Repo Rate Hike:ಮಿತಿ ಮೀರಿದ ಹಣದುಬ್ಬರಕ್ಕೆ RBI ಕಡಿವಾಣ; ರೆಪೋ ದರ ಏರಿಕೆ; ಹೆಚ್ಚಲಿದೆ ಸಾಲದ ಬಡ್ಡಿದರ

By Suvarna News  |  First Published May 4, 2022, 5:39 PM IST

*ಹಣದುಬ್ಬರ ಏರಿಕೆ ಹಿನ್ನೆಲೆ ತುರ್ತುಸಭೆ ನಡೆಸಿದ RBI
*ರೆಪೋದರ 40 ಮೂಲ ಅಂಕಗಳಷ್ಟು ಏರಿಕೆ 
*ಏರಿಕೆಯಾದ  ರೆಪೋ ದರವು ತಕ್ಷಣದಿಂದಲೇ ಜಾರಿಗೆ


ಮುಂಬೈ (ಮೇ 4): ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ  ನಡೆಸಿದ ತುರ್ತು ಸಭೆಯಲ್ಲಿ ರೆಪೋ ದರವನ್ನು ( repo rate) 40 ಮೂಲ ಅಂಕಗಳಷ್ಟು (40 basis points) ಹೆಚ್ಚಿಸಲು ಹಣಕಾಸು ನೀತಿ ಸಮಿತಿ (MPC) ಅವಿರೋಧವಾಗಿ ಒಪ್ಪಿಗೆ ನೀಡಿದೆ  ಎಂದು ಆರ್ ಬಿಐ (RBI) ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ (ಮೇ 4) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ನಗದು 

ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್ ಬಿಐ ರೆಪೋ ದರವನ್ನು 40 ಮೂಲ ಅಂಕಗಳಷ್ಟು ಏರಿಕೆ ಮಾಡುವ ಮೂಲಕ ಈ ಹಿಂದಿನ ಶೇ.4ರಿಂದ ಶೇ.4.40ಕ್ಕೆ ಏರಿಕೆ ಮಾಡಿದೆ.  ಈ ಹಿಂದೆ 2020ರ ಮೇನಲ್ಲಿ ಕೊನೆಯದಾಗಿ ರೆಪೋ ದರದಲ್ಲಿ ಬದಲಾವಣೆ ಮಾಡಲಾಗಿತ್ತು. ಈ ರೆಪೋ ದರವು ತಕ್ಷಣದಿಂದಲೇ ಜಾರಿಗೆ ಬರಲಿದೆ.  ಹಾಗೆಯೇ ನಗದು ಮೀಸಲು ಅನುಪಾತವನ್ನು (Cash Reserve Ratio) 50 ಬೇಸಿಸ್ ಪಾಯಿಂಟ್ ಗಳಷ್ಟು ಏರಿಕೆ ಮಾಡುವ ಮೂಲಕ ಶೇ.4.50 ಕ್ಕೆ ನಿಗದಿಪಡಿಸಲಾಗಿದೆ. ಈ ಸಿಆರ್ ಆರ್ (CRR) ಏರಿಕೆ ಮೇ 21ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ನಗದು ಮೀಸಲು ಅನುಪಾತ ಅಥವಾ ಸಿಆರ್ ಆರ್ (CRR) ಅಂದ್ರೆ ಬ್ಯಾಂಕುಗಳು
ಆರ್ ಬಿಐನಲ್ಲಿರಿಸುವ ಠೇವಣಿ ಮೊತ್ತ. ರೆಪೋ ದರದ ಜೊತೆಗೆ ಸಿಆರ್ ಆರ್ ಕೂಡ ಹೆಚ್ಚಳ ಮಾಡಿರುವುದರಿಂದ ಸಹಜವಾಗಿಯೇ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿವೆ.  

Tap to resize

Latest Videos

Fixed Deposits:ವಿವಿಧ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಬಡ್ಡಿದರ ಎಷ್ಟಿದೆ? ಯಾವ ಬ್ಯಾಂಕಿನಲ್ಲಿ FD ಖಾತೆ ತೆರೆಯೋದು ಬೆಸ್ಟ್?

ಭಾರತದಲ್ಲಿ ಆಹಾರ ಪದಾರ್ಥಗಳ (Food items) ಬೆಲೆ (Price) ಹೆಚ್ಚಳದ ಪರಿಣಾಮ ಚಿಲ್ಲರೆ (Retail) ಹಣದುಬ್ಬರ (Inflation) ಮಾರ್ಚ್ ನಲ್ಲಿ 17 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ್ದು,  ಶೇ.6.95ಕ್ಕೆ ಏರಿಕೆಯಾಗಿದೆ.  ಇದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರೋ ಗರಿಷ್ಠ ಸಹನಾ ಮಟ್ಟಕ್ಕಿಂತ (Tolerance level) ಸಾಕಷ್ಟು ಹೆಚ್ಚಿದೆ.  ಸತತ ಮೂರು ತಿಂಗಳಿಂದ ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಹಣದುಬ್ಬರ (Inflation) ಗರಿಷ್ಠ ಮಿತಿ ಶೇ.6ಕ್ಕಿಂತ ಹೆಚ್ಚಿನ ಮಟ್ಟ ತಲುಪಿದೆ.  ಈ ಹಿನ್ನೆಲೆಯಲ್ಲಿ ಆರ್ ಬಿಐ ತುರ್ತು ಸಭೆ ನಡೆಸಿ ರೆಪೋ ದರ ಏರಿಕೆಯ ತೀರ್ಮಾನ ಕೈಗೊಂಡಿದೆ. 

ರೆಪೋ ದರ ಅಂದ್ರೇನು? 
ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಪಡೆಯೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವೇ ರೆಪೋ ದರ. ಆರ್ ಬಿಐ ನಿರ್ದಿಷ್ಟ ದರದಲ್ಲಿ ಈ ಬ್ಯಾಂಕುಗಳಿಗೆ ಸಾಲ ನೀಡುತ್ತದೆ.ರೆಪೋ ದರ  ದೇಶದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ಆರ್ ಬಿಐ ಬಳಸುವ ಅತೀಮುಖ್ಯ ಸಾಧನವಾಗಿದೆ. ಉದಾಹರಣೆಗೆ ಆರ್ ಬಿಐ ರೆಪೋ ದರ ಇಳಿಕೆ ಮಾಡಿದ್ರೆ ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತವೆ. ಇದ್ರಿಂದ ಆರ್ಥಿಕತೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಅದೇ ರೆಪೋ ದರದಲ್ಲಿ ಏರಿಕೆ ಮಾಡಿದ್ರೆ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಹೀಗಾಗಿ ಹಣದುಬ್ಬರ ಏರಿಕೆಯಾಗಿರುವ ಸಮಯದಲ್ಲಿ ಆರ್ ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ, ಇದ್ರಿಂದ ಸಹಜವಾಗಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತವೆ. ಇದ್ರಿಂದ ಆರ್ಥಿಕತೆಗೆ ಹಣದ ಹರಿವು ತಗ್ಗುತ್ತದೆ. ಆ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಸರಳವಾಗಿ ಹೇಳಬೇಕೆಂದ್ರೆ ರೆಪೋ ದರ ಹೆಚ್ಚಳವಾದ್ರೆ ಹಣದುಬ್ಬರ ತಗ್ಗುತ್ತದೆ. ಅದೇ ರೆಪೋ ದರ ಇಳಿಕೆಯಾದ್ರೆ ಹಣದುಬ್ಬರ ಏರಿಕೆಯಾಗುತ್ತದೆ. 

Financial Changes In May:ಯುಪಿಐ ಪಾವತಿ ಮಿತಿ ಹೆಚ್ಚಳ; ಗೃಹಸಾಲದ ಬಡ್ಡಿ ಏರಿಕೆ; ಮೇಯಲ್ಲಿನ ಬದಲಾವಣೆಗಳ ಪಟ್ಟಿ ಇಲ್ಲಿದೆ

ಸಾಲಗಳ ಬಡ್ಡಿದರ ಹೆಚ್ಚಳ
ರೆಪೋ ದರ ಏರಿಕೆಯಿಂದ ಬ್ಯಾಂಕುಗಳು ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿವೆ. ಹೀಗಾಗಿ  ಗೃಹಸಾಲಗಳು , ವಾಹನಸಾಲಗಳು ಸೇರಿದಂತೆ ಎಲ್ಲ ವಿಧದ ಸಾಲಗಳ ಬಡ್ಡಿದರ ಹೆಚ್ಚಳವಾಗಲಿದೆ. ಪ್ರಸ್ತುತ  ಬ್ಯಾಂಕುಗಳು ಕಡಿಮೆ ಬಡ್ಡಿದರಕ್ಕೆ ಗೃಹಸಾಲ ನೀಡುತ್ತಿದ್ದವು, ಆದ್ರೆ ರೆಪೋ ದರ ಹೆಚ್ಚಳದಿಂದ ಬಡ್ಡಿದರದಲ್ಲಿ ಏರಿಕೆಯಾಗಲಿದೆ.  
 

click me!