ವಿಮೆ ಕ್ಲೈಮ್ ಮಾಡಲು Insurance Company ನಿರಾಕರಿಸಿದ್ರೆ, ದೂರು ನೀಡೋದೆಲ್ಲಿ?

Suvarna News   | Asianet News
Published : Feb 21, 2022, 07:39 PM IST
ವಿಮೆ ಕ್ಲೈಮ್ ಮಾಡಲು Insurance Company ನಿರಾಕರಿಸಿದ್ರೆ, ದೂರು ನೀಡೋದೆಲ್ಲಿ?

ಸಾರಾಂಶ

ವಿಮೆ ಮಾಡಿಸುವುದೇ ತುರ್ತು ಪರಿಸ್ಥಿತಿಗೆ ಸಹಾಯವಾಗಲಿ ಎಂದು. ಕೆಲವೊಮ್ಮೆ ಕಂಪನಿಗಳು ನಿಯಮಕ್ಕೆ ವಿರುದ್ಧವಾಗಿವೆ ಎಂಬ ಕಾರಣ ಹೇಳಿ ವಿಮೆ ಹಣ ನೀಡುವುದಿಲ್ಲ. ಆಗ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲ ವಿಧಾನದ ಮೂಲಕ ನ್ಯಾಯಕ್ಕಾಗಿ ಹೋರಾಡಬಹುದು.  

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ (Illness) ದ ಸಮಸ್ಯೆ ಹೆಚ್ಚಾಗ್ತಿದೆ. ಚಿತ್ರವಿಚಿತ್ರ ಖಾಯಿಲೆಗಳು ಜನರನ್ನು ಕಾಡ್ತಿವೆ. ಆರೋಗ್ಯವಾಗಿರುವ ವ್ಯಕ್ತಿ ಹಠಾತ್ ಕುಸಿದು ಬೀಳುವ,ಅನಾರೋಗ್ಯಕ್ಕೊಳಗಾಗುವ ಘಟನೆ ಹೆಚ್ಚಾಗ್ತಿದೆ. ಇಂಥ ಸಂದರ್ಭದಲ್ಲಿ ಚಿಕಿತ್ಸೆ ಕೊಡಿಸಲು ಸಾಕಷ್ಟು ಹಣ ಖರ್ಚಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರಲಿ ಎನ್ನುವ ಕಾರಣಕ್ಕೆ ಅನೇಕರು ಆರೋಗ್ಯ ವಿಮೆ (medi-care )ಮೊರೆ ಹೋಗ್ತಿದ್ದಾರೆ. ಇದಕ್ಕಾಗಿ ಜನರು ಸಮಯಕ್ಕೆ ಪ್ರೀಮಿಯಂ (Premium) ಪಾವತಿಸುತ್ತಾರೆ. ವಿಮೆ ಮಾಡಿಸಿ,ಪ್ರೀಮಿಯಂ ಪಾವತಿ ಮಾಡ್ತಿದ್ದರೂ ಕೆಲ ಸಂದರ್ಭದಲ್ಲಿ ವಿಮಾ ಕಂಪನಿಗಳು ಚಿಕಿತ್ಸೆ (Treatment)ಗೆ ಹಣ ನೀಡಲು ನಿರಾಕರಿಸುತ್ತವೆ. ಇದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಿಗೆ ಹೋಗಬೇಕು ಮತ್ತು ಯಾರಿಗೆ ದೂರು ನೀಡಬೇಕು ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ವಿಮಾ ಕಂಪನಿಗಳ ವಿರುದ್ಧ ನೀವು ದೂರು ನೀಡಬಹುದು. ಇಂದು ಇದ್ರ ಬಗ್ಗೆ ಮಾಹಿತಿ ನೀಡ್ತೇವೆ. 

ಆರೋಗ್ಯ ವಿಮೆ ಪಾಲಿಸಿಯನ್ನು ನೀಡಲು ಕಂಪನಿಗಳಿಗೆ ಅದರದೇ ಆದ ನಿಯಮಗಳಿವೆ. ಕಂಪನಿಯು ಅದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ವಿಮೆದಾರನಿಗೆ ಲಿಖಿತವಾಗಿ ನೀಡುತ್ತದೆ. ಆದರೆ ಹೆಚ್ಚಿನ ಜನರು ಆ ನಿಯಮಗಳನ್ನು ಎಚ್ಚರಿಕೆಯಿಂದ ಓದುವುದಿಲ್ಲ. ಕಂಪನಿ ನಿಯಮಗಳು ಮತ್ತು ಷರತ್ತುಗಳ ವ್ಯಾಪ್ತಿಯಲ್ಲಿ ಬರದ ಕ್ಲೈಮ್‌ಗಳನ್ನು ವಿಮಾ ಕಂಪನಿಗಳು ತಿರಸ್ಕರಿಸುತ್ತವೆ. ಕಂಪನಿಯು ಯಾವುದೇ ಕ್ಲೈಮ್ ತಿರಸ್ಕರಿಸಿದಾಗ ಅದರ ಕಾರಣಗಳನ್ನು ಲಿಖಿತವಾಗಿ ನೀಡಬೇಕಾಗುತ್ತದೆ. 

World Richest ಎಲಾನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತನಾದ ಯೂಟ್ಯೂಬರ್, ಆದರೆ 7 ನಿಮಿಷ ಮಾತ್ರ!

ಕಂಪನಿ ವಿರುದ್ಧ ಇಲ್ಲಿ ದೂರು ನೀಡಿ : ಒಂದು ವೇಳೆ ಕಂಪನಿ ಮೆಡಿಕ್ಲೈಮ್ ತಿರಸ್ಕರಿಸಿದ್ರೆ ನೋಂದಾಯಿತ ಪೋಸ್ಟ್ ಮೂಲಕ ವಿಮಾ ಕಂಪನಿಗೆ ಪತ್ರವನ್ನು ಕಳುಹಿಸಿ. ಈ ಮೂಲಕ ನಿಮ್ಮ ದೂರನ್ನು ನೀಡಬೇಕು.  ಕ್ಲೈಮ್ ತಿರಸ್ಕರಿಸಿದ ಕಾರಣ ಸರಿಯಾಗಿಲ್ಲ ಎಂದು ನೀವು ಕಂಪನಿಗೆ ಹೇಳಬಹುದು. ನಿಮ್ಮ ವಿಷ್ಯದ  ಪರವಾಗಿ ನೀವು ವಾದವನ್ನು ಮಂಡಿಸಬೇಕು. ನೀವು ಏಕೆ ಕ್ಲೈಮ್ ಕೇಳುತ್ತಿದ್ದೀರಿ ಹಾಗೂ ಅದು ಏಕೆ ಸರಿಯಾಗಿದೆ ಎಂಬುದನ್ನು ನೀವು ವಿವರಿಸಬೇಕಾಗುತ್ತದೆ. 
ನೀವು ವಿಮೆ ಪಡೆದ ಕಂಪನಿ ಜೊತೆ ನಿಮ್ಮ ದೂರಿನ ಪತ್ರ ಮತ್ತು ಇಮೇಲ್‌ನ ಪ್ರತಿಯನ್ನು ನೀವು ಐಆರ್ ಡಿಎಐ (IRDAI) ಹೈದರಾಬಾದ್‌ನ ಇಮೇಲ್ ಐಡಿ s@irdai.gov.in ಗೆ ಕಳುಹಿಸಬೇಕು. ಕ್ಲೈಮ್ ನಿರಾಕರಣೆ ನಿಮಗೆ ಏಕೆ ಸಂತೋಷ ತಂದಿಲ್ಲ ಹಾಗೂ ಏಕೆ ವಿರೋಧಿಸುತ್ತಿದ್ದೀರಿ ಎಂಬುದಕ್ಕೆ ನೀವು ದಾಖಲೆ ನೀಡಬೇಕಾಗುತ್ತದೆ.

Hubballi: ನೈರುತ್ಯ ರೈಲ್ವೆ ವಲಯ ದಾಖಲೆಯ ಪಾರ್ಸೆಲ್‌ ಸೇವೆ

ವಿಮಾ ಲೋಕಪಾಲ (ಓಂಬುಡ್ಸ್ಮನ್) ಗೆದೂರು : ನಿಮ್ಮ ಪತ್ರ ಮತ್ತು ಇಮೇಲ್ ಕಳುಹಿಸಿದ ಒಂದು ತಿಂಗಳ ನಂತರವೂ ವಿಮಾ ಕಂಪನಿಯು ನಿಮ್ಮ ಕ್ಲೈಮ್ ಅನ್ನು ಪಾವತಿಸದಿದ್ದರೆ ಅಥವಾ ಅದ್ರ ಬಗ್ಗೆ ಮಾಹಿತಿ ನೀಡದೆ ಹೋದಲ್ಲಿ  ನಿಮ್ಮ ಪ್ರದೇಶದ ವಿಮಾ ಲೋಕಪಾಲ್ ಗೆ ನೀವು ದೂರು ಸಲ್ಲಿಸಬಹುದು. ಇದಕ್ಕಾಗಿ, ನೀವು ನೋಂದಾಯಿತ ಪೋಸ್ಟ್ ಮತ್ತು ಇಮೇಲ್ ಮೂಲಕ ಸರಳ ಕಾಗದದ ಮೇಲೆ ಬರೆಯುವ ಅಥವಾ ಟೈಪ್ ಮಾಡುವ ಮೂಲಕ ನಿಮ್ಮ ದೂರನ್ನು  ಕಳುಹಿಸಬಹುದು. ಈ ಪತ್ರದಲ್ಲಿ  ಅರ್ಜಿದಾರರ ಹೆಸರು, ಸಹಿ, ವಿಮೆಯ ಪಾಲಿಸಿ ಸಂಖ್ಯೆ, ವಿಮಾ ಹಕ್ಕು ಸಂಖ್ಯೆ ಮತ್ತು ಕ್ಲೈಮ್ ಮೊತ್ತವನ್ನು ನಮೂದಿಸಬೇಕು. ಈ ಪತ್ರದಲ್ಲಿ ಪಿನ್ ಕೋಡ್ ಸೇರಿದಂತೆ ನಿಮ್ಮ ಸಂಪೂರ್ಣ ವಿಳಾಸ, ಫೋನ್ ಸಂಖ್ಯೆ, ಇಮೇಲ್ ಐಡಿ, ವಿಮಾ ಕಂಪನಿಯ ಹೆಸರು ಮತ್ತು ಪಾಲಿಸಿ ತೆಗೆದುಕೊಂಡ ಕಚೇರಿಯ ವಿಳಾಸವನ್ನು ನೀವು ನಮೂದಿಸಬೇಕು. ಆಸ್ಪತ್ರೆಯ ಬಿಲ್ ಪ್ರತಿ, ವೈದ್ಯರ ಪ್ರಿಸ್ಕ್ರಿಪ್ಷನ್, ತನಿಖಾ ವರದಿ, ವಿಮಾ ಕಂಪನಿ ನೀಡಿದ  ನಿರಾಕರಣೆ ಪತ್ರವನ್ನೂ  ಲಗತ್ತಿಸಬೇಕು.ವಿಮಾ ಲೋಕಪಾಲ್ ನಿಮ್ಮ ಮತ್ತು ಕಂಪನಿಯ ವಾದಗಳನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳುತ್ತಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!