*ರಷ್ಯಾ ಮತ್ತು ಉಕ್ರೇನ್ ನಿಂದ ಶೇ.30 ಗೋಧಿ ರಫ್ತು
*ರಷ್ಯಾ ಜಗತ್ತಿನ ಅತೀದೊಡ್ಡ ಗೋಧಿ ರಫ್ತುದಾರ ರಾಷ್ಟ್ರ
*ರಷ್ಯಾ ಹಾಗೂ ಉಕ್ರೇನ್ ನಿಂದ ಆಹಾರ ಧಾನ್ಯ ರಫ್ತು ಮಾಡಿಕೊಳ್ಳುತ್ತಿರೋ ರಾಷ್ಟ್ರಗಳಿಗೆ ಆಘಾತ
ನವದೆಹಲಿ (ಮಾ.5): ರಷ್ಯಾ (Russia)-ಉಕ್ರೇನ್ (Ukraine)ಯುದ್ಧದ (War) ಪರಿಣಾಮ ಜಾಗತಿಕ ಮಟ್ಟದಲ್ಲಿ ಆಹಾರ ಧಾನ್ಯಗಳ (Food grains)ಬೆಲೆಯಲ್ಲಿ ಏರಿಕೆಯಾಗುತ್ತಿದೆ.ವಿಶ್ವಸಂಸ್ಥೆ (UN) ಆಹಾರ ಹಾಗೂ ಕೃಷಿ ಸಂಸ್ಥೆ (FAO) ಪ್ರಕಾರ ವಿಶ್ವ ಆಹಾರ ಧಾನ್ಯಗಳ ಬೆಲೆಗಳು ಫೆಬ್ರವರಿಯಲ್ಲಿ ದಾಖಲೆಯ ಏರಿಕೆ ಕಂಡಿವೆ. ಅದ್ರಲ್ಲೂ ಗೋಧಿ (Wheat)ಬೆಲೆಯಲ್ಲಿ(Price) ಶೇ.55ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ಇದಕ್ಕೆ ಕಾರಣ ರಷ್ಯಾ ಹಾಗೂ ಉಕ್ರೇನ್ ಎರಡೂ ಪ್ರಮುಖ ಆಹಾರ ಧಾನ್ಯಗಳ ರಫ್ತು ರಾಷ್ಟ್ರಗಳಾಗಿರೋದು.
ಯುದ್ಧವು (War) ಕಪ್ಪು ಸಮುದ್ರದ (Black Sea) ಮೂಲಕ ನಡೆಯೋ ಜಾಗತಿಕ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಪ್ಪು ಸಮುದ್ರದಲ್ಲಿನ ರಷ್ಯಾ ಹಾಗೂ ಉಕ್ರೇನ್ ಗೆ ಸೇರಿದ ಬಂದರುಗಳು ಗೋಧಿ (Wheat) ಹಾಗೂ ಮೆಕ್ಕೆಜೋಳ (Corn) ಪೂರೈಕೆಯ ಪ್ರಮುಖ ತಾಣಗಳಿವೆ ಎಂದು ರಾಯ್ಟಸ್ (Reuters) ವರದಿಯೊಂದು ಹೇಳಿದೆ.
Russia Ukraine Crisis:ಭಾರತಕ್ಕೆ S-400 ಕ್ಷಿಪಣಿ ಪೂರೈಕೆ ಮೇಲೆ ನಿರ್ಬಂಧ ಪರಿಣಾಮ ಬೀರದು: ರಷ್ಯಾ ರಾಯಭಾರಿ
ಯುದ್ಧಕ್ಕೂ ಮುನ್ನ ಜಾಗತಿಕ ಮೆಕ್ಕೆಜೋಳ ರಫ್ತಿನಲ್ಲಿ ಉಕ್ರೇನ್ ಶೇ.16ರಷ್ಟು ಪಾಲು ಹೊಂದಿತ್ತು. ರಷ್ಯಾ (Russia) ಹಾಗೂ ಉಕ್ರೇನ್ (Ukraine) ಎರಡೂ ಸೇರಿ ಶೇ.30ರಷ್ಟು ಗೋಧಿ ರಫ್ತು ಮಾಡುತ್ತವೆ. ರಷ್ಯಾ ಜಗತ್ತಿನ ಅತೀದೊಡ್ಡ ಗೋಧಿ ರಫ್ತು ಮಾಡೋ ರಾಷ್ಟ್ರವಾಗಿದೆ. ಹೀಗಾಗಿ ರಷ್ಯಾ ಹಾಗೂ ಉಕ್ರೇನ್ ನಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿರೋ ರಾಷ್ಟ್ರಗಳಿಗೆ ಆಘಾತ ಎದುರಾಗಿದೆ. ಅದ್ರಲ್ಲೂ ಟರ್ಕಿ (Turkey) ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಆಹಾರ ಧಾನ್ಯಗಳ ಬೆಲೆಯೇರಿಕೆ ಜೊತೆಗೆ ಪೂರೈಕೆ ಸರಪಳಿ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.
ಇನ್ನು ಕಪ್ಪು ಸಮುದ್ರ ಪ್ರದೇಶದಲ್ಲಿ ಶಿಪ್ಪಿಂಗ್ ಕಾರ್ಗೋಗಳ ಸಂಚಾರ ನಿಂತಿದೆ. ಇದ್ರಿಂದ ಜಗತ್ತಿನ ಎರಡನೇ ಅತೀದೊಡ್ಡ ಆಹಾರ ಧಾನ್ಯಗಳ ರಫ್ತು ಪ್ರದೇಶ ಸಂಪೂರ್ಣ ಬಂದ್ ಆಗಲಿದೆ. ಆಹಾರ ಧಾನ್ಯಗಳ ಬೆಲೆಯೇರಿಕೆ ಹಾಗೂ ಪೂರೈಕೆ ಸರಪಳಿ ಸಮಸ್ಯೆಗಳು ಜಗತ್ತಿನ ಅನೇಕ ಆರ್ಥಿಕತೆಗಳ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ.
ಗೋಧಿ ಬೆಲೆಯೇರಿಕೆ ಭಾರತದ ಮೇಲೆ ಪರಿಣಾಮ ಬೀರುತ್ತಾ?
ಜಾಗತಿಕವಾಗಿ ಗೋಧಿ ಬೆಲೆಯೇರಿಕೆ ಭಾರತದ ಮೇಲೆ ಪರಿಣಾಮ ಬೀರೋ ಸಾಧ್ಯತೆ ಕಡಿಮೆ. ಕಳೆದ ಕೆಲವು ವರ್ಷಗಳಿಂದ ಭಾರತ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಜಗತ್ತಿನ ಟಾಪ್ ರಫ್ತುದಾರರ ವರದಿಯೊಂದರ ಪ್ರಕಾರ 2020ರಲ್ಲಿ ಭಾರತ ಒಟ್ಟು 243,067,000 ಡಾಲರ್ ಮೌಲ್ಯದ ಗೋಧಿಯನ್ನು ರಫ್ತು ಮಾಡಿದೆ.
Russia Ukraine Crisis:ಭಾರತದಲ್ಲಿ ಯಾವೆಲ್ಲ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಮಾಹಿತಿ
2021ರಲ್ಲಿ ಭಾರತ ಗೋಧಿ ರಫ್ತನ್ನು ಹೆಚ್ಚಿಸೋ ಗುರಿ ಹೊಂದಿತ್ತು ಕೂಡ. ಅಮೆರಿಕದ ಕೃಷಿ ಇಲಾಖೆ (USDA) ಮಾಹಿತಿ ಪ್ರಕಾರ 2020-21ರ ಜುಲೈ-ಜೂನ್ (July-June) ಅವಧಿಯಲ್ಲಿ ಭಾರತದ (India) ಗೋಧಿ (Wheat) ರಫ್ತು 1.8 ಮಿಲಿಯನ್ ಟನ್ ತಲುಪೋ ನಿರೀಕ್ಷೆಯಿತ್ತು. ಈ ಹಿಂದಿನ ಅಂದಾಜಿನ ಪ್ರಕಾರ ಈ ಪ್ರಮಾಣ 1 ಮಿಲಿಯನ್ ಟನ್ ಆಗಿತ್ತು.
ಅಡುಗೆ ಎಣ್ಣೆ ಬೆಲೆ ಹೆಚ್ಚಳ
ಬೆಲೆ ಹೆಚ್ಚಳವಾಗೋದು ಖಚಿತ. ಜಗತ್ತಿನ 80% ಸೂರ್ಯಕಾಂತಿ ಎಣ್ಣೆಯನ್ನು ರಷ್ಯಾ ಹಾಗೂ ಉಕ್ರೇನ್ ಪೂರೈಕೆ ಮಾಡುತ್ತವೆ. ಭಾರತ ಶೇ.90ರಷ್ಟು ಸೂರ್ಯಕಾಂತಿ ಎಣ್ಣೆಯನ್ನು (sunflower oil) ರಷ್ಯಾ (Russia) ಹಾಗೂ ಉಕ್ರೇನ್ ನಿಂದ (Ukraine) ಆಮದು (Import)ಮಾಡಿಕೊಳ್ಳುತ್ತಿದೆ. ರಷ್ಯಾದೊಂದಿಗಿನ ಬಿಕ್ಕಟ್ಟು ಕಾವು ಪಡೆದುಕೊಳ್ಳುತ್ತಿದ್ದಂತೆ ಉಕ್ರೇನ್ ಫೆಬ್ರವರಿಯಲ್ಲಿ ಒಂದೇಒಂದು ಶಿಪ್ ಸೂರ್ಯಕಾಂತಿ ಎಣ್ಣೆಯನ್ನು ಭಾರತಕ್ಕೆ ಕಳುಹಿಸಿಲ್ಲ. ಹೀಗಾಗಿ ಭಾರತದ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ಅಭಾವ ಉಂಟಾಗಿದ್ದು, ಈಗಾಗಲೇ ಬೆಲೆಯೇರಿಕೆಯಾಗಿದೆ ಕೂಡ.