ರತನ್ ಟಾಟಾ ಬಿಟ್ಟು ಹೋದ ಆಸ್ತಿ ಹಂಚಿಕೆಯ ವಿವರಗಳು ಈಗಾಗಲೇ ಬಹಿರಂಗವಾಗಿದೆ. ಈ ಪೈಕ ರತನ್ ಟಾಟಾ ಬಳಿ ಇದ್ದ ವಸ್ತುಗಳೇನು ಅನ್ನೋದು ಬಹಿರಂಗವಾಗಿದೆ. 3,800 ಕೋಟಿ ಆಸ್ತಿಯ ರತನ್ ಟಾಟಾ ಬಳಸುತ್ತಿದ್ದದ್ದು ಕೇವಲ 1 ಮೊಬೈಲ್ ಮಾತ್ರ. ಇನ್ನು 34 ವಾಚ್ ಸೇರಿದಂತೆ ಕೆಲ ಸೀಕ್ರೆಟ್ ವೆಪನ್ ಕೂಡ ರತನ್ ಟಾಟಾ ಬಳಿ ಇತ್ತು.
ಮುಂಬೈ(ಏ.03) ರತನ್ ಟಾಟಾ ನಿಧನರಾಗಿ ಹಲವು ತಿಂಗಳಾಗಿದೆ. ಇದೀಗ ರತನ್ ಟಾಟಾ ವಿಲ್ ಪ್ರಕಾರ ಆಸ್ತಿಗಳು ಹಂಚಿಕೆಯಾಗಿದೆ. 3,800 ಕೋಟಿ ರೂಪಾಯಿ ಆಸ್ತಿಯನ್ನು ಹಲವರಿಗೆ ಹಂಚಲಾಗಿದೆ. ವಿಶೇಷ ಅಂದರೆ ರತನ್ ಟಾಟಾ ಶ್ರೀಮಂತಿಕೆ ಬಿಡಿಸಿ ಹೇಳಬೇಕಿಲ್ಲ. ಅವರ ಸಾಮಾಜಿಕ ಕಾರ್ಯಗಳಿಗೆ ಪ್ರಚಾರ ಬೇಕಿಲ್ಲ. ಸಾವಿರಾರು ಕೋಟಿ ರೂಪಾಯಿ ಒಡೆಯ ರತನ್ ಟಾಟಾ ಅತ್ಯಂತ ಸರಳ ವ್ಯಕ್ತಿ. ದೇಶ ವಿದೇಶಗಳಲ್ಲಿ ರತನ್ ಟಾಟಾ ಎಂದರೆ ಗೌರವ, ಪ್ರೀತಿ. ಅದೆಷ್ಟೇ ಶ್ರೀಮಂತನಾಗಿದ್ದರೂ ರತನ್ ಟಾಟಾ ಅವರದ್ದು ಸರಳ ಬದುಕು. ಇವರು ಬಿಟ್ಟು ಹೋದ ಅಮೂಲ್ಯ ವಸ್ತುಗಳು ಇದೀಗ ಅಚ್ಚರಿ ತರಿಸಿದೆ. ಕಾರಣ ರತನ್ ಟಾಟಾ ಬಳಸುತ್ತಿದ್ದದ್ದು ಕೇವಲ ಒಂದು ಮೊಬೈಲ್ ಮಾತ್ರ. ಇನ್ನು ಹಲವು ವಿಶೇಷ ವಾಚ್‌ಗಳನ್ನು ರತನ್ ಟಾಟಾ ಖರೀದಿಸಿದ್ದರು. ರತನ್ ಟಾಟಾ ಬಳಿ ಒಟ್ಟು 34 ವಾಚ್‌ಗಳಿತ್ತು. ಇದರ ಜೊತೆಗೆ ಸೀಕ್ರೆಟ್ ವೆಪನ್ ಕೂಡ ರತನ್ ಟಾಟಾ ಬಳಿ ಇತ್ತು.
ರತನ್ ಟಾಟಾ ಬಿಟ್ಟು ಹೋದ ಪ್ರತಿಯೊಂದು ವಸ್ತುಗಳನ್ನು ರತನ್ ಟಾಟಾ ಅಚ್ಚುಕಟ್ಟಾಗಿ ವಿಲ್ ಮೂಲಕ ಯಾರು ಬಳಸಬೇಕು, ಯಾರು ಇದರ ಹಕ್ಕುದಾರರು ಎಂದು ಬರೆದಿದ್ದಾರೆ. ತಮ್ಮ ಎಲ್ಲಾ ವಹಿವಾಟುಗಳನ್ನು, ಉದ್ಯಮದ ಆಡಳಿತವನ್ನು, ಟ್ರಸ್ಟ್‌ನ ಮುಖ್ಯಸ್ಥನಾಗಿ ಸಾಮಾಜಿಕ ಕಾರ್ಯಗಳನ್ನು ಕೇವಲ ಒಂದು ಮೊಬೈಲ್ ಮೂಲಕ ನಿಯಂತ್ರಿಸುತ್ತಿದ್ದರು. ರತನ್ ಟಾಟಾ ಹೆಚ್ಚಾಗಿ ಫೋನ್ ಬಳಸುತ್ತಿರಲಿಲ್ಲ. ಯಾರ ಜೊತೆಗೆ ಮಾತನಾಡಲು ಇದ್ದರೆ, ಸೂಚನೆ ನೀಡಲು, ಅಥವ ಇತರ ಏನೇ ಅವಶ್ಯಕತೆ ಇದ್ದರೂ ಮುಖತಃ ಭೇಟಿಯಾಗುತ್ತಿದ್ದರು. ಆದರೆ ನಿಧನಕ್ಕೂ ಮೊದಲಿನ ಕೆಲ ತಿಂಗಳು ವಯಸ್ಸು ಹಾಗೂ ಆರೋಗ್ಯದ ಕಾರಣದಿಂದ ರತನ್ ಟಾಟಾ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದರು.
ರತನ್ ಟಾಟಾ ಮುದ್ದಿನ ನಾಯಿ ಖರ್ಚಿಗೆ ಲಕ್ಷ ಲಕ್ಷ ರೂ, ವಿಲ್‌ನಲ್ಲಿ ಹೃದಯಶ್ರೀಮಂತಿಗೆ ಮೆರೆದ ಉದ್ಯಮಿ
34 ದುಬಾರಿ ವಾಚ್
ರತನ್ ಟಾಟಾಗೆ ವಿಶೇಷ ಏನಿಸಿದ ವಾಚ್‌ಗಳನ್ನು ಖರೀದಿಸಿದ್ದರು. ಈ ಪೈಕಿ ಕೆಲ ವಾಚ್‌ಗಳು ಉಡುಗೊರೆಯಾಗಿಯೂ ಸಿಕ್ಕಿದೆ. ಇದರಲ್ಲಿ ತಮ್ಮದೇ ಟಾಟಾ ಗ್ರೂಪ್ ಅಂಗ ಸಂಸ್ಥೆಯಾಗಿರುವ ಟೈಟಾನ್ ವಾಚ್ ಬ್ರ್ಯಾಂಡ್‌ನ ಹಲವು ದುಬಾರಿ ವಾಚ್‌ಗಳಿವೆ. ತಾಜ್ ಮಹಲ್ ಪ್ಯಾಲೆಸ್ ಸ್ಪೆಷಲ್ ಬ್ರ್ಯಾಂಡ್ ವಾಚ್ ಕೂಡ ಸೇರಿದೆ.
ಮೂರು ಪಿಸ್ತೂಲ್
ಮೊಬೈಲ್ ಫೋನ್, ವಾಚ್ ಜೊತೆಗೆ ರತನ್ ಟಾಟಾ ಬಳಿ ಮೂರು ಲೈಸೆನ್ಸ್ ಪಿಸ್ತೂಲ್‌ಗಳಿತ್ತು. ಮುಂಬೈ ಪೊಲೀಸ್ ಇಲಾಖೆಯಿಂದ ಈ ರಿವಾಲ್ವರ್‌ಗೆ ಲೈಸೆನ್ಸ್ ಪಡೆದುಕೊಂಡಿದ್ದರು. ಮೂರು ಪಿಸ್ತೂಲ್ ದುಬಾರಿ ಮೌಲ್ಯದಾಗಿತ್ತು.
ರತನ್ ಟಾಟಾ ಆಸ್ತಿಯ ಬಹುಪಾಲನ್ನು ರತನ್ ಟಾಟಾ ಎಂಡೋಮೆಂಟ್ ಟ್ರಸ್ಟ್ ಹಾಗೂ ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ ಎಂಬ ಎರಡು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಹಂಚಿದ್ದಾರೆ.
ರತನ್ ಟಾಟಾ ಅಕ್ಟೋಬರ್ 9, 2024ರಂದು ನಿಧನರಾಗಿದ್ದಾರೆ. ರತನ್ ಟಾಟಾ ನಿಧನಕ್ಕೆ ದೇಶ ಕಂಬನಿ ಮಿಡಿದಿತ್ತು. ವಿಶ್ವವೇ ರತನ್ ಟಾಟಾಗೆ ಗೌರವ ನಮನ ಸಲ್ಲಿಸಿತ್ತು. ಭಾರತದಲ್ಲಿ ಕೈಗಾರಿಕೆ, ಆಟೋಮೊಬೈಲ್, ಸಾಫ್ಟ್‌ವೇರ್, ತಂತ್ರಜ್ಞಾನ, ಹೊಟೆಲ್ ಸೇರಿದಂತೆ ಹಲವು ಉದ್ಯಮಗಳಲ್ಲಿ ರತನ್ ಟಾಟಾ ತೊಡಗಿಸಿಕೊಂಡಿದ್ದರು. ದೇಶದಲ್ಲಿ ಅತೀ ದೊಡ್ಡ ಸಂಸ್ಥೆಯನ್ನು ಕಟ್ಟಿದ್ದು ಮಾತ್ರವಲ್ಲ, ಹೆಮ್ಮೆಯ ಸಂಸ್ಥೆಯನ್ನಾಗಿಸಿದ ಕೀರ್ತಿ ಕೂಡ ರತನ್ ಟಾಟಾಗೆ ಸಲ್ಲಲಿದೆ. ತಮ್ಮ ಆದರ್ಶ ವ್ಯಕ್ತಿತ್ವ ಸೇರಿದಂತೆ ಹಲವು ಕಾರಣಗಳಿಂದ ರತನ ಟಾಟಾ ಮಾದರಿಯಾಗಿದ್ದಾರೆ. ರತನ್ ಟಾಟಾಗೆ ಪ್ರಾಣಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ನಾಯಿಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರ ಆರೈಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು.
ರತನ್ ಟಾಟಾ ಬಿಟ್ಟು ಹೋದ 3800 ಕೋಟಿ ರೂ ಆಸ್ತಿ ಹಂಚಿಕೆ ವಿಲ್ ಬಹಿರಂಗ, ಯಾರಿಗೆ ಎಷ್ಟೆಷ್ಟು?