ಆನಂದ್ ಮಹೀಂದ್ರ ಚೇರ್ಮೆನ್ ಆಗಿರುವ ಮಹೀಂದ್ರ ಕಂಪನಿ ಬಗ್ಗೆ ಎಲ್ಲರಿಗೂ ಗೊತ್ತು. ಕಾರು, ಟ್ರಕ್, ಟ್ರಾಕ್ಟರ್ ಸೇರಿ ಹಲವು ವಾಹನಗಳನ್ನು ನೀಡುತ್ತಿದೆ. ಆದರೆ ಮಹೀಂದ್ರ ಕಂಪನಿಯ ಮೊದಲ ಹೆಸರು ಮಹೀಂದ್ರ & ಮೊಹಮ್ಮದ್, ಬಳಿಕ ಮಹೀಂದ್ರ & ಮಹೀಂದ್ರ ಆಗಿ ಬದಲಾಗಿದ್ದು ಹೇಗೆ?
ಮುಂಬೈ(ಏ.03) ಮಹೀಂದ್ರ & ಮಹೀಂದ್ರ ಕಾರು, ಟ್ರಕ್, ಜೀಪ್, ಟ್ರಾಕ್ಟರ್ ಸೇರಿದಂತೆ ಹಲವು ಉತ್ಪನ್ನಗಳಿವೆ. ಸ್ಟೀಲ್ ವ್ಯಾಪಾರದಿಂದ ಆರಂಭಗೊಂಡ ಮಹೀಂದ್ರ ಇದೀಗ ವಿಶ್ವದ ಪ್ರಮುಖ ಹಾಗೂ ನಂಬಿಕಸ್ಥ ಕಂಪನಿಗಳಲ್ಲೊಂದು. ಭಾರತದಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲಿ ಮಹೀಂದ್ರ ಕಂಪನಿಯ ವಾಹನಗಳಿಗೆ ಭಾರಿ ಬೇಡಿಕೆ ಇದೆ. ಭಾರತೀಯ ಸೇನಾ ವಾಹನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹೀಂದ್ರ ತೊಡಗಿಸಿಕೊಂಡಿದೆ. ಮಹೀಂದ್ರ ಕಂಪನಿಯ ಪೂರ್ಣ ಹೆಸರು ಮಹೀಂದ್ರ & ಮಹೀಂದ್ರ. ಹಲವರಿಗೆ ಎರಡೆರಡು ಬಾರಿ ಮಹೀಂದ್ರ ಆ್ಯಂಡ್ ಮಹೀಂದ್ರ ಎಂದು ಹೆಸರು ಯಾಕೆ ಅನ್ನೋ ಪ್ರಶ್ನೆ ಮೂಡಿರುವ ಸಾಧ್ಯತೆ ಇದೆ. ಆದರೆ ಮಹೀಂದ್ರ ಕಂಪನಿಯ ಹುಟ್ಟು, ಆರಂಭ, ಹೆಸರು ಬದಲಾವಣ ಹಾಗೂ ಬೆಳದು ಬಂದ ಪಯಣ ಭಾರಿ ರೋಚ ಹಾಗೂ ಸ್ಪೂರ್ತಿಯುತವಾಗಿದೆ.
ಮಹೀಂದ್ರ & ಮಹೀಂದ್ರ ಕಂಪನಿ ಆರಂಭ
ಮಹೀಂದ್ರ ಕಂಪನಿ ಆರಂಭಗೊಂಡಿದ್ದು ಸ್ವಾತಂತ್ರ್ಯಕ್ಕೂ ಮೊದಲು. ಅಕ್ಟೋಬರ್ 2, 1945 ರಲ್ಲಿ ಕಂಪನಿ ಆರಂಭಗೊಂಡಿದೆ. ಸ್ಟೀಲ್ ಟ್ರೇಡ್ ಮೂಲಕ ಮಹೀಂದ್ರ ಕಂಪನಿ ಆರಂಭಗೊಂಡಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದೆರೆ ಬ್ರಿಟಿಷ್ ಸರ್ಕಾರದ ವೇಳೆ ಮಹೀಂದ್ರ ಕಂಪನಿ ತನ್ನ ವಹಿವಾಟು ಆರಂಭಿಸಿತ್ತು. ಪಂಜಾಬ್‌ನ ಲುಧಿಯಾನದಲ್ಲಿ ಕಚೇರಿ ತೆರೆದು ಕಂಪನಿ ಕಾರ್ಯಾರಂಭಿಸಿತ್ತು.
ಮಹೀಂದ್ರ XUV 700 ಎಬೋನಿ ಎಡಿಶನ್‌ಗೆ ಖುದ್ದು ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್
ಮಹೀಂದ್ರ & ಮೊಹಮ್ಮದ್ ಸೀಕ್ರೆಟ್
ಕೆಸಿ ಮಹೀಂದ್ರ ಹಾಗೂ ಜೆಸಿ ಮಹೀಂದ್ರ ಈ ಕಂಪನಿ ಆರಂಭಿಸಿದ್ದರು. ಈ ವೇಳೆ ಈ ಸಹೋದರರಿಗೆ ಪಾಕಿಸ್ತಾನದ ಉದ್ಯಮಿ ಗುಲಾಮ್ ಮೊಹಮ್ಮದ್ ಪಾರ್ಟ್ನರ್ ಆಗಿದ್ದರು. ಆದರೆ ಈ ಕಂಪನಿಯಲ್ಲಿ ಗುಲಾಮ್ ಮೊಹಮ್ಮದ್ ಪಾಲು ಅತೀ ಕಡಿಮೆ ಇತ್ತು. ಬಹುತೇಕ ಪಾಲು ಕೆಸಿ ಮಹೀಂದ್ರ ಹಾಗೂ ಜೆಸಿ ಮಹೀಂದ್ರ ಬಳಿ ಇತ್ತು. ಆದರೆ ಗುಲಾಮ್ ಮೊಹಮ್ಮದ್ ತಮ್ಮ ಮೇಲಿನ ವಿಶ್ವಾಸದಿಂದ ಉದ್ಯಮದಲ್ಲಿ ಕೈಜೋಡಿಸಿದ್ದಾರೆ. ಕಂಪನಿಯಲ್ಲಿ ಪ್ರಮುಖ ಪಾಲು ಇಲ್ಲದಿದ್ದರೂ ಕಂಪನಿ ಹೆಸರಿನಲ್ಲಿ ಮೊಹಮ್ಮದ್ ಹೆಸರು ಸೇರಿಸಲು ನಿರ್ಧರಿಸಲಾಗಿತ್ತು. ಹೀಗಾಗಿ ಮಹೀಂದ್ರ & ಮೊಹಮ್ಮದ್ ಎಂಬ ಹೆಸರಿನೊಂದಿಗೆ ಕಂಪನಿ ಆರಂಭಗೊಂಡಿತು.
ದೇಶ ವಿಭಜನೆಯಿಂದ ಸಂಕಷ್ಟ
1947ರಲ್ಲಿ ಭಾರತ ಸ್ವಾತಂತ್ರ್ಯಗೊಂಡಿತು. ಅದೇ ವೇಳೆ ನಡೆದ ಕರಾಳ ಘಟನೆ ದೇಶ ವಿಭಜನೆ. ಮುಸ್ಲಿಮರು ತಮ್ಮ ಮತದ ಆಧಾರದ ಮೇಲೆ ಪಾಕಿಸ್ತಾನ ಪ್ರತ್ಯೇಕತೆ ಕಹಳೆ ಮೊಳಗಿಸಿ ದೇಶ ವಿಭಜನೆ ಮಾಡಲಾಯಿತು. ಈ ವೇಳೆ ಮಹೀಂದ್ರ ಕಂಪನಿಯ ಪಾರ್ಟ್ನರ್ ಗುಲಾಮ್ ಮೊಹಮ್ಮದ್ ಪಾಕಿಸ್ತಾನಕ್ಕೆ ತೆರಳಿದರು. ಬಳಿಕ ಪಾಕಿಸ್ತಾನದ ಮೊದಲ ಹಣಕಾಸು ಸಚಿವರಾದರು. ಬಳಿಕ ಪಾಕಿಸ್ತಾನದ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಪಾರ್ಟ್ನರ್ ಇಲ್ಲದೆ ಹೆಸರು ಬದಲಾವಣೆ
ಮಹೀಂದ್ರ & ಮೊಹಮ್ಮದ್ ಕಂಪನಿಯ ಪಾರ್ಟ್ನರ್ ಪಾಕಿಸ್ತಾನಕ್ಕೆ ಹೊರಟು ಹೋದ ಬಳಿಕ ಹೆಸರು ಬದಲಾಯಿಸಲು ಕೆಸಿ ಮಹೀಂದ್ರ ಹಾಗೂ ಜೆಸಿ ಮಹೀಂದ್ರ ನಿರ್ಧರಿಸಿದರು. ಕಂಪನಿಯಲ್ಲಿ ಇಬ್ಬರು ಪಾಲುದಾರರಾಗಿದ್ದ ಹೆಸರು ಬದಲಾಯಿಸಲು ಮುಂದಾಗಿದ್ದಾರೆ. ಈ ವೇಳೆ ಪ್ರಮುಖ ಸಮಸ್ಯೆಯೊಂದು ಎದುರಾಗಿತ್ತು. ಮಹೀಂದ್ರ ಆ್ಯಂಡ್ ಮೊಹಮ್ಮದ್ ಕಂಪನಿಯ ಲೆಟರ್‌ಹೆಡ್, ಸೀಲ್, ಸೈನ್ ಪೇಪರ್, ಬಿಲ್ ಇನ್‌ವಾಯ್ಸ್ ಎಲ್ಲವೂ ಬದಲಾಗಬೇಕಿತ್ತು. ಅಂದಿನ ಕಾಲದಲ್ಲಿ ಇವೆಲ್ಲೂ ದುಬಾರಿ ಖರ್ಚು ವೆಚ್ಚವಾಗಿತ್ತು. ಕಂಪನಿಯ ಎಲ್ಲಾ ಕಡೆ ಶಾರ್ಟ್ ಆಗಿ ಎಂ ಆ್ಯಂಡ್ ಎಂ ಎಂದು ಬಳಸಿತ್ತು. ಸೀಲ್,ಲೆಟರ್‌ಹೆಡ್, ಇನ್‌ವಾಯ್ಸ್ ಸೇರಿದಂತೆ ಎಲ್ಲದರಲ್ಲೂ M&M ಎಂದು ಉಲ್ಲೇಖಿಸಲಾಗಿತ್ತು.
ಹೀಗಾಗಿ ಎಂ ಆ್ಯಂಡ್ ಎಂ ಬದಲಾವಣೆ ಮಾಡದಂತೆ ಮಹೀಂದ್ರ ಆ್ಯಂಡ್ ಮಹೀಂದ್ರ ಎಂದು ಹೆಸರು ಬದಲಾಯಿಸಲಾಗಿತ್ತು. ಇದರಿಂದ ಕಂಪನಿಗೆ ಹೆಚ್ಚಿನ ಹೊರ ಬೀಳದಂತೆ ನೋಡಿಕೊಳ್ಳಲಾಗಿತ್ತು. ಇದೀಗ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಭಾರತದ ಅತೀ ದೊಡ್ಡ ಹಾಗೂ ವಿಶ್ವಾಸಾರ್ಹ ಕಂಪನಿಯಾಗಿ ಬೆಳೆದು ನಿಂತಿದೆ.
ಕೋಲ್ಕತಾದಿಂದ ಚೆನ್ನೈ ಪ್ರಯಾಣ ಕೇವಲ 3 ಗಂಟೆ, 600 ರೂ, ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್