ಮಂದಹಾಸದಲ್ಲಿದ್ದ ವಾಹನ ಸವಾರರಿಗೆ ಶಾಕ್ ಕೊಟ್ಟ ಕುಮಾರಸ್ವಾಮಿ ಸರ್ಕಾರ

By Web DeskFirst Published Jan 4, 2019, 7:51 PM IST
Highlights

ಕಳೆದ 2 ತಿಂಗಳಿನಿಂದ ಸಂತಸದಲ್ಲಿ ತೇಲಾಡುತ್ತಿದ್ದ ರಾಜ್ಯ ವಾಹನ ಸವಾರರಿಗೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ  ಸಮ್ಮಿಶ್ರ ಸರ್ಕಾರ ಶಾಕ್ ಕೊಟ್ಟಿದೆ. 

ಬೆಂಗಳೂರು, (ಜ.04]: ರಾಜ್ಯದಲ್ಲಿ ಕಾಂಗ್ರೆಸ್ ಸಹಾಯದಿಂದ ಮುಖ್ಯಮಂತ್ರಿಯಾದ ಆರಂಭದಲ್ಲಿ ವಾಹನ ಸವಾರರಿಗೆ ಸಿಹಿ ಸುದ್ದಿ ಕೊಟ್ಟದ್ದ ಎಚ್. ಡಿ. ಕುಮಾರಸ್ವಾಮಿ ಇದೀಗ ಶಾಕ್ ನೀಡಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ  ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಏರಿಕೆ ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 32ಕ್ಕೆ ಏರಿಕೆ ಮಾಡಿದೆ. ಇದ್ರಿಂದ ವಾಹನ ಸವಾರರಿಗೆ ಕೊಂಚ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಬಂದ್ ನಂತರ ಹೊರಬಿದ್ದ ಶುಭಸುದ್ಧಿ, ರಾಜ್ಯದಲ್ಲಿ ಪೆಟ್ರೋಲ್ ಅಗ್ಗ?

ಸಪ್ಟೆಂಬರ್ ನಲ್ಲಿ ಸಿಎಂ ಕುಮಾರಸ್ವಾಮಿ ಅವರು  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 2ರಷ್ಟು ಇಳಿಕೆ ಮಾಡಿದ್ದರು. ಆದ್ರೆ ಈಗ ಪೆಟ್ರೋಲ್ ಮೇಲಿನ ತೆರಿಗೆ ಶೇಕಡಾ 32 ಹಾಗೂ ಡೀಸೆಲ್ ಮೇಲೆ ಶೇಕಡಾ 21ರಷ್ಟು ತೆರಿಗೆ ಏರಿಕೆ ಮಾಡಿದ್ದಾರೆ.

ಕಳೆದ 2 ತಿಂಗಳಿನಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯತ್ತ ಸಾಗುತ್ತಿದ್ದು, ಇದರಿಂದ ವಾಹನ ಸವಾರರ ನಿತ್ಯವೂ ಮಂದಹಾಸದಲ್ಲಿದ್ದರು.

ಆದ್ರೆ ಇದೀಗ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 32ಕ್ಕೆ ಏರಿಕೆ ಮಾಡಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದೆ.

click me!