ಸಕ್ಕರೆ ಕಾಯಿಲೆ ಅನೇಕ ರೋಗಕ್ಕೆ ಮೂಲ. ಆಹಾರ, ಜೀವನ ಶೈಲಿ ಬದಲಾವಣೆ ಮೂಲಕ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಕೆಲ ಮಧುಮೇಹಿಗಳಿಗೆ ಪ್ರತಿ ದಿನ ಚಿಕಿತ್ಸೆ ಅಗತ್ಯವಿರುವ ಕಾರಣ ಅದ್ರ ಖರ್ಚು ಹೆಚ್ಚು. ಅವರು ವಿಮೆ ಖರೀದಿ ಮಾಡೋದು ಉತ್ತಮ ಆಯ್ಕೆ.
ಮಧುಮೇಹ ವಿಶ್ವದಾದ್ಯಂತ ಕೋಟ್ಯಾಂತರ ಮಂದಿಯನ್ನು ಬಾಧಿಸುತ್ತಿದೆ. ಬಿಶ್ವದಲ್ಲಿ ಸುಮಾರು 463 ಮಿಲಿಯನ್ ಜನರ ಮೇಲೆ ಇದು ಪರಿಣಾಮ ಬೀರಿದೆ. ಭಾರತದಲ್ಲಿ 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಈಗಿನ ಕಾಲದಲ್ಲಿ ಅತ್ಯಂತ ಸಣ್ಣ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆ ಕಾಡ್ತಿರೋದು ಗಂಭೀರ ವಿಷ್ಯವಾಗಿದೆ. ಮಧುಮೇಹಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಿರುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆಗಾಗ ಪರೀಕ್ಷೆಗೆ ಒಳಗಾಗಬೇಕು. ವೈದ್ಯರು ನೀಡಿದ ಮಾತ್ರೆಗಳನ್ನು ಸೇವನೆ ಮಾಡ್ಬೇಕು.
ಮಧುಮೇಹ (Diabetes) ದಿಂದ ಬೇರೆ ಬೇರೆ ರೋಗ ಕಾಡುವ ಅಪಾಯ ಹೆಚ್ಚಿದೆ. ಹಾಗಾಗಿ ಮಧುಮೇಹಿಗಳು ಆರೋಗ್ಯ ವಿಮೆಯ ಪ್ರಾಮುಖ್ಯತೆಐನ್ನು ಅರಿತಿರಬೇಕು. ಆರೋಗ್ಯ (Health) ವಿಮೆಯನ್ನು ಅವರು ಖರೀದಿಸುವುದು ಬಹಳ ಮುಖ್ಯ. ನೀವು ನಿವೃತ್ತಿ ಸಮೀಪಿಸುತ್ತಿದ್ದಂತೆ ಆರೋಗ್ಯ ವಿಮೆ ಬಗ್ಗೆ ಆಲೋಚನೆ ಮಾಡ್ಬೇಕಾಗಿಲ್ಲ. ಚಿಕ್ಕ ವಯಸ್ಸಿನಲ್ಲೇ ಆರೋಗ್ಯ ವಿಮೆ (Insurance) ಹೊಂದಿದ್ದರೆ ಒಳ್ಳೆಯದು. ಇದ್ರಿಂದ ನಿಮ್ಮ ಹಣ ಉಳಿಯುವುದಲ್ಲದೆ, ತುರ್ತು ಸಂದರ್ಭದಲ್ಲಿ ಆರೋಗ್ಯ ವಿಮೆ ನಿಮ್ಮ ನೆರವಿಗೆ ಬರುತ್ತದೆ. ನಾವಿಂದು ಮಧುಮೇಹ ರೋಗಿಗಳು ಯಾವೆಲ್ಲ ವಿಮೆ ಪಡೆಯಬೇಕು ಎಂಬುದನ್ನು ಹೇಳ್ತೇವೆ.
ಶಾರುಖ್ ಖಾನ್ ಸಹನಟಿಯನ್ನು ರಹಸ್ಯವಾಗಿ ಮದುವೆಯಾದ ಖ್ಯಾತ ಉದ್ಯಮಿ ಈಗ ಕಿಂಗ್‌ಖಾನ್ ಬಿಸಿನೆಟ್ ಪಾರ್ಟ್‌ನರ್!
ಮಧುಮೇಹ ರೋಗಿಗಳಿಗೆ ವಿಮೆ : ಮಧುಮೇಹ ರೋಗಿಗಳಿಗೆ ಆರೋಗ್ಯ ವಿಮೆ ಖರೀದಿ ಮಾಡಲು ಅನೇಕ ಆಯ್ಕೆಗಳಿವೆ.
ವೈಯಕ್ತಿಕ ಆರೋಗ್ಯ ವಿಮಾ ಪಾಲಿಸಿ : ಅನೇಕ ವಿಮಾ ಕಂಪನಿಗಳು ಮಧುಮೇಹದಂತಹ ರೋಗಿಗಳಿಗೂ ತಮ್ಮ ಪಾಲಿಸಿ ಲಾಭವನು ನೀಡುತ್ತವೆ. ಆದರೆ ಇಂಥ ಪಾಲಿಸಿಯಲ್ಲಿ ಕವರೇಜ್ ಶುರುವಾಗುವ ಮೊದಲು ವೇಟಿಂಗ್ ಪಿರಿಯಡ್ ಇರುತ್ತದೆ. ಅದು ಸಾಮಾನ್ಯವಾಗಿ 2ರಿಂದ 4 ವರ್ಷ ಇರುತ್ತದೆ. ಅಲ್ಲದೆ ಹೊಸ ಪಾಲಿಸಿದಾರರು ವಿವಿಧ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.
ತಂಬಾಕು ಕ್ಯಾನ್ಸರ್‌ಗೆ ಭಾರತ ಸೇರಿ 7 ದೇಶದಲ್ಲಿ 13 ಲಕ್ಷ ಜನ ಬಲಿ: ಲ್ಯಾನ್ಸೆಟ್ ವರದಿಯಲ್ಲಿ ಆತಂಕಕಾರಿ ಅಂಶ ಪ್ರಕಟ
ಗ್ರೂಪ್ ಹೆಲ್ತ್ ವಿಮೆ ಪಾಲಿಸಿ (Group Health Insurance) : ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗುಂಪು ವಿಮೆ ಪಾಲಿಸಿಯನ್ನು ನೀಡುತ್ತವೆ. ಅದ್ರಲ್ಲಿ ಮಧುಮೇಹ ಕೂಡ ಇರುತ್ತದೆ. ಈ ವಿಮೆ ಪಡೆಯುವ ಮೊದಲು ಮಧುಮೇಹಿಗಳು ಇದ್ರ ಬಗ್ಗೆ ಪರಿಶೀಲನೆ ನಡೆಸಬೇಕು.
ಮಧುಮೇಹದ ನಿರ್ದಿಷ್ಟ ವಿಮೆ (Specific Insurance for Diabetis) : ಮಧುಮೇಹಿಗಳ ಸಂಖ್ಯೆ ಹೆಚ್ಚಾಗ್ತಿರುವ ಕಾರಣ ಅನೇಕ ವಿಮೆ ಕಂಪನಿಗಳು, ಮಧುಮೇಹಿಗಳಿಗಾಗಿಯೇ ವಿಶೇಷ ವಿಮೆ ಪಾಲಿಸಿಗಳನ್ನು ಶುರು ಮಾಡಿವೆ. ಇವು ಮಧುಮೇಹಿಗಳಿಗೆ ಸೂಕ್ತ ಸೌಲಭ್ಯವನ್ನು ಒದಗಿಸುತ್ತವೆ.
ವಿಮೆ ಖರೀದಿ ಮುನ್ನ ಇದು ನೆನಪಿರಲಿ : ಮಧುಮೇಹದಿಂದ ಬಳಲುತ್ತಿರುವ ಜನರು ಕಾಯುವ ಅವಧಿ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕಡಿಮೆ ಕಾಯುವ ಅವಧಿ ವಿಮೆ ಖರೀದಿ ಮಾಡೋದು ಅವರಿಗೆ ಒಳ್ಳೆಯದು. ಸಹ ಪಾವತಿ ಮತ್ತು ಇತಿಮಿತಿಗಳ ಬಗ್ಗೆಯೂ ಗಮನ ಹರಿಸಬೇಕು. ಆರೋಗ್ಯ ವಿಮೆ ಖರೀದಿ ಮಾಡಿದ ಮೇಲೂ ನಿಮ್ಮ ಖಾತೆಯ ಹಣ ಖಾಲಿಯಾದ್ರೆ ಪ್ರಯೋಜನವಿಲ್ಲ. ಕ್ಲೈಮ್ ವೇಳೆ ನಿಮಗೆ ಯಾವುದೇ ಸಮಸ್ಯೆ ಆಗ್ಬಾರದು ಅಂದ್ರೆ ನೀವು ಮೊದಲೇ ನಿಮ್ಮೆಲ್ಲ ಆರೋಗ್ಯ ಸಮಸ್ಯೆಯನ್ನು ವಿಮಾ ಕಂಪನಿಗೆ ತಿಳಿಸಿಯೇ ವಿಮೆ ಖರೀದಿ ಮಾಡಬೇಕು. ಯಾವುದೇ ವಿಮೆ ಪಾಲಿಸಿ ಖರೀದಿ ಮಾಡುತ್ತಿದ್ದರೂ, ಅದು ಮಧುಮೇಹವನ್ನು ಒಳಗೊಂಡಿದೆಯೇ ಎಂಬುದನ್ನು ಪರಿಶೀಲಿಸಬೇಕು.
45 ವರ್ಷದ ವ್ಯಕ್ತಿ 10 ಲಕ್ಷ ರೂಪಾಯಿಗಳ ಆರೋಗ್ಯ ವಿಮಾ ಖರೀದಿ ಮಾಡಿದ್ದರೆ ಬೇರೆ ಬೇರೆ ಆರೋಗ್ಯ ವಿಮೆಯಲ್ಲಿ ಬೇರೆ ಬೇರೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಆದಿತ್ಯ ಬಿರ್ಲಾ ಆರೋಗ್ಯ ವಿಮೆಯ ಪ್ಲಾಟಿನಂ ವರ್ಧಿತ ಪ್ರೀಮಿಯಂ 27,630 ರೂಪಾಯಿ. ಕೇರ್ ಹೆಲ್ತ್ ಇನ್ಶೂರೆನ್ಸ್‌ನ ಕೇರ್ ಸುಪ್ರೀಂ ಪಾಲಿಸಿಯ ಪ್ರೀಮಿಯಂ 15,122 ರೂಪಾಯಿ. ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಪ್ರೈಮ್ ಆಕ್ಟಿವ್ ಪ್ರೀಮಿಯಂ 13,632 ರೂಪಾಯಿ ಇರುತ್ತದೆ.
ಟೈಪ್ 1, ಟೈಪ್ 2 ಮಧುಮೇಹ ಸಾಮಾನ್ಯವಾಗಿ ಪಾಲಿಸಿಯಲ್ಲಿರುತ್ತದೆ. ಆದ್ರೆ ಟೈಪ್ 3 ಮತ್ತು ಗರ್ಭಾವಸ್ಥೆಯ ಮಧುಮೇಹ ಪಾಲಿಸಿಯಲ್ಲಿರೋದು ಅಪರೂಪ. ಗರ್ಭಾವಸ್ಥೆಯ ಮಧುಮೇಹವು ಮಾತೃತ್ವ ಪ್ರಯೋಜನಗಳ ಅಡಿಯಲ್ಲಿ ಬರುವ ಸಾಧ್ಯತೆ ಇದೆ.