GST On Textiles: ಬಟ್ಟೆ ವ್ಯಾಪಾರಿಗಳು ನಿರಾಳ; ಜವಳಿ ಮೇಲಿನ ತೆರಿಗೆ ಏರಿಕೆ ಮುಂದೂಡಿಕೆ

Suvarna News   | Asianet News
Published : Dec 31, 2021, 04:10 PM ISTUpdated : Dec 31, 2021, 04:13 PM IST
GST On Textiles: ಬಟ್ಟೆ ವ್ಯಾಪಾರಿಗಳು ನಿರಾಳ;  ಜವಳಿ ಮೇಲಿನ ತೆರಿಗೆ ಏರಿಕೆ ಮುಂದೂಡಿಕೆ

ಸಾರಾಂಶ

*ಜವಳಿ ಮೇಲಿನ GST ಶೇ.5ರಿಂದ ಶೇ.12ಕ್ಕೆ ಏರಿಕೆ ಮಾಡೋ ಪ್ರಸ್ತಾವನೆ ಮುಂದೂಡಿಕೆ *ಈ ತೆರಿಗೆಯೇರಿಕೆಯನ್ನು 2022ರ ಜನವರಿ 1ರಿಂದಲೇ ಜಾರಿಗೊಳಿಸಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ *ಜವಳಿ ವ್ಯಾಪಾರಿಗಳು ಹಾಗೂ ಕೆಲವು ರಾಜ್ಯ ಸರ್ಕಾರಗಳಿಂದ ಇದಕ್ಕೆ ತೀವ್ರ ವಿರೋಧ

ನವದೆಹಲಿ (ಡಿ.31): ಸರಕು ಮತ್ತು ಸೇವಾ ತೆರಿಗೆ ಮಂಡಳಿಯು( (GST Council) ಶುಕ್ರವಾರ (ಡಿ.31) ನಡೆದ ಸಭೆಯಲ್ಲಿ ಜವಳಿ( textiles) ಮೇಲಿನ ಜಿಎಸ್ ಟಿಯನ್ನು(GST)ಶೇ.5ರಿಂದ ಶೇ.12ಕ್ಕೆ ಏರಿಕೆ ಮಾಡೋ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಲು ನಿರ್ಧರಿಸಿದೆ. ಹೊಸ ವರ್ಷದಿಂದ ಜವಳಿ ಮೇಲಿನ ತೆರಿಗೆಯನ್ನು ಏರಿಕೆ ಮಾಡಲು ಕೇಂದ್ರ ಸರ್ಕಾರ(Central Government)ನಿರ್ಧರಿಸಿತ್ತು. ಅಲ್ಲದೆ, ಜನವರಿ 1ರಿಂದ ಹೊಸ ತೆರಿಗೆ ದರ ಜಾರಿಗೊಳಿಸಲು ಮುಂದಾಗಿತ್ತು. ಆದ್ರೆ ಇದಕ್ಕೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದು,ನಿರ್ಧಾರವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು(Central Government) ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ ಟಿ ಮಂಡಳಿ 46ನೇ ಸಭೆಯಲ್ಲಿ ತೆರಿಗೆಯೇರಿಕೆ ಪ್ರಸ್ತಾಪವನ್ನು ಮುಂದೂಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

ನಿನ್ನೆ(ಡಿ30) ನಿರ್ಮಲಾ ಸೀತಾರಾಮನ್ ನೇತೃತ್ದದಲ್ಲಿ ನಡೆದ ರಾಜ್ಯಗಳ ಹಣಕಾಸು ಸಚಿವರುಗಳ(Finance Minister) ಜೊತೆಗಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಗುಜರಾತ್(Gujarat), ಪಶ್ಚಿಮ ಬಂಗಾಳ(WestBengal), ದೆಹಲಿ(Delhi), ರಾಜಸ್ಥಾನ(Rajasthan) ಮತ್ತು ತಮಿಳುನಾಡು(Tamil Nadu)ಸರ್ಕಾರಗಳು ಜವಳಿ ಮೇಲಿನ ಜಿಎಸ್ ಟಿಯನ್ನು ಶೇ.5ರಿಂದ ಶೇ.12ಕ್ಕೆ ಹೆಚ್ಚಿಸಲು ಅಭ್ಯಂತರವಿಲ್ಲ ಎಂದು ಹೇಳಿದ್ದವು. 

GST Returns: 2020-21ನೇ ಆರ್ಥಿಕ ಸಾಲಿನ ಜಿಎಸ್ ಟಿ ರಿಟರ್ನ್ಸ್ ಸಲ್ಲಿಕೆ ಗಡುವು ಫೆಬ್ರವರಿ 28ರ ತನಕ ವಿಸ್ತರಣೆ

ಪ್ರಸ್ತುತ ಒಂದು ಸಾವಿರ ಮೌಲ್ಯದ ತನಕವಿರೋ ಪ್ರತಿ ಜವಳಿ ಮಾರಾಟದ ಮೇಲೆ ಶೇ.5ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ. ಸೆಪ್ಟೆಂಬರ್ ನಲ್ಲಿ ನಡೆದ ಜಿಎಸ್ ಟಿ ಮಂಡಳಿ(GST Council) ಸಭೆಯಲ್ಲಿ ಒಂದು ಸಾವಿರಕ್ಕೂ ಕಡಿಮೆ ಮೌಲ್ಯದ ಬಟ್ಟೆ ಹಾಗೂ ಪಾದರಕ್ಷೆಗಳ(Footwear) ಮೇಲಿನ ಜಿಎಸ್ ಟಿಯನ್ನು ಶೇ.5ರಿಂದ ಶೇ.12ಕ್ಕೆ ಏರಿಸೋ ಪ್ರಸ್ತಾವನೆ ಕೈಗೊಳ್ಳಲಾಯಿತು. ಅಲ್ಲದೆ, ಈ ತೆರಿಗೆಯೇರಿಕೆಯನ್ನು 2022ರ ಜನವರಿ 1ರಿಂದಲೇ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದ್ರೆ ಈ ನಿರ್ಧಾರದ ಬಗ್ಗೆ ವಿವಿಧ ರಾಜ್ಯ ಸರ್ಕಾರಗಳು ಹಾಗೂ GST Council has unanimously decided to defer the hike in ವರ್ತಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 'ಜಿಎಸ್ ಟಿ ವ್ಯವಸ್ಥೆಯನ್ನು ಸರಳಗೊಳಿಸೋ ಬದಲು ಸರ್ಕಾರ ಇನ್ನಷ್ಟು ಕಠಿಣಗೊಳಿಸುತ್ತಿದೆ' ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ವಿರೋಧ ವ್ಯಕ್ತಪಡಿಸಿತ್ತು.

ಜಿಎಸ್ ಟಿ ಏರಿಕೆಯಿಂದ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿರೋ ಸಣ್ಣ ಜವಳಿ ವ್ಯಾಪಾರಿಗಳು ತೊಂದರೆಗೊಳಗಾಗುತ್ತಿದ್ದರು. ಅಲ್ಲದೆ, ಬಡ ಹಾಗೂ ಮಧ್ಯಮ ವರ್ಗದ ಜನರು ಕೂಡ ಹೆಚ್ಚುವರಿ ತೆರಿಗೆ ಭಾರವನ್ನು ಹೊರಬೇಕಾಗಿತ್ತು. ಏಕಾಏಕೀ ಹಿಂದಿನ ಜಿಎಸ್ ಟಿ ದರಕ್ಕಿಂತ ಶೇ.100ರಷ್ಟು ಏರಿಕೆ ಮಾಡೋ ಸರ್ಕಾರದ ನಿರ್ಧಾರದ ಬಗ್ಗೆ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು.  ಜಿಎಸ್ ಟಿ ದರವೇರಿಕೆಯನ್ನು ವಿರೋಧಿಸಿ ಜವಳಿ ವ್ಯಾಪಾರಿಗಳು ನಡೆಸುತ್ತಿದ್ದ ಪ್ರತಿಭಟನೆಗೆ ದೆಹಲಿ ರಾಜ್ಯ ಸರ್ಕಾರ ಕೂಡ ಬೆಂಬಲ ಸೂಚಿಸಿತ್ತು. ನಾಲ್ಕು ತಿಂಗಳಲ್ಲಿ ವಿವಿಧ ರಾಜ್ಯಗಳಲ್ಲಿ ಚುನಾವಣೆಯಿರೋ ಹಿನ್ನೆಲೆಯಲ್ಲಿ ಜಿಎಸ್ ಟಿ ಏರಿಕೆಯಿಂದ ತೊಂದರೆ ಎದುರಾಗಬಹುದು ಎಂಬ ಭೀತಿಯಿಂದ ಸರ್ಕಾರ ಜಿಎಸ್ ಟಿ ದರವೇರಿಕೆ ಪ್ರಸ್ತಾವನೆಯನ್ನು ಮುಂದೂಡಿರೋ ಸಾಧ್ಯತೆಯಿದೆ. 

Changes In GST:ಜನವರಿ 1ರಿಂದ ಪರೋಕ್ಷ ತೆರಿಗೆ ಪದ್ಧತಿ ಬಿಗಿ; ಜಿಎಸ್ ಟಿಯಲ್ಲಿ 12 ಬದಲಾವಣೆಗಳು

ಬಟ್ಟೆ ಮೇಲಿನ ಜಿಎಸ್ ಟಿ ಏರಿಕೆ ಪ್ರಸ್ತಾವನೆ ಮುಂದೂಡಿರೋ ಬಗ್ಗೆ ಮಾಹಿತಿ ನೀಡಿರೋ ಹಿಮಾಚಲ ಪ್ರದೇಶದ ಕೈಗಾರಿಕಾ ಸಚಿವ ಬಿಕ್ರಮ್ ಸಿಂಗ್ 'ಜಿಎಸ್ ಟಿ ಕೌನ್ಸಿಲ್ ಜವಳಿ ಮೇಲಿನ ಜಿಎಸ್ ಟಿ ದರವೇರಿಕೆ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಿದೆ. ಫೆಬ್ರವರಿಯಲ್ಲಿ ನಡೆಯಲಿರೋ ಮುಂದಿನ ಸಭೆಯಲ್ಲಿ ಜಿಎಸ್ ಟಿ ಮಂಡಳಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ' ಎಂದು ತಿಳಿಸಿದ್ದಾರೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು