ಟ್ರಕ್ ಡ್ರೈವರ್ ಈಗ ದೇಶದ ಅತೀ ಶ್ರೀಮಂತ: ಹಣಗಳಿಕೆಗೆ ಇರಲಿಲ್ಲ ಧಾವಂತ!

By Suvarna NewsFirst Published Feb 4, 2020, 3:26 PM IST
Highlights

ಶ್ರೀಮಂತಿಕೆ ಪರಂಪರಾಗತ ಸ್ವತ್ತಲ್ಲ ಎಂಬುದು ದಿಟ|  ಕಷ್ಟಪಟ್ಟು ದುಡಿಯುವ ಛಲವಿದ್ದವನ ಪಾದದಡಿ ಶ್ರೀಮಂತಿಕೆ| ಅಪರೂಪದ ಸಾಧಕರ ಪಟ್ಟಿಗೆ ಸೇರುವ ನ್ಯೂಜಿಲ್ಯಾಂಡ್’ನ ಅತೀ ಶ್ರೀಮಂತ | ಟ್ರಕ್ ಚಾಲಕನಾಗಿ ವೃತ್ತಿ ಬದುಕು ಆರಂಭಿಸಿದ್ದ ಗ್ರಾಯ್ಮೆ ಹಾರ್ಟ್| ಬರೋಬ್ಬರಿ 9.4 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಆಸ್ತಿಯ  ಒಡೆಯ| ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ ಧೂಳಿಪಟ ಮಾಡಿದ ಗ್ರಾಯ್ಮೆ ಹಾರ್ಟ್|  ಐಷಾರಾಮಿ ಬದುಕು ನಡೆಸುವ ಗ್ರಾಯ್ಮೆ ಹಾರ್ಟ್|  00 ಮಿಲಿಯನ್ ಡಾಲರ್ ಮೌಲ್ಯದ ಯುಲಿಸೆಸ್ ವಿಹಾರ ನೌಕೆಯ ಒಡೆಯ|

ವೆಲ್ಲಿಂಗ್ಟನ್(ಫೆ.04): ಹೇಳದೇ ಮಾಡುವವ ಉತ್ತಮ, ಹೇಳಿ ಮಾಡುವವ ಮಧ್ಯಮ, ಹೇಳಿಯೂ ಮಾಡದವ ಅಧಮ ಎನ್ನುತ್ತದೆ ನಮ್ಮ ಜಾನಪದ ಗಾದೆ. ಕೆಲವರು ಗುಪ್ತಗಾಮಿನಿಯಂತೆ ಸಾಧನೆಯ ಶಿಖರವೇರಿದರೆ, ಉಳಿದವರು ಅವರಿವರ ಜೀವನದ ಕುರಿತು ವಿಶ್ಲೇಷಣೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಾರೆ.

ಅಷ್ಟಕ್ಕೂ ಸಾಧಕರೇ ಹಾಗೆ. ಪ್ರಚಾರದಿಂದ ದೂರವಿದ್ದು ಗುಪ್ತಗಾಮಿನಿಯಂತೆ ತಮ್ಮ ಪಾಡಿಗೆ ತಮ್ಮ ಕೈಂಕರ್ಯ ಮಾಡುವ ಮೂಲಕ ಸಾಧನೆಯ ಶಿಖರವೇರುತ್ತಾರೆ. ಇಂತಹ  ಸಾಧಕರನ್ನೇ ಐಶ್ವರ್ಯ, ಅಂತಸ್ತು, ಪ್ರತಿಷ್ಠೆಗಳು ಅರಸಿ ಬರುವುದು.

ರಿಲಯನ್ಸ್ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ ಏರಿಕೆ

ಶ್ರೀಮಂತಿಕೆ ಪರಂಪರಾಗತ ಸ್ವತ್ತಲ್ಲ. ಕಷ್ಟಪಟ್ಟು ದುಡಿಯುವ ಛಲವಿದ್ದವನ ಪಾದದಡಿ ಶ್ರೀಮಂತಿಕೆ ನೆಲೆ ಕಂಡುಕೊಳ್ಳುತ್ತದೆ. ಅಂತಹ ಅಪರೂಪದ ಸಾಧಕರ ಪಟ್ಟಿಗೆ ಸೇರುತ್ತಾರೆ ನ್ಯೂಜಿಲ್ಯಾಂಡ್’ನ ಅತೀ ಶ್ರೀಮಂತ ವ್ಯಕ್ತಿ ಗ್ರಾಯ್ಮೆ ಹಾರ್ಟ್.

ಟ್ರಕ್ ಚಾಲಕನಾಗಿ ವೃತ್ತಿ ಬದುಕು ಆರಂಭಿಸಿದ್ದ ಗ್ರಾಯ್ಮೆ ಹಾರ್ಟ್, ಹಂತ ಹಂತವಾಗಿ ಮೇಲೆರುತ್ತಾ ಇಂದು ನ್ಯೂಜಿಲ್ಯಾಂಡ್’ನ ಆಗರ್ಭ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕುಟುಂಬ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಾಥಮಿಕ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಮೆಕ್ಯಾನಿಕ್ ಕೆಲಸ ಮಾಡಿದ ಗ್ರಾಯ್ಮೆ ಹಾರ್ಟ್, ನಂತರ ಟ್ರಕ್ ಚಾಲಕನಾಗಿ ಹಲವು ವರ್ಷಗಳ ಕಾಲ ದುಡಿದವರು.

ಅಬ್ಬಬ್ಬಾ ಅಂಬಾನಿ: ಇಲ್ಲಿದೆ ಆಸ್ತಿ ಏರಿಕೆಯ ಅಸಲಿ ಕಹಾನಿ!

ಮುಂದೆ ಆರ್ಥಿಕ ಸ್ಥಿತಿ ಸುಧಾರಿಸಿದ ಬಳಿಕ ನ್ಯೂಜಿಲೆಂಡ್‌ನ ಒಟಾಗೊ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದ ಹಾರ್ಟ್, ಷೇರು ಮಾರುಕಟ್ಟೆಯ ವ್ಯಾಪಾರದಲ್ಲಿ ಪಳಗಿ ಅಪಾರ ಹಣ ಗಳಿಸಿದರು.

ಸದ್ಯ ಗ್ರಾಯ್ಮೆ ಹಾರ್ಟ್ ಒಡೆತನದ ಅಲ್ಯೂಮಿನಿಯಂ ಫಾಯಿಲ್ ತಯಾರಕ ಸಂಸ್ಥೆ ರೆನಾಲ್ಡ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಇಂಕ್‌, ನ್ಯೂಜಿಲ್ಯಾಂಡ್ ಷೇರು ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಷೇಋರು ಮೌಲ್ಯ ಹೊಂದಿರುವ ಕಂಪನಿಯಾಗಿ ಹೊರಹೊಮ್ಮಿದೆ. 

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ರೆನಾಲ್ಡ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಇಂಕ್‌ ಷೇರುಗಳು 9.8% ಏರಿಕೆ ಕಂಡು 28.55 ಡಾಲರ್ ಮೌಲ್ಯ ಪಡೆದುಕೊಂಡಿವೆ. ಕಂಪನಿಯ ಹೆಚ್ಚುವರಿ ಷೇರುಗಳ ಮೌಲ್ಯ ಶೇ.3.7ರಷ್ಟು ಏರಿಕೆಯಾಗಿವೆ.

12ನೇ ಬಾರಿಗೆ ಅಂಬಾನಿ ಸಿರಿವಂತ ನಂ.1, ಟಾಪ್‌ 100ರಲ್ಲಿ 7 ಕನ್ನಡಿಗರು!

ರೆನಾಲ್ಡ್ಸ್ ಮತ್ತು ಹೆಫ್ಟಿ ವ್ಯವಹಾರಗಳ ಪ್ರೆಸ್ಟೋ ಬ್ರಾಂಡ್‌ಗಳ ಸಂಯೋಜನೆಯ ಮೂಲಕ, ಇಲಿನಾಯ್ಸ್ ಮೂಲದ ಲೇಕ್ ಫಾರೆಸ್ಟ್ ಕಂಪನಿ ಕೇವಲ 9 ತಿಂಗಳಲ್ಲಿ 1 2.1 ಬಿಲಿಯನ್ ಆದಾಯ ಗಳಿಸಿದೆ. ಒಟ್ಟು 5,135 ಮಿಲಿಯನ್ ನಿವ್ವಳ ಆದಾಯ ಗಳಿಸಿರುವ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. 

ಸದ್ಯ ಬರೋಬ್ಬರಿ 9.4 ಬಿಲಿಯನ್ ಅಮೆರಿಕನ್  ಡಾಲರ್ ಮೌಲ್ಯದ ಆಸ್ತಿಯ ಪಡೆಯರಾಗಿರುವ ಗ್ರಾಯ್ಮೆ ಹಾರ್ಟ್, ಹಣ ಖರ್ಚು ಮಾಡುವಲ್ಲಿ ಹಾಗೂ ಐಷಾರಾಮಿ ಬದುಕು ನಡೆಸುವುದರಲ್ಲಿ ಎತ್ತಿದ ಕೈ.

3.80 ಲಕ್ಷ ಕೋಟಿ ಆಸ್ತಿ: ಮುಕೇಶ್‌ ಭಾರತದ ನಂ.1 ಶ್ರೀಮಂತ!

ಗ್ರಾಯ್ಮೆ ಹಾರ್ಟ್ ಬರೋಬ್ಬರಿ 200 ಮಿಲಿಯನ್ ಡಾಲರ್ ಮೌಲ್ಯದ ಯುಲಿಸೆಸ್ ಎಂಬ ವಿಹಾರ ನೌಕೆಯನ್ನು ಖರೀದಿಸಿದ್ದಾರೆ. ಈ ಹಡಗಿನಲ್ಲಿ ಹೆಲಿಪ್ಯಾಡ್ ಸೇರಿದಂತೆ ಆಧುನಿಕ ಐಷಾರಾಮಿ ವ್ಯವಸ್ಥೆಗಳಿರುವುದು ವಿಶೇಷ.

click me!