Budget 2023: ಎನ್‌ಸಿಸಿಡಿ ಏರಿಕೆ ಬಹುತೇಕ ಫಿಕ್ಸು, ಕಿಂಗು, ಸ್ಮಾಲು, ವಿಲ್ಸು..ಸೇದೋದ್‌ ಬಿಟ್ರೆ ಲೇಸು!

Published : Jan 31, 2023, 07:25 PM ISTUpdated : Jan 31, 2023, 07:30 PM IST
Budget 2023: ಎನ್‌ಸಿಸಿಡಿ ಏರಿಕೆ ಬಹುತೇಕ ಫಿಕ್ಸು, ಕಿಂಗು, ಸ್ಮಾಲು, ವಿಲ್ಸು..ಸೇದೋದ್‌ ಬಿಟ್ರೆ ಲೇಸು!

ಸಾರಾಂಶ

ಕೇಂದ್ರ ಬಜೆಟ್‌ ಮಂಡನೆಗೆ ಸಿದ್ಧವಾಗುತ್ತಿರುವ ನಡುವೆ ಧೂಮಪಾನಿಗಳ ಕಳವಳ ಕೂಡ ಹೆಚ್ಚಾಗುತ್ತಿದೆ. ದೇಶಾದ್ಯಂತ ಸಿಗರೇಟ್‌ ಹಾಗೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.  

ನವದೆಹಲಿ (ಜ.31): ಸಂಸತ್‌ ಭವನದಲ್ಲಿ 2023ರ ಕೇಂದ್ರ ಬಜೆಟ್‌ಅನ್ನು ಫೆಬ್ರವರಿ 1 ರ ಬುಧವಾರದಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡನೆ ಮಾಡಲಿದ್ದಾರೆ. ಮುಂಬರುವ ಹಣಕಾಸು ವರ್ಷಕ್ಕೆ ದಾರಿ ಮಾಡಿಕೊಡುವ ಅನೇಕ ಹೊಸ ತೆರಿಗೆ ಸುಧಾರಣೆಗಳು ಮತ್ತು ರಿಯಾಯಿತಿಗಳನ್ನು ಕೇಂದ್ರವು ಘೋಷಿಸುವ ಸಾಧ್ಯತೆಯಿದೆ. 2023 ರ ಬಜೆಟ್ ಮಂಡನೆಯಲ್ಲಿ ನಿರೀಕ್ಷಿತ ಪ್ರಮುಖ ಬದಲಾವಣೆಯೆಂದರೆ, ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡುವ, ಸಿಗರೇಟ್‌ ಟ್ಯಾಕ್ಸ್‌ ಅನ್ನು ಏರಿಸುವ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇದು ಉತ್ಪನ್ನದ ಬೆಲೆಗಳಲ್ಲಿ ದೊಡ್ಡ ಮಟ್ಟದ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಸಿಗರೇಟ್‌ ಮೇಲಿನ ದರಗಳು ಮತ್ತು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಏರಿಕೆ ಮಾಡಿಲ್ಲ. ಆದರೆ, ನಿರ್ಮಲಾ ಸೀತಾರಾಮನ್‌ ಮಂಡನೆ ಮಾಡಲಿರುವ 2023ರ ಕೇಂದ್ರ ಬಜೆಟ್‌ನಲ್ಲಿ ಇವುಗಳ ಮೇಲಿನ ತೆರಿಗೆಯನ್ನು ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ ಕಂಡಿದೆ. ಸಿಗರೇಟ್‌ ಮೇಲೆ ಸರ್ಕಾರ ಯಾವ ರೀತಿಯಲ್ಲಿ ತೆರಿಗೆ ವಿಧಿಸುತ್ತದೆ ಎನ್ನುವ ವಿವರ ಇಲ್ಲಿದೆ.

ಜಿಎಸ್‌ಟಿ ಕೌನ್ಸಿಲ್ ತಂಬಾಕಿನ ಮೇಲೆ ವಿಧಿಸಲಾಗುವ ತೆರಿಗೆ ಮತ್ತು ಅದರ ಬೆಲೆಗಳ ನಿಯಂತ್ರಣವನ್ನು ನೋಡಿಕೊಳ್ಳುತ್ತದೆ, ಆದರೆ ಕೇಂದ್ರ ಸರ್ಕಾರವು ಸಿಗರೇಟ್‌ಗಳ ಮೇಲೆ ರಾಷ್ಟ್ರೀಯ ವಿಪತ್ತು ಆಕಸ್ಮಿಕ ಸುಂಕವನ್ನು (NCCD- ನ್ಯಾಷನ್‌ ಕ್ಯಾಲಮಿಟಿ ಕಾಂಟಿಂಜೆಂಟ್‌ ಡ್ಯೂಟಿ) ವಿಧಿಸುತ್ತದೆ. ಈ ವರ್ಷದ ಬಜೆಟ್ 2023 ಪ್ರಕಟಣೆಯಲ್ಲಿ ಎನ್‌ಸಿಸಿಡಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ.

ಶೀಘ್ರದಲ್ಲೇ ಬಿಡಿ ಸಿಗರೇಟ್‌ ಸೇಲ್‌ ನಿಷೇಧ..! ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿ ಸಲಹೆ

ಸಿಗರೇಟಿನ ಮೇಲೆ ವಿಧಿಸಲಾದ ಒಟ್ಟಾರೆ ತೆರಿಗೆಯ ಸುಮಾರು 10 ಪ್ರತಿಶತದಷ್ಟು ಎನ್‌ಸಿಸಿಡಿ ಪಾಲನ್ನು ಹೊಂದಿದೆ ಮತ್ತು ಕೇಂದ್ರವು ಈ ಹಣಕಾಸು ವರ್ಷದಲ್ಲಿ ಅದನ್ನು ಹೆಚ್ಚಿಸುವ ಸಾಧ್ಯತೆಯಿದೆ. ಸಿಗರೇಟ್‌ಗಳ ಮೇಲಿನ ಎನ್‌ಸಿಸಿಡಿಯನ್ನು ಸಾಮಾನ್ಯವಾಗಿ ಐಟಿಸಿಯಂತಹ ಉತ್ಪಾದನಾ ಕಂಪನಿಗಳು ಪಾವತಿಸುತ್ತವೆ. ಮುಂಬರುವ ಹಣಕಾಸು ವರ್ಷದಲ್ಲಿ ಸಿಗರೇಟ್‌ಗಳ ಮೇಲೆ ಗಮನಾರ್ಹ ಪ್ರಮಾಣದ ಎನ್‌ಸಿಸಿಡಿ ವಿಧಿಸಿದರೆ, ಐಟಿಸಿಯಂತಹ ಕಂಪನಿಗಳು ಗ್ರಾಹಕರಿಗೆ ಬೆಲೆ ಏರಿಕೆಯನ್ನು ವರ್ಗಾಯಿಸುವ ಸಾಧ್ಯತೆಯಿದೆ, ಇದು ಈ ವರ್ಷ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸ್ಮೋಕ್ ಮಾಡ್ಬೇಕಿಲ್ಲ, ಸಿಗರೇಟ್‌ ಸೇದೋರ ಬಳಿ ನಿಂತ್ರೂ ಹೊಗೆ ಹಾಕಿಸ್ಕೊಳ್ಳೋ ಚಾನ್ಸಸ್ ಹೆಚ್ಚು

ಸಿಗರೇಟ್ ಬೆಲೆಗಳ ಏರಿಕೆಯ ಹೊರತಾಗಿ, ಕೇಂದ್ರ ಬಜೆಟ್ 2023 ರಿಂದ ನಿರೀಕ್ಷಿತ ಇತರ ಘೋಷಣೆಗಳು 8 ನೇ ವೇತನ ಆಯೋಗ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು, ಯುಪಿಐ ಮತ್ತು ಡಿಜಿಟಲ್ ರೂಪಾಯಿ ಸಂಬಂಧಿತ ಪ್ರೋತ್ಸಾಹಗಳು ಮತ್ತು ಇತರ ತೆರಿಗೆ-ಸಂಬಂಧಿತ ಯೋಜನೆಗಳ ಸಂಭವನೀಯ ಘೋಷಣೆಯಾಗಬಹುದು ಎನ್ನಲಾಗಿದೆ. ಮುಂದಿನ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿರುವುದರಿಂದ ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರವು ಸಿದ್ಧಪಡಿಸಿದ ಕೇಂದ್ರ ಬಜೆಟ್ 2023-24 ಕೊನೆಯ ಬಜೆಟ್ ಆಗಿರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ