ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಕೊಟ್ಟಿದ್ದೀರಾ? ಎಂದಿಗೂ ಈ ತಪ್ಪನ್ನ ಮಾಡ್ಬೇಡಿ, ಇದನ್ನ ಇಂದೇ ಡೌನ್‌ಲೋಡ್ ಮಾಡ್ಕೊಳ್ಳಿ

By Mahmad Rafik  |  First Published Nov 10, 2024, 11:50 AM IST

ಹೋಟೆಲ್‌ಗಳಲ್ಲಿ ಆಧಾರ್ ಕಾರ್ಡ್ ನೀಡುವುದು ಅಪಾಯಕಾರಿ. ಒಂದು ವೇಳೆ ಈ ತಪ್ಪನ್ನು ನೀವು ಮಾಡುತ್ತಿದ್ದರೆ ಇಂದೇ ಇದನ್ನು ಡೌನ್‌ ಲೋಡ್ ಮಾಡಿಕೊಳ್ಳಿ.


ಬೆಂಗಳೂರು: ಓಯೋ ಹೋಟೆಲ್ ಅಥವಾ ಯಾವುದೇ ಲಾಡ್ಜ್‌ಗಳಲ್ಲಿ ರೂಮ್ ಬುಕ್ ಮಾಡುವಾಗ ಅಲ್ಲಿಯ ಸಿಬ್ಬಂದಿ ಐಡೆಂಟಿಟಿ ಕಾರ್ಡ್ ಕೇಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಆಧಾರ್ ಕಾರ್ಡ್ ನೀಡುತ್ತಾರೆ. ಎಲ್ಲಾ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದಾಗ ಸಿಬ್ಬಂದಿ ಆಧಾರ್ ಕಾರ್ಡ್‌ ಫೋಟೋಕಾಪಿ ಮಾಡಿಕೊಂಡು ತಮ್ಮ ಬಳಿ ಇರಿಸಿಕೊಳ್ಳುತ್ತಾರೆ. ಆದ್ರೆ ಆಧಾರ್ ಫೋಟೋಕಾಪಿ ದುರ್ಬಳಕೆ ಆಗಲ್ಲ ಎಂಬ ನಂಬಿಕೆ ಇದೆಯಾ? ಒಂದು ವೇಳೆ ದುರ್ಬಳಕೆ ಆದ್ರೆ ಪೊಲೀಸರು ನಿಮ್ಮ ಮನೆ ಬಾಗಿಲಿಗೆ ಬರುವ ಸಾಧ್ಯತೆ ಇರುತ್ತದೆ. ಹೋಟೆಲ್ ಮಾತ್ರವಲ್ಲ ಇನ್ನಿತರ ಅಪರಿಚಿತ ಸ್ಥಳಗಳಲ್ಲಿ ಆಧಾರ್ ಕಾರ್ಡ್ ನೀಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಲಹೆ ನೀಡಿರುತ್ತಾರೆ. 

ಈ ರೀತಿ ಎಲ್ಲಾ ಕಡೆಯೂ ಕೇಳಿದ ಕೂಡಲೇ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಯಾವುದೇ ದಾಖಲೆಗಳ ಮಾಹಿತಿಯನ್ನು ನೀಡುವುದು ಭವಿಷ್ಯದಲ್ಲಿ ನಿಮಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕೆಲವರು ತಪ್ಪಿಸಿಕೊಳ್ಳಲು ನಿಮ್ಮ ದಾಖಲೆಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಪರಿಚಿತ ಸ್ಥಳದಲ್ಲಿ ದಾಖಲೆ ನೀಡುವ ಸಂದರ್ಭದಲ್ಲಿ ಜನರು ಮಾಸ್ಕಡ್ ಆಧಾರ್ ಕಾರ್ಡ್ ಬಳಕೆ ಮಾಡಬಹುದು. ಹಾಗಾದ್ರೆ ಏನಿದು ಮಾಸ್ಕಡ್ ಆಧಾರ್ ಕಾರ್ಡ್? ಇದು ಎಲ್ಲಿ ಸಿಗುತ್ತೆ ಎಂಬುದನ್ನು ನೋಡೋಣ ಬನ್ನಿ. 

Latest Videos

undefined

ಇದನ್ನೂ ಓದಿ: 5 ವರ್ಷದಲ್ಲಿ 7 ರೂಪಾಯಿ ಆಗಿದ್ದು 2175 ರೂಪಾಯಿ; ಕೋಟಿ ಕೋಟಿ ಲಾಭ ಕೊಟ್ಟ ಷೇರು ಯಾವುದು?

ಏನಿದು ಮಾಸ್ಕಡ್ ಆಧಾರ್ ಕಾರ್ಡ್?
ಮಾಸ್ಕಡ್ ಆಧಾರ್ ಕಾರ್ಡ್ ಮೊದಲಿನ ಎಂಟು ಸಂಖ್ಯೆಯನ್ನು ಮರೆ ಮಾಡುತ್ತದೆ. ಈ ಆಧಾರ್ ಕಾರ್ಡ್‌ನಲ್ಲಿ 12 ಅಂಕಿಯಲ್ಲಿ ಕೊನೆಯ 4 ಸಂಖ್ಯೆಗಳು ಮಾತ್ರ ಕಾಣಿಸುತ್ತವೆ. ಇದರಿಂದ ನಿಮ್ಮ ಗುರುತನ್ನು ಭದ್ರವಾಗಿರಿಸುತ್ತದೆ. ಆಧಾರ್ ಕಾರ್ಡ್‌ನ ಒಂದು ಮತ್ತೊಂದು ರೂಪವಾಗಿದ್ದು, ಇದನ್ನು ಎಲ್ಲಾ ಕಡೆಯೂ ದಾಖಲೆ ರೂಪದಲ್ಲಿ ಬಳಕೆ ಮಾಡಬಹುದಾಗಿದೆ. ಈ ಮಾಸ್ಕಡ್ ಆಧಾರ್ ಕಾರ್ಡ್ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮಾಸ್ಕಡ್ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನಗಳು 
*Masked Aadhaar Card ಪಡೆದುಕೊಳ್ಳಲು Uidai ವೆಬ್‌ಸೈಟ್‌ಗೆ ಹೋಗಬೇಕು. https://uidai.gov.in/ 
*ಮೇಲಿನ ಲಿಂಕ್‌ಗೆ ಹೋದಾಗ ನಿಮಗೆ 'ಮೈ ಆಧಾರ್' ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
*ಇಲ್ಲಿ ಆಧಾರ್ ಸಂಖ್ಯೆ ಎಂಟ್ರಿ ಮಾಡಿ, Captch ಕೋಡ್ ಎಂಟ್ರಿ ಮಾಡಬೇಕು. ನಂತರ ನಿಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. 
*ಓಟಿಪಿ ಎಂಟ್ರಿ ಮಾಡಿ ವೆರಿಫಿಕೇಷನ್ ಪ್ರೊಸೆಸ್ ಪೂರ್ಣಗೊಳಿಸಬೇಕು. 
*ವೆರಿಫಿಕೇಷನ್ ಪೂರ್ಣವಾದ ಬಳಿಕ ಡೌನ್‌ಲೋಡ್ ಆಪ್ಷನ್ ಕಾಣಿಸುತ್ತದೆ. ನಂತರ ಇದರ ಮೇಲೆ ಕ್ಲಿಕ್ ಮಾಡಬೇಕು. 
*ನಂತರ ನಿಮಗೆ ಚೆಕ್‌ಬಾಕ್ಸ್ ಸಿಗುತ್ತದೆ. ಇಲ್ಲಿ ನಿಮಗೆ Masked Aadhaar Card ಬೇಕಾ ಎಂದು ಕೇಳಲಾಗುತ್ತದೆ. ನಂತರ ಅದರ ಮೇಲೆ ಕ್ಲಿಕ್ ಮಾಡಿ. 
*ಈಗ ನೀವು ಮಾಸ್ಕಡ್ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಕೇವಲ ₹1000 ಹೂಡಿಕೆಯಿಂದ ಕೋಟ್ಯಾಧಿಪತಿಯಾಗುವುದು ಹೇಗೆ?

click me!