆಯತ್ತ ಕರೆತರಲು ಕೇಂದ್ರ ಸರ್ಕಾರ ಲಾಂಗ್‌ ಟಮ್‌ರ್‍ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ರದ್ದು ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ.

Foreign Policy: ವಿದೇಶ ನೀತಿಯನ್ನು ಮೋದಿ ಬದಲಿಸಿದ್ದು ಹೇಗೆ?

ಕೋವಿಡ್‌ ವೆಚ್ಚಕ್ಕೆ ವಿನಾಯಿತಿ

ದೊಡ್ಡ ದೊಡ್ಡ ಕಂಪನಿಗಳು ಕೋವಿಡ್‌ ಸಮಯದಲ್ಲಿ ತಮ್ಮ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಸೋಂಕಿನಿಂದ ರಕ್ಷಿಸಲು ಮಾಡಿದ ವಿವಿಧ ವೆಚ್ಚಗಳನ್ನು ತೆರಿಗೆ ವಿನಾಯ್ತಿ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಪೊರೆಟ್‌ ಉದ್ಯಮಗಳಿವೆ. ಅಲ್ಲದೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳಿಗೆ ವಿಧಿಸುವ ತೆರಿಗೆ ಪ್ರಮಾಣವನ್ನು ಶೇ.15 ಅಥವಾ ಅದಕ್ಕಿಂತ ಇನ್ನೂ ಕಡಿಮೆ ಮಾಡುವ ನಿರೀಕ್ಷೆ ದೊಡ್ಡ ಉದ್ಯಮಗಳದ್ದು.

ಆದಾಯ ತೆರಿಗೆ ಮಿತಿ ಹೆಚ್ಚಳ

ಕೋವಿಡ್‌ ನಂತರ ಮಧ್ಯಮ ವರ್ಗ ಬಹಳ ಪೆಟ್ಟು ತಿಂದಿದೆ. ಹೀಗಾಗಿ ಕೇಂದ್ರ ಸರ್ಕಾರ ಹಾಲಿ 5 ಲಕ್ಷ ರು.ವರೆಗೆ ಇರುವ ಆದಾಯ ತೆರಿಗೆ ಮಿತಿಯನ್ನು ಇನ್ನಷ್ಟುಹೆಚ್ಚಿಸಬಹುದೆಂದು ಕೋಟ್ಯಂತರ ಮಧ್ಯಮ ವರ್ಗ ಆಶಾಭಾವನೆಯಿಂದ ಕಾಯುತ್ತಿದೆ.

ಸೆಕ್ಷನ್‌ 80ಸಿ, 80ಡಿ

ಸೆಕ್ಷನ್‌ 80ಸಿಯಡಿ ಜನರು ತಮ್ಮ ಹೂಡಿಕೆ ಮತ್ತು ವೆಚ್ಚವನ್ನು ಆದಾಯದಲ್ಲಿ ಕಡಿತ ಮಾಡಿ ರಿಯಾಯಿತಿ ಪಡೆಯಲು ಅವಕಾಶ ಇದೆ. ಇದನ್ನು ಸರ್ಕಾರ ಈಗಿನ 1.50 ಲಕ್ಷದಿಂದ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ ಇದೆ. ಅದೇ ರೀತಿ ಸೆಕ್ಷನ್‌ 80ಡಿ ಅಡಿಯಲ್ಲಿ ವಾರ್ಷಿಕ 25000 ರು.ವರೆಗೆ ಪಾವತಿಸುವ ಆರೋಗ್ಯ ವಿಮೆ ಪ್ರೀಮಿಯಂಗೆ ತೆರಿಗೆ ವಿನಾಯ್ತಿ ಇದೆ. ಅದನ್ನು 50000 ರು.ಗೆ ಹೆಚ್ಚಿಸುವ ಸಾಧ್ಯತೆ ಇದೆ.

ಗೃಹ ಸಾಲದ ಬಡ್ಡಿ ರಿಯಾಯಿತಿ ಹೆಚ್ಚಳ

ಹಾಲಿ ವಾರ್ಷಿಕ 2 ಲಕ್ಷ ರು.ವರೆಗೆ ಪಾವತಿಸಲಾಗುವ ಗೃಹ ಸಾಲದ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಪಾವತಿ ವೇಳೆ ವಿನಾಯ್ತಿ ಪಡೆಯಲು ಅವಕಾಶ ವಿದೆ. ಅದನ್ನು 3 ಲಕ್ಷ ರು. ಹೆಚ್ಚಿಸಬಹುದು. ಇದು ರಿಯಲ್‌ ಎಸ್ಟೇಟ್‌ ವಲಯದಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ಮಧ್ಯಮ ವರ್ಗದ ಜನರಿಗೆ ಒಂದಿಷ್ಟುನೆರವು ನೀಡಬಲ್ಲದು.

ಕೋವಿಡ್‌ ವೆಚ್ಚಕ್ಕೆ ರಿಯಾಯಿತಿ

ದೇಶದ 4 ಕೋಟಿ ಜನರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಬಹುತೇಕ ಜನರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ದರದ ಚಿಕಿತ್ಸೆ ಪಡೆದಿದ್ದಾರೆ. ಹೀಗೆ ಮಾಡಿದ ವೆಚ್ಚವನ್ನು ಆದಾಯ ತೆರಿಗೆ ಪಾವತಿ ವೇಳೆ ರಿಯಾಯಿತಿ ಪಡೆಯಲು ಸರ್ಕಾರ ಅವಕಾಶ ಮಾಡಿಕೊಡಬಹುದು ಎಂಬ ಬಹುದೊಡ್ಡ ನಿರೀಕ್ಷೆ ಇದೆ.

Union Budget 2022: ಈ ಬಾರಿಯ ಬಜೆಟ್‌ನ ನಿರೀಕ್ಷೆಗಳೇನು.?

ವರ್ಕ್ಫ್ರಂ ಹೋಂ ಅಲೋಯನ್ಸ್‌ಗೆ ವಿನಾಯಿತಿ

ಕೋವಿಡ್‌ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಕೋಟ್ಯಂತರ ವೇತನದಾರ ವರ್ಗಕ್ಕೆ ಸರ್ಕಾರ ವರ್ಕ್ಫ್ರಂ ಅಲೋವೆನ್ಸ್‌ಗೆ ತೆರಿಗೆ ವಿನಾಯ್ತಿ ಪ್ರಕಟಿಸುವ ಸಾಧ್ಯತೆ ಇದೆ. ಇದು ಅವರ ಕೈಗೆ ಸಿಗುವ ವೇತನದ ಪ್ರಮಾಣವನ್ನು ಹೆಚ್ಚಿಸಲಿದೆ.

ಎಲೆಕ್ಟ್ರಿಕ್‌ ವಾಹನೋದ್ಯಮಕ್ಕೆ ಸುಂಕ ವಿನಾಯ್ತಿ

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನ ಉದ್ಯಮ ಭಾರೀ ಬೆಳವಣಿಗೆ ಹಾದಿಯಲ್ಲಿದೆ. ಹೀಗಾಗಿ ಈ ಉದ್ಯಮ, ಸಂಬಂಧಿತ ಬಿಡಿ ಭಾಗಗಳ ಉದ್ಯಮ, ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಉಪಕರಣ ಮತ್ತು ಸಂಬಂಧಿತ ಉಪಕರಣಗಳ ವಲಯ ಆಮದು ಸುಂಕ ನೀತಿಯಲ್ಲಿ ಭಾರೀ ಸುಧಾರಣೆಯ ನಿರೀಕ್ಷೆಯಲ್ಲಿದೆ.

* ಆರೋಗ್ಯ ವಲಯ

ಜಿಡಿಪಿಯ ಶೇ.3ರಷ್ಟುಆರೋಗ್ಯಕ್ಕೆ ಮೀಸಲು?

2020ರಲ್ಲಿ 94000 ಕೋಟಿ ರು.ನಷ್ಟಿದ್ದ ಆರೋಗ್ಯ ವಲಯದ ಅನುದಾನವನ್ನು 2021ರಲ್ಲಿ ಶೇ.137ರಷ್ಟುಹೆಚ್ಚಿಸುವ ಮೂಲಕ 2.23 ಲಕ್ಷ ಕೋಟಿ ರು.ಗೆ ಮುಟ್ಟಿಸಲಾಗಿತ್ತು. ದಿನೇ ದಿನೇ ಜನಸಾಮಾನ್ಯರ ಆರೋಗ್ಯ ನಿರ್ವಹಣೆ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಅಲೆದಾಟ ತಪ್ಪಿಸಿ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಲು ಅಲ್ಲಿನ ಮೂಲಸೌಕರ್ಯ ಹೆಚ್ಚಿಸಬೇಕಿದೆ. ಹೀಗಾಗಿ ಜಿಡಿಪಿಯ ಶೇ.3ರಷ್ಟನ್ನು ಆರೋಗ್ಯ ವಲಯಕ್ಕೆ ಮೀಸಲಿಡಬೇಕು ಎಂಬುದು ಆರೋಗ್ಯ ವಲಯದ ಬೇಡಿಕೆ. ಹೀಗಾಗಿ ಸರ್ಕಾರ ಈ ಕಡೆ ಗಮನ ಹರಿಸಿ ಈ ವಲಯಕ್ಕೆ ಇನ್ನಷ್ಟುಹಣ ನೀಡಬಹುದು ಎಂಬ ನಿರೀಕ್ಷೆ ಇದೆ.

* ಉದ್ಯೋಗ

ಉದ್ಯೋಗ ಸೃಷ್ಟಿಗೆ ನೆರವು

ಕೋವಿಡ್‌ ಸಾಂಕ್ರಾಮಿಕದ ಬಳಿಕ ಆಟೋಮೊಬೈಲ್‌, ರಿಯಲ್‌ ಎಸ್ಟೇಟ್‌ ಸೇರಿದಂತೆ ಹಲವು ವಲಯಗಳು ನೆಲಕಚ್ಚಿವೆ. ಪರಿಣಾಮ ಕೋಟ್ಯಂತರ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ಈ ವಲಯಗಳಲ್ಲಿ ಮತ್ತೆ ಉದ್ಯೋಗ ಸೃಷ್ಟಿಗಾಗಿ ಸರ್ಕಾರ ನಾನಾ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

* ಗ್ರಾಮೀಣಾಭಿವೃದ್ಧಿ

ಚುನಾವಣೆ ಹಿನ್ನೆಲೆ: ಗ್ರಾಮಗಳಿಗೆ ಭಾರೀ ಕೊಡುಗೆ?

ಬಜೆಟ್‌ ಬೆನ್ನಲ್ಲೇ 5 ರಾಜ್ಯಗಳ ಚುನಾವಣೆ ನಡೆಯಲಿದೆ. ಹೀಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಮತ್ತು ಒಟ್ಟಾರೆ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಕೆಲ ಹೊಸ ಕ್ರಮಗಳನ್ನು ಸರ್ಕಾರ ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ. ದೇಶದ ಒಟ್ಟು ಗ್ರಾಮೀಣ ಜನಸಂಖ್ಯೆಯ ಶೇ.25ರಷ್ಟುಜನರು ಚುನಾವಣೆ ನಡೆಯುವ ಈ 5 ರಾಜ್ಯಗಳಲ್ಲೇ ಇರುವ ಕಾರಣ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಈ ಬಗ್ಗೆ ಗಮನ ಹರಿಸುವುದು ಖಚಿತ ಎನ್ನಲಾಗಿದೆ.

click me!