ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ನಗದು ಪಾವತಿ ನಿಷಿದ್ಧ!

By Kannadaprabha News  |  First Published Feb 4, 2020, 10:18 AM IST

ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ನಗದು ಪಾವತಿ ನಿಷಿದ್ಧ| 20 ಸಾವಿರ ಇದ್ದ ಮಿತಿಯನ್ನು ಅರ್ಧ ಇಳಿಸಿದ ಕೇಂದ್ರ| ಕಾರ್ಡ್‌, ಯುಪಿಎ, ನೆಟ್‌ ಬ್ಯಾಂಕಿಂಗ್‌ನಲ್ಲಿ ಮಿತಿ ಇಲ್ಲ


ನವದೆಹಲಿ[ಫೆ.04]: ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ದಿನವೊಂದಕ್ಕೆ ನಗದು ರೂಪದಲ್ಲಿ ಪಾವತಿ ಮಾಡಬಹುದಾದ ಮೊತ್ತಕ್ಕೆ ಕೇಂದ್ರ ಸರ್ಕಾರ 10 ಸಾವಿರ ರು. ಮಿತಿ ನಿಗದಿಗೊಳಿಸಿದೆ.

ಆದಾಯ ತೆರಿಗೆ ನಿಯಮ 6ಡಿಡಿ ಅಡಿ ಈವರೆಗೆ ದಿನವೊಂದಕ್ಕೆ ಒಬ್ಬ ವ್ಯಕ್ತಿಗೆ 20 ಸಾವಿರ ರು.ವರೆಗೆ ಹಣವನ್ನು ನಗದು ರೂಪದಲ್ಲಿ ಕೊಡಬಹುದಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಆ ಮಿತಿಯನ್ನು 10 ಸಾವಿರ ರು.ಗೆ ಇಳಿಕೆ ಮಾಡಿದೆ.

Tap to resize

Latest Videos

undefined

ನೋಟ್ ಬ್ಯಾನ್ ವೇಳೆ ಗೋಲ್ಮಾಲ್ ಮಾಡಿದವರಿಗೆ ಕ್ಷಮಾದಾನ: ಕೇಂದ್ರದ ಸ್ಕೀಂ!

ದಿನವೊಂದಕ್ಕೆ ಒಬ್ಬ ವ್ಯಕ್ತಿಗೆ 10 ಸಾವಿರ ರು. ಮೇಲ್ಪಟ್ಟನಗದು ಪಾವತಿ ಮಾಡಬೇಕಾದ ಸಂದರ್ಭ ಹಾಗೂ ಪ್ರಕರಣಗಳಲ್ಲಿ ಅಕೌಂಟ್‌ ಪೇಯಿ ಚೆಕ್‌ ಅಥವಾ ಅಕೌಂಟ್‌ ಪೇಯಿ ಬ್ಯಾಂಕ್‌ ಡ್ರಾಫ್ಟ್‌ ಅಥವಾ ಎಲೆಕ್ಟ್ರಾನಿಕ್‌ ಕ್ಲಿಯರಿಂಗ್‌ ಸಿಸಂ್ಟಅಥವಾ ಇನ್ನಿತರೆ ಎಲೆಕ್ಟ್ರಾನಿಕ್‌ ವಿಧಾನ ಬಳಸಬಹುದು ಎಂದು ತಿದ್ದುಪಡಿಯಾದ ನಿಯಮ ಹೇಳುತ್ತದೆ.

10 ಸಾವಿರ ರು. ಹಣವನ್ನು ಬೇರೊಬ್ಬರಿಗೆ ನಗದುರೂಪದಲ್ಲಿ ಪಾವತಿ ಮಾಡುವುದಕ್ಕೆ ಸರ್ಕಾರ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌, ಐಎಂಪಿಎಸ್‌, ಯುಪಿಐ, ಆರ್‌ಟಿಜಿಎಸ್‌, ಎನ್‌ಇಎಫ್‌ಟಿ, ಭೀಮ್‌ನಂತಹ ಸೌಲಭ್ಯ ಬಳಸಬಹುದಾಗಿದೆ.

ಕೊರೊನಾ ವೈರಸ್ ಬೆನ್ನಲ್ಲೇ ಚೀನಾಗೆ ಮತ್ತೊಂದು ಹೊಡೆತ; ಹೊಂಡಾ ಘಟಕ ಸ್ಥಗಿತ!

click me!