5 ವರ್ಷದಲ್ಲಿ 7 ರೂಪಾಯಿ ಆಗಿದ್ದು 2175 ರೂಪಾಯಿ; ಕೋಟಿ ಕೋಟಿ ಲಾಭ ಕೊಟ್ಟ ಷೇರು ಯಾವುದು?

By Mahmad Rafik  |  First Published Nov 9, 2024, 5:52 PM IST

7 ರೂಪಾಯಿ शेರು 5 ವರ್ಷಗಳಲ್ಲಿ ಹೂಡಿಕೆದಾರರಿಗೆ 39,000% ಲಾಭ ಕೊಟ್ಟಿದೆ. ಈ ಶೇರ್ ಬೆಲೆ ಇವತ್ತು 2 ಸಾವಿರ ರೂಪಾಯಿಗಿಂತ ಜಾಸ್ತಿ ಇದೆ. ಕಳೆದ ತಿಂಗಳು ಅಕ್ಟೋಬರ್‌ನಲ್ಲಿ 3,000 ರೂಪಾಯಿ ದಾಟಿತ್ತು.


ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳ ಷೇರುಗಳು ಕಡಿಮೆ ಅವಧಿಯಲ್ಲಿ ಅಂದ್ರೆ ಮೂರ್ನಾಲ್ಕು ವರ್ಷಗಳಲ್ಲಿಯೇ ಊಹೆಗೂ ನಿಲುಕದ ರೀತಿಯಲ್ಲಿ ಲಾಭ ನೀಡುತ್ತವೆ. 5 ವರ್ಷಗಳ ಹಿಂದೆ 10 ರೂ.ಗೂ ಕಡಿಮೆ ಬೆಲೆಯನ್ನು ಹೊಂದಿದ್ದು, ಷೇರುಗಳು ಸಾವಿರಾರು ರೂ. ಆಗಿವೆ. ನೂರಾರು ಪಟ್ಟು ಶೇರುಗಳ ಬೆಲೆ ಏರಿಕೆಯಾಗಿವೆ.  2019ರಲ್ಲಿ ಕೇವಲ 7 ರೂಪಾಯಿ ಮುಖಬೆಲೆಯನ್ನು ಹೊಂದಿದ್ದು, 2 ಸಾವಿರದ ಗಡಿಯನ್ನು ದಾಟಿದೆ. ಕೆಲ ಸಮಯದ ಹಿಂದೆ ಈ ಷೇರು ಬೆಲೆ 3 ಸಾವಿರಕ್ಕೂ ಅಧಿಕವಾಗಿದ್ದು, ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ 2,000 ರೂ.ಗೆ ತಲುಪಿದೆ. ಐದು ವರ್ಷದ ಹಿಂದೆ ಈ ಷೇರುಗಳಲ್ಲಿ ಹಣ ಹೂಡಿಕೆ ಮಾಡಿದವರು ಇಂದು ಕೋಟ್ಯಧಿಪತಿಗಳಾಗಿದ್ದಾರೆ. ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದ ಆ ಷೇರು ಯಾವುದು ಎಂಬುದರ ಮಾಹಿತಿ ಇಲ್ಲಿದೆ.

ಕೋಟ್ಯಧಿಪತಿಗಳನ್ನಾಗಿ ಮಾಡಿದ ಷೇರಿನ ಹೆಸರು ಇರಾಯ ಲೈಫ್‌ಸ್ಪೇಸಸ್ (Eraaya Lifespaces Share). 2024 ನವೆಂಬರ್ 8ರಂದು ಬೆಳಗ್ಗೆ 11 ಗಂಟೆಗೆ 2.26% ಇಳಿಕೆಯೊಂದಿಗೆ 2,175 ರೂಪಾಯಿಗೆ ವಹಿವಾಟು ನಡೆಸಿತ್ತು. ಕಳೆದ ತಿಂಗಳು 7 ಅಕ್ಟೋಬರ್‌ನಲ್ಲಿ 4% ಏರಿಕೆಯೊಂದಿಗೆ 3,169 ರೂಪಾಯಿ ತಲುಪಿತ್ತು. ಇರಾಯ ಲೈಫ್‌ಸ್ಪೇಸಸ್‌ನ ಅಂಗಸಂಸ್ಥೆ ಅಬಿಕ್ಸ್ ಕ್ಯಾಶ್ ಲಿಮಿಟೆಡ್‌ಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಿಂದ 138.75 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಆರ್ಡರ್ ಸಿಕ್ಕಿದ್ದರಿಂದ ಷೇರುಗಳ ಬೆಲೆ ಏರಿಕೆ ಕಂಡಿತ್ತು. ಈ ಆರ್ಡರ್ ಕಂಪನಿಗೆ ನೆಟ್‌ವರ್ಕ್ ಇಂಟಿಗ್ರೇಟಿಂಗ್ ಸರ್ವೀಸಸ್‌ಗಾಗಿ ಸಿಕ್ಕಿದ್ದು, ಮೂರು ವರ್ಷಗಳಲ್ಲಿ ಪೂರೈಸಬೇಕಿದೆ.

Latest Videos

undefined

ಇದನ್ನೂ ಓದಿ: ಅಂಚೆ ಕಚೇರಿಯ 1 ಯೋಜನೆಯಲ್ಲಿ 2 ಲಾಭ; ನಿಮ್ಮ ಹೂಡಿಕೆಗೆ ಸಿಗುತ್ತೆ 2.5 ಲಕ್ಷ ರೂಪಾಯಿ

Eraaya Lifespaces Share Return
ಇರಾಯ ಲೈಫ್‌ಸ್ಪೇಸಸ್ ಶೇರ್ ಕಳೆದ ಕೆಲವು ಸಮಯದಲ್ಲಿ 130% ಕ್ಕಿಂತ ಹೆಚ್ಚು ಏರಿಕೆ ಕಂಡಿತ್ತು. ಆದರೆ, ಈಗ ಸ್ವಲ್ಪ ಇಳಿಕೆ ಕಂಡಿದೆ. ಆರು ತಿಂಗಳಲ್ಲಿ ಈ ಶೇರ್ ಸುಮಾರು 570% ಮತ್ತು ಈ ವರ್ಷ YTD ಯಲ್ಲಿ 2300% ಕ್ಕಿಂತ ಹೆಚ್ಚು ಲಾಭ ಕೊಟ್ಟಿದೆ. ಕಳೆದ ಒಂದು ವರ್ಷದಲ್ಲಿ ಈ ಕಂಪನಿಯ ಶೇರ್ 7,567.06% ಕ್ಕಿಂತ ಹೆಚ್ಚು ಲಾಭಗಳಿಸಿದೆ.

5 ವರ್ಷಗಳಲ್ಲಿ ಹೂಡಿಕೆದಾರರು ಕೋಟ್ಯಾಧಿಪತಿಗಳಾದರು
ಒಂದು ವರ್ಷದ ಹಿಂದೆ ಈ ಶೇರ್ ಬೆಲೆ ಕೇವಲ 37 ರೂಪಾಯಿ ಇತ್ತು. ಈಗ 2,175 ರೂಪಾಯಿಗೆ ಏರಿಕೆಯಾಗಿದೆ. 5 ವರ್ಷಗಳ ಹಿಂದೆ ಈ ಶೇರ್ ಬೆಲೆ ಕೇವಲ 7.58 ರೂಪಾಯಿ ಇತ್ತು. ಈ ಅವಧಿಯಲ್ಲಿ ಇರಾಯ ಲೈಫ್‌ಸ್ಪೇಸಸ್ ಶೇರ್ ತನ್ನ ಹೂಡಿಕೆದಾರರಿಗೆ 39,000% ಲಾಭ ಕೊಟ್ಟಿದೆ. ಐದು ವರ್ಷಗಳ ಹಿಂದೆ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಅದರ ಮೌಲ್ಯ 4 ಕೋಟಿ ರೂಪಾಯಿಗಿಂತ ಹೆಚ್ಚಾಗಿರುತ್ತಿತ್ತು.

ಸೂಚನೆ- ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಅಪಾಯಕಾರಿ. ಹೂಡಿಕೆ ಮಾಡುವ ಮುನ್ನ ನಿಮ್ಮ ಮಾರ್ಕೆಟ್ ತಜ್ಞರ ಸಲಹೆ ಪಡೆಯಿರಿ.

ಇದನ್ನೂ ಓದಿ: 2 ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ; ಇಲ್ಲಿನ ಗ್ರಾಹಕರ ಹಣದ ಮೇಲೆ ಎಫೆಕ್ಟ್ ಆಗುತ್ತಾ?

click me!