GST Council Meeting ಜಿಎಸ್‌ಟಿ ಕನಿಷ್ಠ ದರ ಶೇ.8ಕ್ಕೇರಿಕೆ?

Kannadaprabha News   | Asianet News
Published : Mar 07, 2022, 04:45 AM IST
GST Council Meeting ಜಿಎಸ್‌ಟಿ ಕನಿಷ್ಠ ದರ ಶೇ.8ಕ್ಕೇರಿಕೆ?

ಸಾರಾಂಶ

- ಸರಕು, ಸೇವಾ ತೆರಿಗೆಗೆ ಮೂರನೇ ಸ್ಲ್ಯಾಬ್ - ಶೇ.12ರ ತೆರಿಗೆ ಸ್ತರ ರದ್ದಾಗುವ ಸಂಭವ - ಖಾದ್ಯತೈಲ, ಸಕ್ಕರೆ ಸೇರಿ ಹಲವು ವಸ್ತು ತುಟ್ಟಿ

ನವದೆಹಲಿ (ಮಾ.7): ಆದಾಯ ಹೆಚ್ಚಿಸಲು (increase revenues) ನಾನಾ ಮಾರ್ಗ ಹುಡುಕುತ್ತಿರುವ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ (Goods and Services Tax), ತನ್ನ ಮುಂಬರುವ ಸಭೆಯಲ್ಲಿ ಜಿಎಸ್‌ಟಿಯ ಕನಿಷ್ಠ ಸ್ತರ (ಸ್ಲ್ಯಾಬ್)ವನ್ನು ಈಗಿನ ಶೇ.5ರಿಂದ ಶೇ.8ಕ್ಕೆ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಈ ಪ್ರಸ್ತಾವವನ್ನು ಅದು ಅಂಗೀಕರಿಸಿದರೆ ಈಗ ಇರುವ 4 ತೆರಿಗೆ ಸ್ತರಗಳು ರದ್ದಾಗಿ ಕೇವಲ 3 ಸ್ತರಗಳು (3-tier GST structure) ಜಾರಿಗೆ ಬರಲಿವೆ. ಅದರ ಪರಿಣಾಮ ಮುಂಬರುವ ದಿನಗಳಲ್ಲಿ ದಿನಬಳಕೆ ಸೇರಿದಂತೆ ಹಲವು ವಸ್ತುಗಳ ದರ ಮತ್ತೆ ಏರಿಕೆಯಾಗಲಿದೆ.

ಹಾಲಿ ಜಿಎಸ್‌ಟಿಯಲ್ಲಿ ಶೇ.5, ಶೇ.12, ಶೇ.18, ಶೇ.28 ಎಂಬ 4 ತೆರಿಗೆ ಸ್ತರಗಳಿವೆ. ಅದನ್ನು ಶೇ.8, ಶೇ.18, ಶೇ.28ಕ್ಕೆ ನಿಗದಿ ಮಾಡಿ, ಶೇ.12ರ ತೆರಿಗೆ ಸ್ತರ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಮಿತಿ ವರದಿ: ಜಿಎಸ್‌ಟಿ ಮಂಡಳಿಗೆ (GST Council) ಆದಾಯ ಹೆಚ್ಚಿಸುವುದು ಹೇಗೆ ಎಂಬುದರ ಕುರಿತು ರಾಜ್ಯದ ಹಣಕಾಸು ಸಚಿವರ ಸಮಿತಿಯು (state finance ministers) ಇದೇ ಮಾಸಾಂತ್ಯಕ್ಕೆ ತನ್ನ ವರದಿ ಸಲ್ಲಿಸಲಿದೆ. ಅದರಲ್ಲಿ ಕನಿಷ್ಠ ಸ್ತರವನ್ನು ಶೇ.5ರಿಂದ ಶೇ.8ಕ್ಕೆ ಹೆಚ್ಚಿಸಬೇಕು, ಈಗಿನ 4 ತೆರಿಗೆ ಸ್ತರಗಳನ್ನು 3ಕ್ಕೆ ಸೀಮಿತ ಮಾಡಬೇಕು, ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿರುವ ವಸ್ತುಗಳ ಸಂಖ್ಯೆಯನ್ನೂ ಕಡಿಮೆ ಮಾಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಿದೆ ಎನ್ನಲಾಗಿದೆ.

ಕನಿಷ್ಠ ತೆರಿಗೆ ಸ್ತರವನ್ನು ಶೇ.5ರಿಂದ ಶೇ.8ಕ್ಕೆ ಹೆಚ್ಚಿಸುವ ಶಿಫಾರಸು ಅಂಗೀಕಾರವಾದಲ್ಲಿ, ಜಿಎಸ್‌ಟಿ ಮೂಲಕ ವಾರ್ಷಿಕ ಸಂಗ್ರಹ ಭರ್ಜರಿ 1.50 ಲಕ್ಷ ಕೋಟಿ ರು.ನಷ್ಟುಹೆಚ್ಚಳವಾಗಲಿದೆ. ಇನ್ನು ಶೇ.12ರ ಸ್ತರದಲ್ಲಿರುವ ವಸ್ತುಗಳಲ್ಲಿ ಸಾಕಷ್ಟುಶೇ.18ರ ಸ್ತರಕ್ಕೆ ವರ್ಗಾವಣೆಯಾಗಿ ಅಲ್ಲಿಂದಲೂ ಸರ್ಕಾರಕ್ಕೆ ಭಾರೀ ಹಣ ಹರಿದು ಬರಲಿದೆ. ಹೀಗೆ ಸಮಿತಿಯ ಎಲ್ಲಾ ಶಿಫಾರಸುಗಳು ಜಾರಿಯಾದರೆ ಅದರ ನೇರ ಬಿಸಿ ಗ್ರಾಹಕರ ಜೇಬಿಗೆ ಮುಟ್ಟಲಿದೆ.

ಹಾಲಿ ಹಲವು ಅತ್ಯಗತ್ಯ ವಸ್ತುಗಳನ್ನು ಒಂದೋ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಇಲ್ಲವೇ ಶೇ.5ರ ತೆರಿಗೆ ಸ್ತರದಲ್ಲಿ ಇಡಲಾಗಿದೆ. ಇನ್ನು ಐಷಾರಾಮಿ ವಸ್ತುಗಳನ್ನು ಗರಿಷ್ಠ ಶೇ.28ರ ತೆರಿಗೆ ಸ್ತರದಲ್ಲಿ ಇಡಲಾಗಿದೆ. ಜೊತೆಗೆ ಐಷಾರಾಮಿ ವಸ್ತುಗಳ ಮೇಲೆ ಸೆಸ್‌ ಹಾಕಲಾಗುತ್ತಿದ್ದು, ಅದನ್ನು ರಾಜ್ಯಗಳು ಜಿಎಸ್‌ಟಿ ಜಾರಿಯಿಂದ ಅನುಭವಿಸುತ್ತಿರುವ ತೆರಿಗೆ ನಷ್ಟತುಂಬಲು ಬಳಸಿಕೊಳ್ಳಲಾಗುತ್ತಿದೆ.

ಶೇ.5ರ ವ್ಯಾಪ್ತಿ: ಅಡುಗೆ ಎಣ್ಣೆ, ಸಕ್ಕರೆ, ಸಿಹಿ ತಿಂಡಿ, ಸಾಂಬಾರು ಪದಾರ್ಥ, ಇನ್ಸುಲಿನ್‌ ಮೊದಲಾದ ಔಷಧೀಯ ವಸ್ತುಗಳು, ಪ್ಯಾಕ್‌ ಮಾಡಿದ ಆಹಾರ ಪದಾರ್ಥಗಳು ಮೊದಲಾದ ವಸ್ತುಗಳ ಮೇಲೆ ಕನಿಷ್ಠ ತೆರಿಗೆ ಸ್ಲ್ಯಾಬ್ ಶೇ. 5 ಅನ್ನು ವಿಧಿಸಲಾಗುತ್ತಿತ್ತು. ಇದನ್ನು ಶೇ.8ಕ್ಕೆ ಏರಿಸಲು ಸರ್ಕಾರ ಚಿಂತನೆ ನಡೆಸಿದೆ.

GST Collection: ಶೇ. 18 ರಷ್ಟು ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ
ಶೇ.5ರ ತೆರಿಗೆ ಸ್ಲ್ಯಾಬ್ ನಲ್ಲಿರುವ ವಸ್ತುಗಳು
ಅಡುಗೆ ಎಣ್ಣೆ, ಸಕ್ಕರೆ, ಸಿಹಿ ತಿಂಡಿ, ಸಾಂಬಾರು ಪದಾರ್ಥ, ಇನ್ಸುಲಿನ್‌ ಮೊದಲಾದ ಔಷಧೀಯ ವಸ್ತುಗಳು, ಪ್ಯಾಕ್‌ ಮಾಡಿದ ಆಹಾರ ಪದಾರ್ಥ

ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ವಸ್ತುಗಳು
ಪ್ಯಾಕ್‌ ಮಾಡಿರದ, ಬ್ರ್ಯಾಂಡ್‌ ಇಲ್ಲದ ಆಹಾರ, ಡೈರಿ ಉತ್ಪನ್ನಗಳು.

Economic Survey 2022: 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆದಾಯದಲ್ಲಿ ಚೇತರಿಕೆ; ಮಾಸಿಕ 1ಲಕ್ಷ ಕೋಟಿ ರೂ. GST ಸಂಗ್ರಹ
ಏನೇನು ಶಿಫಾರಸು?
ಹಾಲಿ 4 ಹಂತದಲ್ಲಿರುವ ತೆರಿಗೆ ಸ್ತರ 3ಕ್ಕೆ ಇಳಿಸಬೇಕು
ಶೇ.5ರ ಕನಿಷ್ಠ ತೆರಿಗೆ ಸ್ತರವನ್ನು ಶೇ.8ಕ್ಕೆ ಹೆಚ್ಚಿಸಬೇಕು
ಶೇ.12ರ ತೆರಿಗೆ ಸ್ತರ ರದ್ದು, ಕೆಲವು ಶೇ.18ಕ್ಕೆ ಸೇರ್ಪಡೆ
ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ವಸ್ತುಗಳ ಸಂಖ್ಯೆ ಕಡಿತ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ