Women Entrepreneurship ಭಾರತದ 5 ಲಕ್ಷ ಮಹಿಳಾ SMBಗಳಿಗೆ ನೆರವಾಗಲು FICCI ಜೊತೆ ಮೆಟಾ ಸಹಭಾಗಿತ್ವ!

Published : Feb 01, 2022, 08:56 PM IST
Women Entrepreneurship ಭಾರತದ 5 ಲಕ್ಷ ಮಹಿಳಾ SMBಗಳಿಗೆ ನೆರವಾಗಲು FICCI ಜೊತೆ ಮೆಟಾ ಸಹಭಾಗಿತ್ವ!

ಸಾರಾಂಶ

ಮೆಟಾದ ಡಿಜಿಟಲ್ ಯೋಜನೆಗಳು ಹಾಗೂ ಸಂಪನ್ಮೂಲಗಳಿಗೆ ಅವಕಾಶ ಶೇಕಡಾ 20 ರಷ್ಟು ಮಹಿಳೆಯರು ಸಣ್ಣ ವ್ಯಾಪಾರದಲ್ಲಿ ಸಕ್ರಿಯ ಪ್ರಪ್ರಥಮ ರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ಶೃಂಗಸಭೆ

ಬೆಂಗಳೂರು(ಫೆ.01):  ಭಾರತದಾದ್ಯಂತ ಇರುವ 5 ಲಕ್ಷ ಮಹಿಳಾ ನಿರ್ದೇಶಿತ ಸಣ್ಣ ವ್ಯಾಪಾರಗಳಿಗೆ ನೆರವು ಮತ್ತು ಬೆಂಬಲ ಒದಗಿಸಲು, ಮೆಟಾ ಮಹತ್ವದ ಯೋಜನೆ ಘೋಷಿಸಿದೆ. SheMeansBusiness ಕಾರ್ಯಕ್ರಮದಡಿ  ಎಫ್‍ಐಸಿಸಿಐ ಜೊತೆ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಮೆಟಾದ ಪ್ರಾರಂಭಿಕ  ರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ಶೃಂಗಸಭೆಯಲ್ಲಿ (National Women Entrepreneurship Summit)  ಈ ಘೋಷಣೆ ಮಾಡಲಾಗಿದೆ. 

ಬಂಡವಾಳಕ್ಕೆ ಮತ್ತು ತತ್ಸಂಬಂಧಿತ ಸಾಧನಗಳಿಗೆ ಪ್ರವೇಶಾವಕಾಶ, ಮಹಿಳಾ-ನಿರ್ದೇಶಿತ ವ್ಯಾಪಾರಗಳು ಎದುರಿಸುತ್ತಿರುವ ಮುಖ್ಯ ಸಮಸ್ಯೆಯಾಗಿದೆ. ಭಾರತದಲ್ಲಿರುವ 63 ದಶಲಕ್ಷಕ್ಕಿಂತ ಹೆಚ್ಚಿನ ಸಣ್ಣ ವ್ಯಾಪಾರಗಳ ಪೈಕಿ ಸರಿಸುಮಾರು 20%ಅನ್ನು ಮಹಿಳೆಯರು ನಡೆಸುತ್ತಿದ್ದು, ಇದು ಹೆಚ್ಚಿನ ಲಿಂಗಸಮಾನತೆಯನ್ನು ತರುವ ಅಗತ್ಯವನ್ನು ಎತ್ತಿತೋರಿಸುತ್ತದೆ. ಹೆಣ್ಣುಮಕ್ಕಳು ಹಾಗೂ ಮಹಿಳೆಯರನ್ನು ಆನ್‍ಲೈನ್‍ಗೆ ಕರೆತರುವುದರಿಂದ, ಆರ್ಥಿಕ ಪ್ರಗತಿ ವರ್ಧನೆಯಾಗಿ, ಮಾರುಕಟ್ಟೆಗಳು ವಿಸ್ತಾರಗೊಂಡು, ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಫಲಿತಾಂಶಗಳಲ್ಲಿ ಸುಧಾರಣೆಯಾಗುತ್ತದೆ ಎಂದು ಸಂಶೋಧನೆಗಳು ಹಾಗೂ ಅಧ್ಯಯನಗಳು ತೋರಿಸಿಕೊಟ್ಟಿವೆ. 

Covid 19 Booster ಡೋಸ್‌ ಪಡೆಯದೆ ಕಚೇರಿಗೆ ಮರಳಬೇಡಿ: ಉದ್ಯೋಗಿಗಳಿಗೆ Facebook ತಾಕೀತು!

ಇಂದಿನ ಸದಾ ವಿಕಸನಗೊಳ್ಳುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ, ಬೆಳವಣಿಗೆಯ ವಿವಿಧ ಹಂತಗಳಾದ್ಯಂತ ವ್ಯಾಪಾರ ಹಾಗೂ ಉದ್ಯಮಿಗಳಿಗೆ ತತ್ಸಂಬಂಧಿತವಾದ ಮಾಹಿತಿ ಹಾಗೂ ಸಾಧನಗಳಿಗೆ ಪ್ರವೇಶಾವಕಾಶವಿರುವುದು ಬಹಳ ಮುಖ್ಯವಾಗಿದೆ. ಭಾರತದಲ್ಲಿ, ಫೇಸ್‍ಬುಕ್ ಬಳಸಿಕೊಳ್ಳುತ್ತಿರುವ 52% ಸಣ್ಣ ವ್ಯಾಪಾರಗಳು ಕಳೆದ ತಿಂಗಳಿನಲ್ಲಿ ನಡೆಸಿದ ತಮ್ಮ ಮಾರಾಟದ ಕನಿಷ್ಟ 25%ಅನ್ನು  ಡಿಜಿಟಲ್ ರೂಪದಲ್ಲಿ ಕೈಗೊಂಡಿದ್ದರು. 
ಎಫ್‍ಐಸಿಸಿಐ ಜೊತೆಗೂಡಿ ಮೆಟಾ, ಭಾರತದ ಮಹಿಳಾ ಉದ್ಯಮಿಗಳಿಗೆ ಮೆಟಾದ ಸಾಧನಗಳು, ಕಾರ್ಯಕ್ರಮಗಳು ಹಾಗೂ ಸಂಪನ್ಮೂಲಗಳಿಗೆ ಸುಲಭ ಪ್ರವೇಶಾವಕಾಶ ಒದಗಿಸಿಕೊಡುವ ಮೂಲಕ ಸರಿಯಾದ ಡಿಜಿಟಲ್ ಸಾಧನಗಳು  ಹಾಗೂ ಸಂಪನ್ಮೂಲಗಳಿಗೆ ಪ್ರವೇಶಾವಕಾಶದಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಲಿದೆ. 

Facebook Profile Lock: ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಈ ಸಹಭಾಗಿತ್ವದೊಡನೆ, ಮೆಟಾ, ಮೂರು ಉಪಕ್ರಮಗಳ ಮೂಲಕ ತನ್ನ ಬೆಂಬಲ ಒದಗಿಸಲಿದೆ:

•    ಫೇಸ್‍ಬುಕ್ ವ್ಯಾಪಾರ ತರಬೇತುದಾರ(Facebook Business Coach) – ಇದು, ವಾಟ್ಸಪ್‍ನಲ್ಲಿ ಮೆಟಾದ ಶೈಕ್ಷಣಿಕ ಚಾಟ್‍ಬಾಟ್ ಸಾಧನದ ಮೂಲಕ ಮಹಿಳಾ ಉದ್ಯಮಿಗಳಿಗೆ ಸ್ವಂತ-ಗತಿಯ ಪಾಠಗಳಿಗೆ ಪ್ರವೇಶಾವಕಾಶ ಒದಗಿಸಿಕೊಟ್ಟು ಅವರು ಡಿಜಿಟಲ್ ಅಸ್ತಿತ್ವವನ್ನು ಸ್ಥಾಪಿಸಿ ನಿರ್ವಹಿಸುವ ವಿಧಾನವನ್ನು ಕಲಿಸುತ್ತದೆ. 
•    ನಿಮ್ಮ ವ್ಯಾಪಾರವನ್ನು ಬೆಳೆಸಿಕೊಳ್ಳಿ ಕೇಂದ್ರ(Grow your Business Hub)ವು, ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯಾಪಾರಗಳು ತತ್ಸಂಬಂಧಿತ ಮಾಹಿತಿ, ಸಾಧನಗಳು, ಮತ್ತು  ಸಂಪನ್ಮೂಲಗಳಿಗೆ ಏಕ ನಿಲುಗಡೆ ಆನ್‍ಲೈನ್ ಗಮ್ಯವಾಗಿ ಈ ವ್ಯಾಪಾರಗಳು ತಮ್ಮ ಬೆಳವಣಿಗೆ ಅಗತ್ಯಗಳಿಗೆ ಪೂರಕವಾದ ಸಾಧನಗಳನ್ನು ಹುಡುಕಿಕೊಳ್ಳುವ ಸಾಮರ್ಥ್ಯ ಒದಗಿಸಿಕೊಡುತ್ತದೆ.
•    ಇದಲ್ಲದೆ,  ಮೆಟಾದ ವಾಣಿಜ್ಯ ಭಾಗೀದಾರ ಯೋಜನೆಯು (Commerce Partners Program) ವ್ಯಾಪಾರಗಳು ಡಿಜಿಟಲ್ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು, ನೇರವಾಗಿ ಗ್ರಾಹಕರಲ್ಲಿಗೆ ಹೋಗಲು ಮತ್ತು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ಬೆಳೆಯಲು ನೆರವಾಗುತ್ತದೆ. 

ವಿಶ್ವಾದ್ಯಂತ ಸಾಂಕ್ರಾಮಿಕವು ಸಣ್ಣ ವ್ಯಾಪಾರಗಳಿಗೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದೆ. ಸಂಪನ್ಮೂಲಗಳ ಕೊರತೆಯಿಂದಾಗಿ, ಮಹಿಳಾ ನಿರ್ದೇಶಿತ ವ್ಯಾಪಾರಗಳು ನಿರ್ದಿಷ್ಟವಾಗಿ ಬಾಧಿಸಲ್ಪಟ್ಟಿವೆ. ಸರಿಯಾದ ಸಾಧನಗಳು ಮತ್ತು ಸಂಪನ್ಮೂಲಗಳಿಗೆ ಪ್ರವೇಶಾವಕಾಶ ನೀಡಿ ಬೆಂಬಲಿಸಿದರೆ,  ಈ ಮಹಿಳಾ ನಿರ್ದೇಶಿತ ವ್ಯಾಪಾರಗಳು ಆರ್ಥಿಕವಾಗಿ ಹೆಚ್ಚು ದೃಢವಾದುದನ್ನು ನಾವು ಕಂಡಿದ್ದೇವೆ. ಭಾರತದ ಮಹಿಳಾ ನಿರ್ದೇಶಿತ ವ್ಯಾಪಾರಗಳಿಗೆ ಬೆಂಬಲ ಒದಗಿಸಲು ನಾವು ಎಫ್‍ಐಸಿಸಿಐದೊಂದಿಗೆ  ಸಹಭಾಗಿತ್ವ ಏರ್ಪಡಿಸಿಕೊಂಡು ಬೇರುಮಟ್ಟದಲ್ಲಿರುವ 5 ಲಕ್ಷ ಮಹಿಳೆಯರಿಗೆ ಸೂಕ್ತವಾದ ಡಿಜಿಟಲ್ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಲಿದ್ದೇವೆ. ಗುರುಗ್ರಾಮದ ನಮ್ಮ ಹೊಸ ಕಚೇರಿಯಲ್ಲಿರುವ ನಮ್ಮ ಸೆಂಟರ್ ಫಾರ್ ಫ್ಯುಯೆಲಿಂಗ್ ಇಂಡಿಯಾಸ್ ನ್ಯೂ ಎಕಾನಮಿ(C-FINE) ಮೂಲಕ ಮುಂದಿನ 3 ವರ್ಷಗಳಲ್ಲಿ 1 ಕೋಟಿ ಸಣ್ಣ ವ್ಯಾಪಾರಗಳಿಗೆ ನೆರವಾಗುವ ಬದ್ಧತೆ ಹೊಂದಿದ್ದೇವೆ.”ಎಂದು ಹೇಳಿದರು ಎಂದು ಫೇಸ್‍ಬುಕ್  ಇಂಡಿಯಾದ (ಮೆಟಾ) ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಅಜಿತ್ ಮೋಹನ್ ಹೇಳಿದ್ದಾರೆ.

ಉದ್ಯಮಶೀಲ ಮಹಿಳೆಯರು ಹೆಚ್ಚು ಮೌಲ್ಯಯುತವಾದ ಸಂಪರ್ಕಗಳನ್ನು ಹೊಂದಲು, ಸಲಹೆಗಳನ್ನು ಹಂಚಿಕೊಳ್ಳಲು ಮತ್ತು ಒಟ್ಟಿಗೆ ಮುಂದೆ ಸಾಗಲು ಮೆಟಾ 2016ರಲ್ಲಿ  #SheMeansBusiness ಎಂಬ ಕಾರ್ಯಕ್ರಮ ಸೃಷ್ಟಿಸಿತು. 2016ರಿಂದಲೂ ಮೆಟಾ, ವಿಶ್ವಾದ್ಯಂತದ 38 ಮಾರುಕಟ್ಟೆಗಳಲ್ಲಿ 1.5 ದಶಲಕ್ಷ ಮಹಿಳೆಯರಿಗೆ ತರಬೇತಿ ನೀಡಿದೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ