Bank Holidays:ಮಾರ್ಚ್ ತಿಂಗಳಲ್ಲಿ 13 ದಿನ ಬ್ಯಾಂಕ್ ಕ್ಲೋಸ್: ಇಲ್ಲಿದೆ ಆರ್ ಬಿಐ ರಜಾಪಟ್ಟಿ

Suvarna News   | Asianet News
Published : Feb 21, 2022, 05:13 PM IST
Bank Holidays:ಮಾರ್ಚ್ ತಿಂಗಳಲ್ಲಿ 13 ದಿನ ಬ್ಯಾಂಕ್ ಕ್ಲೋಸ್:  ಇಲ್ಲಿದೆ ಆರ್ ಬಿಐ ರಜಾಪಟ್ಟಿ

ಸಾರಾಂಶ

*ಪ್ರತಿ ತಿಂಗಳು ಬ್ಯಾಂಕುಗಳ ರಜಾಪಟ್ಟಿ ಬಿಡುಗಡೆಗೊಳಿಸೋ ಆರ್ ಬಿಐ *ರಜಾಪಟ್ಟಿಯಲ್ಲಿರೋ ಎಲ್ಲ ರಜೆಗಳು ಎಲ್ಲ ಬ್ಯಾಂಕುಗಳಿಗೆ ಅನ್ವಯಿಸೋದಿಲ್ಲ *ರಜಾದಿನಗಳಂದು ಇಂಟರ್ನೆಟ್ ಬ್ಯಾಂಕಿಂಗ್  ಹಾಗೂ ಎಟಿಎಂ ಸೇವೆಗಳು ಲಭ್ಯ

Business Desk: ಫೆಬ್ರವರಿ ತಿಂಗಳು ಕೊನೆಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರೋವಾಗ ಮುಂದಿನ ತಿಂಗಳು ಏನೆಲ್ಲ ಪ್ರಮುಖ ಕಾರ್ಯಗಳನ್ನು ಮಾಡ್ಬೇಕಿದೆ ಎಂಬ ಬಗ್ಗೆ ಈಗಲೇ ಯೋಚಿಸೋದು ಒಳ್ಳೆಯದು. ಅದ್ರಲ್ಲೂ ಏನಾದ್ರೂ ಬ್ಯಾಂಕ್ (Bank) ಕೆಲ್ಸವನ್ನು ಮುಂದಿನ ತಿಂಗಳಿಗೆ ಇಟ್ಟುಕೊಂಡಿದ್ರೆ ಯಾವೆಲ್ಲ ದಿನಗಳು ರಜೆಗಳಿರುತ್ತವೆ (Holidays)ಎಂಬ ಬಗ್ಗೆ ಮೊದಲೇ ಮಾಹಿತಿ ಹೊಂದಿರೋದು ಉತ್ತಮ.  2022ರ ಮಾರ್ಚ್ ತಿಂಗಳ ರಜಾ ಪಟ್ಟಿಯನ್ನು (Holiday list) ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದೆ. ಅದರ ಅನ್ವಯ  ಮಾರ್ಚ್ ನಲ್ಲಿ ಒಟ್ಟು 13 ದಿನಗಳ ತನಕ ಬ್ಯಾಂಕುಗಳು (Banks) ಮುಚ್ಚಿರಲಿವೆ. ಹೀಗಾಗಿ ಈ ಪಟ್ಟಿಯನ್ನು ಬ್ಯಾಂಕ್ ಗ್ರಾಹಕರು (Customers) ಒಮ್ಮೆ ಗಮನಿಸೋದು ಉತ್ತಮ.

ಆರ್ ಬಿಐ (RBI) ಪ್ರತಿ ತಿಂಗಳಿಗೆ ಸಂಬಂಧಿಸಿ ಬ್ಯಾಂಕುಗಳ (Banks) ರಜಾಪಟ್ಟಿಯನ್ನು (Holiday list) ಪ್ರಕಟಿಸುತ್ತದೆ.  ಆದ್ರೆ ಈ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಹೀಗಾಗಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಆದ್ರೆ  ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಎಲ್ಲ ಭಾನುವಾರ (Sunday), ಎರಡನೇ ಹಾಗೂ ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ಮಾರ್ಚ್ ನಲ್ಲಿ ಭಾನುವಾರಗಳು (Sundays), ಎರಡನೇ ಹಾಗೂ ನಾಲ್ಕನೇ ಶನಿವಾರಗಳ  (Saturdays) ರಜಾದಿನಗಳು ಒಟ್ಟು 6. ಇನ್ನು ಇತರ ರಜೆಗಳು 7 ಇವೆ. ಹೀಗಾಗಿ ಒಟ್ಟು 13 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸೋದಿಲ್ಲ. ಬ್ಯಾಂಕುಗಳಿಗೆ ರಜೆಯಿದ್ರು ಕೂಡ ಇಂಟರ್ನೆಟ್ ಬ್ಯಾಂಕಿಂಗ್  (Internet Banking), ಎಟಿಎಂ (ATM) ಸೇವೆಗಳು ಲಭ್ಯವಿರಲಿವೆ.  ಹೀಗಾಗಿ ಆನ್ ಲೈನ್ ಬ್ಯಾಂಕಿಂಗ್ (Online Banking) ಸೇವೆ ಹೊಂದಿರೋರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಆದ್ರೆ ಬ್ಯಾಂಕಿಗೇ ಹೋಗಿ ಮಾಡಬೇಕಾದ ಕೆಲಸಗಳಿದ್ರೆ ಅದನ್ನು ಮುಂದೂಡೋದು ಒಳ್ಳೆಯದು. ಇಲ್ಲವಾದ್ರೆ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ. 

ನೌಕರರಿಗೆ ಗುಡ್‌ನ್ಯೂಸ್: 15 ಸಾವಿರಕ್ಕಿಂತ ಹೆಚ್ಚು ವೇತನ ಇರುವವರಿಗೆ ಹೊಸ ಪೆನ್ಶನ್ ಸ್ಕೀಮ್!

ರಜೆಯಲ್ಲಿ ಮೂರು ವರ್ಗ
ಆರ್ ಬಿಐ (RBI) ರಜಾದಿನಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.
1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ
2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು
3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು

ಮಾರ್ಚ್ ರಜಾಪಟ್ಟಿ ಇಲ್ಲಿದೆ
ಮಾರ್ಚ್ 1: ಮಹಾಶಿವರಾತ್ರಿ (ಅಗರ್ತಲ, ಐಜ್ವಾಲ್, ಗ್ಯಾಂಗ್ಟಾಕ್, ಚೆನ್ನೈ, ಗುವಾಹಟಿ, ಇಂಫಾಲ್, ಕೋಲ್ಕತ್ತ, ನವದೆಹಲಿ, ಪಣಜಿ, ಶಿಲ್ಲಾಂಗ್ ಮತ್ತು ಪಟ್ನಾ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕುಗಳಿಗೆ ರಜೆ.)
ಮಾರ್ಚ್ 3: ಲೋಸರ್ (ಗ್ಯಾಂಗ್ಟಾಕ್ ನಲ್ಲಿ ಬ್ಯಾಂಕ್ ಮುಚ್ಚಿರುತ್ತದೆ.)
ಮಾರ್ಚ್ 4:  ಚಾಪ್ಚಾರ್ ಕುಟ್  (ಐಜ್ವಾಲ್ ನಲ್ಲಿ ಬ್ಯಾಂಕ್ ರಜೆ)
ಮಾರ್ಚ್ 6: ಭಾನುವಾರ
ಮಾರ್ಚ್ 12: ಎರಡನೇ ಶನಿವಾರ
ಮಾರ್ಚ್ 13: ಭಾನುವಾರ
ಮಾರ್ಚ್ 17: ಹೋಲಿಕಾ ದಹನ (ಡೆಹ್ರಾಡೂನ್, ಕಾನ್ಪುರ, ಲಖ್ನೋ ಮತ್ತು ರಾಂಚಿಯಲ್ಲಿ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ.)
ಮಾರ್ಚ್ 18: ಹೋಳಿ (ಬೆಂಗಳೂರು, ಭುವನೇಶ್ವರ್, ಚೆನ್ನೈ, ಇಂಫಾಲ್, ಕೊಚ್ಚಿ, ಕೋಲ್ಕತ್ತಾ ಮತ್ತು ತಿರುವನಂತಪುರಂ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕುಗಳಿಗೆ ರಜೆ.)
ಮಾರ್ಚ್ 19: ಹೋಳಿ (ಭುವನೇಶ್ವರ್, ಇಂಫಾಲ್ ಮತ್ತು ಪಾಟ್ನಾದಲ್ಲಿ ಬ್ಯಾಂಕುಗಳಿಗೆ ರಜೆ)

Chitra Ramkrishna Case : ಯಾರೀಕೆ ಚಿತ್ರಾ ರಾಮಕೃಷ್ಣ ಅವರ ಹಿಂದಿದ್ದ ನಿಗೂಢ ಬಾಬಾ ಯಾರು?

ಮಾರ್ಚ್ 20: ಭಾನುವಾರ
ಮಾರ್ಚ್ 22: ಬಿಹಾರ್ ದಿನ
ಮಾರ್ಚ್ 26: ನಾಲ್ಕನೇ ಶನಿವಾರ
ಮಾರ್ಚ್ 27: ಭಾನುವಾರ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!