Bengaluru: ಮನೆಯಲ್ಲಿ ಕೆಲ್ಸ ಮಾಡೋದು ಕಷ್ಟವೇ? ಕಡಿಮೆ ಬಾಡಿಗೆಗೆ ಸಿಗ್ತಿದೆ ಸ್ಟಡಿ ರೂಮ್

By Suvarna NewsFirst Published Nov 9, 2023, 1:13 PM IST
Highlights

ಬೆಂಗಳೂರು ಬೆಳೆಯುತ್ತಿದೆ. ದಿನ ದಿನಕ್ಕೂ ಇಲ್ಲಿಗೆ ಉದ್ಯೋಗ, ವಿದ್ಯಾಭ್ಯಾಸಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಒಂದೆಡೆ ಕುಳಿತು ಶಾಂತವಾಗಿ ಓದುವ ಅಥವಾ ಕೆಲಸ ಮಾಡಲು ಬಯಸುವ ಜನರಿಗಾಗಿ ಬೆಂಗಳೂರಿನಲ್ಲೊಂದು ವಿಶೇಷ ಕೊಠಡಿ ಸಿದ್ಧವಾಗಿದೆ. ಅದ್ರ ಮಾಹಿತಿ ಇಲ್ಲಿದೆ. 
 

ವರ್ಕ್ ಫ್ರಂ ಹೋಮ್ ಟ್ರೆಂಡ್ ಈಗ ಹೆಚ್ಚಿದೆ. ಅನೇಕ ಕಂಪನಿಗಳು ಪರ್ಮನೆಂಟ್ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನು ನೀಡಿವೆ. ಇದು ಕಂಪನಿ ಖರ್ಚನ್ನು ಕಡಿಮೆ ಮಾಡ್ಬಹುದು. ಆದ್ರೆ ಮನೆಯಲ್ಲಿ ಕೆಲಸ ಮಾಡುವ ಜನರು ಕೆಲವೊಂದು ಸಮಸ್ಯೆ ಎದುರಿಸುತ್ತಾರೆ. ಎಲ್ಲರ ಮನೆಯಲ್ಲಿ ಕೆಲಸ ಮಾಡಲು ಪ್ರತ್ಯೇಕ ಕೊಠಡಿ ಇರೋದಿಲ್ಲ. ಮನೆಯಲ್ಲಿ ಕಚೇರಿ ಕಾಲ್, ಮೀಟಿಂಗ್ ವೇಳೆ ಮನೆ ಮಂದಿ ಗಲಾಟೆ ಮಾಡುವ ಹಾಗಿಲ್ಲ. ಮಕ್ಕಳಿದ್ರೆ ಅವರನ್ನು ಒಂದ್ಕಡೆ ಕೂಡಿಹಾಕಿ ಕೆಲಸ ಮಾಡೋದು ಕಷ್ಟ. ಇನ್ನು ಕೆಲವು ಬಾರಿ ಕಂಪನಿಯ ಕೆಲ ಸಿಬ್ಬಂದಿ ಕೂಡಿ ಕೆಲಸ ಮಾಡುವ ಸ್ಥಿತಿ ಇರುತ್ತದೆ. ಆಗ ಎಲ್ಲಿ ಸೇರೋದು ಎನ್ನುವ ಪ್ರಶ್ನೆ ಮೂಡುತ್ತದೆ. ವರ್ಕ್ ಫ್ರಂ ಹೋಮ್ ಮಾಡುವವರ ಸಮಸ್ಯೆ ಇದಾದ್ರೆ ಇನ್ನು ಓದುವವರ ಸಮಸ್ಯೆ ಮತ್ತಷ್ಟು ದೊಡ್ಡದು. 

ಯುಪಿಎಸ್ಸಿ (UPSC), ಸಿಎ ಸೇರಿದಂತೆ ಮಹತ್ವದ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿ (Student) ಗಳಿಗೆ ಮನೆಯಲ್ಲಿ ಓದಿಕೊಳ್ಳೋದು ಕಷ್ಟದ ಕೆಲಸ. ಪಾರ್ಕ್, ಗ್ರಂಥಾಲಯಗಳು ಕೂಡ ಎಲ್ಲ ಸಮಯದಲ್ಲಿ ಅನುಕೂಲವಾಗಿರೋದಿಲ್ಲ. ಇದ್ರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಾರೆ. ಗ್ರುಪ್ ಸ್ಟಡಿ ಟೈಂನಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಓದೋದು ಎಲ್ಲಿ ಎಂಬ ಪ್ರಶ್ನೆ ಬರುತ್ತದೆ. ಉದ್ಯೋಗಿ (Employee) ಗಳು ಹಾಗೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಅರಿತಿರುವ ಬೆಂಗಳೂರು ಕಂಪನಿಯೊಂದು ಅವರಿಗೆ ವಿಶೇಷ ಸೌಲಭ್ಯ ಒದಗಿಸುತ್ತಿದೆ. 

ಬಂಗಾರ ಕೊಳ್ಳೋರು ಗಮನಿಸಿ; 2019ರ ದೀಪಾವಳಿಗೆ ಚಿನ್ನ ಖರೀದಿಸಿದವರಿಗೆ ಮೂರೇ ವರ್ಷದಲ್ಲಿ ಸಿಕ್ತು ಶೇ.60 ರಿಟರ್ನ್ಸ್

ಇರಾ (Ira) ಸ್ಟಡಿ ರೂಮ್ : ಇರಾ, ವಿದ್ಯಾರ್ಥಿಗಳಿಗಾಗಿ ಸ್ಟಡಿ ರೂಮ್ (Study Room ) ಮತ್ತು ಕೋ-ವರ್ಕ್ ಸೌಲಭ್ಯವನ್ನು ನೀಡ್ತಿದೆ. ಯುಪಿಎಸ್ಸಿ, ವೈದ್ಯಕೀಯ, ಸಿಎ, ಬ್ಯಾಂಕಿಂಗ್ ಪರೀಕ್ಷೆಗಳು ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಮತ್ತು ದೀರ್ಘ ಗಂಟೆಗಳ ಕಾಲ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ನೆರವಾಗುವ ಸ್ಥಳಾವಕಾಶವನ್ನು ಇರಾ ಒದಗಿಸುತ್ತಿದೆ. ವಿದ್ಯಾರ್ಥಿಗಳಿಗೆ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಮನೆಯಲ್ಲಿ ಓದೋದು ಕಷ್ಟ ಎನ್ನುವ ವಿದ್ಯಾರ್ಥಿಗಳು ಇಲ್ಲಿಗೆ ಬಂದು ತಮ್ಮ ಅಧ್ಯಯನ ಮುಂದುವರೆಸಬಹುದು. 

ಭಾರತದ AI ಜರ್ನಿ: ನೀತಿ, ನಿರೀಕ್ಷೆ ಮತ್ತು ಭವಿಷ್ಯದ ಹಾದಿ ಹೀಗಿದೆ..

ಇರಾ ಅಧ್ಯಯನ ಕೊಠಡಿಯಲ್ಲಿ ಏನೆಲ್ಲ ಸೌಲಭ್ಯವಿದೆ? : ಅಧ್ಯಯನ ಕೊಠಡಿಯಲ್ಲಿ ವಿಸ್ಯಾರ್ಥಿಗಳು, ಉದ್ಯೋಗಸ್ಥರಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ನೀಡಲಾಗಿದೆ. ಸ್ಟಾರ್ಟಪ್ ಡೆಸ್ಕ್‌ಗಳು, ಹೈ-ಸ್ಪೀಡ್ ವೈಫೈ, 365 ದಿನಗಳ ಎಕ್ಸೆಸ್, ಪ್ರಿಂಟರ್, ರೈಟಿಂಗ್ ಬೋರ್ಡ್, ಪಿನ್ ಅಪ್ ಬೋರ್ಡ್, ಕೆಫೆಟೇರಿಯಾ, ವಾಟರ್ ಡಿಸ್ಪೆನ್ಸರ್ ಇಲ್ಲಿದೆ.  ಇಲ್ಲಿನ ಇನ್ನೊಂದು ವಿಶೇಷವೆಂದ್ರೆ ಲಾಕರ್‌. ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ವಿಶೇಷ ಲಾಗರ್ ಸೌಲಭ್ಯವಿದ್ದು, ಅಗತ್ಯ ವಸ್ತುಗಳನ್ನು ಅಲ್ಲಿ ಇಡಬಹುದು. ಗ್ರೂಪ್ ಸ್ಟಡಿ ಮಾಡುವ ವಿದ್ಯಾರ್ಥಿಗಳಿಗೆ ಈ ಜಾಗ ಬಹಳ ಇಷ್ಟವಾಗ್ತಿದೆ.

ಇರಾ ಸ್ಟಡಿ ಕೊಠಡಿ ಎಲ್ಲಿದೆ? :  ಜಯನಗರ, ಕೋರಮಂಗಲದಲ್ಲಿ ಶಾಖೆಯನ್ನು ಹೊಂದಿದೆ. ಜಯನಗರ 3 ನೇ ಬ್ಲಾಕ್‌ನ ಪಟ್ಟಲಮ್ಮ ದೇವಸ್ಥಾನ ರಸ್ತೆಯ 120/Aಯ 2 ನೇ ಮಹಡಿಯಲ್ಲಿ ನಿಮಗೆ ಇರಾ ಸ್ಟಡಿ ಕೊಠಡಿ ಸಿಗುತ್ತದೆ. ಇರಾ ಬೆಳಿಗ್ಗೆ ಆರು ಗಂಟೆಯಿಂದಲೇ ನಿಮಗೆ ಲಭ್ಯ. ತಡರಾತ್ರಿ 11 ಗಂಟೆಯವರೆಗೆ ನಿಮಗೆ ಅಧ್ಯಯನ ಅಥವಾ ಕೆಲಸಕ್ಕೆ ಅವಕಾಶ ನೀಡಲಿದೆ. 

ಇರಾ ಸ್ಟಡಿ ಕೊಠಡಿ ಬಾಡಿಗೆ ಎಷ್ಟು? : ಇಷ್ಟೆಲ್ಲ ಸೌಲಭ್ಯ ನೀಡುವ ಇರಾ ಸ್ಟಡಿ ಕೊಠಡಿ ಬಾಡಿಗೆ ಎಷ್ಟು ಎಂಬ ಕುತೂಹಲ ಇದ್ದೇ ಇದೆ. ನೀವು ಹೆಚ್ಚಿನ ಹಣ ಪಾವತಿ ಮಾಡ್ಬೇಕಾಗಿಲ್ಲ. ಈ ಸ್ಟಡಿ ಕೊಠಡಿ ಬೆಲೆ ಒಂದು ದಿನಕ್ಕೆ 149 ರೂಪಾಯಿ. ತಿಂಗಳಿಗೆ 2199 ರೂಪಾಯಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಇದನ್ನು ಬಾಡಿಗೆ ಪಡೆಯಬಹುದು. 
 

click me!