
ನವದೆಹಲಿ[ಜ.04]: ಒಂದು ವೇಳೆ ನೀವು ಉದ್ಯೋಗಿಗಳಾಗಿದ್ದು, ಬ್ಯಾಂಕ್ ಕೆಲಸ ಕಾರ್ಯಗಳನ್ನು ಶನಿವಾರಕ್ಕೆಂದೇ ಮೀಸಲಿಡುತ್ತೀರೆಂದಾದರೆ, ಕೆಲಸ ಮುಗಿಸಲು ನಿಮ್ಮ ಬಳಿ ಕೇವಲ ಈ ಶನಿವಾರ[5ಜನವರಿ]ಯಷ್ಟೇ ಉಳಿದುಕೊಂಡಿದೆ. ಯಾಕೆಂದರೆ ಮುಂದಿನ ಶನಿವಾರದಿಂದ 3 ದಿನಗಳವರೆಗೆ ಬ್ಯಾಂಕ್ ಗಳು ತೆರೆಯುವುದಿಲ್ಲ.
ಯಾವೆಲ್ಲ ದಿನ ಬ್ಯಾಂಕ್ ಗಳು ಬಂದ್?
ಮುಂದಿನ ವಾರ ಬ್ಯಾಂಕ್ ಗಳಿಗೆ ದಿನಾಂಕ 12 ರಿಂದ 14 ಜನವರಿವರೆಗೆ ರಜೆ ಇದೆ. 12 ಜನವರಿ ಎರಡನೇ ಶಬನಿವಾರ ಆಗಿದ್ದರೆ, 13 ಜನವರಿಯಂದು ಭಾನುವಾರದ ರಜೆ ಇದೆ. ಇನ್ನು ಜನವರಿ 14[ಸೋಮವಾರ] ಮಕರ ಸಂಕ್ರಾಂತಿ/ಪೊಂಗಲ್ ಆಗಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರಲಿದೆ.
ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡರೆ ನೀವು ಕ್ಯಾಷ್ ಸಮಸ್ಯೆಯಿಂದ ಪಾರಾಗಬಹುದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.