ಅನ್‌ಬಾಕ್ಸಿಂಗ್ ಬೆಂಗಳೂರು ಮತ್ತು WT ಫಂಡ್, 'ನಮ್ಮ ಬೆಂಗಳೂರು ಚಾಲೆಂಜ್' ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ನೀಡುವ ಐದು ಉತ್ತಮ ಯೋಜನೆಗಳಿಗೆ ತಲಾ ₹10 ಲಕ್ಷ ಅನುದಾನ ನೀಡಲಿದೆ. ನವೆಂಬರ್ 1 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾದವರು ಡಿಸೆಂಬರ್‌ನಲ್ಲಿ ನಡೆಯಲಿರುವ BLR ಹಬ್ಬದಲ್ಲಿ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಬೆಂಗಳೂರು (ನ.9): ಅನ್‌ಬಾಕ್ಸಿಂಗ್ ಬೆಂಗಳೂರು ಹಾಗೂ ನಿಖಿಲ್ ಕಾಮತ್ ಅವರ ಡಬ್ಲ್ಯೂಟಿ ಫಂಡ್ ಸಹಯೋಗದೊಂದಿಗೆ ಬೆಂಗಳೂರು ಸಮಸ್ಯೆಗೆ ಪರಿಹಾರ ನೀಡುವಂತ ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ ಅನುದಾನ ನೀಡುವ “ನಮ್ಮ ಬೆಂಗಳೂರು ಚಾಲೆಂಜ್” ಉಪಕ್ರಮವನ್ನು ಘೊಷಣೆ ಮಾಡಿದೆ. ಇಂದು ಐಟಿ-ಬಿಟಿ, ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆ ಎಲ್ಲರಿಗೂ ತಿಳಿದಿರುವುದೇ, ಆದರೂ ಈ ಸಮಸ್ಯೆಗಳಿಗೆ ನಿಮ್ಮಲ್ಲಿ ವಿಭಿನ್ನ ಆಲೋಚನೆ ಇದ್ದು, ಆ ಆಲೋಚನೆಯನ್ನು ಅನುಷ್ಠಾನ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಸಿಗುವುದಾದರೆ ಇಲ್ಲಿದೆ ನಿಮಗೆ ಒಂದು ಉತ್ತಮ ಅವಕಾಶ.
ನಿಮ್ಮ ಐಡಿಯಾ ಉತ್ತಮವಾಗಿದ್ದರೆ ನಮ್ಮ ಬೆಂಗಳೂರು ಚಾಲೆಂಜ್ ಉಪಕ್ರಮದಲ್ಲಿ 5 ವ್ಯಕ್ತಿಗಳು, ಸ್ಟಾರ್ಟ್ಅಪ್ ಅಥವಾ ಸಮುದಾಯ ಸಂಸ್ಥೆಗಳು ತಲಾ 10 ಲಕ್ಷ ರೂಪಾಯಿಗಳ ಅನುದಾನಕ್ಕಾಗಿ ಆಯ್ಕೆ ಆಗಲಿದ್ದಾರೆ. ಲಾಭೋದ್ದೇಶವಿಲ್ಲದ, ಬೆಂಗಳೂರಿನಲ್ಲೇ ಕೇಂದ್ರೀಕೃತವಾಗಿರುವ ಅನ್‌ಬಾಕ್ಸಿಂಗ್ ಫೌಂಡೇಷನ್ ಹಾಗೂ WT ಫಂಡ್ ಈ ಅವಕಾಶವನ್ನು ಸಾರ್ವಜನಿಕರಿಗೆ ನೀಡುತ್ತಿದೆ.
undefined
ಅನ್‌ಬಾಕ್ಸಿಂಗ್ ಬೆಂಗಳೂರಿನ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಮಾಲಿನಿ ಗೋಯಲ್ ಈ ಬಗ್ಗೆ ಮಾಹಿತಿ ನೀಡಿದ್ದು “ಈ ವಿನೂತನ ಉಪಕ್ರಮದ ಮೂಲಕ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು ನಗರ ನಮಗೆ ಸಾಕಷ್ಟು ನೀಡಿದೆ. ಅದಕ್ಕೆ ಪರ್ಯಾಯವಾಗಿ ನಾವೂ ಸಹ ನಮ್ಮ ಬೆಂಗಳೂರಿಗೆ ಕೊಡುಗೆ ನೀಡುವ ಉದ್ದೇಶದಿಂದ ಈ ಹೆಜ್ಜೆ ಇಟ್ಟಿದ್ದೇವೆ. ನಾವು ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆಯು ಸಮರ್ಥನೀಯ, ಅಂತರ್ಗತ ಮತ್ತು ಮುಂದಾಲೋಚನೆಯಿಂದ ಕೂಡಿದೆ ಎಂಬುದನ್ನು ನಾವು ಉಳಿಸಿಕೊಳ್ಳಬೇಕು. ನಮ್ಮ ಬೆಂಗಳೂರು ಚಾಲೆಂಜ್ ಮುಂದಿನ ಪೀಳಿಗೆಗೆ ನಮ್ಮ ಸಮುದಾಯಗಳಿಗೆ ಪ್ರಯೋಜನವಾಗುವ ನವೀನ ಪರಿಹಾರಗಳನ್ನು ಪೋಷಿಸುವುದು ನಮ್ಮ ಉದ್ದೇಶ, ಈ ಚಾಲೆಂಜ್ ಪ್ರತಿಯೊಬ್ಬರಿಗೂ ತೆರೆದಿದೆ ಎಂದರು.
ಜೀರೋಧಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಮಾತನಾಡಿ, "ಬೆಂಗಳೂರು ನನಗೆ ಎಲ್ಲವನ್ನೂ ನೀಡಿದೆ, ಮುಂದೆ ಬೆಳೆಯಬೇಕು ಎನ್ನುವ ಹಸಿವು ಸಹ ನೀಡಿದೆ. ಈ ನಗರವು ಕೇವಲ ಹಿನ್ನೆಲೆಯಲ್ಲ; ಇದು ಮಹತ್ವಾಕಾಂಕ್ಷೆ ಮತ್ತು ದಿಟ್ಟತನದಲ್ಲಿ ಬೆಳೆಯಬೇಕು ಎನ್ನುವವರಿಗೆ ಉತ್ತಮ ವೇದಿಕೆ. ಇಲ್ಲಿನ ಚೈತನ್ಯವು ವಿಶಿಷ್ಟವಾಗಿದೆ, ಧೈರ್ಯಶಾಲಿ, ಪಟ್ಟುಬಿಡದ ಜೀವನವನ್ನು ಕಲಿಸಿಕೊಡುತ್ತದೆ. ಹೀಗಾಗಿ ಬೆಂಗಳೂರಿನ ಸಮಸ್ಯೆಗಳಿಗೂ ಪರಿಹಾರ ನೀಡಲು WT ಫಂಡ್ ವತಿಯಿಂದ ಆ ಶಕ್ತಿ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುವ ಜನರನ್ನು ಬೆಂಬಲಿಸಲು ನಾವು ಸಮರ್ಪಿತರಾಗಿದ್ದೇವೆ, ಬೆಂಗಳೂರು ಮತ್ತು ಅದರಾಚೆಗೆ ರೂಪಿಸುವ ಆಲೋಚನೆಗಳನ್ನು ಬೆಂಬಲಿಸುತ್ತೇವೆ. ಈ ಸವಾಲು ಚಿಂತಕರು, ಕೆಲಸ ಮಾಡುವವರು ಮತ್ತು ನಗರವನ್ನು ಉತ್ತಮವಾಗಿ ರೂಪಿಸಬಹುದು ಎಂದು ನಂಬುವ ಪ್ರತಿಯೊಬ್ಬರಿಗೂ ಆಗಿದೆ.
ನಿಖಿಲ್ ಕಾಮತ್ ಮನೆ ಒಳಾಂಗಣ ವಿನ್ಯಾಸ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್!
ನವೆಂಬರ್ 1ರಂದು ನಮ್ಮ ಬೆಂಗಳೂರು ಚಾಲೆಂಜ್‌ಗಾಗಿ ಅರ್ಜಿಗಳನ್ನು ಈಗಾಗಲೇ ತೆರೆಯಲಾಗಿದೆ, ನಗರದ ಅಗತ್ಯತೆಗಳನ್ನು ತಿಳಿಸುವ ಪ್ರಾಯೋಗಿಕ ಪರಿಹಾರಗಳ ಮೇಲೆ ಕೇಂದ್ರೀಕೃತವಾಗಿರುವ ಅರ್ಜಿಗಳ ಸಲ್ಲಿಕೆಗಳನ್ನು ಆಹ್ವಾನಿಸಲಾಗಿದೆ. ನಾವೀನ್ಯತೆ, ಪ್ರಭಾವ, ಕಾರ್ಯಸಾಧ್ಯತೆ, ಸ್ಕೇಲೆಬಿಲಿಟಿ ಮತ್ತು ಬದ್ಧತೆಯ ಆಧಾರದ ಮೇಲೆ ಯೋಜನೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು, ಭಾಗವಹಿಸುವವರು ಅನ್‌ಬಾಕ್ಸಿಂಗ್ ಬೆಂಗಳೂರಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ತಮ್ಮನ್ನು ಮತ್ತು ಅವರ ಪರಿಹಾರಗಳನ್ನು ಪರಿಚಯಿಸುವ ಕಿರು ವೀಡಿಯೊವನ್ನು ಸಲ್ಲಿಸಬೇಕು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ವರ್ಚುವಲ್ ಇಂಟರ್ವ್ಯೂಗಳಿಗೆ ಆಹ್ವಾನಿಸಲಾಗುತ್ತದೆ, ಇದರಲ್ಲಿ ಆಯ್ಕೆಯಾಗುವ ಟಾಪ್ 5 ಅರ್ಜಿದಾರರು ತಲಾ ₹10 ಲಕ್ಷಗಳ ಅನುದಾನವನ್ನು ಪಡೆಯುತ್ತಾರೆ ಮತ್ತು ನಗರದಾದ್ಯಂತ ವಾರ್ಷಿಕ BLR ಹಬ್ಬದ ಭಾಗವಾಗಿರುವ ಫ್ಯೂಚರ್ಸ್ ಕಾನ್ಫರೆನ್ಸ್‌ನಲ್ಲಿ 30ನೇ ನವೆಂಬರ್ ಮತ್ತು 15ನೇ ಡಿಸೆಂಬರ್ 2024 ರ ನಡುವೆ ತಮ್ಮ ಯೋಜನೆಗಳು/ಐಡಿಯಾಗಳನ್ನು ಪ್ರಸ್ತುತಪಡಿಸುವ ಅವಕಾಶವನ್ನು ಪಡೆಯುತ್ತಾರೆ. ಹಬ್ಬದ ಅಂತಿಮದಲ್ಲಿ ಆಯ್ಕೆಗಳನ್ನು ಬಹಿರಂಗಪಡಿಸಲಾಗುತ್ತದೆ, ಅಲ್ಲಿ ಅಗ್ರ ಐದು ವಿಜೇತರು ತಲಾ ₹10 ಲಕ್ಷಗಳ ಅನುದಾನವನ್ನು ಸ್ವೀಕರಿಸುತ್ತಾರೆ.
'ಬಾಡಿಗೆ ಮನೆಯೇ ಬೆಸ್ಟ್..' ಎಂದಿದ್ದ ನಿಖಿಲ್ ಕಾಮತ್ ಯು-ಟರ್ನ್, ಸ್ವಂತ ಮನೆ ಖರೀದಿ ಮಾಡಿದ ಜೀರೋದಾ ಮಾಲೀಕ