ಬೇರೆ ಏರ್‌ಲೈನ್‌ನಿಂದ ಗಾಲಿ ಕುರ್ಚಿಯನ್ನು ಪಡೆದು ನನಗೆ ನೀಡಿದ ಬಳಿಕ ವಿಮಾನಯಾನ ಸಂಸ್ಥೆಯು ನನ್ನನ್ನು ಒಳಗೆ ಕರೆದುಕೊಂಡು ಹೋಗಿದೆ. ನೀವಿನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಎಂದು ನನಗೆ ಖಾತ್ರಿಯಿದೆ ಎಂದು ಖುಷ್ಬೂ ಸುಂದರ್ ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಜನವರಿ 31, 2023): ಸರ್ಕಾರಿ ಒಡೆತನದಲ್ಲಿದ್ದ ಏರ್ ಇಡಿಯಾವನ್ನು ಟಾಟಾ ಸಂಸ್ಥೆ ಖರೀದಿಸಿದ ಬಳಿಕ ಏರ್ ಇಂಡಿಯಾಗ್ಯಾಕೋ ಮತ್ತೆ ಸಂಕಷ್ಟಗಳ ಸರಮಾಲೆ ಆರಂಭವಾಗಿದೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ನಡೆದ ಕೆಲ ಅಹಿತಕರ ಘಟನೆಗಳು ಸಂಸ್ಥೆ ವಿರುದ್ಧ ನಾನಾ ಟೀಕೆಗಳು ಕೇಳಿಬರುತ್ತಿದೆ. ಅಲ್ಲದೆ, ಏರ್ ಇಂಡಿಯಾ ಕೆಲ ಘಟನೆಗಳನ್ನು ಮುಚ್ಚಿಟ್ಟಿದ್ದಕ್ಕೆ ಸರ್ಕಾರದ ಡಿಜಿಸಿಎ ಲಕ್ಷಾಂತರ ರೂ. ದಂಡವನ್ನೂ ವಿಧಿಸಿದೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ಇಲ್ಲಿದೆ. ಕನ್ನಡ ಸೇರಿ ದಕ್ಷಿಣ ಭಾರತ ಚಲನಚಿತ್ರಗಳಲ್ಲಿ ಮಿಂಚಿರೋ ನಟಿ ಹಾಗೂ ಪ್ರಸ್ತುತ ಬಿಜೆಪಿಯಲ್ಲಿರುವ ರಾಜಕಾರಣಿ ಖುಷ್ಬೂ ಸುಂದರ್ ಇತ್ತೀಚೆಗೆ ಏರ್ ಇಂಡಿಯಾ ವಿರುದ್ಧ ಗರಂ ಆಗಿದ್ದಾರೆ.
ಹೌದು, ಇಂದು ಟ್ವೀಟ್ (Tweet) ಮಾಡಿದ ನಟಿ - ರಾಜಕಾರಣಿ (Actor Cum Politician) ಖುಷ್ಬೂ ಸುಂದರ್ (Khushbu Sundar) ಏರ್ ಇಂಡಿಯಾ (Air India) ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಗಾಲಿ ಕುರ್ಚಿ ಅಥವಾ ವ್ಹೀಲ್ ಚೇರ್‌ಗಾಗಿ (Wheel Chair) ಕಾಯುವಂತೆ ಮಾಡಬೇಕಾಯಿತು ಎಂದು ಬಿಜೆಪಿ ನಾಯಕಿ (BJP Leader) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್‌ಲೈನ್‌ಗೆ (Airline) ಟ್ಯಾಗ್ ಆಡಿದ ಅವರು ಈ ಬಗ್ಗೆ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.
ಇದನ್ನು ಓದಿ: Air India Urination Row: ಶಂಕರ್ ಮಿಶ್ರಾಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್!
ಲಿಗಮೆಂಟ್ ಟೇರ್‌ನಿಂದ ಬಳಲುತ್ತಿರುವ ರಾಜಕಾರಣಿ ವಿಮಾನ ನಿಲ್ದಾಣದಲ್ಲಿ ಅರ್ಧ ಗಂಟೆ ವ್ಹೀಲ್‌ಚೇರ್‌ಗಾಗಿ ಕಾಯಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘’ಡಿಯರ್ @airindiain ಮೊಣಕಾಲಿನ ಗಾಯದ ಪ್ರಯಾಣಿಕರನ್ನು ಕರೆದೊಯ್ಯಲು ನಿಮ್ಮ ಬಳಿ ಸಾಮಾನ್ಯ ಗಾಲಿ ಕುರ್ಚಿಯೂ ಇಲ್ಲ. ನಾನು ಚೆನ್ನೈ ವಿಮನ ನಿಲ್ದಾಣದಲ್ಲಿ ವ್ಹೀಲ್‌ಚೇರ್‌ಗಾಗಿ 30 ನಿಮಿಷ ಕಾಯಬೇಕಾಯಿತು. ಬಳಿಕ, ಬೇರೆ ಏರ್‌ಲೈನ್‌ನಿಂದ ಗಾಲಿ ಕುರ್ಚಿಯನ್ನು ಪಡೆದು ನನಗೆ ನೀಡಿದ ಬಳಿಕ ವಿಮಾನಯಾನ ಸಂಸ್ಥೆಯು ನನ್ನನ್ನು ಒಳಗೆ ಕರೆದುಕೊಂಡು ಹೋಗಿದೆ. ನೀವಿನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದು ಎಂದು ನನಗೆ ಖಾತ್ರಿಯಿದೆ" ಎಂದು ಖುಷ್ಬೂ ಸುಂದರ್ ಟ್ವೀಟ್ ಮಾಡಿದ್ದಾರೆ.
Dear you do not have basic wheelchair to take a passenger with a knee injury. I had to wait for 30mnts at chennai airport with braces for my ligament tear before they could get a wheelchair borrowed from another airline to take me in. I am sure you can do better.
— KhushbuSundar (@khushsundar)ನಂತರ, ನಟಿ - ರಾಜಕಾರಣಿ ಖುಷ್ಬೂ ಸುಂದರ್‌ಗೆ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ. ‘’ಡಿಯರ್ ನಮ್ಮೊಂದಿಗೆ ನಿಮಗಾದ ಅನುಭವದ ಬಗ್ಗೆ ತಿಳಿಯಲು ನಾವು ತುಂಬಾ ವಿಷಾದಿಸುತ್ತೇವೆ. ನಾವು ಈ ವಿಚಾರವನ್ನು ನಮ್ಮ ಚೆನ್ನೈ ವಿಮಾನ ನಿಲ್ದಾಣದ ತಂಡದೊಂದಿಗೆ ತಕ್ಷಣವೇ ಕೈಗೆತ್ತಿಕೊಳ್ಳುತ್ತೇವೆ" ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಮೂತ್ರ ಮಾಡಿದ್ದು ಉದ್ಯಮಿ: 30 ಲಕ್ಷ ದಂಡ ಏರ್ ಇಂಡಿಯಾಗೆ
Dear Ma'am, we're extremely sorry to know about your experience with us. We're taking this up immediately with our Chennai airport team.
— Air India (@airindiain)ಕಳೆದ ವರ್ಷ 2 ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರು ಅಶಿಸ್ತಿನ ವರ್ತನೆ ತೋರಿದ ಕನಿಷ್ಠ 3 ಘಟನೆಗಳ ಬಳಿಕ ಖುಷ್ಬೂ ಸುಂದರ್ ಅವರ ಈ ಟ್ವೀಟ್ ಏರ್ ಇಂಡಿಯಾ ವಿರುದ್ಧ ಅನೇಕರು ಮತ್ತೆ ತರಾಟೆಗೆ ತೆಗೆದುಕೊಳ್ಳುವಂತೆ ಆಗಿದೆ. 52 ವರ್ಷದ ಖುಷ್ಬೂ ಸುಂದರ್ ಅವರು ಅಕ್ಟೋಬರ್ 2020 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಡಿಎಂಕೆಯ ಕಾರ್ಯಕಾರಿಯೊಬ್ಬರು ತಮ್ಮ ವಿರುದ್ಧ ಮಾಡಿದ ಹೇಳಿಕೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮೌನವಾಗಿರುವುದನ್ನು ಪ್ರಶ್ನಿದ್ದರು. ಅಲ್ಲದೆ, ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದರು. .
ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ಮಾಡಿದ ಉದ್ಯಮಿ ಶಂಕರ್ ಮಿಶ್ರಾಗೆ ಜಾಮೀನು ನಿರಾಕರಣೆ
"ನನ್ನ ಮುಖ್ಯಮಂತ್ರಿ (ಎಂ.ಕೆ. ಸ್ಟಾಲಿನ್) ನನ್ನ ಪರವಾಗಿ ನಿಲ್ಲುವುದನ್ನು ನೋಡಲು ನಾನು ಬಯಸುತ್ತೇನೆ. ಅವರು ಏಕೆ ಮೌನವಾಗಿದ್ದಾರೆ?" ಎಂದು ಖುಷ್ಬೂ ಸುಂದರ್ ಪ್ರಶ್ನೆ ಮಾಡಿದ್ದರು. ಡಿಎಂಕೆ ಕಾರ್ಯಕಾರಿ ಸೈದೈ ಸಿದ್ದಿಕ್ ಅವರ ಹೇಳಿಕೆಗಳ ವಿವಾದದ ಬಗ್ಗೆ ನಟಿ - ರಾಜಕಾರಣಿ ಮಾತನಾಡಿದ್ದರು.