ಸುಧಾಮೂರ್ತಿ ಮಾತ್ರವಲ್ಲ, ಕುಟುಂಬದ ಈ ವ್ಯಕ್ತಿಯೂ ಕೊಡುಗೈ ದಾನಿ; ಬರೋಬ್ಬರಿ 208 ಕೋಟಿ ರೂ. ದೇಣಿಗೆ ನೀಡಿದ್ಯಾರು?

By Vinutha Perla  |  First Published Dec 3, 2023, 12:49 PM IST

ಉದ್ಯಮಿ, ಲೇಖಕಿ, ಸಮಾಜಸೇವಕಿ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವವರು ಇನ್ಫೋಸಿಸ್‌ನ ಸುಧಾಮೂರ್ತಿ. ಟ್ರಸ್ಟ್‌, ಸಂಸ್ಥೆಗಳಿಗೆ ಕೋಟಿಗಟ್ಟಲೆ ದಾನ ಮಾಡುತ್ತಲೇ ಇರುತ್ತಾರೆ. ಆದ್ರೆ ಸುಧಾಮೂರ್ತಿ ಮಾತ್ರವಲ್ಲ, ಕುಟುಂಬದ ಈ ವ್ಯಕ್ತಿಯೂ ಕೊಡುಗೈ ದಾನಿ. ಬರೋಬ್ಬರಿ 208 ಕೋಟಿ ರೂ. ದೇಣಿಗೆ ನೀಡಿದ ಆ ವ್ಯಕ್ತಿ ಯಾರು?


ಸುಧಾ ಮೂರ್ತಿ, ಭಾರತದ ಅತ್ಯಂತ ಪ್ರಸಿದ್ಧ ಬಿಸಿನೆಸ್ ವುಮೆನ್‌ಗಳಲ್ಲಿ ಒಬ್ಬರು. ಕೇವಲ ಉದ್ಯಮ ಮಾತ್ರವಲ್ಲದೆ ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಹೆಸರುವಾಸಿಯಾಗಿದ್ದಾರೆ. ಹಲವಾರು ಟ್ರಸ್ಟ್‌, ಶಿಕ್ಷಣ ಸಂಸ್ಥೆಗಳಿಗೆ ದಾನ ಮಾಡುತ್ತಾರೆ. ಆದರೆ ಈ ಮಹತ್ಕಾರ್ಯ ಸುಧಾ ಮೂರ್ತಿಯವರಿಗಷ್ಟೇ ಸೀಮಿತವಾಗಿಲ್ಲ. ಸುಧಾಮೂರ್ತಿ ಅವರ ಸಹೋದರಿಯರು, ಸೋದರ ಮಾವ ಕೂಡ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಧಾ ಮೂರ್ತಿ ಅವರ ಸೋದರ ಮಾವ ಗುರುರಾಜ್ ದೇಶಪಾಂಡೆ ಬರೋಬ್ಬರಿ 208 ಕೋಟಿಗೂ ಹೆಚ್ಚು ದೇಣಿಗೆ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗುರುರಾಜ್ ದೇಶಪಾಂಡೆ, ತಮ್ಮ ವ್ಯಾಪಾರ ಕೌಶಲ್ಯಗಳು, ಹೂಡಿಕೆಗಳು ಮತ್ತು ಅತ್ಯುತ್ತಮ ಬಿಸಿನೆಸ್ ನಿರ್ವಹಣೆಗೆ ಹೆಸರುವಾಸಿಯಾಗಿದ್ದಾರೆ. ಗುರುರಾಜ್ ದೇಶಪಾಂಡೆ ಅವರು ಪ್ರಮುಖವಾಗಿ ಹಲವು ಶಿಕ್ಷಣ ಸಂಸ್ಥೆಗಳಿಗೆ (Educational Institution) ದೇಣಿಗೆ ನೀಡಿದ್ದಾರೆ. ತಾಂತ್ರಿಕ ಆವಿಷ್ಕಾರಕ್ಕಾಗಿ ದೇಶಪಾಂಡೆ ಕೇಂದ್ರವನ್ನು ಪ್ರಾರಂಭಿಸಿದ್ದಾರೆ.

Tap to resize

Latest Videos

ಸುಧಾಮೂರ್ತಿ ಸಹೋದರ ಕೂಡಾ ಸಾಧಕ; ಪ್ರಮುಖ ಬಾಹ್ಯಾಕಾಶ ವಿಜ್ಞಾನಿ ಈ ಐಐಟಿ ಪದವೀಧರ

ಹಲವಾರು ಯಶಸ್ವೀ ಕಂಪೆನಿಗಳ ಮಾಲೀಕ ಗುರುರಾಜ ದೇಶಪಾಂಡೆ
ಯಶಸ್ವೀ ಉದ್ಯಮಿಯಾಗಿರುವ ದೇಶಪಾಂಡೆ ಕಳೆದ ಕೆಲವು ದಶಕಗಳಲ್ಲಿ ಹಲವಾರು ಕಂಪನಿಗಳನ್ನು ಆರಂಭಿಸಿ ಮಾರಾಟ (Sale) ಮಾಡಿದ್ದಾರೆ. ತಮ್ಮ ಮೊದಲ ಕಂಪನಿ ಕೋರಲ್ ನೆಟ್‌ವರ್ಕ್‌ಗಳನ್ನು 1993 ರಲ್ಲಿ 15 ಮಿಲಿಯನ್‌ಗೆ ಮಾರಾಟ ಮಾಡಿದರು. 1997ರಲ್ಲಿ 3.7 ಶತಕೋಟಿಗೆ ಸ್ಥಾಪಿಸಿದ ಕಂಪನಿಗಳಲ್ಲಿ ಒಂದಾದ ಕ್ಯಾಸ್ಕೇಡ್ ಕಮ್ಯುನಿಕೇಷನ್ಸ್‌ನ್ನು ಸಹ ಮಾರಾಟ ಮಾಡಿದರು.

ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದ ಗುರುರಾಜ ದೇಶಪಾಂಡೆ, ತಮ್ಮ ಪದವಿಯವರೆಗೂ ಭಾರತದಲ್ಲಿಯೇ ಇದ್ದರು. ಅವರ ತಂದೆ ಭಾರತ ಸರ್ಕಾರದಲ್ಲಿ ಕಾರ್ಮಿಕ ಆಯುಕ್ತರಾಗಿದ್ದರು. ಅವರು ಐಐಟಿ ಮದ್ರಾಸ್‌ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿಯೊಂದಿಗೆ ಪದವಿ ಪಡೆದರು. ಪದವಿಯ ನಂತರ, ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿದರು. ಪ್ರಸ್ತುತ, ಗುರುರಾಜ್ ದೇಶಪಾಂಡೆ  A123Systems, Sycamore Networks, Tejas Networks, HiveFire, Sandstone Capital ಮತ್ತು Sparta Groupನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಲ್ಲದೆ, ಅವರು ಏರ್‌ವಾನಾ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಎಲಾನ್‌ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್‌ ಇನ್‌ ಪೋಸ್ಟ್ ವೈರಲ್‌

ಮಾಜಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜುಲೈ 2010ರಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ರಾಷ್ಟ್ರೀಯ ಸಲಹಾ ಮಂಡಳಿಯ ಸಹ-ಅಧ್ಯಕ್ಷತೆಗಾಗಿ ಗುರುರಾಜ್ ದೇಶಪಾಂಡೆ ಅವರನ್ನು ಕೇಳಿಕೊಂಡಿದ್ದರು. ಅಮೇರಿಕಾ ಅಧ್ಯಕ್ಷರ ನಾವೀನ್ಯತೆ ಕಾರ್ಯತಂತ್ರವನ್ನು ಬೆಂಬಲಿಸಲು ಈ ಗುಂಪನ್ನು ಸ್ಥಾಪಿಸಲಾಯಿತು.

ದೇಶಪಾಂಡೆ ಅವರು ಸುಧಾ ಮೂರ್ತಿ ಅವರ ಸಹೋದರಿ ಜೈಶ್ರೀ ಅವರನ್ನು ವಿವಾಹವಾಗಿದ್ದಾರೆ, ಅವರು MIT ಯಲ್ಲಿನ ದೇಶಪಾಂಡೆ ಸೆಂಟರ್ ಫಾರ್ ಟೆಕ್ನಾಲಜಿಕಲ್ ಇನ್ನೋವೇಶನ್‌ನ ಸಹ-ಸಂಸ್ಥಾಪಕರೂ ಆಗಿದ್ದಾರೆ.

click me!