ಉದ್ಯಮ ವರದಿಗಳ ಪ್ರಕಾರ, ಕನೆಕ್ಟೆಡ್ ಟಿವಿ (ಸಿಟಿವಿ) ಹಾಗೂ ಡಿಸ್ನಿ+ಹಾಟ್‌ಸ್ಟಾರ್ ಮೂಲಕ ಪ್ರಸಾರವಾಗುವ ಡಿಜಿಟಲ್ ವೇದಿಕೆಯಲ್ಲಿ ಜಾಹೀರಾತು ದರಗಳು ದೊಡ್ಡ ಮಟ್ಟದಲ್ಲಿ ದ್ವಿಗುಣಗೊಂಡಿದ.ೆ
ಮುಂಬೈ(ನ.18): ಭಾರತ ತಂಡ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಇದರ ನಡುವೆ, ನೇರಪ್ರಸಾರ ವಾಹಿನಿಗಳಲ್ಲಿ ಪ್ರಸಾರವಾಗುವ 10 ಸೆಕೆಂಡ್ ಜಾಹೀರಾತಿನ ದರ ಬರೋಬ್ಬರಿ 35 ಲಕ್ಷ ರೂಪಾಯಿಗೆ ಏರಿಕೆಯಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.ಡಿಸ್ನಿ ಸ್ಟಾರ್ 10 ಸೆಕೆಂಡ್ ಸ್ಪಾಟ್‌ಗಾಗಿ ಉಲ್ಲೇಖಿಸಿರುವ ಬೆಲೆಗಳು ಸುಮಾರು ₹30-35 ಲಕ್ಷಗಳಾಗಿದ್ದರೆ, ₹25-35 ಲಕ್ಷ ವ್ಯಾಪ್ತಿಯಲ್ಲಿ ಜಾಹೀರಾತು ಡೀಲ್ ಆಗುವ ಮಾತುಕತೆಗಳು ನಡೆಯುತ್ತಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ವಿಶ್ವಕಪ್ ಟೂರ್ನಿಯ ಶೇ.70ರಷ್ಟು ಜಾಹೀರಾತು ಸ್ಲಾಟ್‌ಗಳು ಟೂರ್ನಿಯ ಆರಂಭಕ್ಕೂ ಮುನ್ನವೇ ಮಾರಾಟವಾಗುತ್ತದೆ. ಉಳಿದ ಶೇ. 30ರಷ್ಟನ್ನು ಟೂರ್ನಿ ಪ್ರಗತಿ ಸಾಧಿಸುತ್ತಿದ್ದಂತೆ ಮಾರಾಟ ಮಾಡಲಾಗುತ್ತದೆ. ಇದೇ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ವೇಳೆ ಶೇ. 10-15ರಷ್ಟು ಜಾಹೀರಾತು ಸ್ಲಾಟ್‌ಗಳು ಮಾರಾಟವಾಗದೇ ಖಾಲಿ ಉಳಿದಿತ್ತು.
ಕನೆಕ್ಟೆಡ್ ಟಿವಿ (ಸಿಟಿವಿ) ಹಾಗೂ ಡಿಸ್ನಿ ಹಾಟ್‌ಸ್ಟಾರ್ ಮೂಲಕ ಇರುವ ಡಿಜಿಟಲ್ ವೇದಿಕೆಯ ಜಾಹೀರಾತು ಸ್ಲಾಟ್‌ಗಳ ರೇಟ್‌ಗಳು ಕೂಡ ದುಪ್ಪಟ್ಟಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಸಿಟಿವಿಯ ಜಾಹೀರಾತಿನ ಸ್ಪಾಟ್ ರೇಟ್‌ಗಳು ವಿಶ್ವಕಪ್ ವೇಲ 5-6 ಲಕ್ಷ ರೂಪಾಯಿಗಳು ಇದ್ದರೆ, ವಿಶ್ವಕಪ್ ವೇಳೆ ಬರೀ 10 ಸೆಕೆಂಡ್‌ನ ಸ್ಪಾಟ್ ರೇಟ್‌ಗಳು 8-10 ಲಕ್ಷ ರೂಪಾಯಿಗಳಾಗಿವೆ. ಈ ನಡುವೆ, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಡಿಜಿಟಲ್‌ಗಾಗಿ ಜಾಹೀರಾತು ದರಗಳನ್ನು ಸುಮಾರು ₹500-600 CPM ನಲ್ಲಿ ಉಲ್ಲೇಖಿಸಲಾಗಿದೆ.
ಭಾರತ Vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯವು 5.3 ಕೋಟಿ ಗರಿಷ್ಠ ಏಕಕಾಲೀನ ವೀಕ್ಷಕರನ್ನು ಕಂಡಿದೆ ಎಂದು ಡಿಸ್ನಿ+ ಹಾಟ್‌ಸ್ಟಾರ್ ಹೇಳಿದ ನಂತರ ಇದು ದಾಖಲಾಗಿದೆ. ನವೆಂಬರ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 4.4 ಕೋಟಿ ವೀಕ್ಷಕರು ಹಿಂದಿನ ಗರಿಷ್ಠವಾಗಿತ್ತು. ಭಾನುವಾರದಂದು ನಡೆಯುವ ಫೈನಲ್‌ಗಳು ಡಿಜಿಟಲ್ ಮತ್ತು ಟಿವಿ ಎರಡರಲ್ಲೂ ವೀಕ್ಷಕರ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಾಗಲಿದೆ. ಅದರಲ್ಲೂ ಟಿವಿಯಲ್ಲಿ ನೇರಪ್ರಸಾರವನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಲಿದೆ ಎನ್ನುವುದು ಉದ್ಯಮದರ ಒಳನೋಟವಾಗಿದೆ.
ಅದಲ್ಲದೆ, ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ಪಯಣದ ಕಾರಣದಿಂದಾಗಿ ಜಾಹೀರಾತು ದರಗಳು ಇನ್ನಷ್ಟು ಏರಿಕೆಯಾಗಿದೆ. ಭಾರತ ಹೊರತಾದ ಪಂದ್ಯಗಳಿಗೆ ಹೋಲಿಸಿದರೆ, ಭಾರತದ ಪಂದ್ಯಗಳಿಗೆ ಜಾಹೀರಾತು ದರಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಪಂದ್ಯಾವಳಿಯ ಉದ್ದಕ್ಕೂ ಭಾರತದ ಪಂದ್ಯಗಳಿಗೆ ಜಾಹೀರಾತು ದರಗಳು 4 ರಿಂದ 6 ಪಟ್ಟು ಹೆಚ್ಚಾಗಿತ್ತು ಎಂದು ಎಲಾರಾ ಕ್ಯಾಪಿಟಲ್‌ನ ಕರಣ್ ತೌರಾನಿ ಹೇಳಿದ್ದಾರೆ. ಪ್ಲೇಆಫ್‌ಗಳಿಗೆ ಹೋಲಿಸಿದರೆ ಸೆಮಿಫೈನಲ್‌ಗೆ ಬೆಲೆ 2.5 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ಈಗ ಅಂತಿಮ ಪಂದ್ಯಕ್ಕೆ ಕನಿಷ್ಠ 30 ಪ್ರತಿಶತ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ವೇಗಿಯ ಬದುಕಿಗೆ ಮುಳ್ಳಾಯ್ತು ರೂಪದರ್ಶಿಯ ಪ್ರೀತಿ, ಪತ್ನಿ ಆರೋಪಕ್ಕೆ ದೇಶಕ್ಕಾಗಿ ಪ್ರಾಣ ಬಿಡುವೆ ಎಂದಿದ್ದ ಶಮಿ!
ಡಿಸ್ನಿ ಸ್ಟಾರ್ ಚಾನೆಲ್‌ಗಳಲ್ಲಿ ಇದುವರೆಗೆ ವೀಕ್ಷಕರ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ, BARC ಡೇಟಾವನ್ನು ಉಲ್ಲೇಖಿಸಿ ಡಿಸ್ನಿ ಸ್ಟಾರ್ಮ್, ಮೊದಲ 34 ವಿಶ್ವಕಪ್ ಪಂದ್ಯಗಳು ಟಿವಿಯಲ್ಲಿ 430 ಮಿಲಿಯನ್ ವೀಕ್ಷಕರನ್ನು ಸೆಳೆಯಿತು ಎಂದು ಅಂದಾಜಿಸಲಾಗಿದೆ.
ಅಮಿತಾಭ್ ಸರ್ ಪ್ಲೀಸ್ ಪ್ಲಿಸ್... ಫೈನಲ್ ಮ್ಯಾಚ್ ನೋಡ್ಬೇಡಿ ಅಂತಿದ್ದಾರೆ ನೆಟ್ಟಿಗರು! ಅಷ್ಟಕ್ಕೂ ಆಗಿದ್ದೇನು?